ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪಿಂಕ್ ಮತ್ತು ಬ್ಲೂ ಲೈನ್‌ಗೆ ಬರಲಿವೆ 4 ಚಾಲಕರಹಿತ ರೈಲುಗಳು!
ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್‌ಸಿಎಲ್ (BMRCL) ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ (Driverless Train) ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ. ಬೆಂಗಳೂರಿನ ಬಿಇಎಂಎಲ್ (BEML) ಕಾರ್ಖಾನೆಯಿಂದ ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಒಟ್ಟು ನಾಲ್ಕು ಹೊಸ ರೈಲು ಸೆಟ್‌ಗಳು ಬಿಎಂಆರ್‌ಸಿಎಲ್ ಕೈಸೇರಲಿವೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಭಾಗಶಃ ಆರಂಭ…