Headlines

nagaraj11081993

ಅಪಾರ್ಟ್​​ಮೆಂಟ್​​ನ 13ನೇ ಮಹಡಿಯಿಂದ ಹಾರಿದ ವ್ಯಕ್ತಿ, ಫ್ಲಾಟ್​ ಒಳಗೆ ತಾಯಿಯ ಮೃತದೇಹ ಪತ್ತೆ

ಗಾಜಿಯಾಬಾದ್, ಮಾರ್ಚ್​ 20: ಅಪಾರ್ಟ್​ಮೆಂಟ್​ನ 13ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್​​ನಲ್ಲಿ ನಡೆದಿದೆ. ಫ್ಲಾಟ್ ಒಳಗೆ ತಾಯಿಯ ಮೃತದೇಹ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರಿಗೆ ಕರೆ ಮಾಡಿ ಅವರು ಫ್ಲಾಟ್‌ಗೆ ಪ್ರವೇಶಿಸಿದಾಗ, ಹಾಸಿಗೆಯ ಮೇಲೆ ಬಿದ್ದಿದ್ದ ಅವರ ತಾಯಿಯ ಶವ ಕಂಡುಬಂದಿದೆ. ಮಹಾಗುಣಪುರಂ ಸೊಸೈಟಿಯ ವಸತಿ ಸಂಕೀರ್ಣದಿಂದ 13 ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಜಿಗಿದ ಬಗ್ಗೆ ಕರೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಅವರು ಹತ್ತಿರದ ಖಾಸಗಿ ಆಸ್ಪತ್ರೆಗೆ…

Read More

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದ ಬಿಜೆಪಿ! ಜಾತಿ ಲೆಕ್ಕಾಚಾರ ಹೇಗಿದೆ ಗೊತ್ತೇ?

ದಾವಣಗೆರೆ, ಮಾರ್ಚ್ 20: ದಾವಣಗೆರೆ ದಕ್ಷಿಣದ ಉಪಚುನಾವಣೆ (Davanagere By-Election) ಕಣ ಈಗ ಜಾತಿ ರಾಜಕಾರಣದಿಂದ ರಂಗೇರುವ ಸುಳಿವು ದೊರೆತಿದೆ. ಕಾಂಗ್ರೆಸ್‌ನಲ್ಲಿ (Congress) ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ನಡುವೆ ಟಿಕೆಟ್ ಫೈಟ್ ಜೋರಾಗಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಬಿಜೆಪಿ (BJP), ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದೆ. ಅಹಿಂದ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕಲು ತಂತ್ರ ರೂಪಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರ ಎಂದರೆ ಶಾಮನೂರು…

Read More

‘ಧುರಂಧರ್ 2’ ಸಿನಿಮಾ ಒಟಿಟಿ ರಿಲೀಸ್ ಯಾವಾಗ? ಇಲ್ಲಿದೆ ವಿವರ

‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 2025ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಂತರ, ಅದನ್ನು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಯಿತು. ಈಗ ಈ ಚಿತ್ರದ ಮುಂದುವರಿದ ಭಾಗವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವುದಿಲ್ಲ. ಬದಲಾಗಿ ಮತ್ತೊಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಮುಂದುವರಿದ ಭಾಗದ ಡಿಜಿಟಲ್ ಹಕ್ಕುಗಳು 150 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ಇದನ್ನು, ಇದುವರೆಗಿನ ಅತಿದೊಡ್ಡ ಒಪ್ಪಂದವೆಂದು ಪರಿಗಣಿಸಲಾಗುತ್ತಿದೆ. ‘ಧುರಂಧರ್ 2’ ಚಿತ್ರದ ಒಟಿಟಿ ಬಿಡುಗಡೆಗೆ ಇನ್ನೂ ಅಧಿಕೃತ ದಿನಾಂಕವಿಲ್ಲ . ಆದರೆ…

