Headlines

nagaraj11081993

ಜಾಗತಿಕ ವೇದಿಕೆಯಲ್ಲಿ ನೋರಾ ಫತೇಹಿ ಅಬ್ಬರ; ಆಲಿಯಾ, ದೀಪಿಕಾರನ್ನು ಹಿಂದಿಕ್ಕಿದ ನಟಿ – Kannada News | Nora Fatehi Dazzles at FIFA World Cup 2026 Opening, Tops Google Trends

2026ರ ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ತಮ್ಮ ಹೈ-ವೋಲ್ಟೇಜ್ ನೃತ್ಯದ ಮೂಲಕ ಜಾಗತಿಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ಬೆನ್ನಲ್ಲೇ ಗೂಗಲ್ ಟ್ರೆಂಡ್ಸ್‌ನಲ್ಲಿ ಬಾಲಿವುಡ್‌ನ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನೇ ಹಿಂದಿಕ್ಕಿ, ಸದ್ಯ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ನಟಿಯಾಗಿ ನೋರಾ (Nora Fatehi) ಹೊರಹೊಮ್ಮಿದ್ದಾರೆ. ಜೂನ್ 12ರ ಧಮಾಕಾ, ಸೋಶಿಯಲ್ ಮೀಡಿಯಾ ಉಡೀಸ್ ಜೂನ್ 12ರಂದು ನಡೆದ ಫಿಫಾ ಉದ್ಘಾಟನಾ ಪಂದ್ಯದ ವೇಳೆ ನೋರಾ ಸ್ಟೇಜ್ ಮೇಲೆ…

Read More

ಟೀಮ್ ಇಂಡಿಯಾಗೆ ಹರ್ಷಿತ್ ರಾಣಾ ಎಂಟ್ರಿ: ತಂಡದಿಂದ ಯಾರು ಔಟ್? – Kannada News | Harshit Rana joins Team India squad

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಯುವ ವೇಗಿ ಹರ್ಷಿತ್ ರಾಣಾ (Harshit Rana) ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳಿಂದ ಹೊರಗುಳಿದಿದ್ದ ಹರ್ಷಿತ್ ಇದೀಗ ಚೆನ್ನೈನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಹರ್ಷಿತ್ ರಾಣಾ ಟಿ20 ವಿಶ್ವಕಪ್​ ವೇಳೆ ಗಾಯಗೊಂಡಿದ್ದರು. ಮೊಣಕಾಲಿನ ಗಾಯದ ಕಾರಣ ಅವರು ಟಿ20 ವಿಶ್ವಕಪ್​ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರು. ಈ ಗಾಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಕಣಕ್ಕಿಳಿದಿರಲಿಲ್ಲ. ಅತ್ತ ಫಿಟ್​ನೆಸ್…

Read More

ಇಂದಿನ ವಾಯು ಗುಣಮಟ್ಟ ವರದಿ: ರಾಜ್ಯದ ಈ ನಗರದಲ್ಲಿದೆ ಅತ್ಯಂತ ಸ್ವಚ್ಛ ವಾತಾವರಣ; ನಿಮ್ಮ ಊರಿನ AQI ಮಟ್ಟ ಚೆಕ್ ಮಾಡಿ – Kannada News | Rain Boosts Karnataka Air Quality: Bengaluru, Mysuru See ‘Good’ AQI, Health Advisory

ಬೆಂಗಳೂರು, ಜೂ.20: ರಾಜ್ಯದಲ್ಲಿ ನಿರಂತರವಾಗಿ ಬೀಸುತ್ತಿರುವ ತಂಪು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ವಾತಾವರಣದಲ್ಲಿದ್ದ ಧೂಳಿನ ಕಣಗಳು ಮತ್ತು ಮಾಲಿನ್ಯಕಾರಕಗಳು ಗಣನೀಯವಾಗಿ ಕಡಿಮೆಯಾಗಿವೆ. ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ತೃಪ್ತಿಕರ’ (Satisfactory) ಮಟ್ಟದಲ್ಲಿದೆ. ಸಿಲಿಕಾನ್ ಸಿಟಿಯ ಹೆಬ್ಬಾಳ, ಸಿಲ್ಕ್ ಬೋರ್ಡ್, ಜಯನಗರ ಮತ್ತು ಮೈಸೂರು ರಸ್ತೆ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ. ಯಾವುದೇ ಆರೋಗ್ಯದ ಅಪಾಯಗಳಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ…

Read More

ಕೆಲಸದ ಒತ್ತಡದಿಂದ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಅಮಿತಾಭ್ ಬಚ್ಚನ್ – Kannada News | Amitabh Bachchan: Sleepless Nights, Intense Work Ethic and Kalki 2898 AD Sequel Details

