All posts by nagaraj11081993

Daily Devotional: ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ? – Kannada News | Daily Devotional: The Significance of Gotra in Hindu Marriages

ಬೆಂಗಳೂರು, ಡಿಸೆಂಬರ್ 20: ಒಂದೇ ಗೋತ್ರದವರ ನಡುವೆ ವಿವಾಹ ಸಾಧ್ಯವೇ ಎಂಬುದು ಹಲವು ಕುಟುಂಬಗಳಲ್ಲಿ ಉದ್ಭವಿಸುವ ಸಾಮಾನ್ಯ ಪ್ರಶ್ನೆಯಾಗಿದೆ. ಗೋತ್ರವು ವ್ಯಕ್ತಿಯ ಜೀವಾ ನಾಡಿಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಹುಟ್ಟಿಗೆ ನೇರ ಸಂಬಂಧ ಹೊಂದಿದೆ. ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಸನಾತನ ಧರ್ಮದ ಪ್ರಕಾರ, ವಿವಾಹಕ್ಕಾಗಿ ಗೋತ್ರವನ್ನು ಪರಿಶೀಲಿಸುವುದು ಸಾಂಪ್ರದಾಯಿಕ ಪದ್ಧತಿಯಾಗಿದೆ. ಇದನ್ನು ವಿಜ್ಞಾನದಲ್ಲಿ ಕ್ರೋಮೋಸೋಮ್‌ಗಳಿಗೆ (X-Y, X-X) ಹೋಲಿಸಬಹುದು. ಗೋತ್ರವನ್ನು ಒಂದೇ ರಕ್ತದ ಪ್ರತೀಕ ಎಂದು ಕೂಡ ವ್ಯಾಖ್ಯಾನಿಸಲಾಗುತ್ತದೆ. ವಿವಾಹದ ನಂತರ ಹೆಣ್ಣು ತನ್ನ ಗಂಡನ ಗೋತ್ರವನ್ನು ಅನುಸರಿಸುತ್ತಾಳೆ ಎಂದು ಗುರೂಜಿ ಹೇಳಿದ್ದಾರೆ.

 

Source link

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು – Kannada News | Anna Bhagya Rice Sold in Black Market: Case Registered Against Congress Leader in Bengaluru

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡ ಅಲೀಮ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, ಡಿಸೆಂಬರ್ 20: ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯ ಅಕ್ಕಿ (Anna Bhagya Rice) ದಂಧೆಕೋರರ ಬುಟ್ಟಿ ಸೇರುತ್ತಿದೆ. ಯಲಚೇನಹಳ್ಳಿ ಕಾಂಗ್ರೆಸ್ (Congress) ಮುಖಂಡ ಅಲೀಮ್ ಬಿಪಿಎಲ್ ಕಾರ್ಡ್ ದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಕೆಆರ್​​ಎಸ್ ಪಾರ್ಟಿ ಆರೋಪ ಮಾಡಿದೆ. ಅಕ್ಕಿ ಸಾಗಾಟ ಮಾಡುವ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ್ದ ಕೆಆರ್​​ಎಸ್ ಮುಖಂಡರು ಅಕ್ಕಿ ಸಮೇತ ಗಾಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ದಂಧೆ ಹಿಂದೆ ಕಾಂಗ್ರೆಸ್ ಮುಖಂಡ ಅಲೀಮ್ ಇದ್ದಾರೆ, ಇದನ್ನು ಬಯಲಿಗೆ ಎಳೆದ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಕೆಆರ್​​ಎಸ್ ಪಕ್ಷದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಅಲೀಮ್ ಸೇರಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೀಜ್ ಮಾಡಿದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆ ಪತ್ತೆ

ಸೀಜ್ ಮಾಡಲಾದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಇನ್ನು ಕೆಆರ್​​ಎಸ್ ಪಕ್ಷದ ಮುಖಂಡನ ಮನೆ ಸುತ್ತಮುತ್ತ ಅಲೀಮ್ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಲು ಯತ್ನಿಸುತ್ತಿದ್ದರು ಅಂತಲೂ ಆರೋಪ ಕೇಳಿಬಂದಿದೆ. ಬಿಡಿಎ ಕಚೇರಿಗಳಲ್ಲಿ ದಲ್ಲಾಳಿಯಾಗಿಯೂ ಅಲೀಮ್ ಕರಾಮತ್ತು ತೋರಿಸುತ್ತಿದ್ದರು ಎನ್ನಲಾಗಿದೆ.

ಯಲಚೆನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಅಲೀಮ್ ಹಾಗೂ ಕೆಆರ್​​ಎಸ್ ಪಕ್ಷದ ಮುಖಂಡರ ನಡುವೆ ಹಲವು ದಿನಗಳಿಂದಲೂ ತಕರಾರು ಇದ್ದು, ಅನ್ನಭಾಗ್ಯ ಅಕ್ಕಿ ಮಾರಾಟದ ಜಾಲವನ್ನು ಕೆಆರ್​​ಎಸ್ ಪತ್ತೆ ಮಾಡಿದ ಬಳಿಕ ಜಟಾಪಟಿ ತೀವ್ರಗೊಂಡಿದೆ. ಒಟ್ಟಾರೆ ಈ ದಂಧೆಯ ಸಾರಾಂಶವನ್ನು ಪೊಲೀಸರು ಬಯಲಿಗೆ ಎಳೆಯಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 20 December: ಇಂದು ಈ ರಾಶಿಯವರಿಗೆ ನಿಶ್ಚಿಂತೆ ಕೊಟ್ಟ ಮಾತಿನ ನೆರವೇರಿಕೆ – Kannada News | Horoscope Today in Kannada on 20 December Satursday; Dina Bhavishya Tithi Panchanga Details here

ಮೇಷ ರಾಶಿ:

ಕಲ್ಪನೆಗಳನ್ನು ವಾಸ್ತವಕ್ಕೆ ಇಳಿಸುವ ಅಗತ್ಯ. ಭಾವನೆಗಳನ್ನು ನಿಯಂತ್ರಿಸಿ. ನಿಮ್ಮ ಭಾವಲೋಕಕ್ಕೆ ಗಡಿ ಹಾಕಿಕೊಳ್ಳಿ. ಬಹಳ ದಿನಗಳಿಂದ ಇದ್ದ ಆಸ್ತಿಯ ಮೇಲಿನ ಮೋಹವು ಕಡಿಮೆ ಆಗುವುದು. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ನಿರಂಕುಶದಂತೆ ವರ್ತಿಸುವುದು ಬೇಡ. ಇಂದಾಗುವ ಖರ್ಚನ್ನು ರೂಪಾಯಿಯಲ್ಲಿ ಲೆಕ್ಕವಿಡಲು ಸಾಧ್ಯವಾಗದು. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಗ್ರಾಹಕರಿಂದ‌ ಮೆಚ್ಚುಗೆ ಸಿಗಲಿದೆ. ಅಶಿಸ್ತು ನಿಮ್ಮ ಕಾರ್ಯವನ್ನು ಯೋರಿಸುತ್ತದೆ. ಸ್ವಂತ ಕಾರ್ಯದ‌ ಕಾರಣ ಕಛೇರಿಗೆ ವಿತಾಮ ಹೇಳುವಿರಿ. ಅಂತರಾಳದ ಮಾತು ಇಂದು ನಿಮ್ಮನ್ನು ಬಲ್ಲವರೆಗೆ ಸ್ಪಷ್ಟವಾಗಲಿದೆ. ಸೇವೆ, ದಾನದಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುವುದು. ಅಪಮಾನವಾದ ಸ್ಥಳದಲ್ಲಿಯೇ ಗೌರವ ಪಡೆಯುವಿರಿ. ಸಾಹಸದಿಂದ ಏನಾದರೂ ಅನಾಹುತ ಮಾಡಿಕೊಳ್ಳಬಹುದು.

