ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ, ನಟಿ ಮಾಹಿಕಾ ಶರ್ಮಾ ಅವರು ಮುಂಬೈನ ಸುಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಈ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದೆ. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಹಾರ್ದಿಕ್ ಮತ್ತು ಮಾಹಿಕಾ ಒಂದೇ ಶಾಲನ್ನು ಹಂಚಿಕೊಂಡಿರುವುದು ನೆರೆದಿದ್ದವರ ಗಮನ ಸೆಳೆಯಿತು. ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಈ ಜೋಡಿಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ಹಾರ್ದಿಕ್ ಸಾಂಪ್ರದಾಯಿಕ ಕುರ್ತಾ ಧರಿಸಿದ್ದರೆ, ಮಾಹಿಕಾ ಶರ್ಮಾ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರು. ಭಕ್ತರೊಂದಿಗೆ ಹಾರ್ದಿಕ್ ಹಸ್ತಲಾಘವ ಮಾಡಿ ಆತ್ಮೀಯವಾಗಿ ಮಾತನಾಡಿದರು. ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ಮಾಹಿಕಾ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಇತ್ತೀಚೆಗೆ ಮಾಹಿಕಾ ಕೈಬೆರಳಲ್ಲಿ ವಜ್ರದ ಉಂಗುರ ಕಂಡಿದ್ದರಿಂದ ಇವರಿಬ್ಬರ ನಿಶ್ಚಿತಾರ್ಥವಾಗಿದೆಯೇ ಎಂಬ ಚರ್ಚೆಯೂ ನಡೆದಿತ್ತು. ಆದರೆ ಮಾಹಿಕಾ ಅದನ್ನು ನಿರಾಕರಿಸಿದ್ದರು.
Team India Star allrounder Hardik Pandya with Girlfriend Mahieka Sharma visited before Semifinal vs Eng in Siddhivinayak Temple Mumbai#hardikpandyapic.twitter.com/VE9AKe88hQ
ವಿಶೇಷವೆಂದರೆ, ಹಾರ್ದಿಕ್ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ 34ನೇ ಹುಟ್ಟುಹಬ್ಬದಂದೇ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಮಾಹಿಕಾ ಶರ್ಮಾ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ಮಾಡೆಲ್ ಮಾಹಿಕಾ ಅವರು ಅಸ್ಸಾಂನವರು. ಅವರು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು ಮತ್ತು ‘ಮಿಸ್ ಟೀನ್ ನಾರ್ತ್ ಈಸ್ಟ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನವದೆಹಲಿ, ಮಾರ್ಚ್ 27: ಬಹುತೇಕ ಎಲ್ಲಾ ದೇಶಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಚಿಂತತವಾಗಿವೆ , ಏಕೆಂದರೆ ಇದು ಬಹುತೇಕ ಎಲ್ಲಾ ದೇಶಗಳಲ್ಲಿ ಎಲ್‌ಪಿಜಿ ಅನಿಲ ಮತ್ತು ಪೆಟ್ರೋಲ್(Petrol) ಮತ್ತು ಡೀಸೆಲ್ ಸಮಸ್ಯೆಗಳು ಉಂಟಾಗುತ್ತಿವೆ.ಭಾರತದಲ್ಲಿಯೂ ಜನರು ಎಲ್‌ಪಿಜಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೆಲವೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ವದಂತಿಗಳು ಹರಡಿ, ಜನರು ಪೆಟ್ರೋಲ್ ಪಂಪ್‌ಗಳಿಗೆ ಗುಂಪುಗೂಡುವಂತೆ ಮಾಡಲಾಗುತ್ತಿದೆ.
ಸರ್ಕಾರವು ಎಲ್‌ಪಿಜಿ ಅನಿಲ ಅಥವಾ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ ಮತ್ತು ಸಾಕಷ್ಟು ಸ್ಟಾಕ್ ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಏತನ್ಮಧ್ಯೆ, ಮತ್ತೊಂದು ಚರ್ಚೆಯ ವಿಷಯವು ವೇಗವನ್ನು ಪಡೆಯುತ್ತಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸುವ ಸಾಧ್ಯತೆ ಇದೆ ಎನ್ನುವ ವದಂತಿ ವೇಗವಾಗಿ ಹಬ್ಬುತ್ತಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ನಮ್ಮ ಬಳಿ ಅಂತಾ ಯಾವ ಪ್ರಸ್ತಾಪವೂ ಇಲ್ಲ, ಲಾಕ್‌ಡೌನ್ ಹೇರುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ದೇಶಾದ್ಯಂತ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಸ್ವತಃ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ. ಪೆಟ್ರೋಲ್ ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಮತ್ತು ಅಮೆರಿಕ-ಇರಾನ್ ಯುದ್ಧದ ಬೆದರಿಕೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 114 ಡಾಲರ್ಗಿಂತ ಹೆಚ್ಚಿದ್ದವು. ಡೀಸೆಲ್ ಮೇಲಿನ ಸುಂಕ 10 ರೂ.ನಿಂದ ಶೂನ್ಯಕ್ಕೆ ಇಳಿಕೆಯಾಗಿದೆ.
