Headlines

nagaraj11081993

ನಿಜವಾಗಿಯೂ ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು ಹೇಗಿರುತ್ತೆ? ಇದರಿಂದ ಹೊರಬರಲು ಸುಲಭ ಮಾರ್ಗ ಯಾವುದು? – Kannada News | Depression Symptoms Across Different Age Groups

ಡಿಪ್ರೆಶನ್ (ಖಿನ್ನತೆ) ಎಂಬುದು ಕೇವಲ ದುಃಖ ಅಥವಾ ಮಾನಸಿಕ ದುರ್ಬಲತೆ ಅಲ್ಲ. ಇದು ವ್ಯಕ್ತಿಯ ಆಲೋಚನೆ, ಭಾವನೆ, ನಡವಳಿಕೆ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಅಧ್ಯಯನಗಳ ಪ್ರಕಾರ, ಜೀವನದಲ್ಲಿ ಕನಿಷ್ಠ ಒಮ್ಮೆ ಐವರಲ್ಲಿ ಒಬ್ಬರು ಡಿಪ್ರೆಶನ್ (Depression) ಅನುಭವಿಸುವ ಸಾಧ್ಯತೆ ಇದೆ. ಆದರೆ ಈ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ, ಸಮಯಕ್ಕೆ ಸರಿಯಾಗಿ ಸಹಾಯ ಪಡೆದು, ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದರಿಂದ ಹೊರಬರಬಹುದು. ಆದರೆ ಡಿಪ್ರೆಶನ್‌ಗೆ ಪ್ರಮುಖ ಕಾರಣಗಳೇನು,…

Read More

‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ – Kannada News | Simple Suni Sheelam Moksha Kushal talk about new movie Moda Kavida Vaatavarana

ಹೊಸ ನಟ ಶೀಲಮ್ ಅವರು ಹೀರೋ ಆಗಿ ಅಭಿನಯಿಸಿರುವ ‘ಮೋಡ ಕವಿದ ವಾತಾವರಣ’ (Moda Kavida Vaatavarana) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 26ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ ಈ ಸಿನಿಮಾದಲ್ಲಿ ಶೀಲಂ ಜೊತೆ ಸಾತ್ವಿಕಾ, ಮೋಕ್ಷಾ ಕುಶಾಲ್ ಅವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ರಾಮ್‌ ಮೂವೀಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ, ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ….

Read More

ಫೀಲ್ಡಿಗಿಳಿದ ಸಚಿವ ಕೃಷ್ಣ ಬೈರೇಗೌಡ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್ – Kannada News | Minister Krishna Byregowda Sets Deadlines for Bengaluru Metro Pink Line Completion

ಬೆಂಗಳೂರು, ಜೂನ್​ 19: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬಿಎಂಆರ್​ಸಿಎಲ್​ ಅಧಿಕಾರಿಗಳೊಂದಿಗೆ ಮೆಟ್ರೋ ಯೋಜನೆಗಳ ಪ್ರಗತಿ ಕುರಿತು ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಮುಖವಾಗಿ ಮೆಟ್ರೋ ಕಾಮಗಾರಿಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಕಾರ್ಯಸ್ಥಳಗಳ ಕಳಪೆ ನಿರ್ವಹಣೆ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಮೆಟ್ರೋ ಜಾಲ 96 ಕಿ.ಮೀ ಇದೆ. ಮುಂದಿನ ದಿನಗಳಲ್ಲಿ ಪಿಂಕ್ ಮತ್ತು ಬ್ಲೂ ಲೈನ್ ಓಪನ್​​ ಆದರೆ 175 ಕಿಮೀ ಮೆಟ್ರೋ ಜಾಲ ವಿಸ್ತೀರ್ಣ ಆಗಲಿದೆ. ಪಿಂಕ್…

Read More

ನಟಿ ರುಕ್ಮಿಣಿ ವಸಂತ್ ಎಐ ವಿಡಿಯೋ ಪ್ರಕರಣ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ – Kannada News | Actress Rukmini Vasanth AI Deepfake case 3 Arrested by Bengaluru Cyber Police

ಕನ್ನಡ ಚಿತ್ರರಂಗದ ಖ್ಯಾತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು (Bengaluru Cyber Police) ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್ (33), ರಂಜಿತ್ (25) ಮತ್ತು ಬಾಗಲಕೋಟೆ ಮೂಲದ ರವಿಕುಮಾರ್ (24) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ….

Read More

‘ಇರಾನ್ ಕತೆ ಮುಗಿಯಿತು, ಅವರಿಗೆ ಒಂದು ಪೈಸೆಯೂ ಸಿಗುವುದಿಲ್ಲ’; ಕಿಡಿಕಾರಿದ ಟ್ರಂಪ್ – Kannada News | Iran is Finished They Get No Money Donald Trump On Tehran Deal

ವಾಷಿಂಗ್ಟನ್, ಜೂನ್ 19: “ಯುದ್ಧದಿಂದಾಗಿ ಇರಾನ್ ಸಂಪೂರ್ಣವಾಗಿ ಧ್ವಂಸಗೊಂಡಿದೆ. ನಾವು ಹತಾಶೆಯಿಂದ ಮಾತುಕತೆ ನಡೆಸುತ್ತಿಲ್ಲ. ಅವರೇ ಅಸಹಾಯಕರಾಗಿ ಒಪ್ಪಂದಕ್ಕೆ ಬಂದಿದ್ದಾರೆ. ಮುಂದಿನ 60 ದಿನಗಳವರೆಗೆ ಅವರಿಗೆ ಒಂದು ರೂಪಾಯಿ ಹಣವೂ ಸಿಗುವುದಿಲ್ಲ. ಇರಾನ್ ಕತೆ ಮುಗಿಯಿತು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಸಾಮಾಜಿಕ ಮಾಧ್ಯಮವಾದ ‘ಟ್ರುತ್ ಸೋಶಿಯಲ್’ ನಲ್ಲಿ ಗುಡುಗಿದ್ದಾರೆ. “ಕಳೆದ ಕೆಲವು ತಿಂಗಳುಗಳ ಯುದ್ಧವು ಇರಾನ್ ಅನ್ನು ಅಕ್ಷರಶಃ ಧ್ವಂಸಗೊಳಿಸಿದೆ. ಅವರ ಬಳಿ ಈಗ ಯಾವುದೇ ವಾಯುಪಡೆ ಇಲ್ಲ, ನೌಕಾಪಡೆ…

Read More

ದಿನಕ್ಕೆ ಒಂದು ಮುಷ್ಟಿ ಕಡಲೆಕಾಯಿ ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯೇ? – Kannada News | Can Eating Peanuts Daily Reduce Heart Disease Risk?

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಬದಲಾವಣೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಆದರೆ ಪ್ರತಿದಿನ ಒಂದು ಮುಷ್ಟಿ ಕಡಲೆಕಾಯಿ (Peanuts) ಸೇವಿಸುವುದರಿಂದ ಹೃದಯದ ಆರೋಗ್ಯವನ್ನು (Heart Health) ಕಾಪಾಡಿಕೊಳ್ಳಲು ಸಹಾಯವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್, ನಾರಿನಾಂಶ, ಮೆಗ್ನೀಷಿಯಂ ಹಾಗೂ ಪೊಟ್ಯಾಸಿಯಂ ಸಮೃದ್ಧವಾಗಿದ್ದು ನಮ್ಮ ಆರೋಗ್ಯಕ್ಕೆ ಬಹಳ ಸಹಾಯಕಾರಿ. ಹಾಗಾದರೆ ಇದರಿಂದ ಯಾವ ರೀತಿ ಅನುಕೂಲವಿದೆ, ಹೇಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಧಮನಿಗಳಲ್ಲಿ…

Read More

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಕರಾವಳಿ-ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ? – Kannada News | Mangaluru Cabinet Meeting: Separate Policy for Coastal and Hill Tourism Development on the Cards

ಸಿಎಂ ಡಿಕೆ ಶಿವಕುಮಾರ್​ ಸಭೆImage Credit source: x.com/DKShivakumar ಬೆಂಗಳೂರು, ಜೂನ್​​ 19: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ (development of coastal tourism) ಕುರಿತಂತೆ ಇಂದು ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಹಲವು ಗಣ್ಯರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಲು ಚಿಂತನೆ ನಡೆದಿದ್ದು, ಈ ವೇಳೆ ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ…

