All posts by nagaraj11081993

Video: ಫ್ರಿಡ್ಜ್‌ನಲ್ಲಿದ್ದ ಮೊಸರನ್ನು ಕದ್ದು ತಿಂದ ಪುಟಾಣಿ, ವೈರಲ್‌ ಆಯ್ತು ದೃಶ್ಯ – Kannada News | A little girl put her mouth on a packet of yogurt in the fridge

ಈಗಿನ ಕಾಲದ ಮಕ್ಕಳು ಪುಟಾಣಿಗಳು (little kids) ತುಂಬಾನೇ ಜಾಣರು. ಅಷ್ಟೇ ತುಂಟರು ಕೂಡ. ಅಷ್ಟೇ ಅಲ್ಲ, ಹೆತ್ತವರ ಮಾತನ್ನು ಕೇಳುವುದೇ ಇಲ್ಲ, ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಎಲ್ಲರನ್ನು ಯಾಮಾರಿಸಿ ಬಿಡುತ್ತಾರೆ. ಇದೀಗ ಪುಟಾಣಿಯೊಂದು ಹೀಗೆಯೇ ಮಾಡಿದೆ. ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಆ ಬಳಿಕ ಮುಗ್ಧತೆಯ ನೋಟ ಬೀರಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಅಮೇಜಿಂಗ್ ಆರ್ಟ್ (Amazing_art) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯ ತುಂಟಾಟವನ್ನು ಕಾಣಬಹುದು. ಈ ಪುಟ್ಟ ಹುಡುಗಿಯೊಬ್ಬಳು ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಮೊಸರನ್ನು ತಿನ್ನುವಿದರಲ್ಲಿ ಬ್ಯುಸಿಯಾಗಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಮೆಲ್ಲನೆ ಹಿಂದೆ ತಿರುಗಿ ನೋಡುತ್ತಾ ಮುಗ್ಧಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಹಾ ಕಳ್ಳಿ ಎಂದರೆ ಮತ್ತೊಬ್ಬರು ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಮನೆಯಲ್ಲಿರುವ ಪುಟಾಣಿ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ತಿಂಗಳಲ್ಲಿ 3 ಮದುವೆಯಾಗಿ ವಂಚಿಸಿದ ಕಿಲಾಡಿ ಮಹಿಳೆ, ದೇವಸ್ಥಾನಕ್ಕೆ ಹೋದ್ರೆ ವಾಪಸ್ ಬರ್ತಿರ್ಲಿಲ್ಲ – Kannada News | Himachal Marriage Fraud: Woman Cheats 3 Men in 5 Months, Police Issue Warning

ಹಮೀರ್​ಪುರ, ಜೂನ್ 15: ಐದು ತಿಂಗಳಲ್ಲಿ ಮೂರು ಮದುವೆ(Marriage)ಯಾಗಿ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಶೀತಲ್ ಎಂಬ ಮಹಿಳೆ ಕೇವಲ ಐದು ತಿಂಗಳೊಳಗೆ ಮೂವರು ವ್ಯಕ್ತಿಗಳನ್ನು ಮದುವೆಯಾಗಿ, ಸುಳ್ಳು ನೆಪಗಳನ್ನು ಹೇಳಿ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಸಂತ್ರಸ್ತ ಕುಟುಂಬಗಳು ನೀಡಿದ ಅಧಿಕೃತ ದೂರಿನ ಮೇರೆಗೆ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇಡೀ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಮಹಿಳೆಯು ಜನವರಿಯಲ್ಲಿ ಬಿಲಾಸ್‌ಪುರದ ಜೆಜ್ವಿನ್, ಫೆಬ್ರವರಿಯಲ್ಲಿ ಹಮೀರ್‌ಪುರದ ಗಲೋಡ್ ಮತ್ತು ಮೇ ತಿಂಗಳಲ್ಲಿ ಬಲ್ಹಸಿನಾ ಪ್ರದೇಶದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವ ನೆಪ ಅಥವಾ ಸಂಬಂಧಿಕರ ಮರಣದ ಸುಳ್ಳು ಕಾರಣ ನೀಡಿ ಈಕೆ ನಾಪತ್ತೆಯಾಗುತ್ತಿದ್ದಳು.