ಮಧ್ಯಪ್ರಾಚ್ಯದ ಯುದ್ಧದ ಮಧ್ಯೆ, ಸಾಮಾನ್ಯ ಜನರಿಗೆ ರಿಲೀಫ್ ನೀಡಲು ಸರ್ಕಾರ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಶುಕ್ರವಾರ ಬೆಳಗ್ಗೆ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂ. ನಷ್ಟು ಕಡಿಮೆ ಮಾಡಿದೆ. ಈ ಕ್ರಮದ ನಂತರ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ.ಗೆ ಇಳಿಸಲಾಗಿದೆ ಮತ್ತು ಡೀಸೆಲ್ ಮೇಲೆ ಅದು ಈಗ ಶೂನ್ಯವಾಗಿರುತ್ತದೆ. ಪ್ರಸ್ತುತ, ಪೆಟ್ರೋಲ್ ಮೇಲೆ ಲೀಟರ್‌ಗೆ 13 ರೂ. ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 10 ರೂ. ಅಬಕಾರಿ ಸುಂಕವಿತ್ತು.
ಉಡುಪಿ, ಮಾರ್ಚ್ 27: ಯಕ್ಷಗಾನ (Yakshagana) ಪ್ರದರ್ಶನ ನಡೆಯುತ್ತಿರುವ ವೇಳೆ ಪ್ರೇಕ್ಷಕರು ಶಿಳ್ಳೆ ಊದಿದ್ದಕ್ಕೆ ಹಿರಿಯ ಕಲಾವಿದರೊಬ್ಬರು ವೇಷದಲ್ಲಿದ್ದುಕೊಂಡೇ ವೇದಿಕೆಯಿಂದಲೇ ಬೈದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕುಂದಾಪುರದ ಹೆನ್ನಾಬೈಲಿನಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇನ್ನೇನು ಭಾಗವತರ ಪದ್ಯ ಮುಗಿದು ಅರ್ಥ ಹೇಳಲು ವೇಷಧಾರಿ ಸಿದ್ಧನಾದಾಗ ಪ್ರೆಕ್ಷಕರು ಶಿಳ್ಳೆ ಊದಿದ್ದಾರೆ. ಆಗ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ (Ujire Ashok Bhat) ಸಿಟ್ಟಿಗೆದ್ದು ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಉಜಿರೆ ಅಶೋಕ್ ಭಟ್ ಹೇಳಿದ್ದೇನು?
‘ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗ್ತೇನೆ. ದೊಂಬರಾಟ ಅಲ್ಲ ಇದು. ನಾನು ಆಗಿನಿಂದ ಚೌಕಿಯಲ್ಲಿದ್ದುಕೊಂಡು ಗಮನಿಸುತ್ತಿದ್ದೇನೆ. ಸಭ್ಯ ಸಭೆಯನ್ನು ಬಯಸುತ್ತೇನೆ. ನನಗೆ ದಾಕ್ಷಿಣ್ಯ ಯಾರದ್ದೂ ಇಲ್ಲ. ಇಲ್ಲಿ ಯಾಕೆ ಕುಣಿಯುತ್ತಿದ್ದೇವೆ ಗೊತ್ತುಂಟಾ ನಿಮಗೆ? ಯಾರು ಆಟ ಆಡಿಸುವವರು? ಏನೆಂದು ಯೋಚನೆ ಮಾಡಿದ್ದೀರಿ ನೀವು? ಈ ಕ್ಷೇತ್ರದಲ್ಲಿ ನಮ್ಮ ತಿರುಗಾಟ ಎಷ್ಟು ಗೊತ್ತಿದೆಯಾ ನಿಮಗೆ? ಏನದು ಶಿಳ್ಳೆ? ಕೋಳಿಕಟ್ಟವಾ ಅಲ್ಲ ಕಂಬಳವಾ? ಯಾರದು? ಏನು ಆಲೋಚನೆ ಮಾಡಿದ್ದೀರಿ ನೀವು. ಯಾರದು ಶಿಳ್ಳೆ ಹಾಕಿದವ? ಆಗದಿದ್ದರೆ ಹೋಗು ಬನ್ಸ್ ತಿಂದು. ಭಾಗವತರ ಕಂಠ ಹಾಳು ಮಾಡುತ್ತೀರಾ? ಸಭ್ಯ ಸಭೆ ಅರ್ಥ ಮಾಡಿಕೊಳ್ಳಬೇಕು. ಹುಚ್ಚರನ್ನು ಬೆಳೆಸಬೇಡಿ. ಕಲಾ ಪ್ರೇಕ್ಷಕರನ್ನು ಬೆಳೆಸಿ. ನಾವು ಕೆಲಸ ಇಲ್ಲದ್ದಕ್ಕೆ ಇಲ್ಲಿ ಬಂದು ಬೆವರು ಹರಿಸಿ ಕುಣಿಯುವುದಲ್ಲ. ಅವರಿಗೆ ವಿಸಿಲ್, ದುಡ್ಡು ಕೊಟ್ಟವರು ಯಾರು? ಧಾರ್ಮಿಕ ಭಾಷಣ ಮಾಡಬೇಕೋ ಒಂದು ಗಂಟೆ ಅಥವಾ ಯಕ್ಷಗಾನ ಮಾಡಬೇಕೋ? ಏನು ಹೇಳುತ್ತೀರಿ ಹಿರಿಯರೇ? ಆಲೋಚನೆ ಮಾಡಿ’ ಎಂದು ಉಜಿರೆ ಅಶೋಕ ಭಟ್ ಹೇಳಿದ್ದಾರೆ.
ಉಜಿರೆ ಅಶೋಕ ಭಟ್ ಮಾತಿನ ವಿಡಿಯೋ ಇಲ್ಲಿ ನೋಡಿ
ಈ ವಿಚಾರ ಈಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅನೇಕ ಕಲಾಭಿಮಾನಿಗಳು ಉಜಿರೆಯವರ ಮಾತನ್ನು ಸಮರ್ಥಿಸಿದ್ದರೆ ಇನ್ನು ಅನೇಕರು ವಿರೋಧಿಸಿದ್ದಾರೆ. ಇನ್ನು ಕೆಲವರು ಹೇಳಿದ ವಿಚಾರ ಸರಿಯಾದರೂ ಮಾತನಾಡಿದ ರೀತಿ ಸರಿ ಇಲ್ಲ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಯ್ತು ಚರ್ಚೆ
‘ದಯವಿಟ್ಟು ತಪ್ಪು ಮಾಹಿತಿ ಹರಡುವುದು ಸರಿಯಲ್ಲ. ಇದು ಶಿಳ್ಳೆ ಹಾಕಿ ಪ್ರೋತ್ಸಾಹಿಸಿದ್ದಲ್ಲ. ತುಂಬಾ ಹೊತ್ತಿನಿಂದ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದ್ದ ವಿಷಯ. ಚೌಕಿಯಲ್ಲಿರುವಾಗಲೇ ಗಮನಿಸಿದ್ದೆ ಅಂತ ಅಶೋಕ ಭಟ್ರು ಹೇಳಿದ್ರು. ಇದು ಜಾತ್ರೆಗಳಲ್ಲಿ ಮಕ್ಕಳು ಊದುವ ಪೀಪಿ ತಂದು, ಯಕ್ಷಗಾನಕ್ಕೆ ಅಡ್ಡಿ ಮಾಡಿದ್ದು. ಚಪ್ಪಾಳೆ, ಶಿಳ್ಳೆಗೆ ಮಿತಿ ಬೇಕಷ್ಟೆ. ಈ ರೀತಿ ಊದಿದ್ದವರು ಯಕ್ಷಗಾನ ಆಸ್ವಾದಿಸುವವರಲ್ಲ’ ಎಂದು ಫೇಸ್ಬುಕ್ ಪೋಸ್ಟೊಂದಕ್ಕೆ ಕಲಾವಿದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ‘ಅಡ್ದಿ ಮಾಡಿದವರಿಗೆ ಗದರಿದ್ದಾರೆ ಅಂದುಕೊಳ್ಳೋಣ. ಕಂಬಳದ ಸುದ್ದಿ ಯಾಕೆ? ಕೋಳಿ ಅಂಕದ ಸುದ್ದಿ ಯಾಕೆ? ಡೊಂಬರಾಟದ ಸುದ್ದಿ ಯಾಕೆ ಯಕ್ಷಗಾನ ವೇದಿಕೆಯಲ್ಲಿ? ಕಂಬಳ, ಕೋಳಿ ಅಂಕ, ಡೊಂಬರಾಟ ಅಂದ್ರೇನು ಟೇಕನ್ ಫಾರ್ ಗ್ರೇಂಟೆಡ್ ಅಂತಾ ಅಂದುಕೊಂಡ್ರಾ’ ಎಂಬ ಕಮೆಂಟ್ ಸಹ ವ್ಯಕ್ತವಾಗಿದೆ.