ಸಿನಿಮಾ ರಂಗದಲ್ಲಿ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಸುದೀರ್ಘ ಪ್ರಯಾಣ ಬೆಳೆಸಿರುವ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಈಗಲೂ ಕೆಲಸದ ಮೇಲಿನ ಶ್ರದ್ಧೆ ಹಾಗೆಯೇ ಇದೆ. ಸಿನಿಮಾ ಕೆಲಸದಿಂದ ಆಗುವ ಒತ್ತಡವು ರಾತ್ರಿ ಇಡೀ ನಿದ್ದೆ ಬರದಂತೆ ಮಾಡುತ್ತಿದೆಯಂತೆ. ಚಿತ್ರರಂಗದ ದಣಿವರಿಯದ ನಾಯಕ ಎಂದೇ ಹೆಸರಾಗಿರುವ ಅಮಿತಾಭ್ (Amitabh), ಶೂಟಿಂಗ್ ಮುಗಿದು ಮನೆಗೆ ಬಂದ ಮೇಲೂ ಸಿನಿಮಾದ ಆಲೋಚನೆಗಳೇ ತಲೆಯಲ್ಲಿ ಓಡುತ್ತಿರುತ್ತವೆ ಎಂದು ಒಪ್ಪಿಕೊಂಡಿದ್ದಾರೆ. ಇತ್ತೀಚಿನ ತಮ್ಮ ಬ್ಲಾಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ…

Read More

ಮಹಿಳೆಯರೇ, ಇನ್ಮುಂದೆ ಉಚಿತವಾಗಿ ಬಸ್ಸಲ್ಲಿ ಹೋಗ್ಬೇಕಿದ್ರೆ ವೋಟರ್ ಐಡಿ ಬೇಕೇಬೇಕು! ಶಕ್ತಿ ಯೋಜನೆ ದುರ್ಬಳಕೆ ತಡೆಗೆ ಸರ್ಕಾರ ಕ್ರಮ – Kannada News | Shakti Scheme Revision: Karnataka Govt to Issue Smart Cards with Voter ID Mandatory to Stop Misuse by Other State Women

ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 20: ರಾಜ್ಯದ ಮಹಿಳಾ ಪ್ರಯಾಣಿಕರಿಗಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆಗೆ (Shakti Scheme) ಈಗ ದೊಡ್ಡ ಮಟ್ಟದ ಪರಿಷ್ಕರಣೆ ತರಲು ಸರ್ಕಾರ ಮುಂದಾಗಿದೆ. ಯೋಜನೆ ಜಾರಿಯಾದ ದಿನದಿಂದಲೂ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ, ಬೇರೆ ರಾಜ್ಯಗಳ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದರಿಂದ ಸಾರಿಗೆ ನಿಗಮಗಳಿಗೆ ಕೋಟ್ಯಂತರ…

Read More

ಮೊದಲ ದಿನವೇ ಕೋಟಿ ಕೋಟಿ ಲೂಟಿ ಮಾಡಿದ ‘ಕಾಕ್‌ಟೇಲ್ 2’ ಮತ್ತು ‘ಮಾ ಇಂಟಿ ಬಂಗಾರಂ’ – Kannada News | Cocktail 2 and Ma Inti Bangaram: Stupendous Day 1 Box Office Collections Post IPL Fever

ಐಪಿಎಲ್ ಜ್ವರ ಮುಗಿದ ಬೆನ್ನಲ್ಲೇ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ನಿಧಾನವಾಗಿ ಮುಖ ಮಾಡುತ್ತಿದ್ದಾರೆ. ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಒಂದೇ ದಿನ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಕಂಡಿವೆ. ಹಿಂದಿಯಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಸನೋನ್ ನಟನೆಯ ‘ಕಾಕ್​​ಟೇಲ್ 2’, ತೆಲುಗಿನಲ್ಲಿ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ತೆರೆಗೆ ಬಂದಿವೆ. ಭರ್ಜರಿ ಪೈಪೋಟಿಯ ನಡುವೆಯೂ ಎರಡೂ ಚಿತ್ರಗಳು ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆದು ಅತ್ಯುತ್ತಮ ಕಲೆಕ್ಷನ್…

Read More

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ; ಬೆಂಗಳೂರಿನಲ್ಲಿ ವೀಕೆಂಡ್ ಕೂಲ್ ಕೂಲ್ – Kannada News | Karnataka Rain Alert: Monsoon Intensifies, Bangalore to See Heavy Rain and Wind Today

ಬೆಂಳೂಗರಿನಲ್ಲಿ ಇಂದು ಮಳೆ Image Credit source: Tv9 kannada ಬೆಂಗಳೂರು, ಜೂ.20: ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾರಾಂತ್ಯದ ಮಜಾವನ್ನು ಹೆಚ್ಚಿಸುವಂತಹ ತಂಪಾದ ವಾತಾವರಣವಿರಲಿದೆ. ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ನಗರದ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಜತೆಗೆ ಇಂದು ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಅದೇ ರೀತಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ…

Read More

Bidadi Township Project: ಬಿಡದಿ ರೈತರಿಗೆ ಪ್ರತಿ ಎಕರೆಗೆ 2.3 ಕೋಟಿ ರೂ. ಪರಿಹಾರ! ಚೆಕ್ ವಿತರಣೆ ಶುರು – Kannada News | Bidadi Township Project: Compensation of Rs 2.3 Crore Per Acre Starts, MLA HC Balakrishna Hands Over Checks to Farmers

ಶಾಸಕ ಹೆಚ್​ಸಿ ಬಾಲಕೃಷ್ಣ ಹಾಗೂ ಪರಿಹಾರ ಪಡೆದ ರೈತ ಮಹಿಳೆ ಜಾನಕಮ್ಮImage Credit source: tv9 ರಾಮನಗರ, ಜೂನ್ 20: ರಾಜ್ಯ ಸರ್ಕಾರದ ಬಿಡದಿ ಟೌನ್‌ಶಿಪ್ ಯೋಜನೆ (Bidadi Township Project) ಬಗ್ಗೆ ಪರ ಹಾಗೂ ವಿರೋಧದ ಜಟಾಪಟಿ ತಾರಕಕ್ಕೇರಿದೆ. ಸುಮಾರು 516 ಎಕರೆಗೂ ಹೆಚ್ಚು ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂ. ರಿಯಲ್ ಎಸ್ಟೇಟ್‌ ದಂಧೆ ಎಂದು…

Read More

ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ – Kannada News | Aries Zodiac Sign: June 20, 2026 Horoscope and Astrological Predictions.

ಬೆಂಗಳೂರು, ಜೂ.20: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದು, 20-06-2026, ಶನಿವಾರ, ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಷಷ್ಠಿ, ಮಖಾ ನಕ್ಷತ್ರ, ವಜ್ರ ಯೋಗ, ಕೌಲವ ಕರಣ ಇರತಕ್ಕಂತ ಮಂಗಳಕರ ದಿನವಾಗಿದೆ. ಈ ದಿನದ ರಾಹುಕಾಲ ಬೆಳಿಗ್ಗೆ 9 ಗಂಟೆ 7 ನಿಮಿಷದಿಂದ 10 ಗಂಟೆ 43 ನಿಮಿಷದವರೆಗೆ ಇರುತ್ತದೆ. ಸರ್ವ ಸಿದ್ಧಿ, ಸಂಕಲ್ಪ ಮತ್ತು ಶುಭ ಕಾರ್ಯಗಳಿಗೆ ಸೂಕ್ತವಾದ ಶುಭ ಕಾಲ ಮಧ್ಯಾಹ್ನ 1…

Read More

ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಸುಲಭದ ವಿಧಾನ! – Kannada News | Astrology Tips to Recover Pledged Gold: Dr Basavaraja Guruji Explains Simple Friday Ritual to Get Back Mortgaged Ornaments

ಜೀವನದಲ್ಲಿ ಕಷ್ಟಗಳು ಬಂದಾಗ ಆಭರಣಗಳನ್ನು ಅಡವಿಡುವುದು ಸಾಮಾನ್ಯ. ಆದರೆ, ಇಟ್ಟ ಚಿನ್ನಾಭರಣಗಳನ್ನು ಮರಳಿ ಪಡೆಯುವುದು ಹಲವರಿಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಶಾಸ್ತ್ರಗಳ ಪ್ರಕಾರ ಒಂದು ವಿಶಿಷ್ಟ ವಿಧಾನವನ್ನು ಅನುಸರಿಸುವ ಮೂಲಕ ಅಡವಿಟ್ಟ ಆಭರಣಗಳನ್ನು ಸುಲಭವಾಗಿ ಬಿಡಿಸಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಶುಕ್ರವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ (ಬೆಳಗ್ಗೆ 6:30ರ ಒಳಗೆ) ಸ್ನಾನ ಮಾಡಿ ಶುಚಿಯಾಗಬೇಕು. ನಂತರ, ಹಳದಿ ಬಟ್ಟೆಯೊಂದನ್ನು ತೆಗೆದುಕೊಂಡು ಅದರಲ್ಲಿ ಎರಡು ಅರಿಶಿನ…

Read More