ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್ನೋಟ್ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ
ಚಿಕ್ಕಮಗಳೂರು, ಮಾರ್ಚ್ 15: ಡೆತ್ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ನೋಟ್ನಲ್ಲಿ ಏನಿದೆ? ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ. ಹಾಗೂ ಸಂಘದವರು…