
ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ಸ್ವರ್ಣಲತಾ ಅವರು ತಮ್ಮ 89ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ನಿಧನ ಹೊಂದಿದರು. ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಹಲವರು ಪ್ರಕಾಶ್ ರೈ ಚರ್ಚ್ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಪ್ರಕಾಶ್ ರೈ ಹಲವು ಬಾರಿ ದೇವರ ಇರುವಿಕೆಯನ್ನು ಪ್ರಶ್ನಿಸಿದ್ದರು, ತಮ್ಮನ್ನು ತಾವು ನಾಸ್ತಿಕ (ದೇವರಲ್ಲಿ ನಂಬಿಕೆ ಇಡದವ) ಎಂದು ಹೇಳಿಕೊಂಡಿದ್ದರು. ಪ್ರಕಾಶ್ ರೈ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಾವು ನಾಸ್ತಿಕ ಎಂದು ಹೇಳಿಕೊಂಡಿರುವ ದೃಶ್ಯವೊಂದನ್ನು ಹಂಚಿಕೊಂಡು, ‘ನಾಸ್ತಿಕ ಎಂದ ಮೇಲೆ ಚರ್ಚ್ಗೆ ಹೋಗಿದ್ದೇಕೆ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.
Yes. I don’t believe in god .. but my mother believed in her god . Who am i to deny her .. the right to be buried according to her belief. This is the basic respect we give one another. Will you Hate mongering monsters understand this #justasking https://t.co/vD1GhySf3M
— Prakash Raj (@prakashraaj) April 2, 2026
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ, ‘ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದರು. ಅವಳ ನಂಬಿಕೆಯ ಪ್ರಕಾರ ಸಮಾಧಿ ಆಗುವ ಅವರ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವ ರಾಕ್ಷಸರು ನೀವು ಇದನ್ನು ಅರ್ಥಮಾಡಿಕೊಳ್ಳಬಲ್ಲಿರಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಪ್ರಕಾಶ್ ರೈ, ಅವರು ದೇವರನ್ನು ನಂಬುವುದಿಲ್ಲವಾದರು ಅವರ ತಾಯಿ ನಂಬಿದ್ದು ಹಾಗೂ ಅಂತ್ಯಕ್ರಿಯೆ ಹೀಗೆಯೇ ಆಗಬೇಕೆಂಬುದು ಅವರ ಇಚ್ಛೆಯಾಗಿತ್ತಾದ್ದರಿಂದ ಮಗನಾಗಿ ಅವರ ಇಚ್ಛೆಯನ್ನು ನೆರವೇರಿಸಿರುವುದಾಗಿ ಪ್ರಕಾಶ್ ರೈ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ಸ್ಪಿರಿಟ್’ ಸಿನಿಮಾದಿಂದ ಪ್ರಕಾಶ್ ರಾಜ್ ಹೊರಬಂದಿಲ್ಲ; ಸ್ಪಷ್ಟನೆ ನೀಡಿದ ನಟ
ಪ್ರಕಾಶ್ ರೈ ಅವರ ತಾಯಿ ಸ್ವರ್ಣಲತಾ ಮಾರ್ಚ್ 30ರಂದು ನಿಧನ ಹೊಂದಿದ್ದರು. 85 ವರ್ಷ ವಯಸ್ಸಿನವರಾಗಿದ್ದ ಸ್ವರ್ಣಲತಾ ಅವರು ಹೈದರಾಬಾದ್ನಲ್ಲಿ ವಾಸವಿದ್ದು, ಅಲ್ಲಿಯೇ ನಿಧನ ಹೊಂದಿದ್ದರು. ಗದಗದವರಾಗಿದ್ದ ಸ್ವರ್ಣಲತಾ ಅವರು ಅನಾಥೆ ಆಗಿದ್ದರು. ನರ್ಸಿಂಗ್ ಕಲಿತು ಬೆಂಗಳೂರಿಗೆ ಬಂದು ಇಲ್ಲಿಯೇ ಹಲವು ವರ್ಷ ನೆಲೆಸಿದ್ದರು. ಪ್ರಕಾಶ್ ರೈ ಸಹ ಕೊನೆಯ ವರೆಗೂ ತಾಯಿಯರನ್ನು ಬಹಳ ಪ್ರೀತಿ, ಗೌರವದಿಂದ ನೋಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