All posts by nagaraj11081993

ಯುಗಾದಿಯಂದೇ ಕಾಲಭೈರವೇಶ್ವರ ದೇಗುಲ ಮುಂದೆ ಮಾಟ ಮಂತ್ರ: ಬೆಚ್ಚಿಬಿದ್ದ ಜನರು

ಯುಗಾದಿಯಂದೇ ಕಾಲಭೈರವೇಶ್ವರ ದೇಗುಲ ಮುಂದೆ ಮಾಟ ಮಂತ್ರ: ಬೆಚ್ಚಿಬಿದ್ದ ಜನರು

ಚಿಕ್ಕಮಗಳೂರು, ಮಾರ್ಚ್​ 19: ಭದ್ರಾ ನದಿಯ ದಡದಲ್ಲಿ ನಿರಂತರ ವಾಮಾಚಾರಗಳು (black magic) ನಡೆಯುತ್ತಲೇ ಇರುತ್ತದೆ. ಆದರೆ ಈಗ ನದಿಯ ಸಮೀಪವಿರುವ ದೇವಸ್ಥಾನದ (temple) ಮುಂಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ. ಅದರಲ್ಲೂ ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರವ ಕಾಲಭೈರವೇಶ್ವರ ದೇಗುಲದ ಎದುರು ಘಟನೆ ನಡೆದಿದೆ.

ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ

ಕಾಫಿನಾಡು ಚಿಕ್ಕಮಗಳೂರಿನ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಕಳಸೇಶ್ವರ ದೇವರಿಗೆ ಹಲವು ದೇವಸ್ಥಾನಗಳು ಸೇರುತ್ತೆ. ಅದರಲ್ಲಿಯೂ ಗಿರಿಜಾ ಕಲ್ಯಾಣದ ಮೆರವಣಿಗೆ ನಡೆಯುವ ಮಾರ್ಗದಲ್ಲಿರುವ ಕಳಸ ಪಟ್ಟಣದ ಕಂಚಿಕೆರೆ ಗ್ರಾಮದ ಕಾಲಭೈರವನ ದೇವಸ್ಥಾನದ ಮುಂಭಾಗದಲ್ಲಿ ವಾಮಾಚಾರ ಮಾಡಲಾಗಿದೆ ಅದು ಹಿಂದೂಗಳ ಹೊಸ ವರ್ಷದ ಸಂಭ್ರಮದ ಯುಗಾದಿ ಹಬ್ಬದ ದಿನವೇ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ತೆಂಗಿನಕಾಯಿ, ಅರಿಶಿನ, ಕುಂಕುಮ, ನಾಣ್ಯ, ನಿಂಬೆ ಹಣ್ಣು ಸೇರಿದಂತೆ ಹಲವು ವಸ್ತುಗಳನ್ನ ಬಳಕೆ ಮಾಡಲಾಗಿದೆ. ದೇವಾಲಯದ ಮುಂಭಾಗದಲ್ಲಿ ನಾಲ್ಕು ಕಲ್ಲುಗಳನ್ನ ಇಟ್ಟು ಪೂಜೆ ಮಾಡಲಾಗಿದೆ. ಹಬ್ಬದ ದಿನ ಪೂಜಾ ಕೈಂಕರ್ಯ ಮುಗಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡೋಣ ಅಂತಾ ಮುಂಜಾನೆ ಬಂದ ಅರ್ಚಕರು ವಾಮಾಚಾರ ಕಂಡು ಬೆಚ್ಚಿಬಿದ್ದಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹ

ಇನ್ನು ಕಳಸ ಸಮೀಪದ ಕಂಚಿಕೆರೆ ಕಾಲಭೈರವ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಭಕ್ತರಿದ್ದಾರೆ. ಹೊರ ಜಿಲ್ಲೆ ಸೇರಿದಂತೆ ಸ್ಥಳೀಯರು ಕಾಲಭೈರವನನ್ನ ನಂಬಿ ಪೂಜಿಸುತ್ತಾರೆ. ದೇವಸ್ಥಾನದ ಮುಂದೆಯೇ ವಾಮಾಚಾರ ಮಾಡಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವೂ ವಾಮಾಚಾರ ನಡೆದ ಕಾಲಭೈರವ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಇಂದು ವಾಮಾಚಾರ ಮಾಡಲಾಗಿದೆ. ಕಳಸ ಭಾಗದಲ್ಲಿ ಹರಿಯುವ ಭದ್ರಾ ನದಿಯ ತಟದಲ್ಲಿ ವಾಮಾಚಾರದ ಪ್ರಕರಣ ನಡೆಯುತ್ತಲೇ ಇತ್ತು. ಈಗ ದೇವಸ್ಥಾನದ ಮುಂದೆಯೇ ಮಾಡಿದ್ದಾರೆ. ಅದು ಬಹುತೇಕ ತಡರಾತ್ರಿ ಎರಡರಿಂದ ಮೂರುಗಂಟೆಯೊಳಗೆ ನಡೆದಿರಬಹುದು ಎನ್ನಲಾಗುತ್ತಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗಿಗಾಗಿ ಮುಂಡರಗಿ ಬಸ್ ನಿಲ್ದಾಣದಲ್ಲಿ ವಾಮಾಚಾರ: ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಮಿತ್ರೋ.

