ಬೆಂಗಳೂರು, ಮಾರ್ಚ್ 26: ಆರ್ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. 500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಿಂದ ಪ್ರಮುಖ ಮಾಕ್ ಡ್ರಿಲ್ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಪೊಲೀಸ್ ಇಲಾಖೆಯು ಈ ಭದ್ರತಾ ಸಿದ್ಧತೆಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಜೂನ್ 4ರಂದು ನಡೆದ ಕಾಲ್ತುಳಿತ ಪ್ರಕರಣದಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ. ಸಿವಿಲ್ ಇಲಾಖೆಯು ಸಹ ಈ ಮಾಕ್ ಡ್ರಿಲ್‌ನಲ್ಲಿ ಪಾಲ್ಗೊಂಡಿದ್ದು, ಪ್ರಮುಖವಾಗಿ ತರಬೇತಿಯನ್ನು ನೀಡಲಾಗಿದೆ. ಫೈರ್ ಎಕ್ಸಿಟ್ ಬಾಗಿಲುಗಳ ಪರಿಶೀಲನೆ, ಗೇಟ್‌ಗಳ ಅಗಲೀಕರಣದಂತಹ ಎಲ್ಲಾ ಅಗತ್ಯ ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ ಎನ್ನಲಾಗಿದೆ.
ಬೆಂಗಳೂರು, ಮಾರ್ಚ್ 26: ಆರ್ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. 500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯಿಂದ ಪ್ರಮುಖ ಮಾಕ್ ಡ್ರಿಲ್ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಪೊಲೀಸ್ ಇಲಾಖೆಯು ಈ ಭದ್ರತಾ ಸಿದ್ಧತೆಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಜೂನ್ 4ರಂದು ನಡೆದ ಕಾಲ್ತುಳಿತ ಪ್ರಕರಣದಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಈ ತಾಲೀಮಿನ ಮುಖ್ಯ ಉದ್ದೇಶವಾಗಿದೆ. ಸಿವಿಲ್ ಇಲಾಖೆಯು ಸಹ ಈ ಮಾಕ್ ಡ್ರಿಲ್‌ನಲ್ಲಿ ಪಾಲ್ಗೊಂಡಿದ್ದು, ಪ್ರಮುಖವಾಗಿ ತರಬೇತಿಯನ್ನು ನೀಡಲಾಗಿದೆ. ಫೈರ್ ಎಕ್ಸಿಟ್ ಬಾಗಿಲುಗಳ ಪರಿಶೀಲನೆ, ಗೇಟ್‌ಗಳ ಅಗಲೀಕರಣದಂತಹ ಎಲ್ಲಾ ಅಗತ್ಯ ಕೆಲಸಗಳು ಸಂಪೂರ್ಣವಾಗಿ ಮುಗಿದಿವೆ ಎನ್ನಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿಯುತ್ತಿದೆ. ಈ ಯುದ್ಧದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸಮಸ್ಯೆ ಅನುಭವಿಸುತ್ತಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನಿಗಳೊಂದಿಗೆ ‘ಶಾಂತಿ ಮಾತುಕತೆ’ ನಡೆಸುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ, ಅದಕ್ಕೆ ಕೆಲವು ಷರತ್ತುಗಳನ್ನು ಸಹ ಹಾಕಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿದ ಬಾಲಿವುಡ್ (Boman Irani) ನಟ ಬೋಮನ್ ಇರಾನಿ, ಟ್ರಂಪ್ ಅವರಿಗೆ ಅತ್ಯಂತ ತಮಾಷೆಯಾಗಿ ತಿರುಗೇಟು ನೀಡಿದ್ದಾರೆ.
ಟ್ರಂಪ್ ಅವರು ‘ಇರಾನಿ’ಗಳೊಟ್ಟಿಗೆ ಮಾತುಕತೆಗೆ ಸಿದ್ಧ ಎಂದಿರುವುದನ್ನು ತಮಾಷೆಯಾಗಿ ಉಲ್ಲೇಖಿಸಿರುವ ಬೋಮನ್ ಇರಾನಿ, ‘ನಾನು, ಸ್ಮೃತಿ ಇರಾನಿ ಮತ್ತು ಅರುಣಾ ಇರಾನಿ ಟ್ರಂಪ್ ಅವರೊಂದಿಗೆ ಸಂಧಾನ ನಡೆಸಲು ಸಿದ್ಧವಿದ್ದೇವೆ’ ಎಂದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ಮಿಸ್ಟರ್ ಡೊನಾಲ್ಡ್ ಟ್ರಂಪ್ ಅವರು ಇರಾನಿಗಳ ಜೊತೆ ಮಾತನಾಡಲು ಬಯಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದಕ್ಕಾಗಿ ಮೂವರು ಇರಾನಿಗಳನ್ನು ಕರೆಯಲಾಗಿದೆ ಸ್ಮೃತಿ ಇರಾನಿ, ಅರುಣಾ ಇರಾನಿ ಜಿ ಮತ್ತು ನಾನು (ಬೋಮನ್ ಇರಾನಿ). ಶಾಂತಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.
