ಟ್ರಂಪ್ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ
ಕೊಲಂಬೊ, ಮಾರ್ಚ್ 20: ಶ್ರೀಲಂಕಾ ಮಾರ್ಚ್ ಆರಂಭದಲ್ಲಿ ದ್ವೀಪ ರಾಷ್ಟ್ರದ ಮಟ್ಟಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ (United States) ತನ್ನ 2 ಯುದ್ಧ ವಿಮಾನಗಳನ್ನು ಇಳಿಸಲು ಅನುಮತಿ ನಿರಾಕರಿಸಿದೆ. ಈ ಬಗ್ಗೆ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶ್ರೀಲಂಕಾದ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಜಿಬೌಟಿಯಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಯುದ್ಧವಿಮಾನಗಳು ಮಾರ್ಚ್ನಲ್ಲಿ 2 ಬಾರಿ ಇಳಿಯಲು ಅನುಮತಿ ಕೋರಿದ್ದವು. ಆದರೆ ಎರಡೂ ಮನವಿಗಳನ್ನು ತಿರಸ್ಕರಿಸಲಾಯಿತು. “ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ನಾವು…