ದೇವಾಲಯದ ಮುಂಭಾಗದಲ್ಲಿ ವಾಮಾಚಾರ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿಯವರಾ? ಅಥವಾ ಹೊರ ಭಾಗದವರಾ? ಅನ್ನೋ ಅನುಮಾನ ಸ್ಥಳೀಯರು ಮುಂದಿಟ್ಟಿದ್ದಾರೆ. ಪವಿತ್ರ ಭದ್ರಾ ನದಿ ಹಾಗೂ ಸುತ್ತಮುತ್ತ ಇರುವ ದೇವಸ್ಥಾನಗಳಲ್ಲಿ ಇತ್ತೀಚಿನ ದಿನದಲ್ಲಿ ವಾಮಾಚಾರ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಕಳಸದ ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು

ಹಾಸನ (ಮಾರ್ಚ್ 19): ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ (Prajwal Revanna Pend rive Case) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಸನದ ಸಿವಿಲ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ. ಇನ್ನು ಎಸ್​​ಐಟಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.

ವಿಡಿಯೋ ವೈರಲ್ ಪ್ರಕರಣದಲ್ಲಿ ಒಟ್ಟು 52 ಮಂದಿ ಹೆಸರು ಉಲ್ಲೇಖಿಸಲಾಗಿದ್ದು, 39 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಲೋಕಸಭೆ ಚುನಾವಣೆ (Lok Sabha Election) ವೇಳೆ 70 ಪೆನ್‌ಡ್ರೈವ್‌ (Pendrive) ಖರೀದಿಸಿ ವಿಡಿಯೋ ವೈರಲ್ (Video Viral) ಮಾಡಿದ್ದು ತನಿಖೆ ವೇಳೆ ಬಯಲಾಗಿದೆ. ಇನ್ನು ಜೆಡಿಎಸ್ ಕಾರ್ಯಕರ್ತರನ್ನೇ ಆರೋಪಿಗಳನ್ನಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಮಾರ್ಚ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಶಮನಗೊಳಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಮ್ಯಾಕ್ರನ್ ಜೊತೆ ಸಮನ್ವಯವನ್ನು ಸಾಧಿಸಲು ಸಿದ್ಧ ಎಂದು ಮೋದಿ ಹೇಳಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸುವ ತುರ್ತು ಅಗತ್ಯದ ಕುರಿತು ಹಾಗೂ ಸಂವಾದ, ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತು ಮಾತನಾಡಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸರಿಯಾಗೇ ಮಾಡುತ್ತಿದೆ; ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ!

ಇದಕ್ಕೂ ಮೊದಲು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಾತನಾಡಿದ್ದರು. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಉಲ್ಬಣವನ್ನು ಕಡಿಮೆ ಮಾಡಲು, ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಬಗ್ಗೆ ಅವರು ಚರ್ಚಿಸಿದ್ದರು.

“ನನ್ನ ಸಹೋದರ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದೆ. ಹಾಗೇ, ಒಮಾನ್ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಶಾಂತಿ, ಸ್ಥಿರತೆಯನ್ನು ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ” ಎಂದು ಮೋದಿ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ಬೆಂಗಳೂರು, ಮಾರ್ಚ್​​ 19: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದ ತನಿಖೆ ವೇಳೆ ಶಾಕಿಂಗ್​​ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್​​ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈತ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್​​ನಲ್ಲಿಇವರು ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್​​ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಡಲು ಶುರು ಮಾಡಿದ ಶಬೀಲ್, ವಿವಾಹಕ್ಕೂ ಮೊದಲೇ ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!

ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್​​ ಬಿಟ್ಟು ಆಕೆ ಶಬೀಲ್​​ನ ಭೇಟಿಗಾಗಿ ತೆರಳಿದ್ದಳು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಸಂಬಂಧಿಕರ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್​​ಗೆ ಕರೆ ಮಾಡಿದರೂಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಒಟ್ಟಿನಲ್ಲಿ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದ ಯುವತಿಯನ್ನು ತನ್ನ ಅನುಮಾನದ ಭೂತಕ್ಕೆ ಆರೋಪಿ ಶಬೀಲ್​​ ಬಲಿ ಪಡೆದಿರೋದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿರೋದಂತೂ ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

TTD Tirumala: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್; ಇನ್ಮುಂದೆ 24 ಗಂಟೆ ಲಗೇಜ್ ಕೌಂಟರ್ ಸೇವೆ ಲಭ್ಯ!

