Headlines

nagaraj11081993

ಐಪಿಎಲ್ ಟಿಕೆಟ್‌ಗಾಗಿ ಶಾಸಕರ ಪಟ್ಟು: ನಾವು ಸಾಮಾನ್ಯರೇ? ಕ್ಯೂನಲ್ಲಿ ನಿಲ್ಲಲಾಗದೆಂದ ಕಾಶಪ್ಪನವರ್‌ಗೆ ತೇಜಸ್ವಿ ಸೂರ್ಯ ಟಾಂಗ್!

ಬೆಂಗಳೂರು, ಮಾರ್ಚ್ 27: ಬೆಂಗಳೂರಿನಲ್ಲಿ (Bangalore) ಐಪಿಎಲ್ (IPL 2026) ಕ್ರೇಜ್ ಆರಂಭವಾಗುತ್ತಿದ್ದಂತೆಯೇ, ಇತ್ತ ವಿಧಾನಸೌಧದ ಒಳಗೂ ಟಿಕೆಟ್ ಕಿರಿಕ್ ಶುರುವಾಗಿದೆ. ‘ನಾವು ವಿಐಪಿಗಳು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಪ್ರತಿ ಶಾಸಕರಿಗೂ 5 ವಿಐಪಿ ಟಿಕೆಟ್ ನೀಡಬೇಕು’ ಎಂಬ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆ ಈಗ ರಾಜ್ಯಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ವಿಜಯಾನಂದ ಕಾಶಪ್ಪನವರ್ ಹೇಳಿದ್ದೇನು? ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ವಿಧಾನಸಭೆಯಲ್ಲಿ ಕೆಎಸ್‌ಸಿಎ (KSCA) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ….

Read More

ನಿನ್ನದು ದೊಡ್ಡ ಮನಸ್ಸು ಕಣಯ್ಯ: ಕೊಟ್ಟ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ

ಮುಂಬೈ, ಮಾ.27: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನ ಮೈದಾನದ ಸಿಬ್ಬಂದಿಗೆ (Ground Staff) ಭರ್ಜರಿ ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ (MCA) ಸುಮಾರು 10 ರಿಂದ 11 ಮೈದಾನದ ಸಿಬ್ಬಂದಿಗೆ ಹಾರ್ದಿಕ್ ತಲಾ 10 ಲಕ್ಷ ರೂ. ರೂಪಾಯಿಗಳ ಚೆಕ್ ನೀಡಿದ್ದಾರೆ. 2026ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಹಾರ್ದಿಕ್ ವಾಂಖೆಡೆಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದರು. ಈ…

Read More

ಅಬಕಾರಿ ಸುಂಕ 10 ರೂ ಇಳಿಕೆ; ಪೆಟ್ರೋಲ್, ಡೀಸಲ್ ಬೆಲೆ ಎಷ್ಟು ಇಳಿಯುತ್ತೆ?

ನವದೆಹಲಿ, ಮಾರ್ಚ್ 27: ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿದೆ. ಒಂದು ಲೀಟರ್​ಗೆ ಬರೋಬ್ಬರಿ 10 ರೂಷ್ಟು ತಗ್ಗಿಸಲಾಗಿದೆ. ಇದರೊಂದಿಗೆ, ಪೆಟ್ರೋಲ್ (Petrol) ಮೇಲಿನ ಅಬಕಾರಿ ಸುಂಕವು (Excise Duty) 13 ರೂ ಇದ್ದದ್ದು 3 ರೂಗೆ ಇಳಿದಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು 10 ರೂ ಇದ್ದದ್ದು ಸೊನ್ನೆಗೆ ಇಳಿದಿದೆ. ಜಾಗತಿಕವಾಗಿ ಕಚ್ಛಾ ತೈಲ (Crude oil) ಬೆಲೆ ಸಿಕ್ಕಾಪಟ್ಟೆ ಏರಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಪೆಟ್ರೋಲ್,…

Read More

ಕೋಟ್ಯಂತರ ಅಕ್ರಮದ ನಡುವೆಯೇ 10 ದಿನಗಳಲ್ಲಿ ನಗರ ಸಭೆ ಜೆಇ ಅಮಾನತು ವಾಪಸ್! ಅನುಮಾನಕ್ಕೆ ಎಡೆ ಮಾಡಿ‌ಕೊಟ್ಟ ಆದೇಶ!

