All posts by nagaraj11081993

ವಿಜಯಲಕ್ಷ್ಮಿ ಮಾತನಾಡಿರೋದು ಸುದೀಪ್ ಬಗ್ಗೆ ಅಲ್ಲ: ರಕ್ಷಿತಾ

ರಾಜ್ಯದಲ್ಲಿ ಮತ್ತೊಮ್ಮೆ ಫ್ಯಾನ್ಸ್ ವಾರ್ (Fans war) ಶುರುವಾಗಿದೆ. ಸುದೀಪ್ ಅಭಿಮಾನಿಗಳು, ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಚ್ಚಾಡುತ್ತಿದ್ದಾರೆ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದಾವಣಗೆರೆಯಲ್ಲಿ ಹೇಳಿದ ಮಾತು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸುದೀಪ್ ಕುರಿತಾಗಿಯೇ ವಿಜಯಲಕ್ಷ್ಮಿ ಮಾತನಾಡಿದ್ದಾರೆಂದು ಕಿಚ್ಚನ ಅಭಿಮಾನಿಗಳು ಗರಂ ಆಗಿದ್ದಾರೆ. ವಿಜಯಲಕ್ಷ್ಮಿ ಅವರು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಆಪ್ತವಾಗಿರುವ ರಕ್ಷಿತಾ ಅವರು ಈ ವಿವಾದದ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ ಹೃದಯಾಘಾತವಾಗಬಾರದು ಎಂದ್ರೆ ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ – Kannada News | Winter Heart Health: Top Tests for Risk Assessment

ಚಳಿಗಾಲದಲ್ಲಿ (Winter) ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಿರುತ್ತದೆ. ಬೇಸಿಗೆಗೆ ಹೋಲಿಸಿದರೆ ಹೃದಯಾಘಾತದ (Heart Attacks) ಪ್ರಕರಣಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ಚಳಿಯಲ್ಲಿ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತವೆ, ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ, ಆರಂಭಿಕ ಹಂತದಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಕೆಲವು ಅಗತ್ಯ ಹೃದಯ ಪರೀಕ್ಷೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಬಹುದು. ಮಾತ್ರವಲ್ಲ, ಹೃದಯಾಘಾತದ ಪ್ರಕರಣಗಳನ್ನೂ ಕೂಡ ಕಡಿಮೆ ಮಾಡಬಹುದು. ಹಾಗಾದರೆ ಚಳಿಗಾಲದಲ್ಲಿ ಅಗತ್ಯವಾಗಿ ಮಾಡಬೇಕಾದ ಟೆಸ್ಟ್ ಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ಅಪೋಲೋ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ವರುಣ್ ಬನ್ಸಾಲ್ ಅವರು, ಚಳಿಗಾಲದಲ್ಲಿ ತಪ್ಪದೆ ಮಾಡಬೇಕಾದ ಕೆಲವು ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಲಿಪಿಡ್ ಪ್ರೊಫೈಲ್ ಪರೀಕ್ಷೆ

ಈ ಪರೀಕ್ಷೆಯು ದೇಹದಲ್ಲಿನ ಲಿಪಿಡ್‌ಗಳ ಮಟ್ಟವನ್ನು ತಿಳಿಸುತ್ತದೆ. ಆ ಮೂಲಕ, LDL (ಕೆಟ್ಟ ಕೊಲೆಸ್ಟ್ರಾಲ್), HDL (ಉತ್ತಮ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಂಡುಹಿಡಿಯಬಹುದು. ಈ ಮಟ್ಟಗಳು ದೇಹದಲ್ಲಿನ ಪ್ರಮಾಣಿತ ಶ್ರೇಣಿಗಿಂತ ಹೆಚ್ಚಿದ್ದರೆ, ಅದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದರ್ಥ.