ಆದರೆ ಈ ಮಾತುಕತೆ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಬೋಮನ್ ಷರತ್ತು ಹಾಕಿದ್ದಾರೆ. ‘ನಾವು ವಾಷಿಂಗ್ಟನ್‌ಗೆ ಬರುವುದಿಲ್ಲ. ಬದಲಾಗಿ ಟ್ರಂಪ್ ಸಾಹೇಬರು ತಮ್ಮ ನಿಯೋಗದೊಂದಿಗೆ ಮುಂಬೈನ ದಾದರ್ ಪಾರ್ಸಿ ಕಾಲೋನಿಗೆ ಬರುವುದು ಉತ್ತಮ. ಅವರಿಗೆ ನಾವು ನಮ್ಮ ಸಾಂಪ್ರದಾಯಿಕ ಧನ್ಸಾಕ್ ಮತ್ತು ಕಸ್ಟರ್ಡ್ ಊಟ ಬಡಿಸುತ್ತೇವೆ. ಆದರೆ, ಅವರು ಬರುವಾಗ ತಮ್ಮೊಂದಿಗೆ ಒಂದು ದೊಡ್ಡ ಗ್ಯಾಸ್ ಸಿಲಿಂಡರ್ ತಂದರೆ ನಮ್ಮೆಲ್ಲರಿಗೂ ಅನುಕೂಲವಾಗುತ್ತದೆ,” ಎಂದು ಭಾರತದಲ್ಲಿ ಸದ್ಯ ಇರುವ ಎಲ್‌ಪಿಜಿ ಕೊರತೆಯ ಬಗ್ಗೆಯೂ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಬೋಮನ್ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಸಮೀರಾ ರೆಡ್ಡಿ ಅದ್ಭೂತ ಎಂದು ಕಾಮೆಂಟ್ ಮಾಡಿದ್ದರೆ, ನಟ ಸಿದ್ಧಾರ್ಥ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಫರ್ಹಾನ್ ಅಖ್ತರ್, ರಿಕಿ ಕೇಜ್ ಸೇರಿದಂತೆ ಹಲವು ಗಣ್ಯರು ಬೊಮನ್ ಅವರ ಈ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಮತ್ತು ನಟಿ ಪ್ರಿಯಾಮಣಿ ಕೂಡ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.
ಬೋಮನ್ ಇರಾನಿ ಇತ್ತೀಚೆಗಷ್ಟೇ ‘ದ ಮೆಹ್ತಾ ಬಾಯ್ಸ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದು, ಪ್ರಸ್ತುತ ಕೆಲವು ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಘರ್ಷದ ಗಂಭೀರ ವಾತಾವರಣದ ನಡುವೆಯೂ ತಮ್ಮ ಹೆಸರಿನ (ಇರಾನಿ) ಸಾಮ್ಯತೆಯನ್ನು ಬಳಸಿ ಅವರು ಮಾಡಿರುವ ಈ ಹಾಸ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅವರ ವಿಡಿಯೋ ವೈರಲ್ ಆಗುತ್ತಿದೆ.
ಬೆಂಗಳೂರು, ಮಾರ್ಚ್ 26: ಇವತ್ತು ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಲ್ತ್ ಇನ್ಷೂರೆನ್ಸ್ (Health Insurance) ಸೌಲಭ್ಯ ಒದಗಿಸುತ್ತವೆ. ಈ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಇದೆ ಎಂದು ಹೇಳಿ ವೈಯಕ್ತಿಕ ಇನ್ಷೂರೆನ್ಸ್ ಪಾಲಿಸಿ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು ಎಂದು ಬಹಳ ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನಿಸಿಕೆಗೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಧ್ವನಿಗೂಡಿಸಿದ್ದಾರೆ.
‘ಬಹಳ ಜನರು ತಮ್ಮ ಕಂಪನಿಯ ಗ್ರೂಪ್ ಇನ್ಷೂರೆನ್ಸ್ ಸಾಕಷ್ಟಾಯಿತು ಎಂದು ಭಾವಿಸಿ, ಪರ್ಸನಲ್ ಹೆಲ್ತ್ ಪಾಲಿಸಿಯನ್ನೇ ಹೊಂದಿಲ್ಲ ಎಂಬುದನ್ನು ತಿಳಿದು ಬಹಳವೇ ಅಚ್ಚರಿಯಾಗಿತು. ಹೆಚ್ಚಿನ ಕಾರ್ಪೊರೇಟ್ ಪ್ಲಾನ್ಗಳು ಸಮಗ್ರ ಕವರೇಜ್ಗೆ ಒತ್ತು ಕೊಡುವುದಿಲ್ಲ. ಕಡಿಮೆ ಬೆಲೆಗೆ ಪಾಲಿಸಿ ಪಡೆಯಲಾಗಿರುತ್ತದೆ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಅನ್ನು ಕಡಿಮೆ ಬೆಲೆಗೆ ನೆಗೋಶಿಯೇಟ್ ಮಾಡಿ ಪಡೆಯಲಾಗಿರುತ್ತದೆ. ಇದರಲ್ಲಿ ಹಲವು ಪರಿಮಿತಿಗಳಿರುತ್ತವೆ. ವಾರ್ಡ್ ಬಾಡಿಗೆ ಕವರೇಜ್ನಲ್ಲಿ ಮಿತಿ ಇರುತ್ತದೆ. ಸರ್ಜನ್ ಫೀ, ಪ್ರೊಸೀಜರ್ ಶುಲ್ಕ, ಆಸ್ಪತ್ರೆ ವೆಚ್ಚ ಇತ್ಯಾದಿ ಖರ್ಚುಗಳಿಗೆ ಪೂರ್ಣ ಕವರೇಜ್ ಸಿಗದೇ ಇರಬಹುದು. ಹೆಚ್ಚಿನ ಪಾಲಿಸಿಗಳಲ್ಲಿ ನಿಮ್ಮ ಒಟ್ಟೂ ಆಸ್ಪತ್ರೆ ವೆಚ್ಚದಲ್ಲಿ ಶೇ. 80ಕ್ಕಿಂತ ಕಡಿಮೆ ಮೊತ್ತವನ್ನು ಭರಿಸಲಾಗಬಹುದು. ನಿತಿನ್ ಕಾಮತ್ ಈ ಅಂಶಗಳನ್ನು ತಮ್ಮ ಟ್ವೀಟ್ನಲ್ಲಿ ಎತ್ತಿ ತೋರಿಸಿದ್ದಾರೆ.
ಕಾರ್ಪೊರೇಟ್ ಹೆಲ್ತ್ ಪಾಲಿಸಿಗಳು ಸಾಮಾನ್ಯವಾಗಿ 5ರಿಂದ 10 ಲಕ್ಷ ರೂ ವಾರ್ಷಿಕ ಕವರೇಜ್ ಒದಗಿಸುತ್ತವೆ. ನೀವು ಆರೋಗ್ಯಯುತವಾಗಿದ್ದಾಗ ಈ ಕವರೇಜ್ ಬಹಳ ಹೆಚ್ಚಾಯಿತು ಎನಿಸಬಹುದು. ಆದರೆ, ಭಾರತದಲ್ಲಿ ವೈದ್ಯಕೀಯ ಹಣದುಬ್ಬರ ಶೇ. 14ರಷ್ಟು ಇದೆ. ಅಂದರೆ ವೈದ್ಯಕೀಯ ವೆಚ್ಚ ವರ್ಷಕ್ಕೆ ಶೇ. 14ರಷ್ಟು ಹೆಚ್ಚುತ್ತಲೇ ಇರಬಹುದು. ಹೀಗಾಗಿ, ಹೋಗುತ್ತಾ ಹೋಗುತ್ತಾ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಸಾಕಾಗದೇ ಹೋಗಬಹುದು.
ಕಾರ್ಪೊರೇಟ್ ಪಾಲಿಸಿ ಜೊತೆಯಲ್ಲೇ ಪರ್ಸನಲ್ ಪಾಲಿಸಿಯನ್ನೂ ಪಡೆದಿರಿ. ನೀವು ಆರೋಗ್ಯವಂತರಾಗಿದ್ದಾಗಲೇ ಪಾಲಿಸಿ ಪಡೆದರೆ ಕಡಿಮೆ ಬೆಲೆಗೆ ಸಿಗುತ್ತದೆ. ಕಾಯಿಲೆ ಬಂದ ಬಳಿಕ ಪಾಲಿಸಿ ಪಡೆಯಬೇಕೆಂದರೆ ದುಬಾರಿ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. ಕಾರ್ಪೊರೇಟ್ ಪಾಲಿಸಿ ಮತ್ತು ಪರ್ಸನಲ್ ಎರಡೂ ಪಾಲಿಸಿ ಇದ್ದಾಗ ನೀವು ಇನ್ಷೂರೆನ್ಸ್ ಕ್ಲೇಮ್ಗೆ ಕಾರ್ಪೊರೇಟ್ ಪಾಲಿಸಿ ಬಳಸಿರಿ. ಪರ್ಸನಲ್ ಪಾಲಿಸಿಯನ್ನು ಸಾಧ್ಯವಾದಷ್ಟೂ ಬಳಸದೆ ಉಳಿಸಿ, ನೋಕ್ಲೇಮ್ ಬೋನಸ್ ಅನ್ನು ಸೇರುವಂತೆ ನೋಡಿಕೊಳ್ಳಿ. ಇದರಿಂದ ಮುಂದ್ಯಾವತ್ತಾದರೂ ಪರ್ಸನಲ್ ಪಾಲಿಸಿಯ ಅಗತ್ಯ ಬಹಳ ಬರುತ್ತದೆ ಎಂಬುದು ನಿತಿನ್ ಕಾಮತ್ ಅವರ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.26: ನೆಲಮಂಗಲ ತಾಲೂಕಿನ ಬೇಗೂರು ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲೇ ಪ್ರಪೋಸ್ ಮಾಡಿರುವ ಘಟನೆ ನಡೆದಿದೆ. ಪ್ರಾಧ್ಯಾಪಕ ಅಬ್ದುಲ್ ಎಂಬಾತ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೀತಿ ನಿವೇದನೆ ಮಾಡಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಪ್ರಾಂಶುಪಾಲರೊಂದಿಗೆ ಮಾತನಾಡುವಂತೆ ತಿಳಿಸಿದ್ದಾಳೆ. ಈ ಘಟನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರಾಧ್ಯಾಪಕ ಅಬ್ದುಲ್‌ನನ್ನು ಕಾಲೇಜು ಆವರಣದಲ್ಲಿ ಅಟ್ಟಾಡಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಬ್ದುಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪ್ರಸ್ತುತ ಪ್ರಾಧ್ಯಾಪಕ ಅಬ್ದುಲ್ ತಲೆಮರೆಸಿಕೊಂಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪ್ರಾಧ್ಯಾಪಕನನ್ನು ವಜಾಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಪಾಕಿಸ್ತಾನ ಸೂಪರ್ ಲೀಗ್ ಇಂದಿನಿಂದ (ಮಾರ್ಚ್ 26) ಆರಂಭ ಆಗುತ್ತಿದೆ. ಅದೇ ರೀತಿ ಶನಿವಾರದಿಂದ (ಮಾರ್ಚ್ 28) ಐಪಿಎಲ್ ಆರಂಭ ಆಗಲಿದೆ. ಪಿಎಸ್ಎಲ್ಗೆ ಹೋಲಿಕೆ ಮಾಡಿದರೆ ಐಪಿಎಲ್ ಜನಪ್ರಿಯತೆ ತುಂಬಾನೇ ಹೆಚ್ಚಿದೆ. ಈಗ ಐಪಿಎಲ್ ಆಡಬೇಕು ಎಂದು ಅನೇಕ ಆಟಗಾರರು ಪಿಎಸ್ಎಲ್ನ ತೊರೆಯುತ್ತಿದ್ದಾರೆ. ಇದು ಪಾಕಿಸ್ತಾನ್ ಪ್ರೀಮಿಯರ್ ಲೀಗ್ಗೆ ಶಾಕಿಂಗ್ ಎನಿಸಿದೆ. ಐಪಿಎಲ್ ಸೇರಲು ಅವರು ಪಿಎಸ್ಎಲ್ ತೊರೆಯುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜಿಂಬಾಬ್ವೆ ಆಟಗಾರ ಬ್ಲೆಸ್ಸಿಂಗ್ ಮುಜರಬಾನಿ ಅವರು ಇತ್ತೀಚೆಗೆ ಪಿಎಸ್ಎಲ್ ತೊರೆದು ಐಪಿಎಲ್ ಆಡಲು