‘ಅವರು ಇಡೀ ಯಕ್ಷಗಾನ ಕಲಾಭಿಮಾನಿಗಳಿಗೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಬನ್ಸ್ ತಿಂದು ಹೋಗು ಎಂದು ಮೂದಲಿಸಿದ್ದು ಇವರ ದುರಹಂಕಾರದ ಪರಮಾವಧಿಯಾಗಿದೆ. ಅದರ ಜೊತೆಗೆ ಜಾನಪದ ಕ್ರೀಡೆಯಾದ ಕಂಬಳವನ್ನು ಅವಮಾನಿಸಿದ್ದಾರೆ. ಇವರ ಈ ಕೃತ್ಯವನ್ನು ಯಕ್ಷಗಾನದ ಅಭಿಮಾನಿಗಳು ಖಂಡಿತವಾಗಿ ಖಂಡಿಸಬೇಕು. ಇವರನ್ನು ಯಾರು ಸಹ ಯಾವುದೇ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ವೇದಿಕೆಗೆ ಆಹ್ವಾನಿಸಬೇಡಿ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಂಭಾಷಣೆ ವೇಳೆ ಶಿಳ್ಳೆ ಹೊಡೆದು ತೊಂದರೆ ಕೊಟ್ಟರೆ ತಪ್ಪು, ಇಲ್ಲಿ ಹಾಗೇನು ಆಗಿಲ್ಲ . ಪ್ರೇಕ್ಷರನ್ನು ಬೈದಿದ್ದು ತಪ್ಪು. ಯಕ್ಷಗಾನ ಬೆಳಕಿನ ಸೇವೆ. ಒಂದು ಯಕ್ಷಗಾನ ಬಯಲಾಟ ಮಾಡಬೇಕಾದರೆ 5 ಲಕ್ಷ ರೂ. ಬೇಕು, ಎಲ್ಲಿಯೋ ಸಾಲ ಮಾಡಿ ಸೇವೆ ಮಾಡಿಸಿದವರಿಗೆ ಆಟ ನೋಡಲು ಅವಕಾಶ ಸಿಗುವುದಿಲ್ಲ , ನಿಮ್ಮ ಅನುಕೂಲಕ್ಕೆ ತಕ್ಕಂತೆ 12 ಗಂಟೆಗೆ ಮುಗಿಸುವುದು ತಪ್ಪಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಕಲಾವಿದರು ವೇಷಧಾರಿಯಾಗಿದ್ದುಕೊಂಡೇ ವೇದಿಕೆಯಿಂದಲೇ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಈ ವಿಚಾರ ಸದ್ಯ ಕಲಾವಲಯದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದಂತೂ ನಿಜ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದಾವಣಗೆರೆ, (ಮಾರ್ಚ್ 27): ದಾವಣಗೆರೆ (Davanagere) ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ (Davanagere South By Poll) ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್ ಗೆ ಮುಸ್ಲಿಂ (Muslim) ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್ಗೆ ಮತ್ತಷ್ಟು ಆತಂಕ ಎದುರಾಗಿದೆ.
ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.
ದಾವಣಗೆರೆ, (ಮಾರ್ಚ್ 27): ದಾವಣಗೆರೆ (Davanagere) ಬೆಣ್ಣೆ ದೋಸೆಯಂತೆ ಸಲೀಸಾಗಿ ಉಪಚುನಾವಣೆ (Davanagere South By Poll) ಗೆದ್ದು ಬೀಗಲು ಮುಂದಾಗಿದ್ದ ಕಾಂಗ್ರೆಸ್ಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಬಿಸಿತುಪ್ಪವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್ ಗೆ ಮುಸ್ಲಿಂ (Muslim) ಮತಗಳು ಕೈತಪ್ಪುವ ಆತಂಕ ಶುರುವಾಗಿದೆ. ಯಾಕಂದ್ರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಾದಿಕ್ ಪೈಲ್ವಾನ್, ನಾಮಪತ್ರ ವಾಪಸ್ ಪಡೆಯದೆ, ತಮ್ಮ ಸ್ಪರ್ಧೆಯ ನಿಲುವು ಅಚಲ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ ಪೈಲ್ವಾನ್ ಸೇರಿದಂತೆ ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ದಾವಣಗೆರೆ ದಕ್ಷಿಣ ಕಣದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ಗೆ ಆತಂಕವಾಗಿರುವುದು ಸಾಮಾನ್ಯ. ನಿನ್ನೆ (ಮಾರ್ಚ್ 26) ಕಾಂಗ್ರೆಸ್ನ ನಾಯಕರು ಖುದ್ದು ಸಾದಿಕ್ ಮನೆಗೆ ಬಂದು ಸಂಧಾನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯ ರಾಜ್ಯ ನಾಯಕ ಸಿಎಂ ಇಬ್ರಾಹಿಂ ಸಹ ದಾಣಗೆರೆ ಅಖಾಡಕ್ಕಿಳಿಯಲಿದ್ದು, ಪಕ್ಷೇತರ ಅಭ್ಯರ್ಥಿ ಅಭ್ಯರ್ಥಿ ಖಾಲಿದ್ ಆದಿಲ್ ಪಾಷಾ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಕಾಂಗ್ರೆಸ್ಗೆ ಮತ್ತಷ್ಟು ಆತಂಕ ಎದುರಾಗಿದೆ.
ಯಾಕಂದ್ರೆ, ಸಿಎಂ ಇಬ್ರಾಹಿಂದ ಸಹ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು, ಜಮೀರ್ ಅಹಮ್ಮದ್ ಖಾನ್ ಹೇಗೋ ಹಾಗೇ ಇಬ್ರಾಹಿಂ ಸಹ ತಮ್ಮ ಸಮುದಾಯದಲ್ಲಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಇಬ್ರಾಹಿಂ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸುವ ಶಕ್ತಿ ಇಲ್ಲವಾದರೂ ಮುಸ್ಲಿಂ ಮತಗಳನ್ನ ಸೆಳೆದ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಹೀಗಾಗಿ ಸಿಎಂ ಇಬ್ರಾಹಿಂದ ನಡೆ ತೀವ್ರ ಕುತೂಹಲ ಮೂಡಿಸಿದೆ.
ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಸಶಸ್ತ್ರ ಸೀಮಾ ಬಲ (SSB), ಗ್ರೂಪ್ ‘C’ ನಾನ್-ಗೆಜೆಟೆಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ. ಈ ನೇಮಕಾತಿಯ ಅಡಿಯಲ್ಲಿ ಒಟ್ಟು 76 ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ 30 ಹೆಡ್ ಕಾನ್ಸ್ಟೇಬಲ್ (ಪ್ರಯೋಗಾಲಯ ಸಹಾಯಕ), 12 ಹೆಡ್ ಕಾನ್ಸ್ಟೇಬಲ್ (ಫಿಸಿಯೋಥೆರಪಿ ಸಹಾಯಕ) ಮತ್ತು 34 ಕಾನ್ಸ್‌ಟೇಬಲ್ (ನರ್ಸ್ ಅಸಿಸ್ಟೆಂಟ್ ಕಮ್ ಮೆಡಿಕ್) ಹುದ್ದೆಗಳು ಸೇರಿವೆ. ದೇಶದ ಗಡಿ ಕಾಯುವ ಪಡೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ ವಿಷಯಗಳೊಂದಿಗೆ ಪಿಯುಸಿ ಪಾಸಾಗಿರಬೇಕು. ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಲ್ಯಾಬ್ ಅಥವಾ ಫಿಸಿಯೋಥೆರಪಿಯಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರದ ಜೊತೆಗೆ ಒಂದು ವರ್ಷದ ಕೆಲಸದ ಅನುಭವ ಅಗತ್ಯವಿದೆ. ಇನ್ನು ಕಾನ್ಸ್‌ಟೇಬಲ್ (ನರ್ಸ್ ಅಸಿಸ್ಟೆಂಟ್) ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿದ್ದು, ಪ್ರಥಮ ಚಿಕಿತ್ಸಾ ಪ್ರಮಾಣಪತ್ರ (First Aid Certificate) ಹಾಗೂ ಸಂಬಂಧಿತ ಅನುಭವ ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸು 18 ರಿಂದ 27 ವರ್ಷಗಳ ನಡುವೆ ಇರಬೇಕಾಗಿದ್ದು, ಸರ್ಕಾರದ ನಿಯಮದಂತೆ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಮಾಜಿ ಸೈನಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಈ ನೇಮಕಾತಿಯ ಅಧಿಕೃತ ಜಾಹೀರಾತು ಮಾರ್ಚ್ 21 ರಂದು ಪ್ರಕಟವಾಗಿದ್ದು, ಅಂದಿನಿಂದ 30 ದಿನಗಳ ಒಳಗಾಗಿ ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಶುಲ್ಕದ ವಿಷಯಕ್ಕೆ ಬಂದರೆ, ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ನಿಗದಿಪಡಿಸಲಾಗಿದೆ. ಆದರೆ ಎಸ್‌ಸಿ, ಎಸ್‌ಟಿ, ಮಹಿಳೆಯರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ನಿಗದಿತ ಸಮಯದೊಳಗೆ ಆನ್‌ಲೈನ್ ಪಾವತಿ ಮಾಡುವ ಮೂಲಕ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬಹುದು.
ಆಯ್ಕೆ ವಿಧಾನ ಮತ್ತು ವೇತನ ಶ್ರೇಣಿ:
ಅರ್ಹ ಅಭ್ಯರ್ಥಿಗಳನ್ನು ಬಯೋಮೆಟ್ರಿಕ್ ಪರಿಶೀಲನೆ, ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಗುಣಮಟ್ಟ ಪರೀಕ್ಷೆ (PST) ಮತ್ತು ಲಿಖಿತ ಪರೀಕ್ಷೆಯ ಮೂಲಕ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಮಾಸಿಕ 25,500 ರೂ. ನಿಂದ 81,100 ರೂ. ವರೆಗೆ ಮತ್ತು ಕಾನ್‌ಸ್ಟೆಬಲ್ ಹುದ್ದೆಗಳಿಗೆ 21,700 ರೂ. ನಿಂದ 69,100 ರೂ. ವರೆಗೆ ವೇತನ ಸಿಗಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮದಂತೆ ಇತರೆ ಭತ್ಯೆಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿವೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪುಟಾಣಿ ಮಕ್ಕಳೇ (little kids) ಹಾಗೆ ಹಾಡು ಕೇಳಿದ ತಕ್ಷಣ ಕುಣಿಯಲು ಶುರು ಮಾಡ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪುಟಾಣಿಗಳ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ರಂಗದಲ್ಲಿ ಯಕ್ಷಗಾನ ಕಲಾವಿದ ಕುಣಿಯುತ್ತಿದ್ದರೆ, ಯಕ್ಷಗಾನ (Yakshagana) ನೋಡಲು ಬಂದ ಪುಟಾಣಿಯೂ ಅವರ ಜತೆಯಲ್ಲಿ ಹೆಜ್ಜೆ ಹಾಕಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.