Read More

ಇಸ್ರೇಲ್ – ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದ ನಾಳೆಯಿಂದ ಜಾರಿ; ಅಮೆರಿಕ ಘೋಷಣೆ – Kannada News | Israel and Hezbollah Agreed To Ceasefire Starting June 20 US Official announces

ನವದೆಹಲಿ, ಜೂನ್ 19: ಕಳೆದ ಹಲವು ತಿಂಗಳುಗಳಿಂದ ಇಸ್ರೇಲ್ (Israel) ಸೇನೆ ಮತ್ತು ಲೆಬನಾನ್ (Lebanon) ಮೂಲದ ಹೆಜ್ಬೊಲ್ಲಾ ಸಂಘಟನೆಯ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿಗಳು ಹಾಗೂ ವೈಮಾನಿಕ ದಾಳಿಗಳು ನಡೆಯುತ್ತಿದ್ದವು. ಈ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇತರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರು ನಿರಂತರ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದ್ದರು. ಇದೀಗ ಕೊನೆಗೂ ಉಭಯ ದೇಶಗಳು ಶಾಂತಿಗೆ ಸಮ್ಮತಿಸಿವೆ. ಈ ಒಪ್ಪಂದದ ಅನ್ವಯ ನಾಳೆ ಮುಂಜಾನೆಯಿಂದಲೇ ಎರಡೂ ದೇಶದವರು ದಾಳಿಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ದಕ್ಷಿಣ ಲೆಬನಾನ್‌ನ ಗಡಿ…

Read More

IND vs AFG: ಭಾರತ- ಅಫ್ಘನ್ ನಡುವಿನ ಕೊನೆಯ ಏಕದಿನ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs Afghanistan 3rd ODI: Clean Sweep Bid, Live Stream and Match Details

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ (India vs Afghanistan) ಈಗಾಗಲೇ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈಗ ಟೀಂ ಇಂಡಿಯಾ ಮೂರನೇ ಮತ್ತು ಅಂತಿಮ ಪಂದ್ಯಕ್ಕೆ ಸಿದ್ಧವಾಗಿದೆ. ಈ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಅವಕಾಶ ಟೀಂ ಇಂಡಿಯಾಕ್ಕಿದೆ. ಅಲ್ಲದೆ, ಅಫ್ಘಾನಿಸ್ತಾನವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಭಾರತಕ್ಕಿದೆ. ಮತ್ತೊಂದೆಡೆ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಅಫ್ಘಾನಿಸ್ತಾನ, ಭಾರತದ ಪ್ರವಾಸವನ್ನು ಅಂತ್ಯಗೊಳಿಸಲು ಪ್ರಯತ್ನಿಸಲಿದೆ….

Read More

ಬಂಡಾಯ ಸಂಸದರ ವಿರುದ್ಧ ಕಾನೂನು ಸಮರಕ್ಕಿಳಿದ ಟಿಎಂಸಿ; 20 ರೆಬೆಲ್​ಗಳ ಅನರ್ಹತೆಗೆ ಸ್ಪೀಕರ್​ಗೆ ಮನವಿ – Kannada News | Abhishek Banerjee meets Speaker Om Birla demands disqualification of 20 rebel TMC MPs

ನವದೆಹಲಿ, ಜೂನ್ 19: ಪಶ್ಚಿಮ ಬಂಗಾಳದ ಸಾರ್ವತ್ರಿಕ ಚುನಾವಣೆಗಳ ಬೆನ್ನಲ್ಲೇ ಟಿಎಂಸಿ (TMC) ಪಕ್ಷದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಕ್ಷದ ನಿಲುವಿಗೆ ವಿರುದ್ಧವಾಗಿ ಬಂಡಾಯ ಎದ್ದು, ಬೇರೆ ಪಕ್ಷದೊಂದಿಗೆ ವಿಲೀನ ಪ್ರಕ್ರಿಯೆಗೆ ಮುಂದಾಗಿರುವ 20 ಸಂಸದರ ವಿರುದ್ಧ ಟಿಎಂಸಿ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದೆ. ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಆ ಎಲ್ಲಾ 20 ಬಂಡಾಯ ಸಂಸದರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಲಿಖಿತ ಮನವಿ…

Read More