ಜೆರುಸಲೇಂ, ಮಾರ್ಚ್ 21: ಈದ್ ಅಲ್-ಫಿತರ್ ದಿನದಂದೇ ಜೆರುಸಲೇಂ ಮೇಲೆ ಇರಾನಿನ (Iran War) ಕ್ಷಿಪಣಿ ದಾಳಿ ನಡೆದಿದೆ. ಅಲ್-ಅಕ್ಸಾ ಮಸೀದಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನೂರಾರು ಮುಸ್ಲಿಂ ಆರಾಧಕರು ಮಸೀದಿಯ ಗೇಟ್ ಹೊರಗೆ ತಮ್ಮ ಈದ್ ಪ್ರಾರ್ಥನೆಗಳನ್ನು ನಡೆಸಬೇಕಾಯಿತು. ಸುಮಾರು 60 ವರ್ಷಗಳಲ್ಲಿ ಮೊದಲ ಬಾರಿಗೆ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಯಿತು.
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೆ ವಿಶ್ವದ ಕೆಲವು ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿರುವ ಈದ್ ಅಲ್-ಫಿತರ್ ಆಚರಣೆಯ ಸಮಯದಲ್ಲಿ ಇರಾನಿನ ಕ್ಷಿಪಣಿ ಜೆರುಸಲೆಮ್ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್ ಹೇಳಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 21: ಕೊನೆಗೂ ದಾವಣಗೆರೆ ಬೈಎಲೆಕ್ಷನ್ ಟಿಕೆಟ್ ಗೊಂದಲ ಬಗೆಹರಿದಿದ್ದು, ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಫಿಕ್ಸ್ ಆಗಿದೆ. ಆ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಮಗ ಸಮರ್ಥ್ ಶಾಮನೂರ್ ಕಣಕ್ಕಿಳಿಯಲಿದ್ದಾರೆ.
ತಿರುವನಂತಪುರಂ, ಮಾರ್ಚ್ 21: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿಯ ‘ಬಿ-ಟೀಮ್’ ಎಂದು ಟೀಕಿಸಿದ್ದಾರೆ. ಓಲೈಕೆ ರಾಜಕೀಯ ಮಾಡುವ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅನ್ನು ಒಂದೇ ರೀತಿಯಲ್ಲಿ ವಿರೋಧಿಸಿವೆ. ಅವೆರಡೂ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಎಂದು ಕೇರಳದ ಸಿಎಂ ಆರೋಪಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅನುಭವಗಳಿಂದ ಕಲಿಯಲು ಇಷ್ಟಪಡದ ವ್ಯಕ್ತಿಗಳಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. ರಾಷ್ಟ್ರೀಯ ಮಟ್ಟದ ವ್ಯವಹಾರಗಳನ್ನು ಪರಿಶೀಲಿಸಿದರೆ ನಮಗೆ ಕಾಣುವುದೇನೆಂದರೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿಜವಾದ ಬಿ-ಟೀಂ ಆಗಿದೆ. ಆ ಬಗ್ಗೆ ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಓಲೈಕೆಯ ರಾಜಕೀಯ ಮಾಡುತ್ತಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದದಲ್ಲಿ ತೊಡಗಿರುವ ಗುಂಪುಗಳ ಬೆಂಬಲವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ವಿಜಯನ್ ಆರೋಪಿಸಿದರು. ನಾವು ಯಾವುದೇ ಕೋಮುವಾದಿ ಶಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಎಲ್ಲಾ ಕೋಮುವಾದವನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.