Read More

ಟೀಕಿಸಿ, ಟ್ರೋಲ್ ಮಾಡಿದವರಿಗೆ ಅವಾರ್ಡ್​ ಮೂಲಕ ಉತ್ತರಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಅವರು ಅನೇಕ ವಿಷಯಗಳಿಗೆ ಟ್ರೋಲ್ ಆದ ಉದಾಹರಣೆ ಇದೆ. ಈಗ ಅವರು ಟ್ರೋಲ್ ಮಾಡುವ ಎಲ್ಲರಿಗೂ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ. ತೆಲಂಗಾಣ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವಾರ್ಡ್ ಸ್ವೀಕರಿಸಿದರು. ಅಂದರೆ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದು, ಅದನ್ನು ಸಿಎಂ ಕೈಯಿಂದ ಪಡೆದರು. ಈ ಸಂದರ್ಭದಲ್ಲಿ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಅವರು ಉತ್ತರಿಸಿದ್ದು ಹಿಗೆ. ‘ಹಿಂದೆ ನಾನು ಟ್ರೋಲ್‌ಗಳನ್ನು ಎದುರಿಸಿದ್ದೆ. ಆದರೆ ಈಗ ರಾಜ್ಯ…

Read More

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ

ಬಂಟ್ವಾಳ, ಮಾ. 20: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನುಷ್ಯತ್ವ ಮತ್ತು ಧಾರ್ಮಿಕ ಸಹಬಾಳ್ವೆಯ ಸುಂದರ ದೃಶ್ಯವೊಂದು ಅನಾವರಣಗೊಂಡಿದೆ. ಅರಸರ ಕಾಲದ ಪುರಾತನ ಪರಂಪರೆಯಂತೆ, ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ದೈವದ ಭಂಡಾರವು ಮಸೀದಿಯ ಮೆಟ್ಟಿಲೇರಿ ಸೀಯಾಳ (ಎಳನೀರು) ಸ್ವೀಕರಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದೆ. ಪ್ರತಿ ವರ್ಷವೂ ಈ ಆಚರಣೆಗಳು ಇಲ್ಲಿ ನಡೆಯುತ್ತ ಬಂದಿದೆ. ಮುಸ್ಲಿಂ ಧರ್ಮದ ಜನ ದೈವಗಳಿಗೆ ಈ ಮೂಲಕ ವಿಶೇಷ ಗೌರವವನ್ನು ನೀಡುತ್ತಾರೆ. ಸಜೀಪನಡು ಮೂಲಸ್ಥಾನದಿಂದ ಮಂಜದಗೋಳಿ ಕ್ಷೇತ್ರಕ್ಕೆ…

Read More

ಗ್ಯಾಸ್ ಸಿಗದೆ ಸಂಕಷ್ಟದಲ್ಲಿ ಸ್ಟೀಲ್ ವೆಲ್ಡಿಂಗ್, ಕಟ್ಟಿಂಗ್ ಉದ್ಯಮ: ಕೆಆರ್ ಮಾರುಕಟ್ಟೆಯಲ್ಲಿ ಮುಚ್ಚಿಕೊಳ್ತಿವೆ ಒಂದೊಂದೇ ಅಂಗಡಿಗಳು

ಬೆಂಗಳೂರು, ಮಾರ್ಚ್ 20: ಬೆಂಗಳೂರಿನ (Bangalore) ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ (LPG Cylinder) ಅಭಾವ ಕೈ ಮೀರುವ ಹಂತಕ್ಕೆ ಬರುತ್ತಿದೆ. ಉದ್ಯಮಗಳು ಹಳ್ಳಹಿಡಿಯುತ್ತಿವೆ. ಹೋಟೆಲ್, ಪಿಜಿ ಸೇರಿದಂತೆ ಅನೇಕ ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದೆ. ಇದೀಗ ಸ್ಟೀಲ್ ಇಂಡಸ್ಟ್ರೀಸ್​ಗೂ ಏಟು ಬಿದ್ದಿದ್ದು, ಕೆಆರ್ ಮಾರುಕಟ್ಟೆಯ ಸ್ಟೀಲ್ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳು ಒಂದೊಂದೇ ಆಗಿ ಮುಚ್ಚಿಕೊಳ್ಳುತ್ತಿವೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೆ ನಗರದ ಉದ್ಯಮಗಳು ಅಯೋಮಯಗೊಂಡಿವೆ. ಹೋಟೆಲ್ ಉದ್ಯಮಗಳಿಗೆ, ಗ್ಯಾಸ್ ಇಲ್ಲದಿದ್ದರೂ ಕನಿಷ್ಠ ಎಲೆಕ್ಟ್ರಿಕ್ ಅಥವಾ…

