ಫೀಲ್ಡಿಗಿಳಿದ ಸಚಿವ ಕೃಷ್ಣ ಬೈರೇಗೌಡ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್ – Kannada News | Minister Krishna Byregowda Sets Deadlines for Bengaluru Metro Pink Line Completion
ಬೆಂಗಳೂರು, ಜೂನ್ 19: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬಿಎಂಆರ್ಸಿಎಲ್ ಅಧಿಕಾರಿಗಳೊಂದಿಗೆ ಮೆಟ್ರೋ ಯೋಜನೆಗಳ ಪ್ರಗತಿ ಕುರಿತು ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಮುಖವಾಗಿ ಮೆಟ್ರೋ ಕಾಮಗಾರಿಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಕಾರ್ಯಸ್ಥಳಗಳ ಕಳಪೆ ನಿರ್ವಹಣೆ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಮೆಟ್ರೋ ಜಾಲ 96 ಕಿ.ಮೀ ಇದೆ. ಮುಂದಿನ ದಿನಗಳಲ್ಲಿ ಪಿಂಕ್ ಮತ್ತು ಬ್ಲೂ ಲೈನ್ ಓಪನ್ ಆದರೆ 175 ಕಿಮೀ ಮೆಟ್ರೋ ಜಾಲ ವಿಸ್ತೀರ್ಣ ಆಗಲಿದೆ. ಪಿಂಕ್…