VIDEO | Kannur: “Congress is acting as B-team of BJP in Kerala”, says Kerala CM Pinarayi Vijayan (@pinarayivijayan) to PTI Videos.#Congress#KeralaPolls
ಕೇರಳದಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶಗಳು ಹೊರಬೀಳಲಿವೆ. ಈಗಾಗಲೇ ಕೇರಳದಲ್ಲಿ ಬಿಜೆಪಿ, ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಆರಂಭಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು, ಮಾರ್ಚ್ 21: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu)ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಿನ್ನಲೆ ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮನ ಹಿನ್ನಲೆಯಲ್ಲಿ ತುಮಕೂರಿನ ಕ್ಯಾತಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಮಠದ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತುಮಕೂರು ಎಸ್ಪಿ ಅಶೋಕ್ ಹಾಗೂ ಶಾಸಕರುಗಳಾದ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ರಾಷ್ಟ್ರಪತಿ ಭೇಟಿ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಹಾಗೂ ಇತರೆ ಸಿದ್ಧತೆಗಳ ಕುರಿತು ಚರ್ಚೆ ಮಾಡಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವೇಳಾ ಪಟ್ಟಿ ಹೀಗಿದೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಚ್ 31ರಂದು ಬೆಂಗಳೂರಿಗೆ ಆಗಮಿಸಲಿದ್ದು, ಲೋಕಪಾಲ್ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿರುವ ಅವರು, ಮಠದ ಪೂಜ್ಯ ಶಿವಕುಮಾರಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ.
ಬಳಿಕ ಮಠದ ಸುಮಾರು 10 ಸಾವಿರ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದು, ಆ ಬಳಿಕ ಶಿವಕುಮಾರಸ್ವಾಮೀಜಿಗಳ 119ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಬಂದೋಬಸ್ತ್ ಹಾಗೂ ಇತರೆ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡದ ಪರ ಇನ್ನಿಂಗ್ಸ್ ಪ್ರಾರಂಭಿಸುವವರನ್ನು ಓಪನರ್ ಎಂದು ಕರೆದರೆ, ಪಂದ್ಯವನ್ನು ಮುಗಿಸುವವರನ್ನು ಫಿನಿಷರ್ ಎಂದು ಕರೆಯಲಾಗುತ್ತದೆ. ಇಂತಹ ಗೇಮ್ ಫಿನಿಷರ್‌ಗಳು ಐಪಿಎಲ್ನಲ್ಲಿಯೂ (IPL 2026) ಇದ್ದಾರೆ. 10 ತಂಡಗಳು ಪಾಲ್ಗೊಳ್ಳುವ ಈ ಲೀಗ್ನಲ್ಲಿ ಪಂದ್ಯಗಳನ್ನು ಮುಗಿಸುವಲ್ಲಿ ಪ್ರವೀಣರಾದ 31 ಆಟಗಾರರಿದ್ದಾರೆ. ಹಾಗಿದ್ದರೆ ಈ 10 ತಂಡಗಳಲ್ಲಿರುವ ಆ 31 ಗೇಮ್ ಫಿನಿಷರ್‌ಗಳು ಯಾರ್ಯಾರು ಎಂಬುದು ಪ್ರಶ್ನೆ. ಇದರ ಜೊತೆಗೆ ಪ್ರತಿ ತಂಡವು ಎಷ್ಟು ಫಿನಿಷರ್‌ಗಳನ್ನು ಹೊಂದಿದೆ? ಎಂಬುದನ್ನು ವಿವರವಾಗಿ ನೋಡುವುದಾದರೆ..
10 ತಂಡಗಳಲ್ಲಿರುವ ಗೇಮ್ ಫಿನಿಷರ್ಸ್
ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಈ ತಂಡ ಮೂವರು ಗೇಮ್ ಫಿನಿಷರ್‌ಗಳನ್ನು ಹೊಂದಿದೆ. ಅವರಲ್ಲಿ ಹಾರ್ದಿಕ್ ಪಾಂಡ್ಯ, ನಮನ್ ಧೀರ್ ಮತ್ತು ವಿಲ್ ಜ್ಯಾಕ್ಸ್ ಸೇರಿದ್ದಾರೆ.
ಮುಂಬೈ ಇಂಡಿಯನ್ಸ್ನಂತೆಯೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ನಲ್ಲೂ ಎಂಎಸ್ ಧೋನಿ, ಶಿವಂ ದುಬೆ, ಕಾರ್ತಿಕ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಎಂಬ ನಾಲ್ಕು ಬಲಿಷ್ಠ ಫಿನಿಷರ್‌ಗಳಿದ್ದಾರೆ.
ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡದಲ್ಲೂ ಅಪಾಯಕಾರಿ ಗೇಮ್ ಫಿನಿಷರ್‌ಗಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಅದರಂತೆ ಈ ಆವೃತ್ತಿಯಲ್ಲೂ ಆರ್‌ಸಿಬಿ ತಂಡದಲ್ಲಿ ಟಿಮ್ ಡೇವಿಡ್, ಜಿತೇಶ್ ಶರ್ಮಾ ಮತ್ತು ರೊಮಾರಿಯೊ ಶೆಫರ್ಡ್‌ರಂತಹ ಮೂವರು ಗೇಮ್ ಫಿನಿಶರ್‌ಗಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐಪಿಎಲ್ ಟ್ರೋಫಿ ಎತ್ತಿಹಿಡಿದಿಲ್ಲದಿರಬಹುದು, ಆದರೆ ಈ ತಂಡದಲ್ಲೂ ಮೂವರು ಅತ್ಯುತ್ತಮ ಫಿನಿಷರ್‌ಗಳಿದ್ದಾರೆ. ಡೇವಿಡ್ ಮಿಲ್ಲರ್, ಸಮೀರ್ ರಿಜ್ವಿ ಮತ್ತು ಅಶುತೋಷ್ ಶರ್ಮಾ ಅವರಂತಹ ಮ್ಯಾಚ್-ಫಿನಿಶಿಂಗ್ ಪವರ್‌ಹೌಸ್‌ಗಳು ಅವರಲ್ಲಿವೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ 2026 ರ ಐಪಿಎಲ್ಗಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಎಂಬ ಹೊಸ ಫಿನಿಷರ್ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ ಹೆನ್ರಿಚ್ ಕ್ಲಾಸೆನ್ ಮತ್ತು ಅನಿಕೇತ್ ವರ್ಮಾ ಎಂಬ ಇಬ್ಬರು ಮ್ಯಾಚ್-ಫಿನಿಷರ್‌ಗಳಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡ ಕೂಡ ಮೂವರು ಬಲಿಷ್ಠ ಫಿನಿಶರ್‌ಗಳನ್ನು ಹೊಂದಿದ್ದು, ಇದರಲ್ಲಿ ಜೇಸನ್ ಹೋಲ್ಡರ್, ರಾಹುಲ್ ತೇವಾಟಿಯಾ ಮತ್ತು ಗ್ಲೆನ್ ಫಿಲಿಪ್ಸ್ ಅವರ ಹೆಸರುಗಳು ಸೇರಿವೆ.
ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್, ಆಯುಷ್ ಬಡೋನಿ ಮತ್ತು ಅಬ್ದುಲ್ ಸಮದ್ ಪಂದ್ಯಗಳನ್ನು ಮುಗಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿಯೂ ಮ್ಯಾಚ್ ಫಿನಿಷರ್‌ಗಳ ಕೊರತೆಯಿಲ್ಲ. ತಂಡವು ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಆರಂಭಿಕನನ್ನು ಹೊಂದಿದ್ದರೆ, ಫಿನಿಷರ್‌ಗಳಲ್ಲಿ ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ ಮತ್ತು ಡೊನೊವನ್ ಫೆರೇರಾ ಸೇರಿದ್ದಾರೆ.
ಐಪಿಎಲ್ 2026 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮ್ಯಾಚ್-ಫಿನಿಷರ್ ಆಂಡ್ರೆ ರಸೆಲ್ ಅವರ ಸೇವೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ತಂಡವು ಇನ್ನೂ ರಿಂಕು ಸಿಂಗ್, ರಮಣದೀಪ್ ಸಿಂಗ್ ಮತ್ತು ಪೊವೆಲ್ ಅವರಂತಹ ಆಟಗಾರರನ್ನು ಹೊಂದಿದೆ.
