ಎಲ್ಲರೂ ಆಡಿದ ನಾಟಕಕ್ಕೆ ಮೂರ್ಖನಾದ ಜೆಡಿ; ಫೈನಲ್ ಜಡ್ಜ್ಮೆಂಟ್ ಕೊಡೋ ಎಚ್ಚರಿಕೆ
‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhare Serial) ಈಗ ಮಹಾ ತಿರುವು ಎದುರಾಗಿದೆ. ಮಲ್ಲಿಯನ್ನು ಜಯದೇವ್ ಫೂಲ್ ಮಾಡಬೇಕು ಎಂದುಕೊಂಡಿದ್ದ. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅಲ್ಲಿ ಆಗಿದ್ದೇ ಬೇರೆ. ಮೂರ್ಖರನ್ನಾಗಿ ಮಾಡುತ್ತೇನೆ, ಮೂರ್ಖರನ್ನಾಗಿ ಮಾಡುತ್ತೇನೆ ಎನ್ನುತ್ತಲೇ ಜೆಡಿಯೇ ದೊಡ್ಡ ಫೂಲ್ ಆಗಿದ್ದಾನೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ತನ್ನ ಬಂಟನಾದ ಸುನಿಯನ್ನು ಜೆಡಿಯು ಮಲ್ಲಿ ಹಿಂದೆ ಬಿಟ್ಟಿದ್ದನು. ಪ್ರೀತಿಯ ನಾಟಕ ಆಡುವಂತೆ ಸೂಚನೆ ಕೊಟ್ಟಿದ್ದನು. ಇದನ್ನು…