ಕೊಪ್ಪಳ, ಮಾರ್ಚ್​ 27: ಅಕ್ರಮ ಹಣ ವ್ಯವಹಾರ ನಡೆಸಿದ ಆರೋಪದ ಹಿನ್ನೆಲೆ ಅಮಾನತುಗೊಂಡಿದ್ದ ಕೊಪ್ಪಳ (Koppal) ನಗರಸಭೆಯ ಜೂನಿಯರ್ ಇಂಜಿನಿಯರ್ ಸೋಮಲಿಂಗಪ್ಪ ಪ್ರಕರಣದಲ್ಲಿ ಹೊಸ ತಿರುವು ಎದುರಾಗಿದೆ. ಪೌರಾಡಳಿತ ಇಲಾಖೆ ಕೇವಲ 10 ದಿನಗಳಲ್ಲೇ ಅಮಾನತು ಆದೇಶವನ್ನು ಹಿಂಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನೂರಾರು ಕಾಮಗಾರಿಗಳಲ್ಲಿ ಲೋಪ ಸೋಮಲಿಂಗಪ್ಪ ವಿರುದ್ಧ ಸುಮಾರು 10 ಕೋಟಿ ರೂಪಾಯಿ ಅಕ್ರಮ ಆರೋಪ ಕೇಳಿಬಂದಿತ್ತು. 2023-24 ಹಾಗೂ 2024-25ನೇ ಸಾಲಿನ ಸುಮಾರು 336 ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗವಾಗಿತ್ತು….

Read More

‘ಪೆದ್ದಿ’ ಟೀಸರ್ ರಿಲೀಸ್: ಕ್ರಿಕೆಟರ್ ಬಳಿಕ ಪೈಲ್ವಾನ್ ಆದ ರಾಮ್ ಚರಣ್

ಸ್ಟಾರ್ ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ 41ನೇ ಹುಟ್ಟುಹಬ್ಬ ಇಂದು. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ಅವರ ಯಾವ ಸಿನಿಮಾವೂ ಹಿಟ್ ಆಗಿಲ್ಲ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಅವರು ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇಂದು (ಮಾರ್ಚ್ 27)ಕ್ಕೆ ಬಿಡುಗಡೆ ಆಗಿದೆ. ಸಿನಿಮಾದ ಈ ಹಿಂದಿನ ಕೆಲ ಟೀಸರ್​​ಗಳಲ್ಲಿ ಕ್ರಿಕೆಟರ್ ಆಗಿದ್ದ ರಾಮ್…

Read More

ಸ್ಯಾಂಡಲ್​​ವುಡ್​ ಕಡೆಗಣಿಸಿದ ಫಿಲ್ಮ್​​ಫೇರ್​​ಗೆ ಛೀಮಾರಿ ಹಾಕಿದ ಕನ್ನಡಿಗರು

ಕನ್ನಡ ಚಿತ್ರರಂಗವನ್ನು ಅನೇಕ ಕಡೆಗಳಲ್ಲಿ ಕಡೆಗಣಿಸುವ ಕೆಲಸ ಆಗುತ್ತಲೇ ಬರುತ್ತಿದೆ. ಈ ಮೊದಲು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂದ ನಟರನ್ನು ಕಡೆಗಣಿಸಿದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಫಿಲ್ಮ್​​ಫೇರ್ (Filma Fare) ಅದೇ ತಪ್ಪನ್ನು ಮಾಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ತಪ್ಪನ್ನು ತಿದ್ದುಕೊಂಡು ಅವರು ಕ್ಷಮೆ ಕೇಳಬೇಕು ಎಂಬ ಆಗ್ರಹಕೂಡ ವ್ಯಕ್ತವಾಗಿದೆ. ಫಿಲ್ಮ್​ ಫೇರ್ ಅವಾರ್ಡ್ ಆರಂಭ ಆಗಿದ್ದು 1954ರಲ್ಲಿ. ಹಿಂದಿ…