ಪಂಜಾಬ್ ಕಿಂಗ್ಸ್ ತಂಡವು ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಾರ್ಕೊ ಯಾನ್ಸೆನ್ ಸೇರಿದಂತೆ 3 ಅತ್ಯುತ್ತಮ ಫಿನಿಷರ್‌ಗಳನ್ನು ಹೊಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 21: ದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ನಡೆಯಲಿರುವ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit) ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಮತ್ತು ಕಾರ್ಪೊರೇಟ್ ನಾಯಕರನ್ನು ಒಟ್ಟುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಮುಖ್ಯ ಅತಿಥಿಯಾಗಿ ಈ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಈ ಬಾರಿ ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ ಇಂಧನ, ಮೂಲಸೌಕರ್ಯ ಮತ್ತು ಭಾರತದ ಕೈಗಾರಿಕಾ ಭವಿಷ್ಯದ ಕುರಿತು ಆಳವಾದ ಚರ್ಚೆಗೆ ವೇದಿಕೆಯಾಗಲಿದೆ.
“ಭಾರತ ಮತ್ತು ಜಗತ್ತು” ಎಂಬ ವಿಷಯವನ್ನು ಆಧರಿಸಿದ ಈ ಕಾರ್ಯಕ್ರಮವು ರಾಜಕೀಯ ನಾಯಕತ್ವ, ಜಾಗತಿಕ ಚಿಂತಕರು, ಕೈಗಾರಿಕೆ ಮತ್ತು ನಾಗರಿಕ ಸಮಾಜವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ದೇಶದ ಅಭಿವೃದ್ಧಿ ಪಥದ ಬಗ್ಗೆ ಚರ್ಚಿಸಲಿದೆ. ‘ಭಾರತ ಮತ್ತು ಜಗತ್ತು’ ಎಂಬ ವಿಷಯದೊಂದಿಗೆ ವಿಟ್ ಶೃಂಗಸಭೆಯಲ್ಲಿ ಚಿಂತಕರು, ಉದ್ಯಮಿಗಳು ಚರ್ಚೆ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಭಾಷಣ ಮಾಡಿದ ಶೃಂಗಸಭೆಯ ನಂತರ, ಎರಡನೇ ದಿನವು ‘ಭಾರತ ಮತ್ತು ಜಗತ್ತು’ ಎಂಬ ವಿಷಯದ ಸುತ್ತ ನಡೆಯುತ್ತಿದ್ದು, ದೇಶದ ಉನ್ನತ ರಾಜಕೀಯ ನಾಯಕರು ಭಾಷಣ ಮಾಡುತ್ತಾರೆ. ಮಾಜಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ , ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಪಿಯೂಷ್ ಗೋಯಲ್ ಮತ್ತು ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಭಾಷಣಗಳು ಕಾರ್ಯಕ್ರಮದ ಎರಡನೇ ದಿನದ ಪ್ರಮುಖ ಅಂಶಗಳಾಗಿವೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ , ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಷಣ ಮಾಡಲಿದ್ದಾರೆ. ಲೋಕಸಭಾ ಸದಸ್ಯರಾದ ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಶೃಂಗಸಭೆಯ ಎರಡನೇ ದಿನದ ಮುಖ್ಯ ಅಂಶಗಳಲ್ಲಿ ಭಾರತೀಯ ಕ್ರೀಡಾ ದಂತಕಥೆಗಳೊಂದಿಗಿನ ಅನೇಕ ಮಾತುಕತೆಗಳು ಕೂಡ ಸೇರಿವೆ. ಅವರಲ್ಲಿ ಪ್ರಮುಖರು ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ, ಯುವ ಭಾರತೀಯ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ .
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಬಳಿ ಪುನೀತ್ ರಾಜ್ಕುಮಾರ್ (Puneeth Rajkumar) ಅವರ 800 ಕೆಜಿ ತೂಕದ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಶಾಸಕ ಅಶ್ವಥ್ ನಾರಾಯಣ್, ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಅವರ ಪುತ್ರಿ ಧೃತಿ, ಚಲನಚಿತ್ರ ನಿರ್ದೇಶಕರಾದ ಡಾ ರಾಜೇಂದ್ರ ಸಿಂಗ್ ಬಾಬು ಇನ್ನೂ ಹಲವರು ಭಾಗಿ ಆಗಿದ್ದರು. ಕಾರ್ಯಕ್ರದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ…
ಒಡಿಶಾ, ಮಾರ್ಚ್ 21: ಇತ್ತೀಚೆಗೆ ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜು ಜನತಾದಳ (ಬಿಜೆಡಿ) ತನ್ನ 6 ಶಾಸಕರನ್ನು ಅಮಾನತುಗೊಳಿಸಿದೆ. ಶಾಸಕರು ಅಡ್ಡ ಮತದಾನದಲ್ಲಿ ತೊಡಗಿದ್ದಾರೆ ಎಂದು ಪತ್ತೆಯಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಅವರು ನೀಡಿದ ಉತ್ತರಗಳ ಪರಿಶೀಲನೆ ಮತ್ತು ಬಿಜೆಡಿ ಶಿಸ್ತು ಸಮಿತಿಯ ಸಂಪೂರ್ಣ ಪರಿಶೀಲನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗಮನಾರ್ಹ ಅಡ್ಡ ಮತದಾನ ಕಂಡುಬಂದಿತು. 8 ಬಿಜೆಡಿ ಶಾಸಕರು (ಈಗ ಅಮಾನತುಗೊಂಡಿರುವ ಆರು ಮಂದಿ ಮತ್ತು ಈಗಾಗಲೇ ಅಮಾನತುಗೊಂಡಿರುವ ಇಬ್ಬರು ಸದಸ್ಯರು ಸೇರಿದಂತೆ) ಬಿಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿದ್ದ ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ದತ್ತೇಶ್ವರ ಹೋಟಾ ಬದಲಿಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಮತ ಚಲಾಯಿಸಿದ್ದರು. ಇದು ದಿಲೀಪ್ ರೇ ಅವರ ಗೆಲುವಿಗೆ ಕಾರಣವಾಯಿತು.
ಇದರ ಪರಿಣಾಮವಾಗಿ ಬಿಜೆಪಿ 2 ಸ್ಥಾನಗಳನ್ನು, ಬಿಜೆಡಿ 1 ಸ್ಥಾನ ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ 4ನೇ ಸ್ಥಾನಗಳನ್ನು ಪಡೆದರು. ಬಿಜೆಡಿ ಈ ಹಿಂದೆ ಮಾರ್ಚ್ 17ರಂದು 6 ಶಾಸಕರಿಗೆ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದಕ್ಕಾಗಿ ವಿವರಣೆಗಳನ್ನು ಕೋರಿ ಶೋಕಾಸ್ ನೋಟಿಸ್‌ಗಳನ್ನು ನೀಡಿತ್ತು. ಇದೀಗ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಶಾಸಕರು ಬಿಜೆಡಿ ಪಕ್ಷದ ಮೂಲ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವು ಪಕ್ಷದ ವಿಪ್ ಮತ್ತು ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ರೀಲೀಲಾ (Sreeleela), ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ತೆಲುಗಿನಲ್ಲಂತೂ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸಹ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಗಲೇ ಮೂರು ಸಿನಿಮಾಕ್ಕೆ ಎಸ್ ಹೇಳಿದ್ದು, ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸ್ಟಾರ್ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಯಶಸ್ವಿ ನಟಿ ಆಗಿರುವ ಶ್ರೀಲೀಲಾ, ಕೆಲ ವರ್ಷಗಳ ಹಿಂದೆ ನಟನೆಯನ್ನು ತ್ಯಜಿಸಿ, ಚಿತ್ರರಂಗದಿಂದಲೇ ದೂರಾಗುವ ನಿರ್ಧಾರ ಮಾಡಿದ್ದರಂತೆ.