ಎಲ್ಲಾ ಮೂರು ಘಟನೆಗಳಲ್ಲೂ ಒಂದೇ ರೀತಿಯ ಮಾದರಿ ಇರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ, ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸಲು ಪೊಲೀಸ್ ಇಲಾಖೆಯು ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮತ್ತಷ್ಟು ಓದಿ: ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

ಮದುವೆಗಳನ್ನು ಏರ್ಪಡಿಸುವ ಮುನ್ನ ವಧು ಅಥವಾ ವರನ ಕುಟುಂಬದ ಹಿನ್ನೆಲೆಯನ್ನು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ತನಿಖೆ ಮಾಡಿಕೊಳ್ಳಬೇಕು.ಮದುವೆಯ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ನಡವಳಿಕೆ ಅಥವಾ ಯಾವುದೇ ದಾಖಲೆಗಳ ಬಗ್ಗೆ ಸಣ್ಣ ಅನುಮಾನ ಬಂದರೂ ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಪೊಲೀಸರಿಗೆ ವರದಿ ಮಾಡಲು ತಿಳಿಸಲಾಗಿದೆ.

ಈ ಘಟನೆಯು ಸಮಾಜದಲ್ಲಿ ಒಂದು ಹೊಸ ಧನಾತ್ಮಕ ಜಾಗೃತಿಗೆ ಕಾರಣವಾಗಿದೆ. ಹಮೀರ್‌ಪುರ ಮತ್ತು ಬಿಲಾಸ್‌ಪುರ ಜಿಲ್ಲೆಗಳ ಜನರು ಈಗ ಮದುವೆಗಳನ್ನು ನಿಶ್ಚಯಿಸುವ ಮುನ್ನ ವಂಚನೆಗೆ ಒಳಗಾಗದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಆಗಾಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಇಂತಹ ವಂಚಕ ಗ್ಯಾಂಗ್‌ಗಳ ಆಟಕ್ಕೆ ಶಾಶ್ವತ ಬ್ರೇಕ್ ಹಾಕಲು ನೆರವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND A vs SL A: ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಮ್ ಇಂಡಿಯಾ – Kannada News | Sri Lanka A vs India A: Team India All Out For 265 Runs

ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 265 ರನ್​​ಗಳಿಸಿದೆ.  ದಂಬುಲ್ಲಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಆರಂಭಿಕರಾದ ವೈಭವ್ ಸೂರ್ಯವಂಶಿ (21) ಹಾಗೂ ಪ್ರಭ್​ಸಿಮ್ರಾನ್ ಸಿಂಗ್ (11) ಬೇಗನೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ (37) ಹಾಗೂ ತಿಲಕ್ ವರ್ಮಾ (23) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಆದರೆ ಆ ಬಳಿಕ ಬಂದ ಆಯುಷ್ ಬದೋನಿ ಕೇವಲ 15 ರನ್​ಗಳಿಸಿ ಔಟಾದರೆ, ನಿಶಾಂತ್ ಸಿಂಧು 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಸೂರ್ಯಾಂಶ್ ಶೆಡ್ಗೆ 66 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 77 ರನ್ ಬಾರಿಸಿದರು.

ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ವಿಪ್ರಾಜ್ ನಿಗಮ್ 49 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 51 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 49.2 ಓವರ್​ಗಳಲ್ಲಿ 265 ರನ್​ ಬಾರಿಸಿ ಆಲೌಟ್ ಆಗಿದೆ.

ಇದೀಗ 266 ರನ್​ಗಳ ಗುರಿ ಬೆನ್ನತ್ತಲಾರಂಭಿಸಿರುವ ಶ್ರೀಲಂಕಾ ತಂಡವು 5 ಓವರ್​ಗಳ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಕಲೆಹಾಕಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ!

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

Source link

ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ – Kannada News | Sanchita Ugale, ‘Kumkum Bhagya’ Actress, ends her life at the age of 30; Hindi TV Serial Industry Shocked

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕುಂಕುಮ್ ಭಾಗ್ಯ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಭಾನುವಾರ (ಜೂನ್ 14) ಸಂಜೆ ಮುಂಬೈ ಸಮೀಪದ ನಲಸೋಪಾರಾದಲ್ಲಿ ಅವರು ತಮ್ಮ ಜೀವ ಕೊನೆ ಮಾಡಿಕೊಂಡಿದ್ದು, ಬೆಡ್‌ರೂಮ್‌ನಲ್ಲಿ ಅವರ ಶವ ಸಿಕ್ಕಿದೆ. ಸೋಮವಾರ ಈ ವಿಷಯ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಈ ಸುದ್ದಿ ಕಿರುತೆರೆ ಲೋಕಕ್ಕೆ ಭಾರಿ ಆಘಾತವನ್ನು ನೀಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಂಚಿತಾ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದರಿಂದ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾಯಿತು. ಕುಟುಂಬಸ್ಥರು ಮನೆಗೆ ಬಂದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಚಿತಾ ಆತ್ಮಹತ್ಯೆ ಮಾಡಿಕೊಳ್ಳುವ ಕೇಲವೇ ಗಂಟೆಗಳ ಮುನ್ನವಷ್ಟೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅತ್ಯಂತ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡಿದ್ದ ನಟಿ, ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಕೈಗೊಂಡಿರುವುದನ್ನು ಕಂಡು ಅಭಿಮಾನಿಗಳು ಮತ್ತು ಆಕೆಯ ಸಹ-ಕಲಾವಿದರು ತೀವ್ರ ಆಶ್ಚರ್ಯ ಹಾಗೂ ಕಣ್ಣೀರು ಹಾಕುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿಪರದೆಯವರೆಗೆ ಸಂಚಿತಾ ಜರ್ನಿ

ಬಹಳ ಸಣ್ಣ ಕುಟುಂಬದಿಂದ ಬಂದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಂಚಿತಾ ತೀವ್ರ ಹೋರಾಟ ನಡೆಸಿದ್ದರು. ಜೀ ಟಿವಿಯ ಸೂಪರ್ ಹಿಟ್ ಶೋ ‘ಕುಂಕುಮ್ ಭಾಗ್ಯ’ದಲ್ಲಿ ದಿಯಾ ಟಂಡನ್ ಪಾತ್ರದ ಮೂಲಕ ಅವರು ಭಾರಿ ಜನಪ್ರಿಯತೆ ಗಳಿಸಿದ್ದರು. ಇದರೊಂದಿಗೆ ‘ವಾಗ್ಲೆ ಕಿ ದುನಿಯಾ’ ಮತ್ತು ನಾಯಕಿಯಾಗಿ ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಧಾರಾವಾಹಿಗಳಲ್ಲಿ ನಟಿಸಿದ್ದರು.ಕೇವಲ ಕಿರುತೆರೆ ಅಷ್ಟೇ ಅಲ್ಲದೆ, ಮನೋಜ್ ಬಾಜಪೇಯಿ ಅವರ ‘ಸೈಲೆನ್ಸ್ 2’, ವಿಕ್ಕಿ ಕೌಶಲ್ ಅವರ ಮುಂಬರಲಿರುವ ಐತಿಹಾಸಿಕ ಸಿನಿಮಾ ‘ಛಾವಾ’ದಲ್ಲೂ ಅವರು ನಟಿಸಿದ್ದರು.

ಇದನ್ನೂ ಓದಿ: ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಕಳೆದ ವರ್ಷವಷ್ಟೇ ನೀಡಿದ್ದ ಸಂದರ್ಶನದಲ್ಲಿ, ದಿನಕ್ಕೆ 17-18 ಗಂಟೆಗಳ ಶೂಟಿಂಗ್ ಇರುವುದರಿಂದ ವೈಯಕ್ತಿಕ ಜೀವನ ಮತ್ತು ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಂಚಿತಾ ಹೇಳಿಕೊಂಡಿದ್ದರು. ಸದ್ಯ ಅವರ ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಕಬ್ಬು, ಬಾಳೆಹಣ್ಣು ನೀಡಿದ ಗ್ರಾಮಸ್ಥರು!

ಬೆಂಗಳೂರು, ಜೂನ್ 15: ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಆಹಾರ ಅರಸಿಕೊಂಡು ಕರ್ನಾಟಕ-ತಮಿಳುನಾಡು ಗಡಿಭಾಗದ ಡೊಂಕರೆಕೋಟೆ ಸಮೀಪದ ಗ್ರಾಮವೊಂದಕ್ಕೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು, ಅದರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ. ಮಾನವೀಯತೆ ಮೆರೆದ ಗ್ರಾಮಸ್ಥರು ಮರಿಯಾನೆಗೆ ಕಬ್ಬು ಮತ್ತು ಬಾಳೆಹಣ್ಣು ನೀಡಿ ಉಪಚರಿಸಿದ್ದಾರೆ. ಗ್ರಾಮಸ್ಥರ ಆರೈಕೆಯಿಂದ ಹಸಿವು ನೀಗಿಸಿಕೊಂಡ ಮರಿಯಾನೆ ಸ್ವಲ್ಪ ಸಮಯದ ನಂತರ ಆ ಪ್ರದೇಶದಲ್ಲಿಯೇ ಉಳಿದುಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದಾವಿಸಿದ್ದಾರೆ. ಮರಿಯಾನೆ ಸದ್ಯ ಸುರಕ್ಷಿತವಾಗಿದ್ದು, ಅದನ್ನು ಮರಳಿ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – Kannada News | Tamil Nadu CM Vijay wife Sangeetha Sornalingam Divorce case hearing Adjourned to August 7

ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್ (Tamil Nadu CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ (Divorce) ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಜೂನ್ 15ರ ಸೋಮವಾರದಂದು ನಡೆದ ವಿಚಾರಣೆಗೆ ಕೋರ್ಟ್ ಸೂಚನೆಯಂತೆ ವಿಜಯ್ ಮತ್ತು ಸಂಗೀತಾ (Sangeetha Sornalingam) ಖುದ್ದಾಗಿ ಹಾಜರಾಗಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ವಿಚಾರಣೆಯಲ್ಲಿ ದಂಪತಿ ಉಪಸ್ಥಿತರಿದ್ದರಾದರೂ, ಯಾವುದೇ ಪ್ರಮುಖ ನಿರ್ಧಾರ ಅಥವಾ ಸಂಧಾನ ಸೂತ್ರಗಳು ಮೂಡಿಬರದೆ ಸೆಷನ್ ಮುಕ್ತಾಯಗೊಂಡಿತು. ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆಯಲು ಸಂಗೀತಾ ಅವರು ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಿಜಯ್ ಮತ್ತು ಸಂಗೀತಾ 1998ರಲ್ಲಿ ಯುಕೆನಲ್ಲಿ ಕಾನೂನುಬದ್ಧವಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ನಂತರ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಆದರೆ ಈಗ ‘1954ರ ವಿಶೇಷ ವಿವಾಹ ಕಾಯ್ದೆ’ಯಡಿ ಸಂಗೀತಾ ಅವರು ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಮತ್ತು ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, 2021ರ ಏಪ್ರಿಲ್‌ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ಸಂಗೀತಾ ಅವರಿಗೆ ತಿಳಿದುಬಂದಿತ್ತು. ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರಾದರೂ, ಅದನ್ನು ಮುಂದುವರಿಸಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ. ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಹಿಂಸೆ ನೀಡಿದೆ ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ.

2024ರ ಆಗಸ್ಟ್‌ನಿಂದ 2025ರ ಫೆಬ್ರವರಿ ನಡುವೆ ಲೀಗಲ್ ನೋಟಿಸ್‌ಗಳು ಮತ್ತು ವೈಯಕ್ತಿಕ ಮಾತುಕತೆಗಳ ಮೂಲಕ ಸಂಬಂಧವನ್ನು ಸರಿಪಡಿಸಲು ಸಂಗೀತಾ ಪ್ರಯತ್ನಿಸಿದ್ದರು. ಆದರೆ 2025ರ ನವೆಂಬರ್ 9ರಂದು ನಡೆದ ಕೊನೆಯ ಭೇಟಿಯೂ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ದಾಂಪತ್ಯ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: 600 ಕೋಟಿ ರೂಪಾಯಿ ಒಡೆಯ ದಳಪತಿ ವಿಜಯ್; ಡಿವೋರ್ಸ್ ಆದರೆ ಸಂಗೀತಾಗೆ ಸಿಗೋದೆಷ್ಟು?

ಇದಕ್ಕೂ ಮುನ್ನ ಏಪ್ರಿಲ್ 20ರಂದು ನಡೆದಿದ್ದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಗೈರಾಗಿದ್ದರು. ಕೇವಲ ಅವರ ಪರ ವಕೀಲರು ಮಾತ್ರ ಹಾಜರಾಗಿದ್ದರು. ಸೆಲೆಬ್ರಿಟಿಗಳಾಗಿರುವುದರಿಂದ ಭದ್ರತೆ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್‌ಲೈನ್ ಮೂಲಕ ಹಾಜರಾಗಲು ಇಬ್ಬರ ಪರ ವಕೀಲರು ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿ, ಜೂನ್ 15ರ ವಿಚಾರಣೆಗೆ ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಿರಬೇಕು ಎಂದು ಖಡಕ್ ಆದೇಶ ನೀಡಿತ್ತು. ಅದರಂತೆ ಸೋಮವಾರ ಇಬ್ಬರೂ ಕೋರ್ಟ್‌ಗೆ ಬಂದಿದ್ದರು. ಮುಂದಿನ ವಿಚಾರಣೆ ಆಗಸ್ಟ್ 7ರಂದು ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು – Kannada News | E20 Fuel in Old Cars: Risk Your Insurance Claim & Engine Damage Warning for Non Compatible Vehicles

ನವದೆಹಲಿ, ಜೂನ್ 15: ಹಳೆಯ ಕಾರುಗಳಲ್ಲಿ E20 ಇಂಧನವನ್ನು (80% ಪೆಟ್ರೋಲ್ ಮತ್ತು 20% ಎಥೆನಾಲ್ ಮಿಶ್ರಣ) ಬಳಸುವುದು ನಿಮ್ಮ ವಾಹನ ವಿಮಾ ಕ್ಲೈಮ್‌ (Insurance Claim) ತಿರಸ್ಕೃತವಾಗಲು ಕಾರಣವಾಗಬಹುದು ಎಂದು ಇನ್ಷೂರೆನ್ಸ್ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ (ICICI Lombard) ಎಚ್ಚರಿಸಿದೆ. ಏಪ್ರಿಲ್ 2023ಕ್ಕಿಂತ ಮುಂಚೆ ತಯಾರಾದ ಮತ್ತು E20 ಇಂಧನಕ್ಕೆ ಹೊಂದಿಕೆಯಾಗದ (non-compatible) ವಾಹನಗಳಲ್ಲಿ ಈ ಇಂಧನವನ್ನು ಬಳಸಿದರೆ, ವಿಮಾ ಕಂಪನಿಗಳು ಇಂಜಿನ್ ಹಾನಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ತಿರಸ್ಕರಿಸಬಹುದು ಎಂದು ಈ ಸಂಸ್ಥೆ ತಿಳಿಸಿದೆ.

ವಾಹನ ತಯಾರಕರು ಸೂಚಿಸದ ಇಂಧನವನ್ನು ಬಳಸುವುದು ‘ಅಸಮರ್ಪಕ ಬಳಕೆ’ (improper use) ಅಥವಾ ‘ಅಜಾಗರೂಕತೆ’ (negligence) ಎಂದು ಪರಿಗಣಿಸಲ್ಪಡುತ್ತದೆ. ಈ ಕಾರಣದಿಂದಾಗಿ ಕ್ಲೈಮ್‌ಗಳನ್ನು ವಿಮಾ ಕಂಪನಿಗಳು ತಿರಸ್ಕರಿಸಬಹುದು ಎಂದು ಈ ಇನ್ಷೂರೆನ್ಸ್ ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ

ಎಥೆನಾಲ್‌ನಿಂದಾಗುವ ಹಾನಿಗಳೇನು?

ಎಥೆನಾಲ್ ತುಕ್ಕು ಹಿಡಿಸುವ (corrosive) ಗುಣವನ್ನು ಹೊಂದಿದೆ. E20 ಬಳಕೆಗೆ ವಿನ್ಯಾಸಗೊಳಿಸದ ವಾಹನಗಳಲ್ಲಿ ಇದು ರಬ್ಬರ್ ಸೀಲ್‌ಗಳನ್ನು ಹಾನಿಗೊಳಿಸಬಹುದು, ಇಂಧನ ಪೈಪ್‌ಗಳಿಗೆ ತೊಂದರೆ ಉಂಟುಮಾಡಬಹುದು, ಮತ್ತು ಕಾಲಕ್ರಮೇಣ ಇಂಜಿನ್ ಭಾಗಗಳನ್ನು ಸವೆಯುವಂತೆ ಮಾಡಬಹುದು ಎನ್ನಲಾಗಿದೆ. ಈ ಹಾನಿ ತಕ್ಷಣಕ್ಕೆ ಕಾಣಿಸದಿದ್ದರೂ, ದೀರ್ಘಾವಧಿಯಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಸರ್ಕಾರವು E20 ಇಂಧನ ಬಳಕೆಯಿಂದ ವಿಮಾ ಪಾಲಿಸಿ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಇಂಧನ ಬಳಕೆಯಿಂದ ಉಂಟಾದ ಪ್ರತಿಯೊಂದು ಹಾನಿಗೂ ವಿಮೆ ಸಿಗುತ್ತದೆ ಎಂದಲ್ಲ. ಸ್ಟ್ಯಾಂಡರ್ಡ್ ವಿಮಾ ಪಾಲಿಸಿಗಳಲ್ಲಿ ಇಂತಹ ‘ಪರಿಣಾಮಕಾರಿ ಹಾನಿಗಳನ್ನು’ (consequential damage – ಕಾಲಕ್ರಮೇಣ ಉಂಟಾಗುವ ಹಾನಿ) ಸಾಮಾನ್ಯವಾಗಿ ಒಳಗೊಂಡಿರುವುದಿಲ್ಲ. ನಿಮ್ಮ ಕಾರು E20 ಹೊಂದಾಣಿಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೈಪಿಡಿಯನ್ನು (Manual) ಪರಿಶೀಲಿಸಿ ಅಥವಾ ಡೀಲರ್ ಬಳಿ ವಿಚಾರಿಸಿ ಎಂದು ಕಂಪನಿ ಸಲಹೆ ನೀಡಿದೆ.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ

E20 ಇಂಧನದ ಬಗ್ಗೆ ಕಾರು ಮಾಲಕರ ಅಸಮಾಧಾನ

ಭಾರತೀಯ ಆಟೋಮೊಬೈಲ್ ಉದ್ಯಮವು ಏಪ್ರಿಲ್ 2023 ರಿಂದ E20 ಹೊಂದಾಣಿಕೆಯ ವಾಹನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಅದಕ್ಕೂ ಮುಂಚಿನ ಹೆಚ್ಚಿನ ವಾಹನಗಳು ಇದಕ್ಕೆ ಹೊಂದಿಕೆಯಾಗುವುದಿಲ್ಲ. ಅನೇಕ ಕಾರು ಮಾಲೀಕರು, ವಿಶೇಷವಾಗಿ ಯುರೋಪಿಯನ್ ಬ್ರ್ಯಾಂಡ್‌ನ ಕಾರುಗಳನ್ನು ಹೊಂದಿರುವವರು, E20 ಬಳಕೆಯಿಂದ ತಮ್ಮ ಇಂಜಿನ್ ಮತ್ತು ಎಲೆಕ್ಟ್ರಾನಿಕ್ ಭಾಗಗಳಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುತ್ತಿದ್ದಾರೆ.

ನಿಮ್ಮ ವಾಹನವು E20 ಇಂಧನಕ್ಕೆ ತಯಾರಿಸಲ್ಪಟ್ಟಿಲ್ಲದಿದ್ದರೆ, ಅದನ್ನು ಬಳಸುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ಇದರಿಂದ ಉಂಟಾಗುವ ಹಾನಿಗೆ ವಿಮಾ ರಕ್ಷಣೆ ಸಿಗುವುದು ಕಷ್ಟವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್ – Kannada News | Jason Holder’s Blazing 420 Strike Rate Powers Thrilling Run Chase Victory

ವೆಸ್ಟ್ ಇಂಡೀಸ್ ತಂಡವು ಕೊನೆಗೂ ಟಿ20 ಸರಣಿ ಗೆದ್ದುಕೊಂಡಿದೆ. ಅದು ಸಹ ಒಂದು ವರ್ಷಗಳ ಬಳಿಕ. ಅಂದರೆ ಕಳೆದುಕೊಂದು ವರ್ಷದಿಂದ ವಿಂಡೀಸ್ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ಸರಣಿ ಗೆಲುವು ಕೊನೆಗೂ 2-1 ಅಂತರದಿಂದ ದಕ್ಕಿದೆ. ಜಮೈಕಾದ ಸೆಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 169 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 53 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಶೆರ್ಫೇನ್ ರದರ್​ಫೋರ್ಡ್​ ಹಾಗೂ ರೋವ್​ಮನ್ ಪೊವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 33 ರನ್​ ಬಾರಿಸಿ ಪೊವೆಲ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಕೊನೆಯ 12 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಜೇಸನ್ ಹೋಲ್ಡರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಷ್ಮಂತ ಚಮೀರಾ ಎಸೆದ 19ನೇ ಓವರ್​ಗಳಲ್ಲಿ 6 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹೋಲ್ಡರ್ 20 ರನ್​ ಚಚ್ಚಿದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಅದರಂತೆ ಅಂತಿಮ ಓವರ್​ನಲ್ಲಿ 6 ರನ್​ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು 19.4 ಓವರ್​ಗಳಲ್ಲಿ 170 ರನ್​ ಬಾರಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

420ರ ಸ್ಟ್ರೈಕ್​ ರೇಟ್​:

ಈ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಎದುರಿಸಿದ್ದು ಕೇವಲ 5 ಎಸೆತಗಳನ್ನು ಮಾತ್ರ. ಈ ಐದು ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​ಗಳೊಂದಿಗೆ 21 ರನ್ ಬಾರಿಸಿದ್ದರು. ಅಂದರೆ ಬರೋಬ್ಬರಿ 420 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ದೌರ್ಬಲ್ಯ ಬಹಿರಂಗ? ಮತ್ತೆ ವಿಫಲನಾದ ವೈಭವ್ ಸೂರ್ಯವಂಶಿ..!

ಶ್ರೀಲಂಕಾ ಕಾಯುವಿಕೆ ಮುಂದುವರಿಕೆ:

ಈ ಸೋಲಿನೊಂದಿಗೆ ಕೆರಿಬಿಯನ್ ದ್ವೀಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲುವ ಶ್ರೀಲಂಕಾ ತಂಡದ ಅತೀ ದೊಡ್ಡ ಕನಸು ಮುಂದುವರೆದಿದೆ. ಅಂದರೆ ವೆಸ್ಟ್ ಇಂಡೀಸ್ ನೆಲದಲ್ಲಿ ವಿಂಡೀಸ್ ಪಡೆಯ ವಿರುದ್ಧ ಶ್ರೀಲಂಕಾ ತಂಡ ಈವರೆಗೆ ಒಂದೇ ಒಂದು ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ 19ನೇ ಓವರ್​ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿ ಜೇಸನ್ ಹೋಲ್ಡರ್ ಶ್ರೀಲಂಕಾ ತಂಡದ ಕನಸನ್ನು ಭಗ್ನಗೊಳಿಸಿದ್ದಾರೆ.

