Oracle Layoffs: ಒರೇಕಲ್ನ ಭಾರತೀಯ ಉದ್ಯೋಗಿಗಳಿಗೆ ಶಾಕ್; ಮುನ್ಸೂಚನೆ ಇಲ್ಲದೇ 12,000 ಮಂದಿ ಲೇ ಆಫ್
ನವದೆಹಲಿ, ಏಪ್ರಿಲ್ 1: ವಿಶ್ವದ ಪ್ರಮುಖ ಸಾಫ್ಟ್ವೇರ್ ಕಂಪನಿಗಳಲ್ಲಿ ಒಂದಾದ ಒರೇಕಲ್ ತನ್ನ ಉದ್ಯೋಗಿಗಳ ಸಂಖ್ಯೆಗೆ ಭಾರೀ ಕತ್ತರಿ (Oracle Layoffs) ಹಾಕಿದೆ. ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಒರೇಕಲ್ ಲೇ ಆಫ್ ಮಾಡಿದೆ. ಭಾರತವೊಂದರಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಒರೇಕಲ್ ಕಂಪನಿ 30,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 12,000 ಮಂದಿ ಎಂದರೆ ಶೇ. 40ರಷ್ಟು ಲೇ ಆಫ್ ಆದಂತಾಗುತ್ತದೆ. ಒರೇಕಲ್ ಸಂಸ್ಥೆಯಿಂದ ಈ ಉದ್ಯೋಗ ಕಡಿತದ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಬೇರೆ…