Headlines

nagaraj11081993

ಬೆಂಗಳೂರಿನ ನಾಗರಿಕರಿಗೆ ಜಲಮಂಡಳಿಯಿಂದ ಗುಡ್​ನ್ಯೂಸ್​; ಬಿಲ್ ಬಾಕಿ ಇರುವ ಗ್ರಾಹಕರ ಬಡ್ಡಿ ಮನ್ನಾ!

ಬೆಂಗಳೂರು, ಮಾರ್ಚ್​ 21: ನಾಗರಿಕರಿಗೆ ಜಲಮಂಡಳಿಯಿಂದ ಸಿಹಿಸುದ್ದಿ ಲಭಿಸಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಬಾಕಿ ಇರುವ ಬಿಲ್ ಪಾವತಿಸಿದರೆ ಬಡ್ಡಿ ಮನ್ನಾ ಮಾಧ್ಯಮ ಪ್ರಕಟಣೆ ಮೂಲಕ ಈ ಮಾಹಿತಿ ನೀಡಿರುವ ಅವರು, ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಗ್ರಾಹಕರು ತಮ್ಮ ಬಾಕಿ…

Read More

‘ಇಂತಹ ಸಿನಿಮಾ ಮಾಡಲು ಧೈರ್ಯ ಬೇಕು’; ‘ಧುರಂಧರ್ 2’ ಹಾಡಿ ಹೊಗಳಿದ ರಾಜಮೌಳಿ

ಖ್ಯಾತ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ದೊಡ್ಡ ನಿರ್ದೇಶಕರಾದರೂ ಯಾವುದೇ ಸಿನಿಮಾ ರಿಲೀಸ್ ಆದರೂ ಆ ಚಿತ್ರವನ್ನು ನೋಡಿ ವಿಮರ್ಶೆ ತಿಳಿಸುತ್ತಾರೆ. ಈಗ ‘ಧುರಂಧರ್ 2’ ಸಿನಿಮಾವನ್ನು ಅವರು ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಲವು ವಿಷಯಗಳು ಇಷ್ಟ ಆಗಿವೆ. ಈ ಬಗ್ಗೆ ಅವರು ಟ್ವಿಟರ್ ಅಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ನಟನೆ ಅವರಿಗೆ ಇಷ್ಟ ಆಗಿದೆ. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಅನೇಕರು…

Read More

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್‌ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!

ದೆಹಲಿ, ಮಾ.21: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ವಂಚನೆಗೆ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು (Device IDs) ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಲಾಗಿದೆ. ವಂಚನೆ ಎಸಗುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣ, ಅವರು ಬಳಸುವ ಮೊಬೈಲ್‌ನ ಡಿವೈಸ್ ಐಡಿಯನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವುದಿಲ್ಲ. ಐಟಿ ನಿಯಮಗಳ ಪ್ರಕಾರ, ಡಿಲೀಟ್…

Read More

Kendriya Vidyalaya Admission 2026-27: ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ; ಪೋಷಕರು ಗಮನಿಸಬೇಕಾದ ಪ್ರಮುಖ ಅಂಶ ಇಲ್ಲಿವೆ

2026-27ನೇ ಶೈಕ್ಷಣಿಕ ವರ್ಷಕ್ಕೆ ದೇಶಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ (KV) ಒಂದನೇ ತರಗತಿ ಮತ್ತು ನರ್ಸರಿ ಪ್ರವೇಶಕ್ಕಾಗಿ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಈ ಬಾರಿ ಪೋಷಕರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 20ರ ಬೆಳಿಗ್ಗೆ 10 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 2 ರವರೆಗೆ ಕಾಲಾವಕಾಶವಿದ್ದು, ಆಸಕ್ತರು ನಿಗದಿತ ಸಮಯದೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ವಯೋಮಿತಿ ಮತ್ತು ಆದ್ಯತೆಗಳು: ಒಂದನೇ ತರಗತಿಗೆ ಸೇರಬಯಸುವ ಮಕ್ಕಳಿಗೆ ವಯೋಮಿತಿಯ ನಿಯಮ ಬಹಳ ಮುಖ್ಯವಾಗಿದೆ. ಮಾರ್ಚ್ 31,…

Read More

‘ಸಿನಿಮಾ ಸೋತಾಗ ಆ ಮಾತನ್ನು ಯಾರಿಗೂ ಹೇಳೇಡಿ’; ರವಿಚಂದ್ರನ್ ಕೋರಿಕೆ

ನಟ ರವಿಚಂದ್ರನ್ ಅವರು ಚಿತ್ರರಂಗದಲ್ಲಿ ಅನೇಕ ಸೋಲು ಹಾಗೂ ಗೆಲುವನ್ನು ಕಂಡಿದ್ದಾರೆ. ಅವರು ಸೋಲಿನ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಸೋತಾಗ ಯಾರಿಗೂ ಬೇಸರ ಆಗೋದಿಲ್ಲ. ಸೋಲು ಕಂಡಾಗ ಸುತ್ತಲೂ ಇರುವ ಜನರು ಆಡುವ ಮಾತು ಬೇಸರ ಮೂಡಿಸುತ್ತದೆ. ಆ ರೀತಿ ಆಗಬಾರದು’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ. ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಹೆಸರಿನ ಸಿನಿಮಾ ಮಾಡಿದ್ದಾರೆ. ಎಐ ನಿರ್ಮಿತ ಸಿನಿಮಾ ಇದಾಗಿದೆ. ಇದರಲ್ಲಿ 30-35 ಹಾಡುಗಳು ಇರಲಿವೆ ಎಂದು ಹೇಳಲಾಗಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

RCB vs SRH: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜು, ಏನೇನು ಮುನ್ನೆಚ್ಚೆರಿಕೆ ಕೈಗೊಂಡಿದ್ದಾರೆ ನೋಡಿ!

ಬೆಂಗಳೂರು, ಮಾರ್ಚ್ 21: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹಬ್ಬಕ್ಕೆ ಬೆಂಗಳೂರಿನ ಐತಿಹಾಸಿಕ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಮಾರ್ಚ್ 28ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯವು ಚಿನ್ನಸ್ವಾಮಿಯಲ್ಲೇ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಹೆಚ್) ನಡುವೆ ಮೊದಲ ಪಂದ್ಯ ನಡೆಯಲಿದೆ. ಹಿಂದೆ ಆರ್​ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದ ಘಟನೆಗಳ ನಂತರ, ಫ್ರಾಂಚೈಸಿಯು ಪ್ರೇಕ್ಷಕರ ಸುರಕ್ಷತೆಗಾಗಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕ್ರೀಡಾಂಗಣವು 35,000 ಜನರ…

Read More

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ಬಾಲಿವುಡ್​ ಸಿನಿಮಾ ‘ಧುರಂಧರ್ 2’ (Dhurandhar 2) ಸೂಪರ್ ಹಿಟ್ ಆಗಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ವೃತ್ತಿ ಜೀವನದ ಅತ್ಯಂತ ದೊಡ್ಡ ಯಶಸ್ಸು ಇದು. ಆದಾಗ್ಯೂ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್…

Read More

ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ; ಸಿಲಿಂಡರ್ ಇಲ್ಲದೆ ರೋಗಿಗಳಿಗೂ ಪ್ರಾಬ್ಲಮ್!

ಗದಗ, ಮಾರ್ಚ್​ 21: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಾದ್ಯಂತ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಅದರ ಬಿಸಿ ಇದೀಗ ಗದಗ (Gadag) ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೂ ತಟ್ಟಿದೆ. ಗದಗದ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ಎದುರಾಗಿದ್ದು, ಚಿಕಿತ್ಸೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ತಾತ್ಕಾಲಿಕವಾಗಿ 5ಕೆಜಿ ಸಿಲಿಂಡರ್ ಬಳಕೆ ಪಂಚಕರ್ಮ ಚಿಕಿತ್ಸೆಗೆ ಗ್ಯಾಸ್ ಸಿಲಿಂಡರ್ ಅತ್ಯಾವಶ್ಯಕವಾಗಿದ್ದು, ಮಸಾಜ್ ಎಣ್ಣೆ ಬಿಸಿ ಮಾಡಲು ಹಾಗೂ ಸ್ಟೀಮ್ ಚಿಕಿತ್ಸೆ ನೀಡಲು ಗ್ಯಾಸ್ ಅವಶ್ಯಕವಾಗಿದೆ. ಆದರೆ…

Read More

ಆರ್​ಸಿಬಿ ಟೀಮ್​ಮೇಟ್ಸ್​ಗೆ ವಿರಾಟ್ ಬಿಗ್ ವಾರ್ನಿಂಗ್: ಈ ಬಾರಿ ಸುಲಭವಿಲ್ಲ ಎಂದ ಕಿಂಗ್ ಕೊಹ್ಲಿ!

ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ 2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಸೀಸನ್ ಇನ್ನಷ್ಟು ಕಠಿಣ: ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ 2-3 ಸೀಸನ್‌ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ…

Read More

Vastu Tips: ಮನೆಯೊಳಗೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ಹಿಂದಿನಿಂದಲೂ ವಾಸ್ತು ಶಾಸ್ತ್ರಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಮನೆಯ ದಿಕ್ಕು, ವಸ್ತುಗಳ ಜೋಡಣೆ ಮಾತ್ರವಲ್ಲದೆ, ನಾವು ಬಟ್ಟೆ ಒಣಗಿಸುವ ರೀತಿ ನೀತಿಗಳೂ ಕೂಡ ನಮ್ಮ ಅದೃಷ್ಟ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಾರೆ ತಜ್ಞರು. ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ವಾಸ್ತು ಶಾಸ್ತ್ರ ಮತ್ತು ನಕಾರಾತ್ಮಕ ಶಕ್ತಿ: ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ಶುಭವಲ್ಲ. ಒದ್ದೆ ಬಟ್ಟೆಗಳು ಮನೆಯಲ್ಲಿ ತೇವಾಂಶವನ್ನು ಹೆಚ್ಚಿಸುತ್ತವೆ….

Read More