Read More

‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

‘ಧುರಂಧರ್ 2’ ಸಿನಿಮಾ (Dhurandhar 2) ಎಷ್ಟು ದೊಡ್ಡ ಸಿನಿಮಾ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದ ಎದುರು ರಿಲೀಸ್ ಆಗಬೇಕು ಎಂದರೆ ಚಿತ್ರದ ಬಗ್ಗೆ ಅಷ್ಟು ಕಾನ್ಫಿಡೆನ್ಸ್ ಇರಬೇಕು. ಡಾರ್ಲಿಂಗ್ ಕೃಷ್ಣ ಅವರಿಗೆ ‘ಲವ್ ಮಾಕ್ಟೇಲ್ 3’ ಚಿತ್ರದ ಬಗ್ಗೆ ಆ ವಿಶ್ವಾಸ ಇದೆ. ಈ ಕಾರಣದಿಂದಲೇ ‘ಧುರಂಧರ್ 2’ ಸಿನಿಮಾ ಎದುರು ‘ಲವ್ ಮಾಕ್ಟೇಲ್ 3’ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ‘ಲವ್ ಮಾಕ್ಟೇಲ್’, ‘ಲವ್…

Read More

ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಹಳ್ಳಿ ಜನ

ಲಾತೇಹಾರ್, ಮಾರ್ಚ್​ 20: ವ್ಯಕ್ತಿಯೊಬ್ಬರಿಗೆ ಹಳ್ಳಿಯ ಜನರು ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಜಾರ್ಖಂಡ್​​ನ ಲಾತೇಹಾರ್​​ ಜಿಲ್ಲೆಯಲ್ಲಿ ನಡೆದಿದೆ. ವೃದ್ಧರೊಬ್ಬರು ಮಾಟಮಂತ್ರ(Witchcraft) ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಮೂತ್ರ ಕುಡಿಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತಕ್ಕೂ ಹಾಗೂ ಅವರಿಗೂ ಸಂಬಂಧ ಕಲ್ಪಿಸಿ ಈ ಕೃತ್ಯವೆಸಗಿದ್ದಾರೆ. ಮಗ ಬ್ರಜೇಶ್ ಮುಂಡಾ ಅವರ ಪ್ರಕಾರ, ಈ ಘಟನೆ ಮಂಗಳವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ವೀರೇಂದ್ರ ಸಿಂಗ್ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅವರು ಮಾಟಮಂತ್ರದ ಮೂಲಕ…

Read More

ತುಮಕೂರು: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು..!

ತುಮಕೂರು, ಮಾ.20: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯೊಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಯಳನಾಡು ಗ್ರಾಮದಲ್ಲಿ ನಿನ್ನೆ ಸಂಜೆ ಜೂಜಾಟ ನಡೆಯುತ್ತಿದೆ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಹುಳಿಯಾರು ಪೊಲೀಸರು, ಸಿದ್ಧರಾಮೇಶ್ವರ ದೇವಸ್ಥಾನದ ಗುಡಿಗೌಡರಾದ ಕಾಂತರಾಜು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.ಪೊಲೀಸರು ವಿಚಾರಣೆ…

Read More

ದೇವರ ವಿಗ್ರಹ ಅಥವಾ ಫೋಟೋ ಶುಚಿಗೊಳಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಪ್ರತಿಯೊಂದು ಮನೆಯ ಪೂಜಾ ಕೊಠಡಿಯು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಆದರೆ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಯಾವಾಗ ಬೇಕೆಂದರೆ ಆಗ ಸ್ವಚ್ಛಗೊಳಿಸಬಾರದು ಎಂದು ಶಾಸ್ತ್ರಗಳು ಮತ್ತು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸುವುದು ಶುಭಕರ. ಆದರೆ ಈ ಕಾರ್ಯವನ್ನು ಮಂಗಳವಾರ ಮತ್ತು ಶುಕ್ರವಾರದಂದು ಮಾಡಬಾರದು. ಅದರಂತೆ ಅಮಾವಾಸ್ಯೆ, ಏಕಾದಶಿ ಮತ್ತು ದ್ವಾದಶಿ ತಿಥಿಗಳಂದು ಕೂಡ ವಿಗ್ರಹಗಳನ್ನು ಸ್ಥಳಾಂತರಿಸುವುದು ಅಥವಾ ಶುಚಿಗೊಳಿಸುವುದು ನಿಷಿದ್ಧ. ಈ ಐದು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಪಂಚಾಂಗವನ್ನು ಗಮನಿಸಿ ಶುಚಿಗೊಳಿಸುವ…

Read More