ಥೈಲ್ಯಾಂಡ್‌ನಲ್ಲಿ ವಿಜಯ್-ರಶ್ಮಿಕಾ ‘ಹನಿಮೂನ್’: ಐಶಾರಾಮಿ ವಾಸ್ತವ್ಯ
ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಕಳೆದ ತಿಂಗಳು ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾದರು. ಇವರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಬಳಿಕ ಹೈದರಾಬಾದ್ನಲ್ಲಿ ರಿಸೆಪ್ಷನ್ ಸಹ ಬಲು ಜೋರಾಗಿ ನಡೆಯಿತು. ಬಳಿಕ ಇವರ ಹನಿಮೂನ್ ಪ್ರವಾಸದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು ಆದರೆ ಯುದ್ಧ ಭೀತಿಯ ಕಾರಣ ಎಲ್ಲ ಯೋಜನೆಗಳನ್ನು ಕೈಬಿಟ್ಟರು. ಇದೀಗ ರಶ್ಮಿಕಾ ಮತ್ತು ವಿಜಯ್ ಅವರು ಥಾಯ್ಲೆಂಡ್ನಲ್ಲಿ ‘ಬಡ್ಡಿಮೂನ್’ನ ಸಣ್ಣ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ….