All posts by nagaraj11081993

Video: ಈದ್ ಪ್ರಾರ್ಥನೆ ಬಳಿಕ ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ

Video: ಈದ್ ಪ್ರಾರ್ಥನೆ ಬಳಿಕ ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ

ಇಸ್ಲಾಮಾಬಾದ್, ಮಾರ್ಚ್​ 22: ಪಾಕಿಸ್ತಾನದ ಮುರಿಯ್ಕೆಯ ಮರ್ಕಜ್ ತೈಬಾದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುಂಡು ಹಾರಿಸುವುದರ ಜತೆಗೆ ಹರಿತವಾದ ಆಯುಧದಿಂದ ಇರಿದಿದ್ದಾರೆ.ಈದ್ ಪ್ರಾರ್ಥನೆಯ ಕೆಲವೇ ಕ್ಷಣಗಳ ನಂತರ ಈ ದಾಳಿ ನಡೆದಿದೆ. ಬಿಲಾಲ್ ಆರಿಫ್ ಸಲಾಫಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಆಗಿದ್ದ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 22: ಚಿನ್ನದ ಬೆಲೆ (Gold Rates) ಭರ್ಜರಿಯಾಗಿ ಇಳಿಯುವ ಟ್ರೆಂಡ್ ಮುಂದುವರಿದಿದೆ. ಈ ವಾರಾಂತ್ಯದಲ್ಲಿ ಇದರ ಬೆಲೆ ಗ್ರಾಮ್​ಗೆ 300 ರೂ ಹತ್ತಿರದಷ್ಟು ಹೆಚ್ಚಳವಾಗಿದೆ. ವಿದೇಶಗಳಲ್ಲೂ ಎಲ್ಲಾ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿದೆ. ಮಾರ್ಚ್ ತಿಂಗಳಿಂದ ಈಚೆ ಮೂರು ವಾರದಲ್ಲಿ ಎರಡು ಸಾವಿರ ರೂಗೂ ಹೆಚ್ಚಿನ ಮೊತ್ತದಷ್ಟು ಇಳಿಕೆ ಆಗಿದೆ. ಮಾರ್ಚ್ ಆರಂಭದಲ್ಲಿ ಅಪರಂಜಿ ಚಿನ್ನಕ್ಕೆ ಇದ್ದುದಕ್ಕಿಂತ ಕಡಿಮೆ ಬೆಲೆಗೆ ಆಭರಣ ಚಿನ್ನದ ಬೆಲೆ ಇಳಿದಿದೆ. ಬೆಳ್ಳಿ ಬೆಲೆಯ ಇಳಿಕೆಯೂ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಇದರ ಬೆಲೆಯಲ್ಲಿ 15 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,970 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,597 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,380 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,948 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,597 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,380 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,380 ರೂ
  • ಚೆನ್ನೈ: 13,620 ರೂ
  • ಮುಂಬೈ: 13,380 ರೂ
  • ದೆಹಲಿ: 13,395 ರೂ
  • ಕೋಲ್ಕತಾ: 13,380 ರೂ
  • ಕೇರಳ: 13,380 ರೂ
  • ಅಹ್ಮದಾಬಾದ್: 13,385 ರೂ
  • ಜೈಪುರ್: 13,395 ರೂ
  • ಲಕ್ನೋ: 13,395 ರೂ
  • ಭುವನೇಶ್ವರ್: 13,380 ರೂ

ಇದನ್ನೂ ಓದಿ: ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 550 ರಿಂಗಿಟ್ (13,095 ರುಪಾಯಿ)
  • ದುಬೈ: 501.50 ಡಿರಾಮ್ (12,803 ರುಪಾಯಿ)
  • ಅಮೆರಿಕ: 143 ಡಾಲರ್ (13,409 ರುಪಾಯಿ)
  • ಸಿಂಗಾಪುರ: 187 ಸಿಂಗಾಪುರ್ ಡಾಲರ್ (13,674 ರುಪಾಯಿ)
  • ಕತಾರ್: 506 ಕತಾರಿ ರಿಯಾಲ್ (13,014 ರೂ)
  • ಸೌದಿ ಅರೇಬಿಯಾ: 527 ಸೌದಿ ರಿಯಾಲ್ (13,161 ರುಪಾಯಿ)
  • ಓಮನ್: 53.15 ಒಮಾನಿ ರಿಯಾಲ್ (12,995 ರುಪಾಯಿ)
  • ಕುವೇತ್: 41.86 ಕುವೇತಿ ದಿನಾರ್ (12,803 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

World Water Day 2026: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ

ನೀರು (Water) ಜೀವನದ ಅಡಿಪಾಯ.  ಭೂಮಿಯ ಮೇಲಿರುವ ಜೀವ ಸಂಕುಲಗಳ ಜೀವನವು ನೀರಿನ ಮೇಲೆಯೇ ಅವಲಂಬಿತವಾಗಿದೆ. ನೀರಿಲ್ಲದೆ ಬದುಕನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ.  ಹೌದು ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನಾಗರಿಕತೆಗಳು ಅಭಿವೃದ್ಧಿ ಹೊಂದಿರುವುದು ಸಹ ನೀರಿನ ಮೂಲಗಳ ಬಳಿ. ಹೀಗೆ ನೀರು ಜೀವನಕ್ಕೆ ಜನ್ಮ ನೀಡಿದ್ದು ಮಾತ್ರವಲ್ಲದೆ ಸಂಸ್ಕೃತಿ, ಆರ್ಥಿಕತೆ ಮತ್ತು ಸಮಾಜವನ್ನು ಸಹ ರೂಪಿಸಿತು. ಆದರೆ ಇಂದು ಇದೇ ನೀರಿನ ಮೂಲ ಮಾನವನ ಸ್ವಾರ್ಥದ ಕಾರಣದಿಂದಾಗಿ ಅಪಾಯದ ಅಂಚಿನಲ್ಲಿನಲ್ಲಿದೆ. ನದಿ, ಕೆರೆಗಳಂತಹ ಸಿಹಿ ನೀರಿನ ಮೂಲಗಳು ಕುಲುಷಿತಗೊಳ್ಳುತ್ತಿವೆ, ಬತ್ತಿ ಹೋಗುತ್ತಿವೆ, ಅಂತರ್ಜಲವು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ. ಅಷ್ಟೇ ಅಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ತೀವ್ರ ಕೊರತೆ ಕೂಡ ಎದುರಾಗುತ್ತಿವೆ. ನೀರಿನ ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ಜಲಜೀವವನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ನೀರಿನ ಮಹತ್ವ, ಅದರ ಸಂರಕ್ಷಣೆ ಮತ್ತು ಶುದ್ಧ ನೀರಿನ ಲಭ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಜಲ ದಿನದ ಇತಿಹಾಸವೇನು?

ವಿಶ್ವ ಜಲ ದಿನವನ್ನು 1992 ರಲ್ಲಿ ವಿಶ್ವಸಂಸ್ಥೆಯು ಪ್ರಾರಂಭಿಸಿತು. 1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯು ನೀರಿನ ಸಂರಕ್ಷಣೆಗಾಗಿ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಿತು. ಇದರ ನಂತರ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಆನಂತರ ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಜಾಗೃತಿ ದಿನ ನೀರು ಅಮೂಲ್ಯವಾದ ಸಂಪತ್ತು ಅದನ್ನು ಉಳಿಸಿ, ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ನೆನಪಿಸುತ್ತದೆ.

ಇದನ್ನೂ ಓದಿ: ಹಸಿರೇ ಉಸಿರು… ಕಾಡನ್ನು ಬೆಳೆಸಿ ನಾಡನ್ನು ಉಳಿಸೋಣ

ವಿಶ್ವ ಜಲ ದಿನದ ಮಹತ್ವವೇನು?

  • ವಿಶ್ವ ಜಲ ದಿನವು ನೀರು ಕೇವಲ ಒಂದು ಸಂಪನ್ಮೂಲವಲ್ಲ, ನಮ್ಮ ಜೀವನದ ಅಡಿಪಾಯ ಎಂದು ನಮಗೆ ನೆನಪಿಸುತ್ತದೆ. ಭವಿಷ್ಯದ ಪೀಳಿಗೆಗೆ ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬುದರ ಬಗ್ಗೆ ಈ ದಿನ ಜಾಗೃತಿ ಮೂಡಿಸಲಾಗುತ್ತದೆ.
  • ನೀರಿನ ಮಹತ್ವ, ಅದರ ಸಂರಕ್ಷಣೆ ಮತ್ತು ಶುದ್ಧ ನೀರಿನ ಲಭ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಜಲ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
  • ಈ ದಿನದಂದು, ಶಾಲೆಗಳು, ಕಾಲೇಜುಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ರ್ಯಾಲಿಗಳು ಮತ್ತು ಅಭಿಯಾನಗಳನ್ನು ಆಯೋಜಿಸಲಾಗುತ್ತದೆ. ನೀರನ್ನು ಸಂರಕ್ಷಿಸಲು, ಮಳೆನೀರನ್ನು ಕೊಯ್ಲು ಮಾಡಲು ಮತ್ತು ನೀರನ್ನು ವಿವೇಚನೆಯಿಂದ ಬಳಸಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಟ್ರೇಲಿಯಾದ ರೈಲ್ವೆ ನಿಲ್ದಾಣದಲ್ಲಿ ಪರ್ಸ್​ ಮರೆತು ಹೋದ ಭಾರತದ ಯುವತಿ, ಆಮೇಲೇನಾಯ್ತು?

ಆಸ್ಟ್ರೇಲಿಯಾ, ಮಾರ್ಚ್​ 22: ಸಾಮಾನ್ಯವಾಗಿ ರಸ್ತೆಗಳಲ್ಲಿ, ಬಸ್ಸುಗಳು, ಆಟೋಗಳು, ರೈಲ್ವೆ ನಿಲ್ದಾಣ ಎಲ್ಲೇ ಆಗಿರಲಿ ಬಿಟ್ಟ ವಸ್ತುಗಳು ಸಿಗುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ರೈಲ್ವೆ ನಿಲ್ದಾಣದಲ್ಲಿ ಭಾರತದ ಯುವತಿಯೊಬ್ಬಳು ಪರ್ಸ್​ ಮರೆತು ಹೋಗಿದ್ದಳು.

ಇಬ್ಬರು ಯುವತಿಯರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜೇಬಿನಲ್ಲಿ ಪರ್ಸ್​ ಇಲ್ಲ ಎಂಬುದನ್ನು ಕಂಡು ಒಮ್ಮೆ ಗಾಬರಿಯಾದರು. ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲು ಹಿಡಿದು ತಾವು ಹತ್ತಿದ್ದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು.

ಆದರೆ ರೈಲ್ವೆ ನಿಲ್ದಾಣಕ್ಕೆ ಬಂದು ಆಶ್ಚರ್ಯಚಿಕಿತರಾದರು, ಆಕೆ ಎಲ್ಲಿ ಪರ್ಸ್​ ಬಿಟ್ಟು ಹೋಗಿದ್ದರೋ ಅಲ್ಲೇ ಪರ್ಸ್​ ಇತ್ತು, ಯಾರೊಬ್ಬರು ಕೂಡ ಆ ಪರ್ಸ್​ ಮುಟ್ಟಿರಲಿಲ್ಲ.

ಒಂದು ದಿನ ನಾನು ತುಂಬಾ ಒತ್ತಡದಲ್ಲಿದ್ದಾಗ ನನ್ನ ಬ್ಯಾಗ್ ಅನ್ನು ಶಾಪಿಂಗ್ ಸೆಂಟರ್‌ನಲ್ಲಿ ಮರೆತಿದ್ದೆ ಮತ್ತು 20 ನಿಮಿಷಗಳ ನಂತರ ನಾನು ಅಲ್ಲಿಗೆ ಹೋದಾಗ ನನ್ನ ಬ್ಯಾಗ್ ಇನ್ನೂ ಅದೇ ಸ್ಥಳದಲ್ಲಿದ್ದುದನ್ನು ಕಂಡು ಸಂತೋಷವಾಗಿತ್ತು ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು: ರೈತರಲ್ಲಿ ಆತಂಕ

ರಾಮನಗರ, ಮಾರ್ಚ್​​ 22: ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಈಗಾಗಲೇ ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಒಂದು  ಆನೆಯನ್ನ ಸೆರೆ ಹಿಡಿಯಲಾಗಿತ್ತು. ಇದರಿಂದ ಜನರು ಕೊಂಚ ನಿಟ್ಟುಸಿರು ಬಿಡುವ ನಡುವೆಯೇ ಇದೀಗ ಗ್ರಾಮದಲ್ಲಿ ಮತ್ತೆ ಮೂರು ಕಾಡಾನೆಗಳು ಕಾಣಿಸಿಕೊಂಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಯತ್ನ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Goddess Durga: ಭಯ, ಆತಂಕ, ಒಂಟಿತನದಿಂದ ಮುಕ್ತಿ ಪಡೆಯಲು ಒಂಬತ್ತು ಮಂಗಳವಾರ ಈ ಕೆಲಸ ಮಾಡಿ

ಭಕ್ತಿಪೂರ್ವಕವಾಗಿ ಭಗವಂತನನ್ನು ಆರಾಧಿಸುವ ಅನೇಕ ವಿಧಾನಗಳಲ್ಲಿ, ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿ ಹೇಳುವಂತೆ, ದುರ್ಗಾ ಅಂದರೆ ದುರ್ಗತಿನಾಶಿನಿ, ಅಂದರೆ ಎಲ್ಲಾ ದುರ್ಗತಿಗಳನ್ನು ನಾಶಪಡಿಸುವ ಶಕ್ತಿ ಸ್ವರೂಪಿಣಿ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳೇ ಆಗಿವೆ. ಈ ಕಾರಣಕ್ಕಾಗಿ ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಹನುಮಂತ, ಮಹಾಲಕ್ಷ್ಮಿ ಮುಂತಾದ ದೇವತೆಗಳಿಗೆ ವೀಳ್ಯದೆಲೆ ಹಾರ ಅರ್ಪಿಸುವ ಪದ್ಧತಿಯಂತೆ, ದುರ್ಗಾದೇವಿಗೆ ಈ ಅರ್ಪಣೆಯು ನಮ್ಮ ಸಂಕಲ್ಪಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ.

ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ಅರ್ಪಿಸಬೇಕು ಎಂಬುದನ್ನು ಈ ಆಚರಣೆಯಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಭಯದ ವಾತಾವರಣ, ಕುಟುಂಬದಲ್ಲಿ ಅಥವಾ ಕಾನೂನು ವಿಷಯಗಳಲ್ಲಿನ ಆತಂಕ, ಆರೋಗ್ಯದ ಭಯ, ವಾಹನ, ವ್ಯಾಪಾರ, ಸಾಲದ ಭಯ, ಮನಸ್ಸಿನ ಜಿಗುಪ್ಸೆ, ಒಂಟಿಯಾಗಿ ಮಾತನಾಡುವುದು ಅಥವಾ ನಗುವುದು, ಮಾತಿನಲ್ಲಿ ತೊದಲುವುದು, ಕಣ್ಣಿನಲ್ಲಿ ನೀರು ಬರುವುದು, ಒಂಟಿಯಾಗಿ ಕುಳಿತು ಆಲೋಚಿಸುವುದು, ಮನಸ್ಸಿನಲ್ಲಿ ದುಃಖ ತುಂಬಿಕೊಳ್ಳುವುದು, ಜೀವನವೇ ಸಾಕಪ್ಪಾ ಎನ್ನುವಷ್ಟು ನಿರಾಸೆ ಕಾಡುವಂತಹ ಸಂದರ್ಭಗಳಲ್ಲಿ ಈ ಪೂಜೆಯು ಪರಿಹಾರ ನೀಡುತ್ತದೆ. ಅಲ್ಲದೆ, ರಾಜಕೀಯವಾಗಿ ಅಪವಾದಗಳು ಎದುರಾದಾಗ, ಉನ್ನತ ಹುದ್ದೆಯಲ್ಲಿರುವವರು ಅಪಮಾನಗಳಿಗೆ ಅಥವಾ ಅಪಹಾಸ್ಯಕ್ಕೆ ಒಳಗಾದಾಗ, ಬುದ್ಧಿ ಮಂಕಾದಾಗ, ಜ್ಞಾಪಕಶಕ್ತಿ ಕೊರತೆಯಾದಾಗ, ಬಾಣಂತಿಯರಿಗೆ ಆರೋಗ್ಯ ಸಮಸ್ಯೆಗಳು ಕಾಡಿದಾಗ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಾಲಿಗೆ ಒಣಗಿದಾಗ ಈ ವಿಶೇಷ ಪೂಜೆಯನ್ನು ಆಚರಿಸಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಈ ಎಲ್ಲಾ ಸಮಸ್ಯೆಗಳಿಗೆ ಏಕೈಕ ವಿಧಾನವೆಂದರೆ, ಒಂಬತ್ತು ಮಂಗಳವಾರಗಳಂದು ಸಂಧ್ಯಾಕಾಲದಲ್ಲಿ ಶ್ರೀ ದುರ್ಗಾದೇವಿಗೆ ಅಥವಾ ಯಾವುದೇ ಅಮ್ಮನ ದೇವಾಲಯದಲ್ಲಿ ವೀಳ್ಯದೆಲೆ ಹಾರವನ್ನು ಅರ್ಪಿಸುವುದು. ಈ ಹಾರವು 45 ಎಲೆಗಳಿಂದ ಕೂಡಿದ್ದು (4+5=9), ಈ ಹಾರವನ್ನು ಹೊಲಿದು ದೇವಿಗೆ ಸಮರ್ಪಿಸಬೇಕು. ನೈವೇದ್ಯವಾಗಿ ಬೆಲ್ಲದಿಂದ ಮಾಡಿದ ಸಿಹಿ ಪಾಯಸವನ್ನು ಅರ್ಪಿಸಬೇಕು. ನಂತರ ಅಲ್ಲಿ ಸ್ವಲ್ಪ ಹೊತ್ತು ಕುಳಿತು “ಓಂ ದುಂ ದುರ್ಗಾಯೈ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ಒಂಬತ್ತನೆಯ ಹಾಗೂ ಕೊನೆಯ ಮಂಗಳವಾರದಂದು, ನಿಮ್ಮ ಮನೆಯಲ್ಲಿ ಮೂರು ಜನ ಮುತ್ತೈದೆಯರಿಗೆ ಕದಳಿ ಫಲ (ಬಾಳೆಹಣ್ಣು) ಸಮೇತ ತಾಂಬೂಲವನ್ನು ನೀಡಿದರೆ, ನಿಮ್ಮ ಎಲ್ಲಾ ಸಂಕಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂ. ಹಣ ಜಪ್ತಿ!

ಬಾಗಲಕೋಟೆ, ಮಾರ್ಚ್​ 22: ಹೊನ್ನಾಕಟ್ಟಿ ಚೆಕ್ ಪೋಸ್ಟ್‌ನಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 32.50 ಲಕ್ಷ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಹಣ ರಾಯಚೂರಿನ ಬಿ. ವೀರೇಶ್ ಬಾಬು ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಹಣವನ್ನು ರಾಯಚೂರಿನಿಂದ ಬೆಳಗಾವಿ ಕಡೆಗೆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ನಗದು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿ, ತಕ್ಷಣವೇ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅಕ್ರಮ ಹಣ ಸಾಗಾಟವನ್ನು ತಡೆಯಲು ಮತ್ತು ಮತದಾರರಿಗೆ ಹಣದ ಆಮಿಷ ಒಡ್ಡುವುದನ್ನು ನಿಯಂತ್ರಿಸಲು ವ್ಯಾಪಕ ತಪಾಸಣೆ ಹಾಗೂ ನಿಗಾವನ್ನು ತೀವ್ರಗೊಳಿಸಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧುರಂಧರ್ 2: ಪಾಕಿಸ್ತಾನದ ಪೊಲೀಸ್ ಆಗಲು ಕೈತುಂಬಾ ಸಂಬಳ ಪಡೆದ ಸಂಜಯ್ ದತ್

ಬಾಲಿವುಡ್‌ ನಟ ಸಂಜಯ್ ದತ್ (Sanjay Dutt) ಅವರಿಗೆ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾದಿಂದ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಗಳಲ್ಲಿ ಅವರು ನಿರ್ವಹಿಸಿರುವ ಪಾಕಿಸ್ತಾನಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುಬೇಡಿಕೆಯ ನಟನಾಗಿರುವ ಅವರು ಈ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ, ಸಂಜಯ್ ದತ್ ಅವರಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ (Sanjay Dutt Remuneration) ನೀಡಲಾಗಿದೆ.

‘ಧುರಂಧರ್ 2’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪಾಕಿಸ್ತಾನದ ಪೊಲೀಸ್‌ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವು ಕರಾಚಿಯ ನೈಜ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಖಾನ್ ಅವರ ಜೀವನದಿಂದ ಪ್ರೇರಿತವಾಗಿದೆ. ಲಿಯಾರಿ ಪ್ರದೇಶದ ಭೂಗತ ಲೋಕ ಮತ್ತು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ರಚಿಸಲಾದ ಲಿಯಾರಿ ಟಾಸ್ಕ್ ಫೋರ್ಸ್ ನೇತೃತ್ವವನ್ನು ಚೌಧರಿ ಅಸ್ಲಂ ವಹಿಸಿಕೊಂಡಿದ್ದರು.

ಆ ಪಾತ್ರಕ್ಕೆ ಸಂಜಯ್ ದತ್ ಅವರು ಜೀವ ತುಂಬಿದ್ದಾರೆ. ಅವರ ಗಡುಸಾದ ಧ್ವನಿ, ಖಡಕ್ ಡೈಲಾಗ್ ಡೆಲಿವರಿ ಮತ್ತು ಮ್ಯಾನರಿಸಂ ಕಾರಣದಿಂದ ಆ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಬೇರೆ ಪಾತ್ರಗಳ ರೀತಿ ಈ ಪಾತ್ರ ಕೂಡ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಈ ಫ್ರಾಂಚೈಸಿಯ ಎರಡು ಭಾಗಗಳಿಗಾಗಿ ಸಂಜಯ್ ದತ್ ಅವರಿಗೆ ಒಟ್ಟು 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.

ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು ಎಲ್ಲವೂ ಸೇರಿ ಅದ್ದೂರಿ ಬಜೆಟ್​​ನಲ್ಲಿ ‘ಧುರಂಧರ್ 2’ ಸಿನಿಮಾ ಮೂಡಿಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಕೇವಲ 3 ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂಬ ಮಾಹಿತಿ ಲಭ್ಯಬಾಗಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ

ಯುಗಾದಿ, ಈದ್ ಹಬ್ಬದ ರಜೆ ಹಾಗೂ ವೀಕೆಂಡ್ ಜೊತೆಯಾಗಿ ಬಂದಿದ್ದರಿಂದ ಭಾರತದಲ್ಲಿ ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಸುಮಾರು 339 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಮ್​ಪಾಲ್ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ ಬಿಗ್​​ ಶಾಕ್​​: ಅತ್ಯಾಚಾರ ಪ್ರಕರಣ ದಾಖಲು

ಮಂಗಳೂರು, ಮಾರ್ಚ್​​ 22: ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದ್ದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ  ಬಿಗ್​​ ಶಾಕ್​​ ಸಿಕ್ಕಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಸಂದೇಶ್​​ ವಿರುದ್ಧ ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್​ಐಆರ್​ ದಾಖಲಾಗಿದೆ. 2018 ರಿಂದ 2023ರವರೆಗೆ ಶಿಕ್ಷಕಿ ಮನೆಗೆ ಹೋಗಿ ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

2020ರಲ್ಲಿ ಸಂದೇಶ್​​​ ಬೆಳ್ತಂಗಡಿ ಸರ್ಕಲ್ ವ್ಯಾಪ್ತಿಯಲ್ಲಿರುವ ವೇಣೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್​ಪೆಕ್ಟರ್​​​ ಆಗಿದ್ದರು. ಹೀಗಾಗಿ ವೇಣೂರು ಠಾಣಾ ವ್ಯಾಪ್ತಿಯಲ್ಲೇ ಅತ್ಯಾಚಾರ ಆರೋಪದಡಿ ಸೆಕ್ಷನ್ 376(2)(a)(1), 376(2)(n), 384, 506ರಡಿ ಕೇಸ್ ದಾಖಲಾಗಿದೆ. ಸಂದೇಶ್ ವಿರುದ್ಧ ಇಬ್ಬರು ಮಹಿಳೆಯರು ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಹೇಳಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಪಿಐ​ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತಾಗಿದೆ ಎಂದು ನಿನ್ನೆಯಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಈಗ ಸಂದೇಶ್​​ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ.

ಇದನ್ನೂ ಓದಿ: ಇನ್ಸ್ಪೆಕ್ಟರ್ ಸಂದೇಶ್​ ಕಾಮಕಾಂಡ ಕೇಸ್​​ಗೆ ಬಿಗ್ ಟ್ವಿಸ್ಟ್; ಪೊಲೀಸ್ ವರದಿಯಲ್ಲಿ ಸ್ಫೋಟಕ ಸತ್ಯ ಬಯಲು

ಸಂತ್ರಸ್ತೆ ಮಹಿಳೆ ಆರೋಪ ಸಂಬಂಧ ಕೆಲ ಆಡಿಯೋ ವಿಡಿಯೋಗಳ ಬಯಲಿಗೆ ಬರುತ್ತಿದ್ದಂತೆಯೇ ಇನ್ಸ್​ಪೆಕ್ಟರ್​ ವಿರುದ್ಧದ ಪ್ರಕರಣದ ತನಿಖೆ ನಡೆಸಿ ವರದಿ ನೀಡುವ ಹೊಣೆಯನ್ನು ಎಸಿಪಿ ಶ್ರೀಕಾಂತ್‌ಗೆ ನೀಡಲಾಗಿತ್ತು. ಪ್ರಕರಣ ಸಂಬಂಧ ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನ ಭೇಟಿ ಮಾಡಿ ಮಾಡಿ ಸಂದೇಶ್​​ರನ್ನು ಅಮಾನತ್ತಿನಲ್ಲಿಟ್ಟು ತನಿಖೆ ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ ಈ ಬಗ್ಗೆ ಮಹಿಳಾ ಆಯೋಗ ಸಹ ಸುಮಟೋ ಕೇಸ್ ದಾಖಲಿಸಿಕೊಂಡು, ಪ್ರಕರಣದ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಇನ್ಸ್​ಪೆಕ್ಟರ್​ ಸಂದೇಶ ಅವರನ್ನು ಅಮಾನತು ಕೂಡ ಮಾಡಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಅಮೆರಿಕಾದಿಂದ LPG ಸರಕು; ಮಂಗಳೂರು ಬಂದರಿಗೆ ಬಂತು‘ಪೈಕ್ಸಿಸ್ ಪಯನಿಯರ್’!

ಬೆಂಗಳೂರು, ಮಾರ್ಚ್​ 22: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಬಗ್ಗೆ ಉಂಟಾದ ಆತಂಕದ ನಡುವೆಯೇ ಅಮೆರಿಕಾದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ಭಾರತಕ್ಕೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಾಗುವ ‘ಪೈಕ್ಸಿಸ್ ಪಯನಿಯರ್’ ಹಡಗು ಭಾನುವಾರ ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ.

ಬಂದರಿಗೆ ಬಂದಿರುವ ಹಡಗಿನಲ್ಲಿರುವ LPG ಪ್ರಮಾಣ ಎಷ್ಟು?

ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ 47,236 ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ ಸುಮಾರು 6 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿತು. ಫೆಬ್ರವರಿ 14ರಂದು ಟೆಕ್ಸಾಸ್‌ನ ನೆದರ್‌ಲ್ಯಾಂಡ್ ಬಂದರಿನಿಂದ ಹೊರಟಿದ್ದ ಈ ಹಡಗು, ಈಗ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗಾಗಿ ಸುಮಾರು 16,714 ಟನ್ LPG ಇಳಿಸಲು ಯೋಜಿಸಲಾಗಿದೆ. ಹಡಗು ಸೋಮವಾರ ಬೆಳಿಗ್ಗೆ ಹೊರಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಸುಮಾರು ಮೂರು ವಾರಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಭಾರತದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಹೋಟೆಲ್‌ಗಳಂತಹ ವಾಣಿಜ್ಯ ಉದ್ಯಮಗಳಿಗೆ LPG ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ, ಗೃಹ ಬಳಕೆಗಾಗಿ ಆದ್ಯತೆ ನೀಡಲಾಗಿತ್ತು. ಇದರ ಮಧ್ಯೆ ಮಾರ್ಚ್ 18ರಂದು ‘ಜಾಗ್ ಲಾಡ್ಕಿ’ ಎಂಬ ಕಚ್ಚಾ ತೈಲ ಟ್ಯಾಂಕರ್ ಸುಮಾರು 80,800 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಮುಂದ್ರಾ ಬಂದರಿಗೆ ತಂದು ತಲುಪಿಸಿತ್ತು. ಜೊತೆಗೆ ‘ನಂದಾ ದೇವಿ’ ಮತ್ತು ‘ಶಿವಾಲಿಕ್’ ಎಂಬ LPG ಸಾಗಣೆ ಹಡಗುಗಳು ಕ್ರಮವಾಗಿ ವಾಡಿನಾರ್ ಮತ್ತು ಮುಂದ್ರಾ ಬಂದರುಗಳಿಗೆ ತಲುಪಿವೆ.

ಇದನ್ನೂ ಓದಿ ಹೋಟೆಲ್, ರೆಸ್ಟೋರೆಂಟ್​​ಗಳಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಸೋಮವಾರದಿಂದ ರಾಜ್ಯಗಳಿಗೆ ಹೆಚ್ಚುವರಿ ಸಿಲಿಂಡರ್ ಪೂರೈಕೆ

ಬಂದರಿನ ಮೇಲೆ ದಾಳಿ ಸಾಧ್ಯತೆ

ಇರಾನ್, ಹೋರ್ಮುಜ್ ಕಣಿವೆಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತ ಸಂಚಾರ ಭರವಸೆ ನೀಡಿದರೂ, ಯುಎಇ ಬಂದರು ಪ್ರದೇಶಗಳ ಮೇಲೆ ದಾಳಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭಾರತ ತನ್ನ ಇಂಧನ ಅವಶ್ಯಕತೆಗಳಿಗೆ ಬಹಳ ಮಟ್ಟಿಗೆ ಆಮದುಗಳ ಮೇಲೆ ಅವಲಂಬಿತವಾಗಿದೆ. ದೇಶದ ಒಟ್ಟು ಕಚ್ಚಾ ತೈಲದ ಶೇ 88, ನೈಸರ್ಗಿಕ ಅನಿಲದ ಶೇ 50 ಮತ್ತು LPGಯ ಸುಮಾರು ಶೇ60 ವಿದೇಶಗಳಿಂದ ಬರುತ್ತವೆ. ಫೆಬ್ರವರಿ 28ರಂದು ಅಮೆರಿಕಾ-ಇಸ್ರೇಲ್ ದಾಳಿಗಳ ನಂತರ ಉದ್ಭವಿಸಿದ ಪರಿಸ್ಥಿತಿಗೂ ಮೊದಲು ಈ ಆಮದುಗಳ ಬಹುಪಾಲು ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ಪಶ್ಚಿಮ ಏಷ್ಯಾ ದೇಶಗಳಿಂದ ಆಗುತ್ತಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link