Read More

ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿ ಭೀಕರ ಅಪಘಾತಕ್ಕೀಡಾಗಿದೆ. ಆಂಧ್ರದಿಂದ ಸುಂಕದಕಟ್ಟೆ ಕಡೆಗೆ ಬರುತ್ತಿದ್ದ ಈ ಲಾರಿ ಗೂಗಲ್ ಮ್ಯಾಪ್ ದೋಷದಿಂದಾಗಿ ಇಳಿಜಾರು ರಸ್ತೆಯಲ್ಲಿ ಬಂದಿದೆ. ಅಸಲಿಗೆ ಲಾರಿ ಹೋಗಲು ಸೂಕ್ತವಲ್ಲದ ರಸ್ತೆ ಅದಾಗಿತ್ತು. ಅಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ ಎರ್ಟಿಗಾ ಕಾರಿಗೆ ಡಿಕ್ಕಿಯಾಗಿ ತುಸು ದೂರ ಎಳೆದುಕೊಂಡು ಹೋಗಿದ್ದು, ಸ್ಕ್ರ್ಯಾಪ್ ಗೋಡೌನ್​ಗೆ ನುಗ್ಗಿದೆ. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ…

Read More

ಹಣೆಯಲ್ಲಿ ಬರೆದಿದ್ರೆ ಸಿಗ್ತಾಳೆ; ಕಾವ್ಯಾ, ಕಾವ್ಯಾ ಎಂದಿದ್ದಕ್ಕೆ ಗಿಲ್ಲಿ ಉತ್ತರ

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಕಾವ್ಯಾ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಾಂಧವ್ಯ ಬಿಗ್ ಬಾಸ್​ ಇಂದ ಹೊರ ಬಂದ ಬಳಿಕವೂ ಮುಂದುವರಿದಿದೆ. ಕಾವ್ಯಾ ಅವರನ್ನು ಗಿಲ್ಲಿ ಮದುವೆ ಆಗಬೇಕು ಎಂದು ಅನೇಕರು ಅಂದುಕೊಂಡಿದ್ದೂ ಇದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ಗಿಲ್ಲಿ ಉತ್ತರ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅವರು ಅನೇಕ ಬಾರಿ ಹೇಳಿದ್ದು ಇದೆ. ಹೀಗಿರುವಾಗಲೇ ಗಿಲ್ಲಿ ನಟ ಅವರು ವೇದಿಕೆ…

Read More

Gold Rates: ಆಭರಣ ಚಿನ್ನದ ಬೆಲೆ 13,265 ರೂ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 27: ಚಿನ್ನದ ಬೆಲೆ ಏರಿಳಿತದ ಹಂತಕ್ಕೆ ಜಾರಿದೆ. ನಿನ್ನೆ ಒಂದೇ ದಿನದಲ್ಲಿ ಒಮ್ಮೆ ಹೆಚ್ಚಾಗಿ ನಂತರ ಕುಸಿದಿತ್ತು. ಇವತ್ತು ಶುಕ್ರವಾರ ಇದರ ಬೆಲೆಯಲ್ಲಿ ಅಲ್ಪ ಹೆಚ್ಚಳ ಆಗಿದೆ. ಗುರುವಾರ ಬೆಳಗ್ಗೆ ಆಭರಣ ಚಿನ್ನದ ಬೆಲೆ (Gold Rates) ಗ್ರಾಮ್ಗೆ 13,465 ರೂಗೆ ಏರಿತ್ತು. ನಂತರ 13,250 ರೂಗೆ ಕುಸಿದಿತ್ತು. ಇವತ್ತು 15 ರೂ ಹೆಚ್ಚಳಗೊಂಡಿದೆ. ಬೆಳ್ಳಿ ಬೆಲೆ ಶುಕ್ರವಾರ ಒಂದೇ ದಿನದಲ್ಲಿ 10-15 ರೂ ಕುಸಿತವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್…

Read More

Video: ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹೋದ ತೈಲ ಟ್ಯಾಂಕರ್​ಗೆ ಬೆಂಕಿ

ಟೆಹ್ರಾನ್, ಮಾರ್ಚ್​ 27: ಭಾರತ ಸೇರಿದಂತೆ ಇರಾನ್​ನ 5 ಸ್ನೇಹಿತ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಇರಾನ್ ಅನುಮತಿ ನೀಡಿದೆ. ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಎರಡು ಹಡಗುಗಳು ಕೆಲವು ರಾತ್ರಿಗಳ ಹಿಂದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಿವೆ.ಅಮೆರಿಕ, ಇಸ್ರೇಲ್ ಮತ್ತು ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಲಾಗುವುದಿಲ್ಲ. ಅನುಮತಿ ಇಲ್ಲದೆ ಹಾರ್ಮುಜ್ ಮೂಲಕ ಹಾದುಹೋದ ಹಡಗಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.   ವಿಡಿಯೋ ಸುದ್ದಿಗಳಿಗಾಗಿ…

Read More