ಬಂದಿದ್ದರು. ಅದೇ ರೀತಿ ಶ್ರೀಲಂಕಾದ ದಸುನ್ ಶನಕ ಹಾಗೂ ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಐಪಿಎಲ್ ಸೇರಲು ಪಿಎಸ್ಎಲ್ ತೊರೆದಿದ್ದರು. ಈಗ ದಕ್ಷಿಣ ಆಪ್ರಿಕಾದ ಫಾಸ್ಟ್ ಬೌಲರ್ ಒಟ್ನೀಲ್ ಬಾರ್ಟ್‌ಮನ್ ಪಿಎಸ್ಎಲ್ ತೊರೆದಿದ್ದಾರೆ. ಅವರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಹೈದರಾಬಾದ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಬೇಕಿತ್ತು. ಈಗ ಅವರು ಹೊರ ಹೋಗಿದ್ದರಿಂದ ಮಹೇಶ್ ತೀಕ್ಷಣ ಅವರನ್ನು ಆಯ್ಕೆ ಮಾಡಿಕೊಳ್ಳಲು ತಂಡ ಮುಂದಾಗಿದೆ.
ಗಾಯದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದಿಂದ ಹೊರಗುಳಿದಿದ್ದ ನಾಥನ್ ಎಲಿಸ್ ಅವರ ಜಾಗವನ್ನು ಒಟ್ನೀಲ್ ಬಾರ್ಟ್‌ಮನ್ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ, ಸ್ಪೆನ್ಸರ್ ಜಾನ್ಸನ್ ಅವರು ಈ ಸ್ಥಾನ ತುಂಬಿದ್ದಾರೆ. ಸದ್ಯ ಅವರು ಪಿಎಸ್ಎಲ್ ತೊರೆಯಲು ಐಪಿಎಲ್ ಕಾರಣ ಎಂದು ಹೇಳಲಾಗಿತ್ತು. ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ. ಸ್ಯಾಮ್ ಕರನ್ ಇಂಜೂರಿಯಿಂದ ತಂಡದಿಂದ ಹೊರ ಹೋಗಿದ್ದಾರೆ. ಈ ಸ್ಥಾನಕ್ಕೆ ದಸುನ್ ಶನಕ ಬಂದಿದ್ದಾರೆ.
ಬೆಂಗಳೂರು, ಮಾರ್ಚ್ 26: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮುಂಬರುವ ಐಪಿಎಲ್ ಪಂದ್ಯಗಳಿಗೆ ಭದ್ರತೆ ಮತ್ತು ಪ್ರವೇಶ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಪಿಡಬ್ಲ್ಯುಡಿ, ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಈ ಹೊಸ ವ್ಯವಸ್ಥೆಗಳ ಕುರಿತು ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ಹಿಂದಿನಂತೆ ಕ್ವೀನ್ಸ್ ರೋಡ್ ಬದಲು ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಮೂಲಕ ಗರಿಷ್ಠ ಸಂಖ್ಯೆಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗೇಟ್‌ಗಳನ್ನು ವಿಸ್ತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಮೆಟ್ರೋ (ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ, ಎಂ.ಜಿ. ರೋಡ್ ನಿಲ್ದಾಣ) ಬಳಸುವಂತೆ ಮನವಿ ಮಾಡಿದ್ದಾರೆ. ಟಿಕೆಟ್‌ಗಳ ಜೊತೆಗೆ ಕ್ಯೂಆರ್ ಕೋಡ್ ಮತ್ತು ಮೆಟ್ರೋ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಪಾರ್ಕಿಂಗ್ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ, ಅಲ್ಲಿಂದ ಶಟಲ್ ಬಸ್‌ಗಳ ಮೂಲಕ ಕ್ರೀಡಾಂಗಣಕ್ಕೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪ್ರೇಕ್ಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪೊಲೀಸರು ವಿನಂತಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಅಯೋಧ್ಯೆ, ಮಾರ್ಚ್ 26: ಅಯೋಧ್ಯೆಯಲ್ಲಿ ರಾಮ ನವಮಿ (Ram Navami) ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ನವರಾತ್ರಿಯ ಮೊದಲ ದಿನದಿಂದ ಇಂದಿನವರೆಗೆ ಹಲವು ಆಚರಣೆಗಳನ್ನು ನಡೆಸಲಾಯಿತು. ಭಾರತ ಮತ್ತು ವಿದೇಶಗಳಾದ್ಯಂತ ಭಕ್ತರು ಶ್ರೀರಾಮನ ಪವಿತ್ರ ಜನ್ಮಭೂಮಿಯಲ್ಲಿ ರಾಮ ನವಮಿಗೆ ಆಗಮಿಸಿದ್ದಾರೆ. ಅಲಂಕೃತವಾದ ರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 26: ತಂತ್ರಜ್ಞಾನ ಮತ್ತು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಚೀನಾ (China) ಬಹಳ ವೇಗವಾಗಿ ಸಾಗುತ್ತಿದೆ. ಇಡೀ ಜಗತ್ತು ತೈಲ ಬಿಕ್ಕಟ್ಟಿನಲ್ಲಿ ತಲೆ ಮೇಲೆ ಕೈಹೊತ್ತು ಕೂತರೆ, ಚೀನಾ ಸದ್ದಿಲ್ಲದೆ ಮಹಾ ಕ್ರಾಂತಿಯಲ್ಲಿ ತೊಡಗಿದೆ. ಭಾರತವು ಎಲ್‌ಪಿಜಿ ಬಿಕ್ಕಟ್ಟಿನಲ್ಲಿ ಪಿಎನ್ಜಿ ಇನ್ಫ್ರಾಸ್ಟ್ರಕ್ಚರ್ ಅನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವಂತೆ, ಚೀನಾ ಬಹಳ ಹಿಂದೆಯೇ ತೈಲ ಅವಲಂಬನೆ ತಗ್ಗಿಸಲು ಸೂಪರ್ ಐಡಿಯಾ ಹಾಕಿತ್ತು. ಇದೀಗ ಅದು ಕಾರ್ಯಗತಗೊಳ್ಳುತ್ತಿದೆ. ಇದು ಚೀನಾದ್ಯಂತ ಎಲೆಕ್ಟ್ರಿಕ್ ಹೈವೇ ನಿರ್ಮಿಸುವ ಭಾರೀ ಯೋಜನೆ.
ಏನಿದು ಎಲೆಕ್ಟ್ರಿಕ್ ಹೈವೇ?
ಚೀನಾದ ಹೆಚ್ಚಿನ ನಗರಗಳು ಮತ್ತು ಜನಸಂಖ್ಯೆ ಇರುವುದು ಪೂರ್ವ ಭಾಗದಲ್ಲಿ. ನೈಸರ್ಗಿಕ ಸಂಪನ್ಮೂಲಗಳು ಹೆಚ್ಚು ಇರುವುದು ಪಶ್ಚಿಮ ಭಾಗಗಳಲ್ಲಿ. ಬಹುತೇಕ ಉದ್ಯಮಗಳೆಲ್ಲಾ ನೆಲಸಿರುವುದು ಪೂರ್ವ ಭಾಗದ ನಗರಗಳಲ್ಲಿ. ಇಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಬೇಕು. ಇದನ್ನು ಪೂರೈಸಲು ಚೀನಾ ನಾನಾ ಮಾರ್ಗೋಪಾಯಗಳನ್ನು ಹೊಂದಿದೆ. ಕಲ್ಲಿದ್ದಲು ಘಟಕ, ಜಲವಿದ್ಯುತ್, ವಾಯುಶಕ್ತಿ, ಸೌರಶಕ್ತಿ ಹೀಗೆ ವಿವಿಧ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತದೆ.
ವಿವಿಧ ಭಾಗಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು, ಅದರ ಅಗತ್ಯ ಇರುವ ಪ್ರದೇಶಗಳಿಗೆ ಸಾಗಿಸಲು ಚೀನಾ ಇಡೀ ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್ಮಿಶನ್ ನೆಟ್ವರ್ಕ್ ನಿರ್ಮಿಸುತ್ತಿದೆ. ಈ ಜಾಲದಲ್ಲಿ ಬಹಳ ಸಮರ್ಪಕವಾಗಿ ವಿದ್ಯುತ್ ಅನ್ನು ಸಾಗಿಸಬಹುದು. ಬಹಳ ಸರಳ ಪರಿಕಲ್ಪನೆ. ಆದರೆ, ಅನುಷ್ಠಾನಗೊಳಿಸುವುದು ಸವಾಲಿನ ಕೆಲಸ.
