ಮೌಂಟ್ ಎವೆರಸ್ಟ್ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು
ನವದೆಹಲಿ, ಏಪ್ರಿಲ್ 2: ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಶಿಖರದ ಮಾರ್ಗದರ್ಶಕರು ಪರ್ವತಾರೋಹಿಗಳಿಗೆ (climbers) ವಿಷಪ್ರಾಶನ ಮಾಡಿದ್ದಾರೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೌಂಟ್ ಎವರೆಸ್ಟ್ (Mount Everest) ಮಾರ್ಗದರ್ಶಕರು ಪರ್ವತಾರೋಹಿಗಳಿಗೆ ವಿಷದ ಆಹಾರವನ್ನು ನೀಡಿ ಅವರನ್ನು ಅನಾರೋಗ್ಯಕ್ಕೆ ಒಳಪಡಿಸಿದ್ದಾರೆ, ಹೆಲಿಕಾಪ್ಟರ್ ಮೂಲಕ ಅಲ್ಲಿಂದ ತೆರಳಲು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಠ್ಮಂಡು ಪೋಸ್ಟ್ ವರದಿಯ ಪ್ರಕಾರ, ಈ ಪ್ರಕರಣದಲ್ಲಿ 32 ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದೆ. 9 ಜನರನ್ನು ಬಂಧಿಸಲಾಗಿದೆ,…