ವೃಷಭ ರಾಶಿ:

ಸಮಾಜಮುಖಿ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಮಯ. ನಿಮ್ಮ ಆಲೋಚನೆಗಳಿಗೆ ಸರಿಯಾದ ರೂಪ ಮತ್ತು ಜವಾಬ್ದಾರಿ ಬರಲಿದೆ. ಇಂದು ನೀವು ರಹಸ್ಯದ ಕಾರ್ಯಾಚರಣೆಯನ್ನು ಮಾಡುವಿರಿ. ನಿಮ್ಮ ಕೈ‌ಮೀರಿದ ಸಂಗತಿಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿಲ್ಲ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ಸಣ್ಣ ಅಂತರದಲ್ಲಿ ನಿಮ್ಮ ಅಪಘಾತವು ತಪ್ಪಲಿದ್ದು ನಿಮ್ಮ ಅದೃಷ್ಟವು ಕೈ ಹಿಡಿಯಲಿದೆ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಎಂತಹ ಸಂದರ್ಭವನ್ನೂ ಪ್ರತ್ಯಕ್ಷವಾಗಿ ನೋಡದೇ ತೀರ್ಮಾನಿಸಲಾಗದು. ವಿಭಿನ್ನ ಚಿಂತನೆಗೆ ಮನ್ನಣೆ ಸಿಗುತ್ತದೆ. ಸ್ನೇಹ ವಲಯದಿಂದ ಹೊಸ ಅವಕಾಶ ಬರಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು. ಓಡಾಟವು ನಿಮಗೆ ಅತಿಯಾದ ಆಯಾಸಪ್ರದವಾಗಲಿದೆ.

ಮಿಥುನ ರಾಶಿ:

ದೀರ್ಘಕಾಲದ ಯೋಜನೆಗೆ ಉತ್ತಮ ದಿನವಾಗಿದ್ದು, ಶ್ರಮ ವ್ಯರ್ಥವಾಗದು. ಕುಟುಂಬ ಅಥವಾ ಕೆಲಸದ ಭಾರ ಸಹನೀಯವಾಗುತ್ತದೆ. ನಿಮಗೆ ಪ್ರತಿಕೂಲದ ವಿಚಾರಗಳೇ ನೆನಪಾಗುವುದು. ಉನ್ನತ ವಿದ್ಯಾಭ್ಯಾಸಕ್ಕೆ ಎದುರಾಗುವ ಸಾಧಕ ಬಾಧಕಗಳ ಮಾಹಿತಿ ಇರಲಿ. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು.‌ ಅಧಿಕಾರಿಗಳಿಂದ ನಿಮ್ಮ ಆರ್ಥಿಕತೆಯು ಪರಿಶೀಲನೆಗೊಳ್ಳುವುದು. ದಾಂಪತ್ಯದಲ್ಲಿ ಹಣದ ವಿಚಾರಕ್ಕೆ ಕಹಿ ಮಾತುಗಳು ಬರಬಹುದು. ಕೆಲವು ಬಂಧನದಿಂದ ಬಿಡುಗಡೆ ಸಿಕ್ಕಿ ಹಗುರಾಗುವಿರಿ. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಆದರೆ ಅದೇ ನಿಮ್ಮ ಗೌರವದ ಮೂಲ. ನಿಮ್ಮ ಸ್ಥೈರ್ಯ ಇನ್ನಷ್ಟು ಬಲವಾಗಲಿದೆ. ಕಲಾವಿದೆಯು ನಿಮ್ಮ ಬಾಳ ಸಂಗಾತಿಯಾಗಿ‌ ಬರುವ ಸಾಧ್ಯತೆ ಇದೆ. ಕಛೇರಿಯಲ್ಲಿ ಇಂದು ಯಾವುದೇ ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಂಡು ಹೋಗುವ ಮನಸ್ಸು ಇರದು. ನಿಮ್ಮ ತಪ್ಪನ್ನು ಒಪ್ಪಿಕೊಂಡರೆ ಸಣ್ಣವರೇನು ಆಗುವುದಿಲ್ಲ.

ಕರ್ಕಾಟಕ ರಾಶಿ:

ಅತಿಯಾದ ಆಶಾವಾದವನ್ನು ತಪ್ಪಿಸಬೇಕು. ನಿಮ್ಮ ದೃಷ್ಟಿ ಭೂಮಿಗೆ ಬಂದು, ಜ್ಞಾನದ ತಿಳಿವಳಿಕೆ ಗಟ್ಟಿಯಾಗುತ್ತದೆ. ಆರ್ಥಿಕ ಸ್ಥಿತಿಯು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಸ್ಥಿತಿಯು ಹಾಸ್ಯವೆನಿಸುವುದು. ನಿಮ್ಮ ದೇಹಕ್ಕೆ ವಿರುದ್ಧವಾದ ಕೆಲಸಗಳಿಂದ ತೊಂದರೆಯಾಗಲಿದೆ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಮ್ಮ ಮಾತನ್ನು ದುರುಪಯೋಗ ಮಾಡಬಹುದು. ಸಂಗಾತಿಯು ನಿಮ್ಮ ಯೋಜನೆಯನ್ನು ಪ್ರೋತ್ಸಾಹಿಸಬಹುದು. ಅನುಭವವೇ ಇಂದು ನಿಮ್ಮ ಗುರು. ಹಳೆಯ ಪಾಠ ಹೊಸ ಅರ್ಥ ನೀಡುತ್ತದೆ. ದೂರದ ವಿಚಾರಗಳು ಅಥವಾ ಪ್ರಯಾಣ ಯೋಚನೆ ಮನಸ್ಸನ್ನು ಸೆಳೆಯುತ್ತವೆ. ಅಪರಿಚಿತ ಕರೆಗಳಿಗೆ ಸ್ಪಂದನೆ ಬೇಡ. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡುವುದು ಕಷ್ಟವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ.

ಸಿಂಹ ರಾಶಿ:

ಆಂತರಿಕ ಪರಿವರ್ತನೆ ತಾನಾಗಿಯೇ ಆಗಲಿದೆ. ಹಣಕಾಸು ನಿರ್ಧಾರಗಳಲ್ಲಿ ಎಚ್ಚರ. ನಿಮ್ಮ ಸಹನೆಯನ್ನು ಪರೀಕ್ಷಿಸುವ ಕಾಲ ಇಂದು. ಹೊಸ ವಿಚಾರವನ್ನು ಕಲಿಯುವ ಉಮೇದು ಮಾಡುವಿರಿ. ಕೆಲವು ಸಂದರ್ಭಗಳು ನಿಮ್ಮ‌ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಕುಟುಂಬದಿಂದ ವೃತ್ತಿಯ ಬದಲಾವಣೆಗೆ ಒತ್ತಾಯ ಬರಬಹುದು. ಅಧಿಕ ಆದಾಯವನ್ನು ನಿಮ್ಮಿಂದ ನಿರೀಕ್ಷಿಸಬಹುದು. ಕೈ ತಪ್ಪುವ ಕಾರ್ಯವನ್ನು ನೀವೇ ಶ್ರಮದಿಂದ ಪಡೆಯುವಿರಿ. ಮೂರ್ಖರಂತೆ ಬರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ಗುಪ್ತ ವಿಷಯಗಳು ಸ್ಪಷ್ಟವಾಗುವ ಸೂಚನೆ. ಭಯಕ್ಕಿಂತ ಧೈರ್ಯ ಆಯ್ಕೆಮಾಡಿ. ಇಂದು ಸತ್ಯ ನಿಮ್ಮ ಶಕ್ತಿಯಾಗುತ್ತದೆ. ಹೊಳೆಯುವುದೆಲ್ಲ ನಕ್ಷತ್ರವಲ್ಲ ಎಂಬುದು ಎಡವಿದ‌ ಮೇಲೆ ಗೊತ್ತಾಗುವುದು.

ಕನ್ಯಾ ರಾಶಿ:

ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲ ಆಯಾಮಗಳನ್ನು ತೂಗಿ ನೋಡಿ. ಕಲಾತ್ಮಕ ಚಿಂತನೆಗೆ ಅವಕಾಶ. ನಿಮ್ಮ ನ್ಯಾಯಬುದ್ಧಿಯನ್ನು ಬಲಪಡಿಸಿ ಒಳಗಿನ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಇಂದು ನಿಮ್ಮ ಜೊತೆ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಕ್ರೀಡೆಯಲ್ಲಿ ಮುನ್ನಡೆಯುವ ಆಸಕ್ತಿಯನ್ನು ತೋರಿಸುವಿರಿ. ಹತ್ತಾರೂ ಆಲೋಚನೆಗಳು ಒಂದಾದಮೇಲೆ‌‌ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು. ಜೊತೆಗಿರುವವರನ್ನು ಸಂತೋಷದಲ್ಲಿ ಇಡುವಿರಿ. ದ್ವಿಚಕ್ರವಾಹನದಲ್ಲಿ ಸಚರಿಸುವುದು ಬೇಡ. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ‌ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ‌ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು.‌ ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ವಿದೇಶದ ವ್ಯಾಮೋಹವು ನಿಮಗೆ ದೂರಾಗುವುದು. ಯಾರಿಂದಲೂ ಏನನ್ನೂ ಕಸಿದುಕೊಳ್ಳಲು ಹೋಗುವುದು ಬೇಡ. ಮನಶ್ಚಾಂಚಲ್ಯದಿಂದ ಇಂದು ಅಶಿಸ್ತಿನಿಂದ‌ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ:

ಕೆಲಸದಲ್ಲಿ ನಿಖರತೆಯಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಶ್ರಮಕ್ಕೆ ಗಂಭೀರ ಫಲವನ್ನು ನಿಧಾನವಾಗಿ ಪಡೆಯುವಿರಿ. ನಿಮಗೆ ಇಂದು ಯಾರಾದರೂ ಧೈರ್ಯ ತುಂಬುವವರ ಅವಶ್ಯಕತೆ ಇರಲಿದೆ. ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಸಾಲ ಕೊಟ್ಟವರು ನಿಮ್ಮನ್ನು‌ ನಾನಾ ಪ್ರಕಾರವಾಗಿ ಜರಿಯಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಯಾರೋ ಆಡಿದ ನಕಾರಾತ್ಮಕ ಮಾತಿಗೆ ಸತ್ತ್ವವನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ತಪ್ಪು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ. ಕ್ರಮಬದ್ಧತೆ ಇಂದು ದೊಡ್ಡ ಸಹಾಯ. ಸಮತೋಲನವೇ ದಿನದ ಸಾರ.

ವೃಶ್ಚಿಕ ರಾಶಿ:

ಕೆಲಸದ ಒತ್ತಡ ಇದ್ದು ಫಲ ಅಸ್ಪಷ್ಟವಾಗಿ ಗೋಚರಿಸುವುದು. ಅಹಂಕಾರ ತಾನಾಗಿಯೇ ಪ್ರಕಟವಾಗಲಿದೆ. ಧ್ಯಾನ ನಿಮ್ಮ ಮನಸ್ಸಿಗೆ ಆಯಾಸವನ್ನು ಮೀರುವ ಶಕ್ತಿ ನೀಡುತ್ತದೆ. ನಿಮ್ಮ ನಾಯಕತ್ವವನ್ನು ಸರಿಮಾಡಿಕೊಳ್ಳಿ. ನೀವು ಯಾವ ಸೋಲನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಸಮಯೋಚಿತ ಕಾರ್ಯದಿಂದ ನಿಮಗೆ ಉನ್ನತ ಅಧಿಕಾರಗಳು ಬರಬಹುದು. ಇಂದು ನಿಮ್ಮ ಭವಿಷ್ಯ ಹಾಗೂ ಮಕ್ಕಳ ಬಗ್ಗೆ ಯೋಚನೆ ಅಧಿಕವಾಗುವುದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ನಿಮ್ಮ ನೋವನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳುವಿರಿ. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡುವಿರಿ‌. ಅಧಿಕಾರಕ್ಕಿಂತ ಕರ್ತವ್ಯ ಮುಖ್ಯವಾಗುವ ದಿನ. ವಿನಯ ತೋರಿಸಿದರೆ ಗೌರವ ಸ್ವಯಂ ಬರುತ್ತದೆ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು.

ಧನು ರಾಶಿ:

ಕುಟುಂಬದ ವಿಷಯಗಳಿಗೆ ಆದ್ಯತೆ ನೀಡಿ. ಹಳೆಯ ಸಂಬಂಧ ಪುನಃ ಸಂಪರ್ಕಕ್ಕೆ ಬರಬಹುದು. ನಿಮ್ಮ ಆತ್ಮಬಲ ಜಾಗೃತಗೊಂಡು ಸ್ಥಿರತೆಯತ್ತ ಕರೆದೊಯ್ಯುತ್ತದೆ. ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಬಯಕೆ ಇರುವುದು. ಇಂದು ದಂಪತಿಗಳ ನಡುವೆ ಕಲಹವೆದ್ದು ಇಬ್ಬರ ತಪ್ಪುಗಳನ್ನು ಪರಸ್ಪರ ಹೇಳಿ ವಾದ ಮಾಡುವಿರಿ. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಕಷ್ಟವಾಗುವುದು. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು‌ ಪ್ರಯತ್ನಶೀಲರಾಗುವಿರಿ. ಭಾವನೆಗಳು ತೀವ್ರವಾಗುವ ದಿನ. ಮನಸ್ಸಿನ ಭಾರವನ್ನು ಹೊರ ಹಾಕಿದರೆ ಹಗುರಾಗುತ್ತದೆ. ಕಾನೂನಿನ ತೊಂದರೆಯನ್ನು ಕಾನೂನಾತ್ಮಕವಾಗಿಯೇ ಸರಿ ಮಾಡಿಕೊಳ್ಳುವಿರಿ.