ತಿರುಮಲ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಭಕ್ತರ ಲಗೇಜ್‌ಗಳ ಸುರಕ್ಷತೆ ಮತ್ತು ಸುಲಭ ನಿರ್ವಹಣೆಗಾಗಿ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 394 ಸಿಬ್ಬಂದಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇಂದಿನಿಂದ ಈ ಎಲ್ಲಾ ಲಗೇಜ್ ಕೇಂದ್ರಗಳು ದಿನದ 24 ಗಂಟೆಯೂ ಭಕ್ತರ ಸೇವೆಗೆ ಮುಕ್ತವಾಗಿರಲಿವೆ. ವಿಶೇಷವಾಗಿ ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಉಂಟಾಗುವ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಈ ನಿರಂತರ ಸೇವೆಯು ಸಹಕಾರಿಯಾಗಲಿದೆ.

ಪಾದಚಾರಿ ಮಾರ್ಗದ ಭಕ್ತರಿಗೆ ವರ:

ಅಲಿಪಿರಿ ಮತ್ತು ಶ್ರೀವರಿ ಮೆಟ್ಟು ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಾರವಾದ ಸಾಮಾನುಗಳನ್ನು ಹೊತ್ತು ನಡೆಯುವುದು ಕಷ್ಟಕರವಾದ್ದರಿಂದ, ಅಲಿಪಿರಿ ಮಾರ್ಗದಲ್ಲಿ 7 ಕೌಂಟರ್‌ಗಳನ್ನು (46 ಸಿಬ್ಬಂದಿ) ಮತ್ತು ಶ್ರೀವರಿ ಮೆಟ್ಟು ಮಾರ್ಗದಲ್ಲಿ 2 ಕೌಂಟರ್‌ಗಳನ್ನು (10 ಸಿಬ್ಬಂದಿ) ಸ್ಥಾಪಿಸಲಾಗಿದೆ. ಭಕ್ತರು ತಮ್ಮ ಲಗೇಜ್‌ಗಳನ್ನು ಈ ಆರಂಭಿಕ ಕೇಂದ್ರಗಳಲ್ಲಿ ಠೇವಣಿ ಇರಿಸಿ, ಬೆಟ್ಟ ಹತ್ತಿದ ನಂತರ ತಿರುಮಲದಲ್ಲಿರುವ ನಿಗದಿತ ವಿತರಣಾ ಕೇಂದ್ರಗಳಲ್ಲಿ ಅವುಗಳನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ.

ತಿರುಮಲದ ಪ್ರಮುಖ ಕೇಂದ್ರಗಳಲ್ಲಿ ವಿಸ್ತರಣೆ:

ಕೇವಲ ಪಾದಚಾರಿ ಮಾರ್ಗಗಳಲ್ಲಷ್ಟೇ ಅಲ್ಲದೆ, ತಿರುಮಲದ ಪ್ರಮುಖ ಸ್ಥಳಗಳಲ್ಲೂ ಲಗೇಜ್ ಕೇಂದ್ರಗಳನ್ನು ವಿಸ್ತರಿಸಲಾಗಿದೆ. ತಿರುಮಲದ ಉಚಿತ ಸಭಾಂಗಣದಲ್ಲಿ 10 ಕೌಂಟರ್‌ಗಳು, ನಾರಾಯಣಗಿರಿ ಶೆಡ್‌ನಲ್ಲಿ 8, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ 2 ಮತ್ತು 300 ರೂಪಾಯಿ ದರ್ಶನ ಟಿಕೆಟ್ ಹಾಲ್‌ನಲ್ಲಿ 5 ಕೌಂಟರ್‌ಗಳನ್ನು ತೆರೆಯಲಾಗಿದೆ. ಇದರೊಂದಿಗೆ ಡಿಡಿ ಹಾಲ್ ಮತ್ತು ಸ್ಕ್ಯಾನಿಂಗ್ ಕಂಪಾರ್ಟ್‌ಮೆಂಟ್‌ಗಳಲ್ಲೂ ಹೆಚ್ಚುವರಿ ಕೌಂಟರ್‌ಗಳನ್ನು ನೀಡಲಾಗಿದೆ. ಭಕ್ತರು ಕಲ್ಯಾಣ ಕಟ್ಟಾ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿಯೂ ತಮ್ಮ ಸಾಮಾನುಗಳನ್ನು ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಲಡ್ಡು ಗುಣಮಟ್ಟಕ್ಕೆ ವಿಶೇಷ ಪ್ರಯೋಗಾಲಯ:

ಲಡ್ಡು ಪ್ರಸಾದದ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಪಾಡಲು ಟಿಟಿಡಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ತಿರುಮಲದಲ್ಲಿ ಅತ್ಯಾಧುನಿಕ ‘ಎಫ್‌ಎಸ್‌ಎಸ್‌ಎಐ’ (FSSAI) ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ಆಂಧ್ರಪ್ರದೇಶ ಆಹಾರ ಸುರಕ್ಷತಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ಧವಾಗಿರುವ ಈ ಪ್ರಯೋಗಾಲಯವನ್ನು ಈ ತಿಂಗಳ 21 ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಘಾಟಿಸಲಿದ್ದಾರೆ. ಈ ಮೂಲಕ ಲಡ್ಡು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷಿಸಿ, ಭಕ್ತರಿಗೆ ಕಲಬೆರಕೆ ರಹಿತ ಪ್ರಸಾದ ಸಿಗುವಂತೆ ಖಚಿತಪಡಿಸಿಕೊಳ್ಳಲಾಗುವುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL: ಬುಮ್ರಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಿವರು: ಪಟ್ಟಿಯಲ್ಲಿ ಬೌಲರ್ ಹೆಸರು

Source link

ಇಶಾ ಫೌಂಡೇಷನ್, ಸದ್ಗುರು ಕುರಿತ ವಿವಾದಾತ್ಮಕ ವಿಷಯ ಡಿಲೀಟ್ ಮಾಡಿ; ನಕ್ಕೀರನ್ ಮ್ಯಾಗಜಿನ್​​ಗೆ ಕೋರ್ಟ್ ಆದೇಶ

ನವದೆಹಲಿ, ಮಾರ್ಚ್ 19: ಇಶಾ ಫೌಂಡೇಶನ್ ಮತ್ತು ಸದ್ಗುರುಗಳ ಕುರಿತಾದ ವಿವಾದಾತ್ಮಕ ವಿಷಯಗಳನ್ನು ಡಿಲೀಟ್ ಮಾಡಲು ತಮಿಳು ಮಾಧ್ಯಮವಾದ ನಕ್ಕೀರನ್ ಮ್ಯಾಗಜಿನ್​ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಇಶಾ ಫೌಂಡೇಶನ್ (Isha Foundation) ಮತ್ತು ಸದ್ಗುರುಗಳ ವಿರುದ್ಧ ನಕ್ಕೀರನ್ ಪ್ರಕಟಿಸಿದ ಮಾನಹಾನಿಕರ ವಿಡಿಯೋಗಳು ಮತ್ತು ಲೇಖನಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಇಂದು ಮಧ್ಯಂತರ ಆದೇಶ ಹೊರಡಿಸಿದೆ. ಈ ಆದೇಶವನ್ನು ಸ್ವಾಗತಿಸಿರುವ ಇಶಾ ಫೌಂಡೇಶನ್ ಸುಳ್ಳು ಮತ್ತು ದುರುದ್ದೇಶಪೂರಿತ ಮಾಹಿತಿಯನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಯಾವುದೇ ಮಾನಹಾನಿ ಅಥವಾ ಉದ್ದೇಶಪೂರ್ವಕ ತಪ್ಪು ಮಾಹಿತಿಯು ಮಾನವೀಯತೆಯ ಕಲ್ಯಾಣಕ್ಕಾಗಿ ಇಶಾ ಫೌಂಡೇಷನ್ ಮಾಡುತ್ತಿರುವ ಕೆಲಸವನ್ನು ತಡೆಯಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ, ಇದು ತಮ್ಮ ಸಾಮಾಜಿಕ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಇಶಾ ಫೌಂಡೇಷನ್ ಡಿಸೆಂಬರ್ 2025ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 2025ರಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ನ್ಯಾಯಾಲಯವು ನಕ್ಕೀರನ್‌ ಮ್ಯಾಗಜಿನ್​ಗೆ ಅಂತಹ ವಿಷಯಗಳನ್ನು ಪ್ರಕಟಿಸದಂತೆ ಆದೇಶಿಸಿದೆ.

ಇದನ್ನೂ ಓದಿ: ಇಶಾ ಫೌಂಡೇಶನ್​ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಶಾ ಫೌಂಡೇಶನ್, ಕೆಲವು ಜನರು ಯಾವುದೇ ಪುರಾವೆಗಳಿಲ್ಲದೆ ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದೆ. ಆದರೆ, ಸತ್ಯ ಮೇಲುಗೈ ಸಾಧಿಸಿದೆ. “ದೆಹಲಿ ಹೈಕೋರ್ಟ್‌ನ ಈ ಮಧ್ಯಂತರ ಆದೇಶವನ್ನು ನಾವು ಸ್ವಾಗತಿಸುತ್ತೇವೆ” ಎಂದು ಇಶಾ ಫೌಂಡೇಶನ್ ಹೇಳಿದೆ.

30 ವರ್ಷಗಳಿಗೂ ಹೆಚ್ಚು ಕಾಲದಿಂದ ಇಶಾ ಫೌಂಡೇಶನ್ ಸಮಾಜದ ಸುಧಾರಣೆಗಾಗಿ ಮತ್ತು ಜನರ ಜೀವನವನ್ನು ಸುಧಾರಿಸಲು ಕೆಲಸ ಮಾಡುತ್ತಿದೆ. ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ. ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಪ್ರತಿಷ್ಠಾನದ ಕೆಲಸವನ್ನು ಅಡ್ಡಿಪಡಿಸಲು ಅದರ ಮೇಲೆ ದಾಳಿ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಇಶಾ ಫೌಂಡೇಶನ್ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಇಶಾ ಫೌಂಡೇಷನ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಷೇರು ಮಾರುಕಟ್ಟೆ ಭಾರೀ ಕುಸಿತ; ಸಿಕ್ಕಾಪಟ್ಟೆ ನಷ್ಟ ಕಂಡ ಸೆನ್ಸೆಕ್ಸ್, ನಿಫ್ಟಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ನವದೆಹಲಿ, ಮಾರ್ಚ್ 19: ಭಾರತದ ಷೇರು ಮಾರುಕಟ್ಟೆ (Stock Market) ಯುಗಾದಿ ಹಬ್ಬದ ದಿನದಂದು ಅಕ್ಷರಶಃ ಗಡಗಡ ಅಲುಗಾಡಿದೆ. ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಹೆಚ್ಚೂಕಡಿಮೆ ಶೇ. 3ರಷ್ಟು ಕುಸಿತವನ್ನು ಕಂಡಿವೆ. ಮೂರು ದಿನ ಪಾಸಿಟಿವ್ ಆಗಿದ್ದ ಈ ಇಂಡೆಕ್ಸ್ ಗುರುವಾರ ನೆಲಕಚ್ಚಿವೆ. ಸೆನ್ಸೆಕ್ಸ್ 2,496 ಅಂಕಗಳನ್ನು ಕಳೆದುಕೊಂಡು 74,207.24 ಮಟ್ಟಕ್ಕೆ ಮುಟ್ಟಿದೆ. ನಿಫ್ಟಿ50 ಇಂಡೆಕ್ಸ್ 775.65 ಅಂಕಗಳ ಕಳೆದುಕೊಂಡು 23,002.15 ಮಟ್ಟ ಮುಟ್ಟಿದೆ.

ಈ ಇಂಡೆಕ್ಸ್​ನಲ್ಲಿರುವ ಹತ್ತಾರು ಕಂಪನಿಗಳಷ್ಟೇ ಹಿನ್ನಡೆ ಹೊಂದಿಲ್ಲ, ಬಹುತೇಕ ಇಡೀ ಷೇರು ಮಾರುಕಟ್ಟೆಯ ಹೆಚ್ಚಿನ ಕಂಪನಿಗಳ ಷೇರುಗಳಿಗೆ ಹಿನ್ನಡೆಯಾಗಿದೆ. ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಸುಮಾರು 4,000 ಷೇರುಗಳ ಪೈಕಿ 3,048 ಷೇರುಗಳು ನೆಗಟಿವ್ ಆಗಿವೆ. 864 ಷೇರುಗಳು ಮಾತ್ರವೇ ಗುರುವಾರ ಲಾಭ ಕಂಡಿರುವುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಎಚ್​ಡಿಎಫ್​ಸಿ ಬ್ಯಾಂಕ್, ಎಟರ್ನಲ್, ಶ್ರೀರಾಮ್ ಫೈನಾನ್ಸ್ ಷೇರುಗಳು ಅತಿಹೆಚ್ಚು ಕಳೆದುಕೊಂಡಿರುವುದು. ಗುರುವಾರ ಗಳಿಕೆ ಕಂಡಿರುವ ಷೇರುಗಳಲ್ಲಿ ಹೆಚ್ಚಿನವು ತೈಲ ಮತ್ತು ಇಂಧನ ಕ್ಷೇತ್ರದ ಕಂಪನಿಗಳಾಗಿವೆ.

ಷೇರು ಮಾರುಕಟ್ಟೆ ಕುಸಿತಕ್ಕೆ ಕೆಲ ಸಂಭಾವ್ಯ ಕಾರಣಗಳು ಇಂತಿವೆ:

  • ಅಮೆರಿಕ ಇರಾನ್ ಸಂಘರ್ಷ ತಣ್ಣಗಾರುವ ಲಕ್ಷಣ ಕಾಣುತ್ತಿಲ್ಲ. ತನ್ನನ್ನು ಹೊಡೆದರೆ ತಾನು ಯಾರನ್ನೂ ಬಿಡುವುದಿಲ್ಲ ಎಂದು ಇರಾನ್ ಮಾಡು ಇಲ್ಲ ಮಡಿ ಹೋರಾಟಕ್ಕೆ ಸಿದ್ಧಗೊಂಡಿದೆ. ಇದು ಎಲ್ಲೆಡೆ ಭಯ ಮೂಡಲು ಕಾರಣವಾಗಿದೆ.
  • ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 110 ಡಾಲರ್ ದಾಟಿದೆ. ಇದು ಜಾಗತಿಕವಾಗಿ ಹಣದುಬ್ಬರ ಏರಿಕೆಗೆ ಮತ್ತು ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ, ಮಾರುಕಟ್ಟೆ ಭಯಗ್ರಸ್ತವಾಗಿದೆ.
  • ಎಚ್​ಡಿಎಫ್​ಸಿ ಬ್ಯಾಂಕ್​ನ ಛೇರ್ಮನ್ ಅತಾನು ಚಕ್ರಬರ್ತಿ ಅವರು ನೈತಿಕ ಕಾರಣವೊಡ್ಡಿ ರಾಜೀನಾಮೆ ನೀಡಿರುವುದು ಅದರ ಷೇರು ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ. ಎಚ್ಡಿಎಫ್​ಸಿ ಬ್ಯಾಂಕ್​ನ ಷೇರುಬೆಲೆ ಒಂದೇ ದಿನದಲ್ಲಿ ಶೇ. 8ರಷ್ಟು ಕುಸಿತವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹಾಗೆಯೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆಯು ಹಣದುಬ್ಬರ ಏರಬಹುದು ಎಂದು ಹೇಳಿದ್ದು, ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ಮುಂದುರಿಯುತ್ತಿರುವುದು, ಎಫ್​ಐಐಗಳಿಂದ ಷೇರುಗಳ ಬಿಕರಿಯಾಗುತ್ತಿರುವುದು ಇವೆಲ್ಲವೂ ಭಾರತದ ಷೇರು ಮಾರುಕಟ್ಟೆಯ ಹಿನ್ನಡೆಗೆ ಕಾರಣಗಳಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೈ ಎಲೆಕ್ಷನ್ ಕದನ: ಬಾಗಲಕೋಟೆ ಕೈ ಅಭ್ಯರ್ಥಿ ಬಹುತೇಕ ಫೈನಲ್, ದಾವಣಗೆರೆಯಿಂದಲೇ ವಿಳಂಬ

ಬಾಗಲಕೋಟೆ, (ಮಾರ್ಚ್ 19): ರಾಜ್ಯದ ಜನರ ಚಿತ್ತ ದಾವಣಗೆರೆ ದಕ್ಷಿಣ  (Davanagere South By Election) ಹಾಗೂ ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರ ಉಪಚುನಾವಣೆಯತ್ತ ನೆಟ್ಟಿದೆ. ದಿವಂಗತ ಎಚ್.ವೈ ಮೇಟಿ ನಿಧನದ ನಂತರ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಟಿಕೆಟ್ ಗಾಗಿ ಎರಡು ಪಕ್ಷದಲ್ಲಿ ಫೈಟ್ ಮಧ್ಯೆ ಬಿಜೆಪಿ ಕೊನೆಗೂ ನಿರೀಕ್ಷೆ ಎಂಬಂತೆ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಘೋಷಣೆ ಮಾಡಿ ಯುಗಾದಿಯ ಗಿಪ್ಟ್ ನೀಡಿದ್ದು, ಈಗಾಗಲೇ ಬಿಜೆಪಿ ಕಾರ್ಯಕರ್ತರು ಗ್ರೌಂಡ್ ಲೆವಲ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತ ಕೈ ಪಾಳೆಯದಲ್ಲಿ ಟಿಕೆಟ್ ಗೊಂದಲ ಇನ್ನು ಬಗೆಹರಿದಿಲ್ಲ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್.ವೈ ಮೇಟಿ ವಿರುದ್ಧ ಕೇವಲ 5978 ಅಲ್ಪ ಮತಗಳಿಂದ ಸೋತಿರುವುದಕ್ಕೆ ಈ ಬಾರಿ ಬೈ ಎಲೆಕ್ಷನ್​ ಟಿಕೆಟ್​ ಚರಂತಿಮಠ ಅವರಿಗೆ ನೀಡಲು ಮುಖ್ಯ ಕಾರಣವಾಗಿದೆ. ಪ್ರಬಲ ಲಿಂಗಾಯತ ಸಮುದಾಯ.ಟಿಕೆಟ್ ಸಿಕ್ಕ ಖುಷಿಯಲ್ಲಿ ಚರಂತಿಮಠ ಟಿವಿ9 ಜೊತೆ ಮಾತಾಡಿ ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲ ಆಂತರಿಕ ಗೊಂದಲ ಸರಿಪಡಿಸಿಕೊಂಡು, ನಾವೇ ಗೆಲ್ಲುತ್ತೇವೆ.ಈ ಬಾರಿ ಗೆಲುವು ಖಚಿತ. ಅದು ನನ್ನ ಗೆಲುವಾಗುವುದಿಲ್ಲ ಬಿಜೆಪಿ ಹಾಗೂ ಹಿಂದುತ್ವದ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಂಧಾನ ಯಶಸ್ವಿ: ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈನಲ್

ಕಾಂಗ್ರೆಸ್ ಲೆಕ್ಕಾಚಾರ

ಇನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಅಖಂಡ ಲಿಂಗಾಯತ ಸಮುದಾಯ ಪ್ರಾಭಲ್ಯ ಹೊಂದಿದ್ರೆ, ಎಸ್.ಸಿ (ಎಡ/ಬಲ), ಎಸ್.ಟಿ, ಕುರುಬ ಹಗೂ ಮುಸ್ಲಿಂ ಸಮುದಾಯವನ್ನು ಒಗ್ಗೂಡಿಸಿ, ಅಹಿಂದ ವರ್ಗ ಹಾಗು ಅನುಕುಂಪದ ಆಧಾರದ ಮೇಲೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ದಿವಂಗತ ಮೇಟಿ ಅವರ ಮಕ್ಕಳಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ತಯಾರಿದ್ದಾರೆ. ಆದರೆ ಮೇಟಿ ಅವರ ಮಕ್ಕಳಲ್ಲೇ ಟಿಕೆಟ್ ಗೊಂದಲ ಜೋರಾಗಿದೆ. ಮೇಟಿ ಅವರ ಕಿರಿಯ ಪುತ್ರಿ ಮಹಾದೇವಿ ಟಿಕೆಟ್ ನೀಡದಿದ್ರೆ ಬಂಡಾಯ ಅಭ್ಯರ್ಥಿ ಆಗುವ ಹೇಳಿಕೆ ನೀಡಿದ್ದರು.ಇದು ಕೈ ನಾಯಕರ ತಲೆನೋವಿಗೆ ಕಾರಣವಾಗಿದೆ.

2ನೇ ಪುತ್ರ ಉಮೇಶ್ ಮೇಟಿಗೆ ಟಿಕೆಟ್?

ಶಾಂತ ಸ್ವಭಾವದ ಮೇಟಿ ಅವರ ಎರಡನೇ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ನೀಡಲು, ಕೈ ನಾಯಕರಿಗೆ ಬಹುತೇಕ ಒಪ್ಪಿದ್ದಾರೆ.ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳಿ ಎಂದು ಉಮೇಶ್ ಮೇಟಿಗೆ ಕೈ ನಾಯಕರು ಹೇಳಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಮಹಾದೇವಿ ಮೇಟಿ ಹಾಗೂ ಹಿರಿಯ ಪುತ್ರ ಉಮೇಶ್ ಮೇಟಿ ಸಹ ನಾನು ಆಕಾಂಕ್ಷಿ ಎಂದಿರುವುದು ಹೈ ಕಮಾಂಡ್ ನಾಯಕರ ತಲೆಬಿಸಿಗೆ ಕಾರಣವಾಗಿದೆ.ಹೀಗಾಗಿ ಮೇಟಿ ಅವರ ನಾಲ್ಕು ಜನ ಮಕ್ಕಳ ಜೊತೆ ಸಭೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಹೈ ಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ. ಅವರ ಪರವಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿ ಕಳುಹಿಸಿದ್ದರು. ಹೀಗಾಗಿ ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಕನ್ಫರ್ಮ್ ಆಗಿದ್ದು, ಆದ್ರೆ ನಾಲ್ವರಲ್ಲಿ ಯಾರಿಗೆ ಎನ್ನುವುದೇ ನಿಗೂಢವಾಗಿದೆ.

ದಾವಣಗೆರೆ ಗೊಂದಲವೇ ಬಾಗಲಕೋಟೆ ಅಭ್ಯರ್ಥಿ ಘೋಷಣೆ ವಿಳಂಬ

ಇನ್ನೊಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಸಹ ಕಗ್ಗಂಟಾಗಿದೆ. ಮುಸ್ಲಿಮರು ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದರಿಂದ ಬಾಗಲಕೋಟೆ ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿರುವುದಕ್ಕೆ ವಿಳಂಬವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಹಾಸ್ಟೆಲ್ ಹುಡುಗರ’ ಮೆಚ್ಚಿನ ತಮಿಳಿನ ಸ್ಟಾರ್ ನಟ, ಶೀಘ್ರವೇ ರೀಮೇಕ್

ಕನ್ನಡದಲ್ಲಿ ಸಾಕಷ್ಟು ಹೊಸ ತಂಡಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿವೆ. ಕೆಲವರಿಗೆ ಯಶಸ್ಸು ಸಿಕ್ಕಿದೆ, ಕೆಲವರಿಗೆ ಇಲ್ಲ. 2023 ರಲ್ಲಿ ಹೊಸ ತಂಡವೊಂದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (hostel hudugaru bekagiddare) ಎಂಬ ಸಿನಿಮಾ ಮಾಡಿತ್ತು. ನಟ ರಕ್ಷಿತ್ ಶೆಟ್ಟಿ ಇದಕ್ಕೆ ಬೆಂಬಲ ನೀಡಿದ್ದರು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ನಟಿ ರಮ್ಯಾ, ಸಿನಿಮಾ ಮೇಲೆ ದೂರು ಸಹ ದಾಖಲಿಸಿದ್ದರು. ಆ ಕಾರಣಕ್ಕೂ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕಿತ್ತು. ಇದೀಗ ಸಿನಿಮಾ ತಮಿಳಿಗೆ ಹೊರಟಿದೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವನ್ನು ತಮಿಳಿನ ಸ್ಟಾರ್ ನಟರೊಬ್ಬರು ರೀಮೇಕ್ ಮಾಡಲಿದ್ದಾರೆ.

