ರೀಲ್ಸ್ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಶಿವಪುರ, ಮಾರ್ಚ್ 20: ಮಧ್ಯಪ್ರದೇಶದ ಶಿವಪುರಿ ನಗರದ ಬೀದಿಗಳಲ್ಲಿ ಮೊಸಳೆಗಳು ಓಡಾಡುವುದು ಹೊಸದೇನಲ್ಲ. ಆದರೆ ಯಾರೂ ಅವುಗಳ ತಂಟೆಗೆ ಹೋಗುತ್ತಿರಲಿಲ್ಲ. ಇದೀಗ ಈ ಊರಿನ ಯುವಕನೊಬ್ಬ ರಾತ್ರಿಯ ಕತ್ತಲೆಯಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಮೊಸಳೆಯ (Crocodile Video) ಬಾಲವನ್ನು ಹಿಡಿದು ತಮಾಷೆ ಮಾಡುತ್ತಾ ರೀಲ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆಯು ಆ ಯುವಕನ ವೈರಲ್ ವೀಡಿಯೊವನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಿದೆ. ಶಿವಪುರಿಯ ಚಿಂತಹಾರ್ ದೇವಾಲಯದ ಬಳಿ ಇರುವ ಭುಜಾರಿಯಾ ಕೊಳದಿಂದ ಬೃಹತ್ ಮೊಸಳೆ ಹೊರಬಂದಿತ್ತು. ಮೊಸಳೆ…