ಮಕರ ರಾಶಿ:

ಒಂದೇ ನಿರ್ಧಾರ ಭವಿಷ್ಯದ ದಿಕ್ಕು ಬದಲಾಯಿಸಬಹುದು. ಸಂಜೆ ಆತ್ಮಾವಲೋಕನಕ್ಕೆ ಅವಕಾಶವಾಗಕಿದೆ. ನಿಮ್ಮ ಬುದ್ಧಿಗೆ ಗಂಭೀರತೆ ಬರಲಿದೆ. ಆರ್ಥಿಕಮಟ್ಟವನ್ನು ಯಾರಾದರೂ ತುಲನೆ ಮಾಡಬಹುದು. ನೀವು ಇಂದು ಸೌಂದರ್ಯಕ್ಕೆ ಪ್ರಾಮುಖ್ಯ‌ ಕೊಟ್ಟು ಕಾರ್ಯವನ್ನು ವಿಳಂಬ ಮಾಡುವಿರಿ. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಮಾತು ಬೇರೆ ಅರ್ಥವನ್ನು ಕೊಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದೆ. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಯೋಚನೆಗಳೇ ಇಂದು ನಿಮ್ಮ ಶಕ್ತಿ. ಬರವಣಿಗೆ, ಮಾತುಕತೆ, ಅಧ್ಯಯನಕ್ಕೆ ಅನುಕೂಲ. ಆದರೆ ಅನಗತ್ಯ ಚರ್ಚೆ ತಪ್ಪಿಸಿ. ಆಪ್ತರ ಸಲಹೆಯನ್ನು ಕೇಳಲು ನಿಮಗೆ ಇಷ್ಟವಾಗದು. ನೀವು ಸಂಬಂಧವಿಲ್ಲದ ವಿಚಾರಕ್ಕೆ ಗಮನವನ್ನು ಕೊಡುವಿರಿ.

ಕುಂಭ ರಾಶಿ:

ಮಾತಿಗಿಂತ ನಡೆ ಮುಖ್ಯ. ನಿಮ್ಮ ಸಹನೆಯನ್ನು ಪರೀಕ್ಷಿಸಿ, ಅಂತಿಮವಾಗಿ ಭರವಸೆಯು ಫಲ ನೀಡುವುದು. ಖಾಸಗಿ ಸಂಸ್ಥೆಯ ಜವಾಬ್ದಾರಿಯನ್ನು ನೀವು ನಿರ್ವಹಿಸಲು ಕಷ್ಟವಾಗುವುದು.‌ ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಕೆಲಸವು ಪೂರ್ಣವಾಗದೇ ಹಣವನ್ನು ಪಡೆಯಲಾರಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ಸ್ಥಿರತೆಯೇ ನಿಮ್ಮ ರಕ್ಷಾಕವಚ. ಹಳೆಯ ಹೂಡಿಕೆ ಅಥವಾ ಪ್ರಯತ್ನ ಇಂದು ನೆನಪಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಯಾವ ಸಹಾಯವನ್ನು ಕೇಳಿದರೂ ಇಲ್ಲ ಎನ್ನುವ ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ.

ಮೀನ ರಾಶಿ:

ಹಿರಿಯರ ಸಲಹೆ ನಿರ್ಲಕ್ಷ್ಯಿಸಬೇಡಿ. ಹಣಕಾಸಿನಲ್ಲಿ ಎಚ್ಚರ ಅಗತ್ಯ. ಸಂಜೆ ವೇಳೆಗೆ ಮನಸ್ಸು ಶಾಂತವಾಗುತ್ತದೆ. ಶ್ರಮಕ್ಕೆ ತಡವಾದರೂ ನ್ಯಾಯ ಸಿಗಲಿದೆ. ಸಂಬಂಧಕ್ಕಿಂತ ಹಣವೇ ಮುಖ್ಯವಾಗಿ ಕಾಣಿಸುವುದು. ಅ‌ನ್ಯರ ಕಾರಣದಿಂದ ನಿಮಗೆ ಒಂದು ಸಿಟ್ಟು ಬರುವುದು. ಇಂದಿನ ಎಂತ ಸ್ಥಿತಿಯಲ್ಲಿಯೂ ಮನಸ್ಸು ತಾಳ್ಮೆಯನ್ನು ಬಿಡದಿರಲಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಅನಂತರದ ಹತಾಶೆಯಿಂದ ಕಷ್ಟವಾದೀತು. ಸುಳ್ಳಿನಲ್ಲಿ ಸಿಕ್ಕಿಬೀಳುವ ಸಂದರ್ಭವಿದೆ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಆತುರವೇ ಮುಖ್ಯ ಅಡ್ಡಿ. ಕೆಲಸ ನಿಧಾನವಾಗಿ ನಡೆದರೂ ಅಡಿಪಾಯ ಗಟ್ಟಿಯಾಗುತ್ತದೆ. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಕಷ್ಟವಾದೀತು. ಕಲಾವಿದರಾಗುವ ದೃಢವಾದ ಮನಸ್ಸಿನಲ್ಲಿ ನೆಲೆಸುವುದು.

20 ಡಿಸೆಂಬರ್​​ 2025ರ ಶನಿವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಮೂಲಾ, ಯೋಗ : ಸುಕರ್ಮ, ಕರಣ : ಶಕುನಿ, ಸೂರ್ಯೋದಯ – 06 – 44 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:57 – 12:22, ಯಮಗಂಡ ಕಾಲ 15:10- 16:35, ಗುಳಿಕ ಕಾಲ 08:09 – 09:33

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 20ರ ದಿನಭವಿಷ್ಯ – Kannada News | December 20 Numerology Prediction: Your Birth Number’s Daily Fortune and Astrology

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಬಾಯಿ ಬಿಟ್ಟು ನಿಮ್ಮ ಮನಸ್ಸಲ್ಲಿ ಇರುವುದನ್ನು ಹೇಳದೆ ಇದ್ದಲ್ಲಿ ನಿಮ್ಮ ನಿರೀಕ್ಷೆ ಏನು ಎಂಬುದು ಇತರರಿಗೆ ತಿಳಿಯುವುದಾದರೂ ಹೇಗೆ? ಇವೆಲ್ಲ ಅರ್ಥ ಆಗಬೇಕಲ್ಲವಾ ಎಂದು ಅಂದುಕೊಳ್ಳುವ ಬದಲು ನಿಮ್ಮ ಅಪೇಕ್ಷೆ ಏನು ಅನ್ನುವುದನ್ನು ಹೇಳಿಬಿಡಿ. ವಿವಾಹಿತರಿಗೆ ಸಂಗಾತಿಯ ಜತೆಗೆ ಉತ್ತಮ ಸಮಯ ಕಳೆಯುವ ಯೋಗ ಇದೆ. ಕಾರು ಖರೀದಿ, ಮನೆ ನಿರ್ಮಾಣ, ಸೈಟು ಖರೀದಿ ಇಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಒಂದೊಳ್ಳೆ ಸಮಯ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಈಗ ಕೆಲಸ ಮಾಡುತ್ತಾ ಇರುವ ಸಂಸ್ಥೆಯಲ್ಲಿಯೇ ಬೆಳವಣಿಗೆಗೆ ಅವಕಾಶ ಇರುವಂಥ ಹುದ್ದೆ, ವೇತನ ಹೆಚ್ಚಳ, ಬಡ್ತಿ ಇಂಥದ್ದು ದೊರೆಯುವ ಬಗ್ಗೆ ಮಾಹಿತಿ ಸಿಗಲಿದೆ. ದೃಷ್ಟಿಯಲ್ಲಿನ ದೋಷಕ್ಕಾಗಿ ಬಹಳ ವರ್ಷಗಳಿಂದ ಪರೀಕ್ಷೆ ಮಾಡಿಸದೆ ಒಂದೇ ಕನ್ನಡಕ ಬಳಸುತ್ತಾ ಬಂದಿದ್ದೀರಿ ಅಂತಾದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಕ್ಷೇಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆಯೇ ಇತರ ಸದಸ್ಯರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ವ್ಯಾಪಾರ- ವ್ಯವಹಾರದಲ್ಲಿನ ಹೂಡಿಕೆ ವಿಚಾರಗಳಿಗೆ ಪ್ಲಾನಿಂಗ್, ಬಜೆಟ್ ಮಾಡಿಕೊಳ್ಳಲಿದ್ದೀರಿ. ಯಾರು ಉದ್ಯೋಗದಲ್ಲಿ ದೀರ್ಘ ಕಾಲದ ಅಂತರ ಬಂದು, ಈಗ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಿಂದ ಆಫರ್ ಬರುವಂಥ ಸೂಚನೆ ಇದೆ. ಅದರಲ್ಲಿಯೂ ನಿಮಗೆ ಅನುಕೂಲ ಆಗುವಂಥ ಪಾಳಿಯಲ್ಲಿಯೇ ಅಥವಾ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ದೊರೆಯುವಂಥ ಕೆಲಸ ಅದಾಗಿರುವ ಸಾಧ್ಯತೆ ಹೆಚ್ಚಿದೆ. ಮನೆ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ಸನ್ನಿವೇಶಗಳಿಂದ ಒತ್ತಡ ಸೃಷ್ಟಿ ಆಗಬಹುದು. ಮನೆ ಮಾಲೀಕರ ಮಾತುಗಳಿಂದ ಬಹಳ ಬೇಜಾರಾಗಿ, ಕೆಲವು ವಿಪರೀತದ ನಿರ್ಧಾರ ತೆಗೆದುಕೊಳ್ಳುವಂತೆ ಆಗಬಹುದು. ಇಂಥ ಸನ್ನಿವೇಶ ಉದ್ಭವಿಸಿದಲ್ಲಿ ಸರಿಯಾಗಿ ನಿಭಾಯಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ವಿದೇಶದಲ್ಲಿ ವಾಸ ಆಗಿದ್ದೀರಿ ಅಂತಾದಲ್ಲಿ ಖರ್ಚು- ವೆಚ್ಚವನ್ನು ನಿಭಾಯಿಸುವುದು ಕಷ್ಟವಾಗಲಿದೆ. ಇಷ್ಟು ಸಮಯ ನಿಮಗೆ ನೆರವಾಗುತ್ತಿದ್ದ ಕೆಲವು ಪರಿಸ್ಥಿತಿ ಇನ್ನು ಮುಂದೆ ಹಾಗಿರುವುದಿಲ್ಲ ಎಂಬುದು ಗಮನಕ್ಕೆ ಬರಲಿದೆ. ಸ್ಥಳ ಬದಲಾವಣೆ ಅಥವಾ ನಿಮ್ಮ ನಿರ್ಧಾರದಲ್ಲಿಯೇ ಬದಲಾವಣೆ ಮಾಡಿಕೊಂಡು ಬಿಡುವ ಸಾಧ್ಯತೆ ಇದೆ. ಯಾವುದಾದರೂ ವಿಷಯ ಪೋಷಕರಿಂದ ಮುಚ್ಚಿಟ್ಟಿದ್ದೀರಿ ಅಂದರೆ ಅದನ್ನು ಹೇಳಿಕೊಂಡು ಬಿಡುವುದು ಒಳ್ಳೆಯದು. ಇನ್ನು ಯಾರಿಗೆ ಮಕ್ಕಳ ಅನಾರೋಗ್ಯ ಸಮಸ್ಯೆ ಚಿಂತೆಯಾಗಿ ಕಾಡುತ್ತಾ ಇದೆಯೋ ಅಂಥವರಿಗೆ ಸೂಕ್ತ ಔಷಧೋಪಚಾರ ಕೊಡಿಸಲು ಬಹಳ ಒಳ್ಳೆ ರೆಫರೆನ್ಸ್ ದೊರೆಯಲಿದೆ. ನಿಮ್ಮ ಅತಿಯಾದ ಶಿಸ್ತು ಬೇರೆಯವರ ಮೇಲೆ ಸಾಧ್ಯವಾದಷ್ಟೂ ಹೇರುವುದಕ್ಕೆ ಹೋಗಬೇಡಿ. ಇತರರಿಗೆ ಒತ್ತಡ ಆಗದಂತೆ ನಡೆಸಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಕ್ಕು ಹಗುರಾಗುವುದಕ್ಕೆ ಬೇಕಾದ ವಾತಾವರಣದಲ್ಲಿ ಈ ದಿನ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಸ್ನೇಹಿತರು- ಸಂಬಂಧಿಗಳು ಜತೆಗೂಡಿ ರೆಸಾರ್ಟ್, ಕಿರು ಪ್ರವಾಸ ಇಂಥವುಗಳಿಗೆ ಹೋಗುವ ಯೋಗ ಇದೆ. ಯಾವ ವ್ಯಕ್ತಿಯಿಂದ ನಿಮಗೇನೂ ಅನುಕೂಲ ಆಗುವುದಿಲ್ಲ ಎಂದುಕೊಂಡು ಬಿಟ್ಟಿರುತ್ತೀರೋ ಅಂಥವರಿಂದಲೇ ವೃತ್ತಿ- ವ್ಯವಹಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಹತ್ತರವಾದ ಸಹಾಯ ಆಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಆಗಲಿದೆ. ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಖರೀದಿಸುವುದಕ್ಕೆ ಪಟ್ಟು ಹಿಡಿಯಲಿದ್ದೀರಿ. ಅಥವಾ ನಿಮ್ಮ ಜತೆಗೆ ಬಂದವರಿಂದ ಉತ್ತೇಜಿತರಾಗಿ, ಮೂಲ ನಿರ್ಧಾರವನ್ನೇ ಬದಲಿಸಿಕೊಂಡು ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹೆಚ್ಚುವರಿ ಜವಾಬ್ದಾರಿಗಳು ವಹಿಸಿಕೊಳ್ಳುವ ಬಗ್ಗೆ ಆದೇಶ ಬಂದಿರುವ ಮಾಹಿತಿ ಸಿಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮನಸ್ಸಿನಲ್ಲಿ ಒಂದು ಬಗೆ ತಲ್ಲಣ ಇರಲಿದೆ. ಹಣಕಾಸಿನ ವಿಚಾರಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತದೋ ಇಲ್ಲವೋ ಎಂಬ ಕಾರಣವು ನಿಮ್ಮ ಸ್ಥಿತಿಗೆ ಕಾರಣ ಆಗಲಿದೆ. ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳುವುದಕ್ಕೆ ಸಂಕೋಚ ಪಟ್ಟುಕೊಂಡಿದ್ದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣ ಆಯಿತು ಎಂದು ನಾಲ್ಕಾರು ಬಾರಿ ಅಂದುಕೊಳ್ಳುತ್ತೀರಿ. ನಿಮ್ಮ ಜೊತೆಗೆ ಕೆಲಸ ಮಾಡುವವರು ಹೆಚ್ಚುವರಿಯಾಗಿ ಆದಾಯ ಬರುವಂತೆ ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಭಾರವಾದ ವಸ್ತುಗಳನ್ನು ಸಾಗಿಸುವಾಗ ಜಾಗ್ರತೆಯಿಂದ ಇರಬೇಕು. ನಿಮ್ಮದೇ ಮನೆಯ ಕೆಲಸ ಆದರೂ ಭಾರವಾಗಿರುವ ಪದಾರ್ಥಗಳು, ವಸ್ತುಗಳನ್ನು ಎತ್ತುವಾಗ- ಇಳಿಸುವಾಗ ಜಾಗ್ರತೆಯಿಂದ ಇರಬೇಕು. ಸ್ಟೇಷನರಿ ಅಂಗಡಿಯನ್ನು ಇಟ್ಟುಕೊಂಡಿರುವವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಬೆಳವಣಿಗೆ ಆಗಲಿದೆ. ದೀರ್ಘಾವಧಿಯ ಆರ್ಡರ್ ಸಹ ದೊರೆಯುವ ಅವಕಾಶ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕೇಳಿದಷ್ಟು ಹಣವನ್ನು ನೀಡಿದ ಮೇಲೂ ಅಂದುಕೊಂಡಂಥ ಗುಣಮಟ್ಟ ಬರುತ್ತಿಲ್ಲ ಎಂಬುದು ನಿಮ್ಮ ಆಕ್ಷೇಪದ ಮೂಲ ಆಗಲಿದೆ. ಸಣ್ಣ- ಪುಟ್ಟ ಕೆಲಸ ಅಥವಾ ಜವಾಬ್ದಾರಿ ಎಂದು ನೋಡದೆ ನೀವೇ ಮುಂದೆ ನಿಂತು ಮಾಡಿದಂಥ ಕಾರ್ಯಗಳಿಗೆ ಹಲವು ಕಡೆಯಿಂದ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ನಿಮಗಾಗಿ ಖರೀದಿ ಮಾಡಿದ್ದಂಥ ಕೆಲವು ಎಲೆಕ್ಟ್ರಿಕ್ ವಸ್ತುವನ್ನು ಇತರರಿಗೆ ನೀಡುವ ಸನ್ನಿವೇಶ ಸೃಷ್ಟಿ ಆಗಲಿದೆ. ರಂಗಭೂಮಿ- ಸಿನಿಮಾ- ಧಾರಾವಾಹಿ- ಯಕ್ಷಗಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ತುಂಬ ಪಾಸಿಟಿವ್ ಆದಂಥ ಬೆಳವಣಿಗೆಗಳು ಆಗಲಿವೆ. ವಿದೇಶ ಪ್ರಯಾಣಕ್ಕೆ ಅವಕಾಶ ದೊರೆಯಲಿದ್ದು, ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತೀರಿ, ಆ ಸಲುವಾಗಿಯೇ ತೆರಳುವ ಸಂದರ್ಭ ಒದಗಿಬರಲಿದೆ. ವಯಸ್ಸಿನಲ್ಲಿ ಚಿಕ್ಕವರು ಆಡುವಂಥ ಮಾತುಗಳಿಂದ ಬೇಸರ ಆಗಬಹುದು. ಆದರೆ ಯಾಕೆ ಹಾಗೆ ಹೇಳಿದರು ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ದಿನವಿಡೀ ಪ್ರೊಡಕ್ಟಿವ್ ಆದಂಥ ಕೆಲಸ- ಕಾರ್ಯ, ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತೀರಿ. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಯಾರಿಗೆ ಸಮಯ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನಿಮಗೆ ಅನಿಸಿರುತ್ತದೋ ಅಂಥವರ ಜತೆಗೆ ಕಾಲ ಕಳೆಯಲಿದ್ದೀರಿ. ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಕೊಂಡಿದ್ದೀರಿ ಅಂತಾದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಕೃಷಿಕರು ಕೆಲವು ಯಂತ್ರ- ಉಪಕರಣಗಳ ಖರೀದಿಗಾಗಿ ವಿಚಾರಣೆ ನಡೆಸಲಿದ್ದೀರಿ, ಅದಕ್ಕಾಗಿ ಕೊಟೇಷನ್ ಪಡೆದುಕೊಳ್ಳುವ ಸಾಧ್ಯತೆ ಸಹ ಇದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸೇವೆ ರೀತಿಯಲ್ಲಿ ಕೆಲವು ಕೆಲಸ- ಕಾರ್ಯ ಮಾಡಲಿದ್ದೀರಿ. ಇನ್ನೊಬ್ಬರ ಜವಾಬ್ದಾರಿ ನೀವು ನಿರ್ವಹಿಸುವ ಸಂದರ್ಭ ಬಂದಲ್ಲಿ ಫಲಿತಾಂಶದ ಬಗ್ಗೆ ಆಲೋಚಿಸಿದ ನಂತರದಲ್ಲಿ ಮುಂದಕ್ಕೆ ಹೆಜ್ಜೆಯನ್ನು ಇಡಿ. ಏಕೆಂದರೆ ಸಹಾಯ ಎಂಬ ಉದ್ದೇಶದಿಂದ ಆ ಕಾರ್ಯ ಮುಗಿಸಿದ ಮೇಲೆ ಆಕ್ಷೇಪಣೆಯ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗುತ್ತದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ಕಾರ್ಯ ವೈಖರಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಕೆಲಸ ಪೂರ್ತಿ ಆಗುವ ಮುನ್ನ ಅದರ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಬಾರದು ಎಂಬ ತೀರ್ಮಾನ ಕೈಗೊಳ್ಳಲಿದ್ದೀರಿ. ಯಾವುದಕ್ಕೂ ಇರಲಿ ಎಂದುಕೊಂಡು, ಕಳೆದ ಕೆಲ ಸಮಯದಿಂದ ಕೂಡಿಡುತ್ತಾ ಬಂದಿದ್ದ ಆಪತ್ ಕಾಲದ ಮೊತ್ತವೊಂದು ಈ ದಿನ ಸಹಾಯಕ್ಕೆ ಬರಲಿದೆ. ತಕ್ಷಣಕ್ಕೆ ಹೊಂದಾಣಿಕೆ ಮಾಡಬೇಕು ಎಂಬಂಥ ವಸ್ತು, ಹಣ ಅಥವಾ ವ್ಯಕ್ತಿಗಳನ್ನು ಶ್ರದ್ಧೆಯಿಂದ ಮಾಡಲಿದ್ದೀರಿ. ನಿಮ್ಮ ಪ್ರಭಾವವನ್ನು ಬಳಸಿ ಸರ್ಕಾರಿ ಕಾಂಟ್ರಾಕ್ಟ್ ಅಥವಾ ಕೆಲಸ- ಕಾರ್ಯಗಳನ್ನು ಇತರರಿಗೆ ಕೊಡಿಸುವ ಸಾಧ್ಯತೆ ಸಹ ಈ ದಿನ ಇದೆ. ತಾಳ್ಮೆ- ಸಂಯಮ ವಹಿಸಿ ಮಾಡಿದಂಥ ರಿಯಲ್ ಎಸ್ಟೇಟ್ ವ್ಯವಹಾರಗಳು ಒಳ್ಳೆ ಲಾಭವನ್ನು ತಂದುಕೊಡಲಿವೆ. ಇತರರು ಬೇಡ ಎಂದು ಹೇಳಿದ ನಂತರವೂ ಪಟ್ಟು ಬಿಡದೆ ಆ ಕೆಲಸ ಮಾಡಿ ಮುಗಿಸಿದ್ದರಿಂದ ಸಿಗುವಂಥ ರಿಟರ್ನ್ಸ್ ಇದಾಗಿರಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ತಲೆಮಾರಿನ ಅಂತರ, ಅಂದರೆ ಜನರೇಷನ್ ಗ್ಯಾಪ್ ಅಂತಾರಲ್ಲ ಈ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಹಣಕಾಸಿನ ನಿರ್ಧಾರದ ವಿಷಯಕ್ಕೆ ಯಾರಿಗೂ ಸಲಹೆ ನೀಡುವುದಕ್ಕೋ ಅಥವಾ ಹೀಗೇ ನಡೆದುಕೊಳ್ಳಿ ಎನ್ನುವುದಕ್ಕೋ ಹೋಗಬೇಡಿ. ನಿಮ್ಮ ಸಲಹೆಗಳು ಉಪಯುಕ್ತ ಅಲ್ಲ ಎಂಬುದನ್ನು ನೇರವಾಗಿಯೇ ಹೇಳಿ, ಅದನ್ನು ಸಾಬೀತು ಸಹ ಮಾಡಿಬಿಡುವ ಅಪಾಯ ಇದೆ. ಹೀಗಾದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸೀಸನಲ್ ವ್ಯವಹಾರದ ಅವಕಾಶವೊಂದು ದೊರೆಯಲಿದೆ. ಒಂದೆರಡು ತಿಂಗಳ ಮಟ್ಟಿಗೆ ಮಾತ್ರ ಆದಾಯ ತಂದುಕೊಡುವಂಥವು. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಒದಗಿ ಬರಲಿದೆ. ದಿನಸಿ ಅಂಗಡಿ ನಡೆಸುತ್ತಾ ಇರುವವರು ಹೊಸ ವ್ಯವಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಹಣದ ಹೊಂದಾಣಿಕೆ ಮಾಡುವುದಕ್ಕೆ ಸಹ ಪ್ರಯತ್ನ ಮಾಡಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