ಸುಬ್ರಮಣ್ಯ ಭಾಗವತ್ (Subramanya Bhagwat) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಯಕ್ಷಗಾನ ಆಸಕ್ತಿಯನ್ನು ಕಾಣಬಹುದು. ಈ ವಿಡಿಯೋಗೆ ಪುಟ್ಟಕೂಸಿನ ಯಕ್ಷಗಾನಸಕ್ತಿಗೊಂದು ಭಳಿರೇ ಎಂಬ ಶೀರ್ಷಿಕೆ ನೀಡಲಾಗಿದೆ. ರಂಗದಲ್ಲಿ ಯಕ್ಷಗಾನ ಕಲಾವಿದ ಚಂಡೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಂತೆ ಅವರೊಂದಿಗೆ ಪುಟಾಣಿಯೂ ಹೆಜ್ಜೆ ಹಾಕಿದೆ. ಯಕ್ಷಗಾನ ನೋಡಲು ಬಂದ ಪುಟಾಣಿಯೂ ರಂಗದಲ್ಲಿ ಕಲಾವಿದನನ್ನು ಹೆಜ್ಜೆಗಾರಿಕೆಯನ್ನು ಅನುಸರಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಆ ಮುಗ್ಧ ಮನಸ್ಸಿನ ಕಲೆಯನ್ನು ಪ್ರೋತ್ಸಾಹಿಸಿದ ಯಕ್ಷ ಕಲಾ ವೇದಿಕೆಗೆ ನಮನಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಮಣ್ಣಿನ ಗುಣ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದಕ್ಕೆ ಇರಬೇಕು ಮಕ್ಕಳನ್ನು ದೇವರು ಎನ್ನುವುದು. ನೋಡುತ್ತಾ ಕುಳಿತರೆ ಮನದಲ್ಲಿ ಸಾರ್ಥಕತೆಯ ಭಾವ ಮೂಡುತ್ತದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 27: ಹೇರ್ ಟ್ರಾನ್ಸ್ಪ್ಲಾಂಟ್ಗೆಂದು (Hair Transplant) ಬಂದ ವ್ಯಕ್ತಿಗೆ ವಿಗ್ ಹಾಕಿ ಕಳಿಸಿದ್ದ ಸ್ಟೂಡಿಯೋ ವಿರುದ್ಧ ಗ್ರಾಹಕ ಆಯೋಗದಲ್ಲಿ ದೂರು ಸಲ್ಲಿಸಲಾಗಿದ್ದು, ಸಂಸ್ಥೆಗೆ ಕೋರ್ಟ್ ಬಿಸಿ ಮುಟ್ಟಿಸಿದೆ. ವಿಚಾರಣೆ ವೇಳೆ ಸಂಸ್ಥೆ ಹಾಜರಾಗದಿದ್ದರಿಂದ ಅತೃಪ್ತ ಗ್ರಾಹಕನ ಆರೋಪಗಳಿಗೆ ಸಮ್ಮತಿಸಿದಂತಾಗಿದ್ದು, ಆತ ಪಾವತಿಸಿದ ಹಣದೊಂದಿಗೆ ಬಡ್ಡಿಯನ್ನೂ ಸೇರಿಸಿ ಹಿಂದಿರುಗಿಸುವಂತೆ ಆದೇಶಿಸಿದೆ.
ಹೇರ್ ಟ್ರಾನ್ಸ್‌ಪ್ಲಾಂಟ್ ಬದಲು ವಿಗ್
ಬೆಂಗಳೂರಿನ ನಿವಾಸಿಯಾದ 54 ವರ್ಷದ ವ್ಯಕ್ತಿಯೊಬ್ಬರು ಹೇರ್ ಟ್ರಾನ್ಸ್ಪ್ಲಾಂಟ್ಗೆಂದು 2024ರ ಆಗಸ್ಟ್ 10ರಂದು ಲವೆಲ್ ರೋಡ್‌ನಲ್ಲಿರುವ ಮ್ಯಾಕ್ಸ್ ಹೇರ್ ಸ್ಟೂಡಿಯೋ ಇಂಟರ್ನ್ಯಾಶನಲ್ ಪ್ರೈ.ಲಿ ಗೆ ಭೇಟಿ ನೀಡಿದ್ದರು. ಈ ವೇಳೆ ಕೂದಲು ಕಸಿ ಬಗ್ಗೆ ಮಾಹಿತಿ ಪಡೆದು, ಪ್ರಾರಂಭದಲ್ಲಿ 500 ರೂಪಾಯಿ ನಗದು ಹಾಗೂ 5,000 ರೂಪಾಯಿ ಕಾರ್ಡ್ ಮೂಲಕ ಪಾವತಿಸಿದ್ದರು. ಆದರೆ ವೈದ್ಯಕೀಯ ಪರಿಶೀಲನೆ ಬಳಿಕ ಅವರಿಗೆ ಟ್ರಾನ್ಸ್‌ಪ್ಲಾಂಟ್ ಬದಲಿಗೆ ವಿಗ್ ಬಳಸುವಂತೆ ಸಲಹೆ ನೀಡಲಾಗಿತ್ತು.