ವರದಿಗಳ ಪ್ರಕಾರ, ಈ ಮಹಾ ಎಲೆಕ್ಟ್ರಿಕ್ ಹೈವೇ ಅಥವಾ ಸೂಪರ್ ಗ್ರಿಡ್ ಯೋಜನೆ ಜಾರಿಗೆ 574 ಬಿಲಿಯನ್ ಡಾಲರ್ ವ್ಯಯವಾಗುತ್ತದೆ. ಅಂದರೆ ಸುಮಾರು 55 ಲಕ್ಷ ಕೋಟಿ ರೂನಷ್ಟು ವೆಚ್ಚವಾಗುವ ಬೃಹತ್ ಯೋಜನೆ. ಪಾಕಿಸ್ತಾನದ ಒಟ್ಟೂ ಜಿಡಿಪಿಗಿಂತಲೂ ಅಧಿಕವಾದುದು. ಚೀನಾ ಈಗಾಗಲೇ ಈ ಯೋಜನೆಯನ್ನು ನಿರ್ಮಿಸಲು ತೊಡಗಿದೆ.
ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್ಮಿಶನ್ ಕಾರಿಡಾರ್ಗಳನ್ನು ನಿರ್ಮಿಸಲಾಗುತ್ತದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ನವೀಕರಣ ಇಂಧನವನ್ನು ಈ ಕಾರಿಡಾರ್ ಮೂಲಕ ಬೇರೆಡೆ ಸಾಗಿಸಲು ಸಾಧ್ಯವಾಗುತ್ತದೆ.
ಬಳ್ಳಾರಿ, ಮಾರ್ಚ್ 26: ಮೂಲಭೂತವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಹಾಗೂ ಭಯೋತ್ಪಾದಕರ ನಂಟು ಶಂಕೆ ಹಿನ್ನೆಲೆ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯದ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ರಾಜ್ಯದಲ್ಲಿ ಅರೆಸ್ಟ್ ಆಗಿರುವ ಆರೋಪಿ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಸಲಾಮ್ ಬಂಧಿಸಿದ್ದಾರೆ. ಪಂಚನಾಮೆ ಬಳಿಕ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆ ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಉಗ್ರವಾದ ಹರಡುವುದು ಮತ್ತು ಭಯೋತ್ಪದನಾ ಸಂಘಟನೆಗಳ ನಂಟು ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಈ ಬಗ್ಗೆ ಮಾರ್ಚ್ 23ರಂದು ವಿಜಯವಾಡ ಟೌನ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ಆರಂಭಿಸಿದ್ದರು.
ಸರ್ಚ್ ವಾರೆಂಟ್ ಪಡೆದು ಕಾರ್ಯಾಚರಣೆಗಿಳಿದಿದ್ದ ಖಾಕಿ ಟೀಂ, ವಿಜಯವಾಡದ ವಿಂಚ್ಪೇಟ್ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿದ್ದಾಂತ ಮತ್ತು ಮೂಲಭೂತವಾದಿ ಐಎಸ್‌ಐಎಸ್ ಸಂಘಟನೆಗಳ ವಿಚಾರಧಾರೆ ಪ್ರಚಾರ ನಿರತರ ಬಗ್ಗೆ ಆತ ನೀಡಿದ್ದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.
ತನಿಖೆಯಲ್ಲಿ ತಿಳಿದುಬಂದಂತೆ, ಅಲ್ ಮಾಲಿಕ್ ಇಸ್ಲಾಮಿಕ್ ಯೂತ್ ಎಂಬ ಗುಂಪನ್ನು ರಚಿಸಿ ಯುವಕರನ್ನ ಜಿಹಾದ್‌ಗೆ ಪ್ರೇರೇಪಿಸುವುದಕ್ಕೂ ಪ್ರಯತ್ನಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಅತಿರೇಕದ ವಿಷಯಗಳನ್ನು ಹಂಚಿಕೊಂಡು ತಮ್ಮ ಜಾಲವನ್ನು ವಿಸ್ತರಿಸಿದ್ದರು. ಈ ಗುಂಪು ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಕಾರ್ಯಚಟುವಟಿಕೆ ನಡೆಸುತ್ತಿತ್ತು ಎನ್ನಲಾಗಿದೆ.