Source link

IND vs SA: ಒಂದೇ ಒಂದು ಅರ್ಧಶತಕವಿಲ್ಲದೆ ವರ್ಷ ಮುಗಿಸಿದ ಸೂರ್ಯಕುಮಾರ್

Source link

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು: ಆದ್ರೂ ಅರ್ಭಟ ಹೇಗಿದೆ ನೋಡಿ – Kannada News | Finally Mysuru forest department officials Success in caught leopard in Sriranga rajapura Village

ಮೈಸೂರು, (ಡಿಸೆಂಬರ್ 19): ಜಾನುವಾರುಗಳ ಮೇಲೆ ದಾಳಿ ಮಾಡಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಮೈಸೂರಿ ಶ್ರೀರಂಗರಾಜಪುರ ಗ್ರಾಮದ ಬಳಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದರಿಂದ ಗ್ರಾಮದ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಗ್ರಾಮದ ಸುತ್ತಮುತ್ತ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಇದರಿಂದ ಜನರು ಆತಂಕಗೊಂಡಿದ್ದುಮ ಚಿರತೆಯನ್ನು ಸೆರೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅದರಂತೆ ಕಾರ್ಯವ್ರವೃತರಾದ ಅರಣ್ಯ ಇಲಾಖೆ ಸಿಬ್ಬಂದಿ, ಮಲ್ಲೇಶ್ ಎಂಬುವರ ಜಮೀನಿನಲ್ಲಿ ಬೋನು ಇಟ್ಟಿದ್ದರು.

Source link

ಬಿಗ್ ಬಾಸ್ ಕ್ಯಾಪ್ಟನ್ ಆದ ಕಾವ್ಯಾ; ಗಿಲ್ಲಿ ಬಿಟ್ಟು ಆಡಲು ಇದು ಅಗ್ನಿ ಪರೀಕ್ಷೆ – Kannada News | Kavya Shaiva became captain in Bigg Boss Kannada Season 12 this week

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯ ಆಗಲಿದೆ. ಈ ಸೀಸನ್ ಆರಂಭ ಆದಾಗಿನಿಂದ ಗಿಲ್ಲಿ ನಟ (Gilli Nata) ಮತ್ತು ಕಾವ್ಯ ಶೈವ ಅವರು ಜೊತೆಯಾಗಿಯೇ ಇದ್ದಾರೆ. ಅವರಿಬ್ಬರ ನಡುವೆ ಜಗಳ ಬಂದಿದ್ದು ಕಡಿಮೆ. ಇದೇ ಕಾರಣಕ್ಕೆ ಅವರಿಬ್ಬರನ್ನು ಕೆಲವರು ಟೀಕೆ ಮಾಡಿದ್ದು ಕೂಡ ಇದೆ. ಕಾವ್ಯಾ ಅವರು ಯಾವಾಗಲೂ ಗಿಲ್ಲಿಯ ನೆರಳಲ್ಲಿ ಇರುತ್ತಾರೆ ಎಂಬುದು ಅನೇಕರು ಅಭಿಪ್ರಾಯ. ಆದರೆ ಈ ವಾರ ಕಾವ್ಯ ಶೈವ (Kavya Shaiva) ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಲೂ ಅವರು ಗಿಲ್ಲಿಯ ನೆರಳಲ್ಲೇ ಇರುತ್ತಾರಾ ಅಥವಾ ಸಂಪೂರ್ಣ ಸ್ವತಂತ್ರವಾಗಿ ಆಟ ಆಡುತ್ತಾರಾ ಎಂಬ ಅಗ್ನಿಪರೀಕ್ಷೆ ಎದುರಾಗಲಿದೆ.

ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ಆಟಕ್ಕೆ ಅಂತಿಮವಾಗಿ ಸೂರಜ್ ಸಿಂಗ್ ಮತ್ತು ಕಾವ್ಯ ಶೈವ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಗ್ ಬಾಸ್ ಮನೆಯ ಸದಸ್ಯರ ವೋಟಿಂಗ್ ಆಧಾರದ ಮೇಲೆ ಕ್ಯಾಪ್ಟನ್ ಯಾರು ಎಂಬುದನ್ನು ಆಯ್ಕೆ ಮಾಡಲಾಯಿತು. ಸೂರಜ್ ಸಿಂಗ್ ಪರವಾಗಿ ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ ಅವರು ಮಾತ್ರ ವೋಟ್ ಮಾಡಿದರು.

ಕಾವ್ಯ ಶೈವ ಪರವಾಗಿ ಗಿಲ್ಲಿ ನಟ, ರಜತ್, ಮಾಳು ನಿಪನಾಳ, ಮ್ಯೂಟೆಂಟ್ ರಘು, ಸ್ಪಂದನಾ, ಚೈತ್ರಾ ಕುಂದಾಪುರ, ಧನುಶ್ ಅವರು ವೋಟ್ ಮಾಡಿದ್ದಾರೆ. ಈ ವಾರ ಕಾವ್ಯ ಅವರು ಆಟ ಆಡಿದ ರೀತಿಯು ಬಹುತೇಕರಿಗೆ ಇಷ್ಟ ಆಗಿದೆ. ಅಲ್ಲದೇ ಅವರ ಕ್ಯಾಪ್ಟನ್ಸಿ ಹೇಗಿರುತ್ತೆ ಎಂಬುದನ್ನು ನೋಡಬೇಕಿದೆ. ಹಾಗಾಗಿ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶವನ್ನು ನೀಡಲಾಯಿತು.

ಕ್ಯಾಪ್ಟನ್ ಆದಾಗ ಹೆಚ್ಚು ಜವಾಬ್ದಾರಿ ಇರುತ್ತದೆ. ಕಾವ್ಯ ಅವರು ತಮ್ಮ ಸ್ವಂತಿಕೆಯನ್ನು ತೋರಿಸಲು ಇದು ಉತ್ತಮ ಅವಕಾಶ ಆಗಿದೆ. ಈಗ ಅವರು ಗಿಲ್ಲಿಯ ಹಂಗು ಇಲ್ಲದೇ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಅವರ ಮೇಲೆ ಬಹುತೇಕರು ನಂಬಿಕೆ ಇಟ್ಟುಕೊಂಡು ವೋಟ್ ಮಾಡಿದ್ದಾರೆ. ಒಂದು ವೇಳೆ ಅವರು ಈ ನಂತರವೂ ಗಿಲ್ಲಿಯ ಜೊತೆಯೇ ಹೆಚ್ಚು ಕಾಲ ಕಳೆದರೆ ಸಿಕ್ಕ ಅವಕಾಶ ಕೈಚೆಲ್ಲಿದಂತೆ ಆಗುತ್ತದೆ. ಗಿಲ್ಲಿಯನ್ನು ಸಂಪೂರ್ಣ ಬಿಟ್ಟರೆ ಬಣ್ಣ ಬದಲಾಯಿಸಿದಂತೆ ಆಗುತ್ತದೆ. ಹಾಗಾಗಿ ಇದು ಕಾವ್ಯ ಪಾಲಿಗೆ ಅಗ್ನಿಪರೀಕ್ಷೆಯಂತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?

ಇನ್ನು, ಈ ವಾರದ ಕಳಪೆ ಪಟ್ಟ ಚೈತ್ರಾ ಕುಂದಾಪುರ ಅವರಿಗೆ ನೀಡಲಾಗಿದೆ. ಟಾಸ್ಕ್ ವೇಳೆ ಚೈತ್ರಾ ಕುಂದಾಪುರ ಅವರು ಅತಿರೇಕದಿಂದ ವರ್ತಿಸಿದ್ದರಿಂದ 9 ಸದಸ್ಯರು ಅವರಿಗೆ ಕಳಪೆ ನೀಡಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಟಾಸ್ಕ್ ಆಡಿ ಕ್ಯಾಪ್ಟನ್ ಆಗಿದ್ದ ಚೈತ್ರಾ ಅವರು ಈ ವಾರ ಕಳಪೆ ಪಟ್ಟ ಪಡೆದು ಜೈಲು ಸೇರುವಂತಾಗಿದೆ. ಮನೆಯವರ ಆಯ್ಕೆಯ ಪ್ರಕಾರ ಕಾವ್ಯ ಶೈವ ಅವರು ಉತ್ತಮ ಪಟ್ಟ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs SA: ಸತತ 19ನೇ ಟಿ20 ಸರಣಿ ಗೆಲುವಿನೊಂದಿಗೆ 2025 ಕ್ಕೆ ವಿದಾಯ ಹೇಳಿದ ಟೀಂ ಇಂಡಿಯಾ – Kannada News | Ind vs SA T20 Final:India Beats South Africa by 30 Runs, Clinches Series 3 1

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯವನ್ನು ಆತಿಥೇಯ ಟೀಂ ಇಂಡಿಯಾ 30 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಈ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಹಾರ್ದಿಕ್ ಹಾಗೂ ತಿಲಕ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 231 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್​ಗಳ ಅಂತ್ಯಕ್ಕೆ ರನ್ 201 ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಪ್ರವಾಸವನ್ನು ಆರಂಭಿಸಿದ್ದ ಆಫ್ರಿಕಾ ತಂಡ, ಟಿ20 ಸರಣಿ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಅಂತ್ಯಗೊಳಿಸಿದೆ.

Published On – 11:00 pm, Fri, 19 December 25

Source link

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ: ಹೇಗೆ ನಡೆದಿದೆ ನೋಡಿ – Kannada News | Koppal: Tungabhadra Dam crest gate replacement work finally begins; see video

ಕೊಪ್ಪಳ, ಡಿಸೆಂಬರ್​ 19: ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್​​ನ್ನು ಒಂದು ವರ್ಷದ ಬಳಿಕ ಅವಳಡಿಸಲಾಗುತ್ತಿದ್ದು, ಗೇಟ್​​ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಸರ್ಕಾರ ಸುಮಾರು 52 ಕೋಟಿ ರೂ ವೆಚ್ಚದಲ್ಲಿ ಜಲಾಶಯದ 33 ಗೇಟ್​ಗಳ ಬದಲಾವಣೆಗೆ ಮುಂದಾಗಿದೆ. ಈಗಾಗಲೇ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 33 ಗೇಟ್​ಗಳನ್ನ 10 ಅಡಿಯಷ್ಟು ತೆರವು ಮಾಡಲಾಗಿದೆ. ಗುಜರಾತ್ ಮೂಲದ ಕಂಪನಿ, ತುಂಗಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್​ಗಳನ್ನ ತೆರವು ಮಾಡಿದ್ದು, ಹೊಸ ಗೇಟ್​ಗಳನ್ನ ಅಳವಡಿಸಲು ಸಿದ್ದತೆ ನಡೆಸಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಗೇಟ್ ಗಳನ್ನ ತೆರವು ಮಾಡಿ, ಡಿಸೆಂಬರ್ 24ರಿಂದ ಹೊಸ ಗೇಟ್ ಅಳವಡಿಕೆ ಕಾರ್ಯ ಶುರುವಾಗಲಿದೆ. ಮಳೆಗಾಲ ಆರಂಭಕ್ಕೂ ಮುನ್ನ ಗೇಟ್ ಅಳವಡಿಕೆ ಮಾಡಬೇಕು ಎನ್ನುವುದು ಸರ್ಕಾರದ ನಿರ್ಧಾರವಾಗಿದೆ. ಜೂನ್ ವೇಳೆಗೆ ಹೊಸ ಗೇಟ್‌ಗಳು ಅಳವಡಿಕೆಯಾಗಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಹಾರದ ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು – Kannada News | Thieves stolen gold crown worth 50 lakh Rs in Bihar Thawe Durga Temple

ಪಾಟ್ನಾ, ಡಿಸೆಂಬರ್ 19: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಥಾವೆ ದೇವಸ್ಥಾನ ಸೇರಿದಂತೆ ಬಿಹಾರದ (Bihar) 2 ಹಿಂದೂ ದೇವಾಲಯಗಳಿಂದ 50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಹಾಗೂ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಥಾವೆ ವಾಲಿ ಮಾತಾ’ ಎಂದು ಕರೆಯಲ್ಪಡುವ ದುರ್ಗಾ ದೇವಿಗೆ ಸಮರ್ಪಿತವಾದ ಥಾವೆ ದೇವಸ್ಥಾನದಿಂದ ಸುಮಾರು 500 ಗ್ರಾಂ ತೂಕದ ವಿಗ್ರಹದ ಚಿನ್ನದ ಕಿರೀಟ, ಹಾರ ಮತ್ತು ಇನ್ನೊಂದು ಆಭರಣದೊಂದಿಗೆ ಇಬ್ಬರು ಮುಸುಕುಧಾರಿಗಳು ಸ್ಥಳದಿಂದ ಹೊರಗೆ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಗಳಲ್ಲಿ ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link