ಒಂದು ವೇಳೆ ವಿಗ್ ಅವರಿಗೆ ಹಿಡಿಸದಿದ್ದರೆ ಸಂಪೂರ್ಣ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ವಿಗ್ ಅಳವಡಿಸಿಕೊಂಡ ವ್ಯಕ್ತಿಗೆ ತನ್ನ ಹೊಸ ಲುಕ್ ಇಷ್ಟವಾಗದಾಗ ಹಣ ಹಿಂದಿರುಗಿಸುವಂತೆ ಕೇಳಿದ್ದರು. ಅವರ ಮಾತಿನಂತೆ ಆನ್ಲೂನ್ ಮೂಲಕ ಹಣವನ್ನು ಮರು ಪಾವತಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ ನಂತರದಲ್ಲಿ ಅವರಿಗೆ ಹಣ ವಾಪಸ್ ಬರದ ಹಿನ್ನೆಲೆ 2025ರ ಜೂನ್ 20ರಂದು ಬೆಂಗಳೂರು ಅರ್ಬನ್ II ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಹಣ ಮರುಪಾವತಿ ಜೊತೆಗೆ ಬಡ್ಡಿಯನ್ನೂ ಕೊಡುವಂತೆ ಆದೇಶ
ಆಯೋಗದ ವಿಚಾರಣೆ ವೇಳೆಯಲ್ಲೂ ಸಂಸ್ಥೆ ಹಾಜರಾಗದ ಹಿನ್ನೆಲೆ ಗ್ರಾಹಕನ ಆರೋಪಗಳು ನಿಜವೆಂದು ಪರಿಗಣಿಸಿದ ಅಧ್ಯಕ್ಷ ವಿಜಯಕುಮಾರ್ ಎಂ ಪವಾಲೆ ಮತ್ತು ಸದಸ್ಯೆ ಅನುರಾಧಾ ವಿ ಒಳಗೊಂಡ ಗ್ರಾಹಕ ಆಯೋಗ ಪೀಠವು ಮಹತ್ವದ ತೀರ್ಪು ನೀಡಿದೆ. ವಿಗ್ ಸೇವೆಯಲ್ಲಿ ದೋಷ ಕಂಡ ಹಿನ್ನೆಲೆಯಲ್ಲಿ, ಸಂಬಂಧಿತ ಸ್ಟುಡಿಯೋವಿಗ್ ಹಿಂತೆಗೆದುಕೊಂಡು 55,000 ರೂ. ಹಣವನ್ನು ಗ್ರಾಹಕನಿಗೆ ವಾಪಾಸ್ ನೀಡಬೇಕು. ಅಲ್ಲದೆ ಆತ ಹಣ ಪಾವತಿಸಿದ ದಿನಾಂಕದಿಂದ 6 ಪ್ರತಿಶತ ಬಡ್ಡಿಯೊಂದಿಗೆ ಹಣವನ್ನು ಮರಳಿಸುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ವೇದನೆ ಮತ್ತು ನ್ಯಾಯಾಂಗ ವೆಚ್ಚಕ್ಕಾಗಿ 5,000 ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.
ಬ್ಯಾಂಕ್ ಆಫ್ ಬರೋಡಾ (BOB) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 104 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಭಿಯಾನವನ್ನು ಕೈಗೊಂಡಿದೆ. ಇದರಲ್ಲಿ ಮುಖ್ಯವಾಗಿ ಎವಿಪಿ (AVP II) ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳು ಸೇರಿವೆ. ಎವಿಪಿ II ಗ್ರೂಪ್ ಹೆಡ್ ವಿಭಾಗದಲ್ಲಿ 4, ಟೆರಿಟರಿ ಹೆಡ್ ವಿಭಾಗದಲ್ಲಿ 17, ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ವಿಭಾಗದಲ್ಲಿ ಗರಿಷ್ಠ 70 ಮತ್ತು ವೆಲ್ತ್ ಸ್ಟ್ರಾಟೆಜಿಸ್ಟ್ ವಿಭಾಗದಲ್ಲಿ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಇಂದಿನಿಂದಲೇ ಅಂದರೆ ಮಾರ್ಚ್ 27 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಮತ್ತು ಆಯಾ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಮಾರ್ಚ್ 1, 2026 ಕ್ಕೆ ಅನ್ವಯವಾಗುವಂತೆ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 24 ವರ್ಷದಿಂದ ಗರಿಷ್ಠ 45 ವರ್ಷಗಳವರೆಗೆ ವಯೋಮಿತಿ ಇರುತ್ತದೆ. ಸರ್ಕಾರದ ನಿಯಮದಂತೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು:
ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 16 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಶುಲ್ಕದ ವಿಷಯಕ್ಕೆ ಬಂದರೆ, ಸಾಮಾನ್ಯ (General), ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 850 ಪಾವತಿಸಬೇಕು. ಇನ್ನುಳಿದಂತೆ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ರೂ. 175 ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಪಾವತಿ ವಿಧಾನದ ಮೂಲಕವೇ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳ ಅಂತಿಮ ಆಯ್ಕೆಯು ಕೇವಲ ಒಂದು ಹಂತಕ್ಕೆ ಸೀಮಿತವಾಗಿರದೆ, ಲಿಖಿತ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದವರಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಆಕರ್ಷಕ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.
ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಹಾಲಿವುಡ್ನಲ್ಲಿ ನಡೆಯುತ್ತಿದೆ. ಇಂದು (ಮಾರ್ಚ್ 27) ರಾಮನವಮಿ ಆಗಿದ್ದು, ಇಂದು ಸಿನಿಮಾದ ಅಪ್ಡೇಟ್ ಹೊರಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಇತ್ತು. ಆದರೆ ಹಾಗಾಗಿಲ್ಲ. ಆದರೆ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, ಅಪ್ಡೇಟ್ ಯಾವಾಗ ಬರಲಿದೆ ಎಂದು ತಿಳಿಸಿದ್ದಾರೆ.
ರಾಮನವಮಿಯ ಶುಭ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಏಪ್ರಿಲ್ 2ಕ್ಕೆ ಅಂದರೆ ಹನುಮ ಜಯಂತಿಯಂತೆ ರಣಬೀರ್ ಕಪೂರ್ ಅವರ ‘ರಾಮಾಯಣ’ ಸಿನಿಮಾದ ಅಪ್ಡೇಟ್ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಸಿನಿಮಾದ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ನಮಿತ್ ಮಲ್ಹೋತ್ರಾ ಹಂಚಿಕೊಂಡಿರುವ ಮಾಹಿತಿಯಿಂದ ಸಹಜಾಗಿಯೇ ಅಭಿಮಾನಿಗಳಿಗೆ ಕಾತರತೆ ಹೆಚ್ಚಾಗಿದೆ.
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಮಿತ್ ಮಲ್ಹೋತ್ರಾ, ‘ಇದು (ರಾಮಾಯಣ) ನಮ್ಮೆಲ್ಲರಿಗೂ ಸೇರಿದ ಕಥೆ. ನಮ್ಮದೇ ಆದ ‘ರಾಮಾಯಣ’ವನ್ನು ಅದರ ನೈಜತೆ ಮತ್ತು ಭವ್ಯತೆಯೊಂದಿಗೆ, ಅತ್ಯಂತ ಪ್ರಾಮಾಣಿಕತೆಯಿಂದ ತೆರೆಯ ಮೇಲೆ ತರಲು ನಾವು ಪ್ರತಿ ಹೆಜ್ಜೆಯನ್ನು ಭಕ್ತಿ, ಕಾಳಜಿ ಮತ್ತು ಪ್ರಾಮಾಣಿಕತೆಯಿಂದ ಇಡುತ್ತಿದ್ದೇವೆ. ಹನುಮ ಜಯಂತಿಯ ಶುಭ ಸಂದರ್ಭದಲ್ಲಿ, ಅಂದರೆ ಏಪ್ರಿಲ್ 2ರಂದು, ‘ರಾಮ’ನ ಹೊಸ ದೃಶ್ಯದ ತುಣುಕೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಇಷ್ಟು ವರ್ಷಗಳ ನಮ್ಮ ಶ್ರಮವನ್ನು ಜಗತ್ತಿನಾದ್ಯಂತ ಇರುವ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಅನಾವರಣಗೊಳಿಸುವ ಮೂಲಕ ಈ ಕ್ಷಣವನ್ನು ಆಚರಿಸಲಿದ್ದೇವೆ’ ಎಂದಿದ್ದಾರೆ.
‘ರಾಮಾಯಣ’ ಸಿನಿಮಾದ ಕೆಲ ಕ್ಯಾರೆಕ್ಟರ್ ಟೀಸರ್ಗಳು ಈಗಾಗಲೇ ಬಿಡುಗಡೆ ಆಗಿವೆ. ರಣ್ಬೀರ್ ಅವರ ಪಾತ್ರ, ಯಶ್ ಅವರ ಪಾತ್ರದ ಸಣ್ಣ ವಿಡಿಯೋ ತುಣುಕುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಇದೀಗ ಏಪ್ರಿಲ್ 2 ಕ್ಕೆ ಶ್ರೀರಾಮನ ಪಾತ್ರದ ವಿಡಿಯೋ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ರಣ್ಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಅವರದ್ದು ರಾವಣನ ಪಾತ್ರವಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರುಗಳಾಗ ಎಆರ್ ರೆಹಮಾನ್ ಮತ್ತು ಹಾಲಿವುಡ್ನ ಹಾನ್ಸ್ ಜೀಮರ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯದ ಮೇಲುಸ್ತುವಾರಿ ಮಾಡುತ್ತಿರುವುದು ವಿಶ್ವ ಶ್ರೇಷ್ಠ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕ್ರಿಸ್ಟೊಫರ್ ನೋಲನ್.
ಹಲವು ಆಸ್ಕರ್ಗಳನ್ನು ಗೆದ್ದಿರುವ ಡಿಎನ್ಇಜಿ ವಿಎಫ್ಎಕ್ಸ್ ಸಂಸ್ಥೆಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ಭಾರಿ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಯಶ್ ಅವರು ಸಹ ಬಂಡವಾಳ ಹೂಡಿದ್ದು, ಅವರ ಮಾನ್ಸ್ಟರ್ ಮೈಂಡ್ ಸಹ ಹೂಡಿಕೆ ಮಾಡಿದೆ. ಈ ಸಿನಿಮಾವು IMAX ಫಾರ್ಮ್ಯಾಟ್‌ನಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಭವ್ಯವಾಗಿ ಪ್ರಚಾರ ಪಡಿಸುವ ಗುರಿಯನ್ನು ಹೊಂದಿದೆ.