ತಮಿಳಿನ ಹೊಸ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಶಿವಕಾರ್ತಿಕೇಯನ್ ಅವರು ಕನ್ನಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ರೀಮೇಕ್​​ನಲ್ಲಿ ನಟಿಸಲಿದ್ದಾರೆ. ಮಾತ್ರವಲ್ಲದೆ ಸಿನಿಮಾವನ್ನು ತಮ್ಮದೇ ಸ್ವಂತ ಬ್ಯಾನರ್ ಆಗಿರುವ ‘ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್’ ಅಡಿಯಲ್ಲಿ ನಿರ್ಮಾಣ ಮಾಡಲು ಸಹ ಆಸಕ್ತಿ ತೋರಿಸಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ಶಿವಕಾರ್ತಿಕೇಯನ್ ಅವರು ಈ ಚಿತ್ರದಲ್ಲಿ ನಟಿಸುತ್ತಾರೆಯೇ ಅಥವಾ ಕೇವಲ ನಿರ್ಮಾಣಕ್ಕೆ ಸೀಮಿತವಾಗುತ್ತಾರೆಯೇ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ, ಚಿತ್ರದ ವಿಶಿಷ್ಟ ಕಥಾಹಂದರ ಅವರಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ‘ಹೋಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ 2023ರಲ್ಲಿ ಬಿಡುಗಡೆ ಆಗಿತ್ತು. ಹೊಸ ಹುಡುಗರ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದರು. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆ, ವಿಭಿನ್ನ ಮೇಕಿಂಗ್ ಶೈಲಿ ಮತ್ತು ಭಿನ್ನ ರೀತಿಯ ಕಾಮಿಡಿಯಿಂದಾಗಿ ಪ್ರೇಕ್ಷಕರ ಮನ ಗೆದ್ದಿತ್ತು. ರಿಷಬ್ ಶೆಟ್ಟಿ, ಪವನ್ ಕುಮಾರ್ ಮತ್ತು ದಿಗಂತ್ ಅವರುಗಳು ಸಿನಿಮಾದ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿತ್ತು.

ಇದನ್ನೂ ಓದಿ:‘ಬೃಂದಾವಿಹಾರಿ’ ಆದ ಗೋಲ್ಡನ್ ಸ್ಟಾರ್ ಗಣೇಶ್; ಹೊಸ ಸಿನಿಮಾ ಟೈಟಲ್ ಅನೌನ್ಸ್

ಶಿವಕಾರ್ತಿಕೇಯನ್ ಮೊದಲಿನಿಂದಲೂ ಕುಟುಂಬ ವರ್ಗಕ್ಕೆ ಇಷ್ಟವಾಗುವಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ‘ಹೋಸ್ಟೆಲ್ ಹುಡುಗರು’ ಕೌಟುಂಬಿಕ ಅಲ್ಲದೇ ಹೋದರೂ ಯುವಕರಿಗೆ ಹಿಡಿಸುವ ಹಾಗೂ ಹಾಸ್ಯಮಯ ಸಿನಿಮಾ ಆಗಿರುವ ಕಾರಣ, ಸಿನಿಮಾದ ರೀಮೇಕ್ ಬಗ್ಗೆ ಶಿವಕಾರ್ತಿಕೇಯನ್ ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಹಾಸ್ಟೆಲ್ ಜೀವನದ ಕತೆ ಆಗಿರುವ ಕಾರಣ ದೊಡ್ಡ ಮಟ್ಟದ ರೀಚ್ ಸಿನಿಮಾಕ್ಕೆ ಸಿಗಲಿದೆ ಎಂಬ ನಂಬಿಕೆ ಅವರಿಗಿದೆ ಎನ್ನಲಾಗುತ್ತಿದೆ.

ಕನ್ನಡದಲ್ಲಿ ಬಹುತೇಕ ಹೊಸ ಕಲಾವಿದರೇ ಈ ಚಿತ್ರದಲ್ಲಿದ್ದರು. ಅದೇ ಮಾದರಿಯನ್ನು ತಮಿಳಿನಲ್ಲೂ ಅನುಸರಿಸುವ ಸಾಧ್ಯತೆ ಇದೆ. ಶಿವಕಾರ್ತಿಕೇಯನ್ ಅವರು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಈ ಸಿನಿಮಾವನ್ನು ಬಳಸಿಕೊಳ್ಳಬಹುದು. ಸ್ವತಃ ಶಿವಕಾರ್ತಿಕೇಯನ್ ಸಹ ಹೊರಗಿನವರಾಗಿ ಚಿತ್ರರಂಗಕ್ಕೆ ಬಂದವರು. ಅವರಂತೆಯೇ ಸಿನಿಮಾ ರಂಗದ ಹಿನ್ನೆಲೆ ಇಲ್ಲದವರನ್ನು ಬೆಳೆಸಲು ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದಾರೆ. ಹಾಗಾಗಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಲಿದ್ದಾರೆ.

ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ ಇದೀಗ ಅವರು ‘ಸಿಯಾನ್’ ಹೆಸರಿನ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾ ಅನ್ನು ಶಿವಕುಮಾರ್ ಮುರುಗೇಶನ್ ನಿರ್ದೇಶಿಸುತ್ತಿದ್ದು, ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ. ಸಂತೋಶ್ ನಾರಾಯಣ್ ಸಂಗೀತ ಸಿನಿಮಾಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link