Source link

ಸತತ ಸೋಲಿನ ಬಳಿಕ ಸಂಭಾವನೆಯನ್ನು ಗಣನೀಯವಾಗಿ ಇಳಿಸಿಕೊಂಡ ವಿಕ್ರಮ್

ತಮಿಳು ಚಿತ್ರರಂಗದ ವರ್ಸಟೈಲ್ ನಟ ‘ಚಿಯಾನ್’ ವಿಕ್ರಮ್ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಚಿಯಾನ್ 63’ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಸತತವಾಗಿ ಸಿನಿಮಾ ಫ್ಲಾಪ್ ಆಗುತ್ತಿರುವುದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ಕೊಡಲು ಯಾರೊಬ್ಬರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಸಂಭಾವನೆ ಕಡಿತ ಮಾಡಿಕೊಂಡಿದ್ದಾರೆ. ಹೊಸ ಚಿತ್ರಕ್ಕಾಗಿ ವಿಕ್ರಮ್ ಅವರು ಸುಮಾರು 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ. ಇದು ವಿಕ್ರಮ್ ಹಿಂದಿನ ಸಿನಿಮಾಗಳ ಸಂಭಾವನೆಗೆ ಹೋಲಿಸಿದರೆ ತುಂಬಾನೇ ಕಡಿಮೆ ಆದಂತೆ ಆಗಿದೆ.

ಸದ್ಯದ ಮಾರುಕಟ್ಟೆಯ ಏರಿಳಿತ ಹಾಗೂ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ವಿಕ್ರಮ್ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಸಿನಿಮಾದ ಲಾಭದಲ್ಲಿ ಒಂದು ಪಾಲನ್ನು ಅವರು ಪಡೆಯಲಿದ್ದಾರಂತೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಂತ ಸಿನಿಮಾ ಫ್ಲಾಪ್ ಆದರೆ, ಅವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಆದಾಗ್ಯೂ, ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಇತ್ತೀಚೆಗಷ್ಟೇ ‘ಚಿಯಾನ್ 63’ ಚಿತ್ರದ ಸಣ್ಣ ಝಲಕ್ ತೋರಿಸೋ ವಿಡಿಯೋ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ‘ಫಸ್ಟ್ ಫ್ಲೇಮ್’ ಹೆಸರಿನ ಈ ಟೀಸರ್‌ನಲ್ಲಿ ರಗಡ್ ಸೆಟಪ್ ಮಧ್ಯೆ ವಿಕ್ರಮ್ ಅವರ ಮಾಸ್ ಎಂಟ್ರಿ ಮತ್ತು ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತ್ತು. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.

‘ಸರ್ವಂ ಮಾಯಾ’ ಖ್ಯಾತಿಯ ನಟಿ ರಿಯಾ ಶಿಬು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ಕಲಾವಿದರಾದ ಎಂ.ಎಸ್. ಭಾಸ್ಕರ್ ಮತ್ತು ಊರ್ವಶಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಚಿತ್ರದ ರಿಲೀಸ್ ಡೇಟ್ ಇನ್ನು ಫೈನಲ್ ಆಗಿಲ್ಲ. ಈ ಚಿತ್ರ 2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: 60ನೇ ವಯಸ್ಸಿನಲ್ಲೂ ಎಷ್ಟು ಯಂಗ್ ಆಗಿ ಕಾಣ್ತಾರೆ ನೋಡಿ ವಿಕ್ರಮ್

ಈ ಹಿಂದೆ ವಿಕ್ರಮ್ ಅವರು ಹೊಸ ನಿರ್ದೇಶಕ ಬೋಡಿ ರಾಜ್‌ಕುಮಾರ್ ಜೊತೆ ‘ಶಾಂತಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಆ ಚಿತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಇನ್ನು ನಿರ್ದೇಶಕ ಮಡೋನ್ ಅಶ್ವಿನ್ ಜೊತೆ ವಿಕ್ರಮ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಸದ್ಯದ ಮಾಹಿತಿ ಪ್ರಕಾರ ಆ ಪ್ರಾಜೆಕ್ಟ್ ಡ್ರಾಪ್ ಆಗಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹಲಕ್ಷ್ಮಿ ಬೆನ್ನಲ್ಲೇ ಗೃಹಜ್ಯೋತಿ ಪರಿಷ್ಕರಣೆಗೆ ತಯಾರಿ: ಅನರ್ಹರಿಗೆ ಭರ್ಜರಿ ಶಾಕ್​​ ಕೊಡಲು ಸರ್ಕಾರದ ಸಿದ್ಧತೆ – Kannada News | After Gruhalakshmi, Karnataka Government Set to Revamp Gruha Jyothi Scheme