ಶ್ರೀಲೀಲಾ, ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ತೆಲುಗಿನ ಖ್ಯಾತ ನಿರೂಪಕಿ ಸುಮಾ ಕನಕಾಲ ಅವರೊಟ್ಟಿಗೆ ತಮಾಷೆಯ ಸಂದರ್ಶನದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದೇ ಸಂದರ್ಶನದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಮತ್ತೊಬ್ಬ ನಾಯಕ ನಟಿ ರಾಶಿ ಖನ್ನಾ ಸಹ ಭಾಗಿ ಆಗಿದ್ದರು.
ಕಾರ್ಯಕ್ರಮದಲ್ಲಿ ಟ್ರೋಲ್ಗಳ ಬಗ್ಗೆ ನಿರೂಪಕಿ ಸುಮಾ ಕನಕಾಲ ಅವರು ಶ್ರೀಲೀಲಾಗೆ ಪ್ರಶ್ನೆ ಕೇಳಿದರು. ಅದಕ್ಕೆ ಶ್ರೀಲೀಲಾ, ‘”ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಆರಂಭಿಸಿದ್ದಾಗ ಟ್ರೋಲ್ಗಳ ಬಗ್ಗೆ ಬಹಳ ಭಯ ಆಗುತ್ತಿತ್ತು, ಟ್ರೋಲ್ಗಳು ಬಹಳ ಕೆಟ್ಟದು ಅನಿಸುತ್ತಿದ್ದವು. ಹಲವು ಬಾರಿ ಅತ್ತಿದ್ದು ಸಹ ಇದೆ. ಟ್ರೋಲ್ಗಳು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತಿದ್ದವು. ಎಷ್ಟರ ಮಟ್ಟಿಗೆಂದರೆ ನಾನು ಚಿತ್ರರಂಗವನ್ನೇ ಬಿಟ್ಟುಬಿಡಲು ತೀರ್ಮಾನಿಸಿದ್ದೆ. ‘ನನಗೆ ನಟಿಸಲು ಸಾಧ್ಯವಾಗುತ್ತದೆ ಎಂದು ಅನಿಸುತ್ತಿಲ್ಲ ಎಂದು ನಾನು ನನ್ನ ತಾಯಿಗೆ ಹೇಳಿದೆ. ನಾನು ಶಾಲೆ ಅಥವಾ ಕಾಲೇಜಿಗೆ ಹಿಂತಿರುಗಿಬಿಡುತ್ತೇನೆ’ ಎಂದಿದ್ದೆ. ನಾನು ತುಂಬಾ ಸೂಕ್ಷ್ಮವಾಗಿದ್ದೆ, ಆದರೆ ಈಗ ಹಾಗಿಲ್ಲ, ಟ್ರೋಲ್ಗಳು, ಅವರ ನಿಂದನೆ, ವ್ಯಂಗ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ ನಟಿ.
ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿ, ‘ಇತ್ತೀಚೆಗೆ ಜನ ತುಸು ಬುದ್ಧಿವಂತರು ಸಂವೇದಶೀಲರು ಆಗಿದ್ದಾರೆ ಅನಿಸುತ್ತದೆ. ಮೊದಲು ಬಹಳ ಒರಟಾಗಿ ಕಮೆಂಟ್ ಮಾಡುತ್ತಿದ್ದರು. ಆದರೆ ಈಗ ನೆಗೆಟಿವಿ ಇದೆಯೆಂದರೆ ತುಸು ಯೋಚಿಸುತ್ತಾರೆ, ಸರಿಯಾ? ತಪ್ಪಾ? ಎಂದು ಅವಲೋಕಿಸುತ್ತಾರೆ’ ಎಂದಿದ್ದಾರೆ ಶ್ರೀಲೀಲಾ. ಅದೇ ಸಂದರ್ಶನದಲ್ಲಿ ಇದ್ದ ರಾಶಿ ಖನ್ನಾ, ಟ್ರೋಲ್ಗಳ ಬಗ್ಗೆ ಮಾತನಾಡಿ, ‘ನನಗೆ ಟ್ರೋಲ್ಗಳು ಮಾನಸಿಕವಾಗಿ ಹಿಂಸೆ ನೀಡುತ್ತವೆ. ಏಕೆಂದರೆ ನಿಜ ಗೊತ್ತಿಲ್ಲದೇ ಅವರು ನಿರ್ಧಾರಗಳನ್ನು ಪ್ರಕಟಿಸುತ್ತಾರೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನನಗೆ ಅದರ ಬಗ್ಗೆ ಈಗಲೂ ಬೇಸರ ಇದೆ’ ಎಂದಿದ್ದಾರೆ.
ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ‘ಆಶಿಖಿ 3’ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನೂ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ನಟ ಧನುಶ್ ಜೊತೆಗೆ ಒಂದು ಹಾಗೂ ಶಿವಕಾರ್ತಿಕೇಯನ್ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ತೆಲುಗಿನಲ್ಲಿ ರವಿತೇಜ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಮತ್ತೊಂದು ಹೊಸ ಸಿನಿಮಾವನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.
ಕಾರವಾರ, ಮಾರ್ಚ್ 21: ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್ಸ್ ಮತ್ತು ಜಲಸಾಹಸ ಕ್ರಿಡಾ ಕಂಪನಿಗಳ ನಡುವೆ ದರ ನಗದಿ ವಿಚಾರವಾಗಿ ಭಾರೀ ಜಟಾಪಟಿ ನಡೆದಿದ್ದು, ಪ್ರವಾಸಿಗರು (Tourists) ಜಾಸ್ತಿ ಬಂದರೂ ನಿರೀಕ್ಷಿಸಿದಷ್ಟು ಲಾಭ ಸಿಗದೆ ಎಜೆಂಟರು ಒದ್ದಾಡುತ್ತಿದ್ದಾರೆ.
ಸದ್ಯ ಒಂದು ಕಡೆ ಸಾಲು ಸಾಲು ಹಬ್ಬ ಹಿನ್ನೆಲೆ ರಜೆ. ಮತ್ತೊಂದು ಕಡೆ ಮಕ್ಕಳ ಪರೀಕ್ಷೆ ಮುಗಿದಿದ್ದು, ಜಾಲಿ ಮಾಡುವ ಸಂದರ್ಭ. ಹೀಗಾಗಿ ಪ್ರವಾಸಿಗರು ವಾಟರ್ ಸ್ಪೋರ್ಟ್ಸ್ಗಾಗಿ ಉತ್ತರ ಕನ್ನಡ ಜಿಲ್ಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದೆ ಸಂದರ್ಭದಲ್ಲಿ ಜಲಸಾಹಸ ಕ್ರೀಡಾ ಕಂಪನಿಗಳು ಮತ್ತು ಟ್ರಾವೆಲ್ ಏಜೆಂಟ್ಸ್ಗಳ ನಡುವಿನ ಜಟಾಪಟಿ ಕೂಡ ಉಂಟಾಗಿದೆ. ಪರಿಣಾಮ ನಿರೀಕ್ಷಿಸಿದ ಪ್ರಮಾಣದಲ್ಲಿ ಹಣ ಮಾಡುವುದಕ್ಕೆ ಆಗದ ಪರಿಸ್ಥಿತಿ ಉಂಟಾಗಿದೆ.
ಜಲಸಾಹಸ ನಡೆಸುವವ ನಡುವಿನ ವ್ಯಾಪಾರವನ್ನು ಏಜೆಂಟ್ಗಳು ಬಂಡಾವಳ ಮಾಡಿಕೊಂಡಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಜಲಸಾಹಸ ಕ್ರೀಡೆ ಮಾಡಿಸಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಿಕುತ್ತಿದ್ದಾರೆ. ಆದರೆ ಈಗ ಜಲಸಾಹಸ ಕಂಪನಿಗಳು ಒಂದಾಗಿ ಸಿಂಗಲ್ ವಿಂಡೊ ಸಿಸ್ಟಮ್ ಜಾರಿಗೆ ತಂದಿದ್ದು, ಏಜೆಂಟ್ಗಳು ಪಡೆಯುತ್ತಿದ್ದ ದೊಡ್ಡ ಮಟ್ಟದ ಕಮಿಷನ್ಗೆ ಬ್ರೇಕ್ ಬಿದ್ದಂತಾಗಿದೆ.
ವಿಷಯ ಏನೆಂದರೆ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಅತ್ಯಾಕರ್ಷಣೀಯ ನಿಸರ್ಗತಾಣದಲ್ಲಿ ಹರಿಯುವ ಕಾಳಿ ನದಿಯಲ್ಲಿ ಸುಮಾರು 5 ಕ್ಕೂ ಹೆಚ್ಚು ಬಗೆಯ ಜಲಸಾಹಸ ಕ್ರೀಡೆಗಳನ್ನ ನಡೆಸುತ್ತಾರೆ. ಇದಕ್ಕಾಗಿ ರಾಜ್ಯ ಹೊರರಾಜ್ಯಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚೆಗೆ ಜಲಸಾಹಸ ಕ್ರೀಡೆ ನಡೆಸುವ ಜೆಟ್ಟಿಗಳು ಹೆಚ್ಚಾಗಿದ್ದಾರೆ.
ಈ ಟ್ರಾವೆಲ್ ಏಜೆಂಟ್ಸ್ ಮಾತ್ರ ಪ್ರವಾಸಿಗರಿಂದ ತಲಾ 1500 ರೂ ಪಡೆದು ದೊಡ್ಡ ಮಟ್ಟದ ಲಾಭ ಗಳಿಸುತ್ತಿದ್ದರು. ಇತ್ತೀಚೆಗೆ ಜೆಟ್ಟಿ ಮಾಲಿಕರಿಗೆ ಆಗುತ್ತಿರುವ ನಷ್ಟವನ್ನ ಮನಗಂಡು ತಮ್ಮಲ್ಲಿನ ವೈಮನಸ್ಸು ಬದಿಗಿಟ್ಟು, ಕಳೆದ ಒಂದು ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತಂದಿದ್ದಾರೆ. ಯಾರೇ ಪ್ರವಾಸಿಗರು ಬಂದರು ಒಂದೇ ಕಡೆ ಬುಕ್ಕಿಂಗ ಮಾಡಬೇಕಾಗಿದ್ದು, ತಲಾ 750 ರೂ ದರ ನಿಗದಿ ಮಾಡಿದ್ದಾರೆ. ಇದು ಏಜೆಂಟ್ಗಳಿಗೆ ನುಂಗಲಾರದ ತುತ್ತಾಗಿದ್ದು, ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಇನ್ನು ತಮಗಾಗುತ್ತಿರುವ ನಷ್ಟವನ್ನ ಸಹಿಸಲಾರದ ಏಜೆಂಟ್ಗಳು ದೊಡ್ಡ ಮಟ್ಟದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದ್ಯ ಈ ವಿಚಾರ ಜೋಯಿಡಾ ತಹಶೀಲ್ದಾರ್ ಅಂಗಳಕ್ಕೆ ಬಂದು ತಲುಪಿದೆ. ನಿನ್ನೆ ಈ ಬಗ್ಗೆ ಮೂರು ಗಂಟೆಗಳ ಕಾಲ ಸಭೆ ಮಾಡಿದರು ಸಹಿತ, ಇದುವರೆಗೂ ಇಬ್ಬರ ನಡುವಿನ ಜಟಾಪಟಿ ಅಂತ್ಯ ಆಗಿಲ್ಲ.