
ಇವತ್ತಿನ ಷೇರು ಮಾರುಕಟ್ಟೆ ಅಲುಗಾಟದಲ್ಲಿ ನಿಶ್ಚಿತ ಠೇವಣಿಗಳು ಹೆಚ್ಚು ಸುರಕ್ಷಿತ, ಹೆಚ್ಚು ಉಪಯುಕ್ತ ಎನಿಸಿವೆ. ಎಫ್ಡಿಗಳನ್ನು ಇಡಲು ಬ್ಯಾಂಕ್ಗಳಲ್ಲಿ ವಿವಿಧ ಪ್ಲಾನ್ಗಳಿವೆ. ಸಹಕಾರಿ ಬ್ಯಾಂಕುಗಳು, ಎನ್ಬಿಎಫ್ಸಿಗಳು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ಕೀಮ್ಸ್ ಹೊಂದಿವೆ. ಪೋಸ್ಟ್ ಆಫೀಸ್ಗಳಲ್ಲೂ (Post Office) ಫಿಕ್ಸೆಡ್ ಡೆಪಾಸಿಟ್ ರೀತಿಯ ಟೈಮ್ ಡೆಪಾಸಿಟ್ ಪ್ಲಾನ್ಗಳಿವೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುವ ಮಂದಿಗೆ ಈ ನಾನಾ ಆಯ್ಕೆಗಳಿವೆ. ಆದರೆ, ಯಾವುದು ಉತ್ತಮ?
ಬ್ಯಾಂಕ್ ಎಫ್ಡಿಗಿಂತ ಪೋಸ್ಟ್ ಆಫೀಸ್ನಲ್ಲಿ ಹೆಚ್ಚು ಬಡ್ಡಿ
ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಾದ ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡಾ ಇತ್ಯಾದಿ ಕಡೆ 7 ದಿನದಿಂದ ಹಿಡಿದು 10 ವರ್ಷದವರೆಗೆ ವಿವಿಧ ಅವಧಿಗೆ ಫಿಕ್ಸೆಡ್ ಡೆಪಾಸಿಟ್ಗಳನ್ನು ಆಫರ್ ಮಾಡಲಾಗುತ್ತದೆ.
ಪೋಸ್ಟ್ ಆಫೀಸ್ನಲ್ಲಿ ಫಿಕ್ಸೆಡ್ ಡೆಪಾಸಿಟ್ಗೆ 4 ಆಯ್ಕೆಗಳಿವೆ. 1 ವರ್ಷ, 2, 3 ಮತ್ತು 5 ವರ್ಷದ ಟೈಮ್ ಡೆಪಾಸಿಟ್ ಪ್ಲಾನ್ಗಳಿವೆ. 1 ವರ್ಷದ ಟಿಡಿಗೆ ಶೇ. 6.9 ಬಡ್ಡಿ ಇದೆ. 2 ವರ್ಷ, 3 ವರ್ಷ ಮತ್ತು 5 ವರ್ಷದ ಟೈಮ್ ಡೆಪಾಸಿಟ್ಗಳಿಗೆ ಕ್ರಮವಾಗಿ ಶೇ. 7, ಶೇ. 7.1 ಮತ್ತು ಶೇ. 7.5 ಬಡ್ಡಿ ಸಿಗುತ್ತದೆ.
ಬ್ಯಾಂಕ್ ಎಫ್ಡಿ ದರಗಳನ್ನು ಹೋಲಿಕೆ ಮಾಡಲು 1 ವರ್ಷದ ಮತ್ತು 5 ವರ್ಷದ ಪ್ಲಾನ್ಗಳನ್ನು ಪರಿಗಣಿಸಬಹುದು. ಪೋಸ್ಟ್ ಆಫೀಸ್ನಲ್ಲಿ 1 ವರ್ಷದ ಟೈಮ್ ಡೆಪಾಸಿಟ್ಗೆ ಶೇ. 6.9 ಬಡ್ಡಿ ಸಿಗುತ್ತದೆ. ಉಳಿದ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಶೇ. 6.25 ಬಡ್ಡಿ ಇದೆ. 5 ವರ್ಷದ ಎಫ್ಡಿಗೆ ಶೇ. 6.05ರಿಂದ ಶೇ. 6.50ರವರೆಗೆ ಬಡ್ಡಿ ಆಫರ್ ಮಾಡಲಾಗುತ್ತಿದೆ. ಆದರೆ, ಪೋಸ್ಟ್ ಆಫೀಸ್ನಲ್ಲಿ 5 ವರ್ಷದ ಟಿಡಿಗೆ ಶೇ. 7.5 ಬಡ್ಡಿ ಕೊಡಲಾಗುತ್ತದೆ.
ಸಹಕಾರಿ ಬ್ಯಾಂಕು ಮತ್ತು ಎನ್ಬಿಎಫ್ಸಿಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗಳಿಗೆ ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ನೀಡಲಾಗುತ್ತದೆಯಾದರೂ ರಿಸ್ಕ್ ಹೆಚ್ಚು. ಒಟ್ಟಾರೆ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತಕ್ಕೆ (5 ಲಕ್ಷ ರೂ ಮೇಲ್ಪಟ್ಟ) ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ
ಪೋಸ್ಟ್ ಆಫೀಸ್ನಲ್ಲಿ ಸಂಪೂರ್ಣ ಮೊತ್ತಕ್ಕೆ ಸರ್ಕಾರದ ಖಾತ್ರಿ ಇರುತ್ತದೆ. ಹೀಗಾಗಿ, ಇಲ್ಲಿಯ ಯಾವುದೇ ಹೂಡಿಕೆ ಪೂರ್ಣ ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕ. ನೀವು 5 ವರ್ಷದ ಟೈಮ್ ಡೆಪಾಸಿಟ್ನಲ್ಲಿ 10 ಲಕ್ಷ ರೂ ಹೂಡಿಕೆ ಮಾಡಿದರೆ, ನಾಲ್ಕೂವರೆ ಲಕ್ಷ ರೂನಷ್ಟು ಬಡ್ಡಿಯೇ ಪ್ರಾಪ್ತವಾಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