Daily Devotional: ಶ್ರೀರಾಮನವಮಿಯನ್ನು ಹೇಗೆ ಆಚರಿಸಬೇಕು? ಇಲ್ಲಿದೆ ಮಾಹಿತಿ
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಶ್ರೀರಾಮನವಮಿಯನ್ನು ಆಚರಿಸುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುವ ಶ್ರೀರಾಮ ನವಮಿಯು ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣುವು ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ಜನಿಸಿದ ಶುಭ ದಿನವಿದು. ಸೂರ್ಯೋದಯದಲ್ಲಿ ನವಮಿ ತಿಥಿ ಇರುವುದರಿಂದ ಇಡೀ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಪುನರ್ವಸು ನಕ್ಷತ್ರವೂ ಇರುತ್ತದೆ. ಈ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ…