ಯಾವುದೇ ಒಪ್ಪಂದವಿಲ್ಲದೆ 2-3 ವಾರಗಳಲ್ಲಿ ಇರಾನ್-ಅಮೆರಿಕ ಯುದ್ಧ ಕೊನೆಗೊಳ್ಳುತ್ತೆ ಎಂದ ಟ್ರಂಪ್
ವಾಷಿಂಗ್ಟನ್, ಏಪ್ರಿಲ್ 1: ಇರಾನ್(Iran) ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಗಡುವನ್ನು ನಿಗದಿಪಡಿಸಿದ್ದಾರೆ. ಇರಾನ್ ಯುದ್ಧವು ಎರಡು, ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಶೀಘ್ರದಲ್ಲೇ ಇರಾನ್ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಸಾಧಿಸಲಾಗಿದೆ , ಈ ಸಂಘರ್ಷವನ್ನು ಮುಂದುವರಿಸಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಒಪ್ಪಂದದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಒಪ್ಪಂದ ಅಸಾಧ್ಯ ಎಂದು ಅವರು…