ಗೃಹಲಕ್ಷ್ಮಿ ಬೆನ್ನಲ್ಲೇ ಗೃಹಜ್ಯೋತಿ ಪರಿಷ್ಕರಣೆಗೆ ತಯಾರಿImage Credit source: DK Shivakumar X Account

ಬೆಂಗಳೂರು, ಜೂನ್​​ 15: ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಯಲು ಮೇಜರ್​​ ಸರ್ಜರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಬೆನ್ನಲ್ಲೇ ಮನೆಗೆ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೂ ಮುಂದಾಗಿದೆ. 2 ದಿನಗಳಲ್ಲಿ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಪರಿಷ್ಕರಣೆ ವಿಚಾರವಾಗಿ ಇಲಾಖೆಗೆ ನಿಖರ ಮಾನದಂಡ ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿದೆ.

ಗೃಹಜ್ಯೋತಿ ಯೊಜನೆಯಡಿ ರಾಜ್ಯದ 1.70 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಮಹತ್ವಾಕಾಂಕ್ಷಿ ಈ ಯೋಜನೆಗೆ ಪ್ರತಿ ತಿಂಗಳು 440 ಕೋಟಿ ರೂಪಾಯಿ ಹಣವನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಆದರೆ ಹಲವರು ಗೃಹಬಳಕೆ ಹೆಸರಿನಲ್ಲಿ‌ ವಾಣಿಜ್ಯ ಬಳಕೆಗೂ ಫ್ರೀ ವಿದ್ಯುತ್ ಬಳಕೆ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ರಾಪರ್ಟಿ, ಮಳಿಗೆಗಳಿಗೆ ಫ್ರೀ ವಿದ್ಯುತ್ ‌ಪಡೆದವರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆದಿದ್ದು, ಉಚಿತ ವಿದ್ಯುತ್ ಪಡೆಯುತ್ತಿರುವ ಹೊರ ರಾಜ್ಯದ ಜನರಿಗೂ ಶಾಕ್ ಕೊಡಲು ತಯಾರಿ ನಡೆದಿದೆ.ಆಧಾರ್, ಇ-ಕೆವೈಸಿ, ಮೊಬೈಲ್​ ನಂಬರ್ ಮೂಲಕ ಮರುಪರಿಶೀಲನೆ ನಡೆಯಲಿದ್ದು, ಸೇವಾ ಸಿಂಧು ಪೋರ್ಟಲ್​ನಲ್ಲಿ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ; ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್​​

‘ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ’

ಇನ್ನು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್​​, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದಿದ್ದಾರೆ. ಈ ಹಿಂದೆ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಹಣ ಯಾರದ್ದೋ ಅಕೌಂಟ್​ಗೆ ಹೋಗ್ತಿದೆ. ಅದರ ಬದಲು ಫಲಾನುಭವಿಗಳ ಖಾತೆಗೇ ಹಣ ಸಂದಾಯವಾಗಬೇಕು. ನಾವು ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೋಡೋದು ಎಂದವರು ಸ್ಪಷ್ಟವಾಗಿ ತಿಳಿಸಿದ್ದಾರೆ.

‘ಬಿಜೆಪಿಯವರು ಅಭಿಯಾನ ಮಾಡಲಿ’

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಆಕ್ಷೇಪ ತೆಗೆದಿರುವ ಚಿಪಕ್ಷ ಬಿಜೆಪಿಗರಿಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಕೌಂಟರ್​​ ಕೊಟ್ಟಿದ್ದು, ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಬೇಡ ಅಂತಾ ಅಭಿಯಾನ ಮಾಡಲಿ. ಅವರಿಗೆ ಗ್ಯಾರಂಟಿ ಬೇಡ ಅಂದ್ರೆ ಬೇಡ, ಬೇರೆಯವರು ಪಡೀತಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಅರ್ಹರಿಗೆ ಗ್ಯಾರಂಟಿ ಸಿಗಬೇಕೆಂದು ಪರಿಷ್ಕರಣೆ ಮಾಡಲಾಗ್ತಿದೆ ಎಂದವರು ಹೇಳಿದ್ದಾರೆ.

ವರದಿ: ಲಕ್ಷ್ಮೀನರಸಿಂಹ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link