All posts by nagaraj11081993

RBI Recruitment 2025: ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಲಿಖಿತ ಪರೀಕ್ಷೆಯಿಲ್ಲದೆ 93 ತಜ್ಞರ ಹುದ್ದೆಗೆ ನೇಮಕಾತಿ – Kannada News | RBI Recruitment 2025: 93 Specialist Officer Vacancies – Apply Online Now!

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತದ ತನ್ನ ಶಾಖೆಗಳಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 93 ತಜ್ಞರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಡಿಸೆಂಬರ್ 17 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 6 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇಲಾಖೆವಾರು ಹುದ್ದೆಗಳ ವಿವರಗಳು:

ಮಾಹಿತಿ ತಂತ್ರಜ್ಞಾನ ಇಲಾಖೆ (ಡಿಐಟಿ) ವಿಭಾಗದಲ್ಲಿ ಒಟ್ಟು 22 ಹುದ್ದೆಗಳಿವೆ. ಅಂದರೆ:

  • ಡೇಟಾ ಸೈಂಟಿಸ್ಟ್ ಹುದ್ದೆ: 2
  • ಐಟಿ ಭದ್ರತಾ ತಜ್ಞ: 7
  • ಐಟಿ ಸಿಸ್ಟಮ್ ಅಡ್ಮಿನಿಸ್ಟ್ರೇಟರ್: 5
  • AI/ML ಸ್ಪೆಷಲಿಸ್ಟ್ ಹುದ್ದೆಗಳು: 3
  • ಐಟಿ – ಸೈಬರ್ ಸೆಕ್ಯುರಿಟಿ ವಿಶ್ಲೇಷಕ: 5

ಮೇಲ್ವಿಚಾರಣಾ ಇಲಾಖೆ (DoS)ಯಲ್ಲಿ ಒಟ್ಟು 66 ಹುದ್ದೆಗಳಿದ್ದು, ಇವು ಐಟಿ – ಸೈಬರ್ ಸೆಕ್ಯುರಿಟಿ ವಿಶ್ಲೇಷಕ, ಡೇಟಾ ಸೈಂಟಿಸ್ಟ್ ಹುದ್ದೆಗಳನ್ನು ಒಳಗೊಂಡಿದೆ. ಇದಲ್ಲದೇ ಆವರಣ ಇಲಾಖೆಯಲ್ಲಿ 5 ಯೋಜನಾ ವ್ಯವಸ್ಥಾಪಕ ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಬಿಬಿಎ, ಬಿಎಸ್ಸಿ, ಬಿಟೆಕ್/ಬಿಇ, ಎಲ್ಎಲ್ಬಿ, ಸಿಎ, ಎಲ್ಎಲ್ಎಂ, ಎಂಎಸ್ಸಿ, ಎಂಇ/ಎಂಟೆಕ್, ಎಂಬಿಎ/ಪಿಜಿಡಿಎಂ, ಎಂಸಿಎ, ಪಿಜಿಡಿಬಿಎ ಉತ್ತೀರ್ಣರಾಗಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.

ಇದನ್ನೂ ಓದಿ: 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು 21 ರಿಂದ 62 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ:

ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 600 ಮತ್ತು ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ತಲಾ ರೂ. 100 ಪಾವತಿಸಬೇಕಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ 3,10,000 – 6,00,000 ರೂ. ವರೆಗಿನ ವೇತನ ನೀಡಲಾಗುವುದು.

ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:48 pm, Fri, 19 December 25

Source link

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ಇಡಿ ಬಿಗ್ ಶಾಕ್ – Kannada News | Valmiki Development Corporation Scam: ED Attaches Rs 8 Crore Assets of Former Karnataka Minister B Nagendra

ಬಿ. ನಾಗೇಂದ್ರ

ನವದೆಹಲಿ, ಡಿಸೆಂಬರ್ 19: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Case) ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಬಿ. ನಾಗೇಂದ್ರ (Nagendra) ಅವರ ಸುಮಾರು 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ತಿಳಿಸಿದೆ. ನಾಲ್ಕು ವಸತಿ ಮತ್ತು ವಾಣಿಜ್ಯ ಆಸ್ತಿ, ಒಂದು ಕಟ್ಟಡ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಲ್ಲಿ ಸೇರಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಸೆಕ್ಷನ್​ಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ಆಸ್ತಿಗಳನ್ನು PMLA ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಇಡಿ ಕರೆದಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಇಡಿ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ, ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಮೌಲ್ಯ 8.07 ಕೋಟಿ ರೂ. ಆಗಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳ ಹಣವನ್ನು ಬೇರೆಡೆಗೆ ತಿರುಗಿಸಿ ‘ನಕಲಿ ಖಾತೆಗಳಿಗೆ’ ವರ್ಗಾವಣೆ ಮಾಡಲಾಗಿತ್ತು. ನಂತರ ಶೆಲ್ ಘಟಕಗಳ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆ ಸಂಬಂಧ ಕರ್ನಾಟಕ ಪೊಲೀಸರು ಮತ್ತು ಸಿಬಿಐ ಎಫ್‌ಐಆರ್‌ ದಾಖಲಿಸಿದ್ದವು. ಅವುಗಳ ತನಿಖೆ ವೇಳೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಉದ್ಭವಿಸಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಕರ್ನಾಟಕದಲ್ಲಿ ಏಕಕಾಲಕ್ಕೆ 8 ಕಡೆ ಇ.ಡಿ ದಾಳಿ

ವಾಲ್ಮೀಕಿ ಅಭಿೃದ್ಧಿ ನಿಗಮ ಹಗರಣದಲ್ಲಿ ಜೈಲು ಪಾಲಾಗಿದ್ದ ಬಿ ನಾಗೇಂದ್ರ ನಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಸಿಎಂ ಡಿಕೆ ಶಿವಕುಮಾರ್ – Kannada News | Amid Leadership Buzz, Karnataka DyCM DK Shivakumar Offers Special Puja to Shakti Devate at Andle Jagadeeshwari Temple in Ankola

ಕಾರವಾರ, ಡಿಸೆಂಬರ್ 19: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಆಂಡ್ಲೇ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುರ್ಚಿ ಕಾಳಗದ ನಡುವೆ ಅವರು ಶಕ್ತಿ ದೇವತೆ ಮೊರೆ ಹೋಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆಂಡ್ಲೇ ದೇವಸ್ಥಾನದ ಗರ್ಭಗುಡಿ ಬಾಗಿಲು ಹಾಕಿ ಡಿಕೆಶಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ನಂತರ, ಗೋಕರ್ಣದ ಮಹಾಬಲೇಶ್ವರ ದೇಗುಲಕ್ಕೆ ಭೇಟಿ ನೀಡಿ ಮಹಾಗಣಪತಿ ಮತ್ತು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಸಿಎಂ ಕುರ್ಚಿ ಕದನ ತೀವ್ರಗೊಂಡಿದ್ದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹಾಸನದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಯನ್ನು ಮನೆಗೆ ಕರೆಸಿಕೊಂಡು ಪೂಜೆ ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

AUS vs ENG: ಶತಕ, ಶತಕ, ಶತಕ, ಶತಕ… ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಟ್ರಾವಿಸ್ ಹೆಡ್ – Kannada News | Ashes 2025: Travis Head’s Adelaide Century Matches Bradman’s Home Ground Record

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವೆ ನಡೆಯುತ್ತಿರುವ ಆಶಸ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ತನ್ನ ತವರು ನೆಲವಾದ ಅಡಿಲೇಡ್‌ನಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಹೆಡ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಹೆಡ್, ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

Source link

ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಕಲ್ಲು, ದೊಣ್ಣೆಗಳಿಂದ ಬಡಿದಾಟ

ಕೋಲಾರ, ಡಿಸೆಂಬರ್​ 19: ವಕ್ಫ್ ಬೋರ್ಡ್ ಆಸ್ತಿಗಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ನಡೆದಿದೆ. ಮಾಸ್ತಿ ಗ್ರಾಮದಲ್ಲಿರುವ ವಕ್ಫ್ ಬೋರ್ಡಿಗೆ ಸೇರಿದ 11 ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ. ಸಯ್ಯದ್ ರಸೂಲ್ ದರ್ವೇಶ್ ವಂಸಸ್ಥರು ವಕ್ಫ್ ಬೋರ್ಡ್​ಗೆ ಜಮೀನು ದಾನವಾಗಿ ನೀಡಿದ್ದಾರೆ. ಇದರಲ್ಲಿರುವ ಈದ್ಗಾ, ಬಾಡಿಗೆ ಕಟ್ಟಡ ಎಲ್ಲವೂ ವಕ್ಫ್ ಬೋರ್ಡಿಗೆ ಬರುತ್ತೆ. ಆದರೆ ಈ ಆಸ್ತಿ ನಮ್ಮದು ಎಂದು ಸಯ್ಯದ್ ರಸೂಲ್ ಕುಟುಂಬಸ್ಥರು ಗಲಾಟೆ ಮಾಡಿ ಮಸೀದಿ ಮುಖಂಡರ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶಕ್ತಿ ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ನಗುತ್ತಾ ಕೊಟ್ಟ ಸಂದೇಶ – Kannada News | DCM DK Shivakumar Reacts about Siddaramaiah CM Post After Visiting Andle Jagadeeshwari Temple at Uttara Kannada

ಕಾರವಾರ, (ಡಿಸೆಂಬರ್ 19): ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕಾಳಗ ದಿನೇ ದಿನೇ ತಾರಕಕ್ಕೇರ್ತಿದೆ. ಸಿಎಂ ಸಿದ್ದರಾಮಯ್ಯ ಬಣ ತಂತ್ರ ಹೆಣೆಯುತ್ತಿದ್ರೆ, ಡಿಕೆ ಬಣ ಕೂಡ ಪ್ರತಿತಂತ್ರ ರೂಪಿಸ್ತಿದೆ. ನಾಯಕರು ಒಂದ್ಕಡೆ ಡಿನ್ನರ್ ಮೀಟಿಂಗ್ ಮಾಡಿದ್ರೆ, ಮತ್ತೊಂದ್ಕಡೆ ಟೆಂಪಲ್ ರನ್ ಮಾಡ್ತಿದ್ದಾರೆ.. ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇವತ್ತು ಉತ್ತರ ಕನ್ನಡ ಜಿಲ್ಲೆಯ ಶಕ್ತಿಕೇಂದ್ರಗಳಿಗೆ ಭೇಟಿ ನೀಡಿದ್ರು. ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರೋ ಕರಾವಳಿ ಶಕ್ತಿದೇವಿ ಜಗದೀಶ್ವರಿ ಸನ್ನಿಧದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾನು ಯಾವತ್ತೂ ಅವರು 5 ವರ್ಷ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರವಾಗಿಲ್ಲವೆಂದು ಕೂಡ ನಾನು ಹೇಳಿಲ್ಲ. ಅವರ ಪರವಾಗಿ ಹೈಕಮಾಂಡ್ ಇರುವುದಕ್ಕೆ ಸಿಎಂ ಆಗಿರೋದು. ನಾನು ಅವರು ಇಬ್ಬರು ಒಂದ ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಕೂಡ ಒಂದು ಒಪ್ಪಂದಕ್ಕೆ ತಂದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆಶಿ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಹಾಗಾದ್ರೆ, ಹೈಕಮಾಂಡ್ ತಂದಿರುವ ಒಪ್ಪಂದ ಏನು ಎನ್ನುವುದೇ ನಿಗೂಢವಾಗಿದ್ದು, ಕಾಂಗ್ರೆಸ್​​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

Source link

ಜೈಲಿನಲ್ಲಿ ದರ್ಶನ್ ಭೇಟಿ ಮಾಡಲು ಪವಿತ್ರಾ ಗೌಡ ಯತ್ನ: ಬೇಡವೇ ಬೇಡ ಎಂದ ದಾಸ – Kannada News | Pavithra Gowda wants to meet Darshan in Parappana Agrahara Jail

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ (Pavithra Gowda) ಮುಂತಾದವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭ ಆಗಿದೆ. ಈ ಹೊತ್ತಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಪವಿತ್ರಾ ಗೌಡ ಪ್ರಯತ್ನಿಸುತ್ತಿದ್ದಾರೆ. ಜೈಲು ಸೇರಿದ ಬಳಿಕ ಅವರಿಬ್ಬರ ನಡುವೆ ಮಾತುಕಥೆ ಆಗಿಲ್ಲ. ಹಾಗಾಗಿ ದರ್ಶನ್ ಜೊತೆ ಮಾತನಾಡಲು ಪವಿತ್ರಾ ಗೌಡ ಹಂಬಲಿಸುತ್ತಿದ್ದಾರೆ. ಆದರೆ ಅದಕ್ಕೆ ದರ್ಶನ್ ಅವಕಾಶ ನೀಡುತ್ತಿಲ್ಲ! ಗೆಳತಿ ಪವಿತ್ರಾ ಗೌಡ ಜೊತೆ ಮಾತನಾಡಲು ದರ್ಶನ್ (Darshan) ಅವರಿಗೆ ಈಗ ಮನಸ್ಸಿಲ್ಲ.

ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾಗ ಪವಿತ್ರಾ ಗೌಡ ಅವರು ಈ ಮನವಿ ಇಟ್ಟಿದ್ದರು. ಈ ಬೇಡಿಕೆಗೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಅವಕಾಶ ಇರುವು ಬಗ್ಗೆ ನೋಡುವುದಾಗಿ ಅಲೋಕ್ ಕುಮಾರ್ ಹೇಳಿದ್ದರು. ಅದನ್ನೇ ನೆಪವಾಗಿ ಇಟ್ಟುಕೊಂಡು ಪವಿತ್ರಾ ಗೌಡ ಅವರು ಮರಳಿ ಯತ್ನ ಮಾಡುತ್ತಿದ್ದಾರೆ. ಆದರೆ ದರ್ಶನ ಕಡೆಯಿಂದ ಅವರಿಗೆ ಸಹಕಾರ ಸಿಗುತ್ತಿಲ್ಲ.

ಪವಿತ್ರ ಗೌಡ ಭೇಟಿ ಮಾಡಲು ದರ್ಶನ್ ಅವರು ನಯವಾಗಿಯೇ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಅವರನ್ನು ಭೇಟಿ ಮಾಡಲು ದರ್ಶನ್ ಒಪ್ಪುತ್ತಿಲ್ಲ. ನಿನ್ನಿಂದಲೇ ಈ ಪರಿಸ್ಥಿತಿಗೆ ಬಂದಿದ್ದೇನೆ ಎಂಬ ರೀತಿಯಲ್ಲಿ ದರ್ಶನ್ ಅವರು ಭೇಟಿಗೆ ನಿರಾಕರಣೆ ಮಾಡಿದಂತಿದೆ. ತಮ್ಮನ್ನು ನೋಡಲು ಬಂದವರ ಬಳಿ ಕೇವಲ ಕಾನೂನು ಹೋರಾಟದ ಪ್ರಕ್ರಿಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಟ್ರಯಲ್ ಆರಂಭ ಆಗಿದೆ. ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ, ತಾಯಿಯನ್ನು ಕರೆದು ವಿಚಾರಣೆ ಮಾಡಲಾಯಿತು. ಇನ್ನೂ ನೂರಾರು ಸಾಕ್ಷಿಗಳಿಗೆ ಸಮನ್ಸ್ ನೀಡಿ ಕೋರ್ಟ್ ಟ್ರಯಲ್ ನಡೆಸಬೇಕಿದೆ. ಇಂಥ ಸಂದರ್ಭದಲ್ಲಿ ದರ್ಶನ್ ಜೊತೆ ಮಾತನಾಡಬೇಕು ಎಂಬುದು ಪವಿತ್ರಾ ಗೌಡ ಅವರ ಹಂಬಲ. ಆದರೆ ಅದಕ್ಕೆ ದರ್ಶನ್ ಕಡೆಯಿಂದ ನೀರಸ ಪ್ರತಿಕ್ರಿಯೆ ಬಂದಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಎ1 ಪವಿತ್ರಾ ಗೌಡ ಇರುವ ಸೆಲ್​ಗೆ ಟಿವಿ ನೀಡಲು ಕೋರ್ಟ್ ಸೂಚನೆ

ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲು ಸೇರುವುದಕ್ಕೂ ಮುನ್ನ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ತುಂಬ ಆಪ್ತವಾಗಿದ್ದರು. ಅದಕ್ಕೆ ಅವರಿಬ್ಬರ ಅನೇಕ ಫೋಟೋ ಮತ್ತು ವಿಡಿಯೋಗಳೇ ಸಾಕ್ಷಿ. ಆದರೆ ಒಂದು ಕೊಲೆ ಪ್ರಕರಣದಿಂದ ಅವರ ಬದುಕು ಬದಲಾಯಿತು. ಇಬ್ಬರೂ ಈಗ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ – Kannada News | Haveri: Malatesha idol desecrated in Gundenahalli village; locals demand action

ಹಾವೇರಿ, ಡಿಸೆಂಬರ್​ 19: ಕಲ್ಲಿನಿಂದ ಜಜ್ಜಿ ಮಾಲತೇಶ ದೇವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವಂತಹ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಮಾಲತೇಶ ದೇವರ ಮೂರ್ತಿಯ ಮುಖ ಮತ್ತು ಕಣ್ಣಿನ ಭಾಗಕ್ಕೆ ಕಲ್ಲಿನಿಂದ ಜಜ್ಜಲಾಗಿದೆ. ಸದ್ಯ ದುಷ್ಕರ್ಮಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಣ್ಣಪ್ಪ ಬಾರ್ಕಿ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನೀವು ಗರ್ಭಿಣಿಯಾಗಿದ್ದು ವಾಯುಮಾಲಿನ್ಯದಿಂದಾಗುವ ಸಮಸ್ಯೆಗಳಿಂದ ಮಗುವನ್ನು ಕಾಪಾಡಲು ಈ ಸಲಹೆಗಳನ್ನು ಪಾಲಿಸಿ – Kannada News | Pollution’s Hidden Impact: Risks to Baby’s Cognitive Health

ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಏರುತ್ತಿದೆ. ಅದರ ಜೊತೆ ಚಳಿಯೂ ಹೆಚ್ಚಾಗುತ್ತಿದ್ದು ಅನೇಕ ಪ್ರದೇಶಗಳಲ್ಲಿ ಮಂಜು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ನಿಮಗೆ ಗೊತ್ತಾ, ಈ ಮಾಲಿನ್ಯ (Air Pollution) ಮತ್ತು ಮಂಜು (Smog) ಗಂಭೀರ ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ, ಅದರಲ್ಲಿಯೂ ಇದು ಹುಟ್ಟಲಿರುವ ಶಿಶುಗಳಿಗೆ ಹಾನಿ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಹೌದು, ಇಂತಹ ವಿಷಯಗಳ ಬಗ್ಗೆ ಕೆಲವರು ಗಮನ ಹರಿಸದಿರಬಹುದು ಆದರೆ ಇದು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಗರ್ಭಿಣಿಯರು ಆದಷ್ಟು ಮಾಲಿನ್ಯ ಹೆಚ್ಚಾಗಿರುವ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವುದು ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಗರ್ಭಿಣಿಯರು ತಮ್ಮನ್ನು ತಾವು ರಕ್ಸಿಸಿಕೊಳ್ಳಲು ಏನು ಮಾಡಬಹುದು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಮಾಲಿನ್ಯ ಮತ್ತು ಹೊಗೆ ಎರಡೂ ಕೂಡ ಗರ್ಭದಲ್ಲಿರುವ ಶಿಶುಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಸಂಶೋಧನೆ ತಿಳಿಸಿದೆ. ಮಾಲಿನ್ಯವು PM2.5 ಮತ್ತು PM10 ನಂತಹ ಕಣಗಳನ್ನು ಹೊಂದಿರುತ್ತದೆ, ಇದರಲ್ಲಿ ಸಾರಜನಕ ಡೈಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ ಸೇರಿವೆ. ಈ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತವೆ. ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತಾರೆ. ಕಲುಷಿತ ಕಣಗಳು ರಕ್ತದಲ್ಲಿ ಕರಗುವ ಮೂಲಕ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ

ಮಾಲಿನ್ಯವು ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ದೆಹಲಿಯ ಏಮ್ಸ್‌ನ ಮಕ್ಕಳ ಚಿಕಿತ್ಸಾ ವಿಭಾಗದ ಡಾ. ಹಿಮಾಂಶು ಭದಾನಿ ಅವರು ಹೇಳುವ ಪ್ರಕಾರ, ಮಾಲಿನ್ಯ, ಹೊಗೆ ಅಥವಾ ಮಂಜಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಗರ್ಭಿಣಿಯಿಂದ ಶಿಶುಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ ಇದನ್ನು ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ. ಈ ರೀತಿಯಾದಾಗ ಮೆದುಳಿನ ಕೋಶಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಅಷ್ಟೇಅಲ್ಲ, ಇದು ಮೆದುಳಿನಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು, ಬಳಿಕ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಗು ಬೆಳೆದಂತೆ ಅವರ ಕಲಿಕಾ ಸಾಮರ್ಥ್ಯ ಕಡಿಮೆಯಾಗುವ ಅಪಾಯವನ್ನು ಹೆಚ್ಚಿಸಬಹುದು. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕೂಡ ದುರ್ಬಲಗೊಳಿಸುತ್ತದೆ, ಅಸ್ತಮಾ ಮತ್ತು ಉಸಿರಾಟದ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಮಾಲಿನ್ಯ ಮತ್ತು ಬೆಳಗಿನ ಮಂಜು ಎರಡೂ ಕೂಡ ಅಪಾಯಕಾರಿ ಏಕೆಂದರೆ ಹೊಗೆಯು ಉಸಿರಾಟದ ಮೂಲಕ ಶ್ವಾಸಕೋಶಕ್ಕೆ ಪ್ರವೇಶಿಸುವ ಅನೇಕ ವಿಷಕಾರಿ ಕಣಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಗರ್ಭಿಣಿಯರು ಮಾಲಿನ್ಯದಿಂದ ರಕ್ಷಿಸಿಕೊಳ್ಳುವುದು ಹೇಗೆ?

  • ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
  • ಮನೆಯಲ್ಲಿ ಗಾಳಿ ಶುದ್ಧೀಕರಣ ಮಾಡುವ ಯಂತ್ರವನ್ನು ಬಳಸಿ
  • ಬೆಳಿಗ್ಗೆ ಮತ್ತು ಸಂಜೆ ಹೊರಗೆ ಹೋಗುವುದನ್ನು ಆದಷ್ಟು ತಪ್ಪಿಸಿ
  • ವೈದ್ಯರು ಸೂಚಿಸಿದ ಆಹಾರ ಪದ್ದತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tax Collections: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ – Kannada News | Govt gets Rs 17 lakh crore net direct taxes this FY, 8pc more than last year

ನವದೆಹಲಿ, ಡಿಸೆಂಬರ್ 19: ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (2025ರ ಏಪ್ರಿಲ್ 1ರಿಂದ) ಭಾರತದಲ್ಲಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಆಗಿರುವುದು ಕಂಡು ಬಂದಿದೆ. ಸರ್ಕರವೇ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಈ ವರ್ಷ ಇಲ್ಲಿಯವರೆಗೆ (ಡಿ. 17) ಸಂಗ್ರಹವಾದ ನಿವ್ವಳ ನೇರ ತೆರಿಗೆಯು (Net Direct Taxes) 17.04 ಲಕ್ಷ ಕೋಟಿ ರೂಗಿಂತಲೂ ಅಧಿಕ ಇದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಿಕ್ಕಿದುದಕ್ಕಿಂತಲೂ ಶೇ. 8ರಷ್ಟು ಹೆಚ್ಚು ಟ್ಯಾಕ್ಸ್ ಕಲೆಕ್ಷನ್ ಆಗಿದೆ.

ಈ ವರ್ಷದ ತೆರಿಗೆ ಸಂಗ್ರಹದಲ್ಲಿ ಏರಿಕೆ ಆಗಲು ಕಾರ್ಪೊರೇಟ್ ಟ್ಯಾಕ್ಸ್ ಕಲೆಕ್ಷನ್ ಏರಿರುವುದೂ ಒಂದು ಪ್ರಮುಖ ಕಾರಣವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ ನಿವ್ವಳ ಕಾರ್ಪೊರೇಟ್ ಟ್ಯಾಕ್ಸ್ 7.39 ಲಕ್ಷ ಕೋಟಿ ರೂ ಇತ್ತು. ಈ ವರ್ಷ ಅದು 8.17 ಲಕ್ಷ ಕೋಟಿ ರೂ ಆಗಿದೆ. ಡೈರೆಕ್ಟ್ ಟ್ಯಾಕ್ಸ್ ಕಲೆಕ್ಷನ್​ನಲ್ಲಿ ಬಹುತೇಕ ಅರ್ಧದಷ್ಟು ಪಾಲು ಕಾರ್ಪೊರೇಟ್ ಟ್ಯಾಕ್ಸ್​ನಿಂದ ಹೋಗಿದೆ.

ಇದನ್ನೂ ಓದಿ: ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ?

ಈ ಬಾರಿ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಲು ಮತ್ತೊಂದು ಕಾರಣವೆಂದರೆ ರೀಫಂಡ್ ಕಡಿಮೆ ಆಗಿರುವುದು. ಈ ವರ್ಷ ರೀಫಂಡ್ ಆಗಿರುವುದು 2.97 ಲಕ್ಷ ಕೋಟಿ ರೂ ಮಾತ್ರ. ಕಳೆದ ವರ್ಷದಕ್ಕೆ ಹೋಲಿಸಿದರೆ ರೀಫಂಡ್ ಶೇ. 13.52ರಷ್ಟು ಕಡಿಮೆಗೊಂಡಿದೆ. ರೀಫಂಡ್ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೋದರೆ, ಒಟ್ಟೂ ನೇರ ತೆರಿಗೆಯಲ್ಲಿ ಆಗಿರುವ ಹೆಚ್ಚಳ ಶೇ. 4.16 ಮಾತ್ರ.

2025ರ ಏಪ್ರಿಲ್ 1ರಿಂದ ಡಿಸೆಂಬರ್ 17ರವರೆಗಿನ ನೇರ ತೆರಿಗೆ ಸಂಗ್ರಹ

  • ಒಟ್ಟು ನೇರ ತೆರಿಗೆ ಸಂಗ್ರಹ: 20,01,794 ಕೋಟಿ ರೂ
  • ರೀಫಂಡ್​ಗಳು: 2,97,069 ಕೋಟಿ ರೂ
  • ನಿವ್ವಳ ತೆರಿಗೆ: 17,04,725 ಕೋಟಿ ರೂ

ನಿವ್ವಳ ನೇರ ತೆರಿಗೆಯಲ್ಲಿ ಯಾವುದಕ್ಕೆಷ್ಟು?

  • ಕಾರ್ಪೊರೆಟ್ ಟ್ಯಾಕ್ಸ್: 8,17,310 ಕೋಟಿ ರೂ
  • ನಾನ್-ಕಾರ್ಪೊರೇಟ್ ಟ್ಯಾಕ್ಸ್: 8,46,905 ಕೋಟಿ ರೂ
  • ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್: 40,195 ಕೋಟಿ ರೂ

ಅಡ್ವಾನ್ಸ್ ಟ್ಯಾಕ್ಸ್ ಸುಮಾರು 7,88,388 ಕೋಟಿ ರೂ ಸಿಕ್ಕಿದೆ. ಇದರಲ್ಲಿ ಕಾರ್ಪೊರೇಟ್ ಅಡ್ವಾನ್ಸ್ ಟ್ಯಾಕ್ಸೇ 6 ಲಕ್ಷ ಕೋಟಿ ರೂಗೂ ಅಧಿಕ ಇದೆ. ಕಾರ್ಪೊರೇಟ್ ಅಲ್ಲದವರ ಅಡ್ವಾನ್ಸ್ ಟ್ಯಾಕ್ಸ್ ಬಂದಿರುವುದು 1,81,088 ಕೋಟಿ ರೂ ಮಾತ್ರವೇ. ಇಲ್ಲಿ ನೇರ ತೆರಿಗೆ ಎಂದರೆ ಇನ್ಕಮ್ ಟ್ಯಾಕ್ಸ್. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆದಾಯಕ್ಕೆ ನಿಗದಿತ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ವ್ಯಕ್ತಿಗಳೂ ಕೂಡ ತಮ್ಮ ಆದಾಯಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಇನ್ನು, ಡೈರೆಕ್ಟ್ ಟ್ಯಾಕ್ಸ್ ಅಲ್ಲದೇ, ಇನ್​ಡೈರೆಕ್ಟ್ ಟ್ಯಾಕ್ಸ್ ಸಿಸ್ಟಂ ಇದೆ. ಜಿಎಸ್​ಟಿ ಇತ್ಯಾದಿಯವು ಈ ಪರೋಕ್ಷ ತೆರಿಗೆ ವ್ಯಾಪ್ತಿಗೆ ಬರುತ್ತವೆ.

ಇದನ್ನೂ ಓದಿ: ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಕಳೆದ ವರ್ಷವಾದ 2024-25ರಲ್ಲಿ, ಅಂದರೆ 2024ರ ಎಪ್ರಿಲ್​ನಿಂದ 2025ರ ಮಾರ್ಚ್ 31ರವರೆಗೆ ಸಂಗ್ರಹವಾದ ಒಟ್ಟು ನೇರ ತೆರಿಗೆ 27.02 ಲಕ್ಷ ಕೋಟಿ ರೂ. ರೀಫಂಡ್​ಗಳನ್ನು ಕಳೆದು ಉಳಿಯುವ ನಿವ್ವಳ ನೇರ ತೆರಿಗೆ ಸಂಗ್ರಹ 22.26 ಲಕ್ಷ ಕೋಟಿ ರೂ ಆಗಿತ್ತು. ಈ ವರ್ಷ ಡಿಸೆಂಬರ್ 17ರವರೆಗೆಯೇ 17 ಲಕ್ಷ ಕೋಟಿ ರೂ ನಿವ್ವಳ ತೆರಿಗೆ ಆದಾಯವು ಸರ್ಕಾರಕ್ಕೆ ಸಿಕ್ಕಿದೆ. ಇನ್ನೂ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಬಾಕಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link