ಬಿಪಿ ಟೆಸ್ಟ್ (ರಕ್ತದೊತ್ತಡದ ಮೇಲ್ವಿಚಾರಣೆ)

ರಕ್ತವನ್ನು ಪಂಪ್ ಮಾಡಲು ಹೃದಯವು ಎಷ್ಟು ಒತ್ತಡವನ್ನು ಬಳಸುತ್ತಿದೆ ಎಂಬುದನ್ನು ಈ ಪರೀಕ್ಷೆಯು ತೋರಿಸುತ್ತದೆ. ಚಳಿಗಾಲದಲ್ಲಿ ಹೃದಯದ ನಾಳಗಳು ಸಂಕುಚಿತಗೊಳ್ಳುವುದರಿಂದ ಈ ಸಮಯದಲ್ಲಿ ಈ ಪರೀಕ್ಷೆ ಮಾಡಿಸುವುದು ಬಹಳ ಒಳ್ಳೆಯದು. ಅಧಿಕ ರಕ್ತದೊತ್ತಡ ಹೊಂದಿರುವವರು ಖಂಡಿತವಾಗಿಯೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

ಇಸಿಜಿ

ಈ ಪರೀಕ್ಷೆಯು ಹೃದಯ ಬಡಿತ, ಹೃದಯ ಸ್ನಾಯುಗಳ ಬಲ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ಬಹಿರಂಗಪಡಿಸುತ್ತದೆ. ವ್ಯಕ್ತಿಗೆ ಪದೇ ಪದೇ ಎದೆ ನೋವು ಬರುತ್ತಿದ್ದರೆ ಅವರು ಈ ಪರೀಕ್ಷೆಯನ್ನು ಖಂಡಿತವಾಗಿಯೂ ಮಾಡಬೇಕು.

ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ

ಯಾವ ಸಮಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ?

ಡಾ. ಬನ್ಸಾಲ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತವೆ. ಅದರಲ್ಲಿಯೂ ಬೆಳಿಗ್ಗೆ 4 ರಿಂದ 6 ಗಂಟೆಯ ನಡುವೆ, ಈ ಅಪಾಯ ಹೆಚ್ಚಾಗಿ ಕಂಡುಬರುತ್ತವೆ. ಈ ಸಮಯದಲ್ಲಿ, ಬೆಳಗಿನ ತಾಪಮಾನ ಕಡಿಮೆ ಇರುವುದರಿಂದ ಇದು ಹೃದಯದ ನಾಳಗಳ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಇದನ್ನು ತಡೆಯಲು ಈ ಮೂರು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಇವುಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೆ, ಆ ಆಧಾರದ ಮೇಲೆ ಇತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಪರೀಕ್ಷೆಯನ್ನು ಯಾರು ಮಾಡಿಸಿಕೊಳ್ಳಲೇಬೇಕು?

  • 45 ವರ್ಷಕ್ಕಿಂತ ಮೇಲ್ಪಟ್ಟವರು
  • ಅಧಿಕ ರಕ್ತದೊತ್ತಡ ಇರುವವರು
  • ಈಗಾಗಲೇ ಕೆಲವು ರೀತಿಯ ಹೃದಯ ಸಂಬಂಧಿ ಕಾಯಿಲೆ ಇರುವವರು
  • ಅತಿಯಾಗಿ ಧೂಮಪಾನ ಮಾಡುವವರು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ – Kannada News | After Shankh Air, Al Hind and FlyExpress get NOC for airline operations in India

ನವದೆಹಲಿ, ಡಿಸೆಂಬರ್ 24: ಇತ್ತೀಚೆಗಷ್ಟೇ ಶಂಖ್ ಏರ್ (Shankh Air) ಸಂಸ್ಥೆಗೆ ವಿಮಾನ ಹಾರಾಟ ಸೇವೆಗೆ ಅನುಮತಿಸಿದ್ದ ಕೇಂದ್ರ ಸರ್ಕಾರ ಈಗ ಇನ್ನೂ ಎರಡು ಸಂಸ್ಥೆಗಳಿಗೆ ಎನ್​ಒಸಿ ಕೊಟ್ಟಿದೆ. ಕೇರಳ ಮೂಲದ ಅಲ್ ಹಿಂದ್ (Al Hind) ಹಾಗೂ ಹೈದರಾಬಾದ್ ಮೂಲದ ಫ್ಲೈ ಎಕ್ಸ್​ಪ್ರೆಸ್ (FlyExpress) ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರಾಕ್ಷೇಪಣಾ ಪತ್ರ (ಎನ್​ಒಸಿ) ಕೊಟ್ಟಿದೆ. ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಹೊಂದಿರುವ ಪ್ರಾಬಲ್ಯವನ್ನು ಕಡಿಮೆ ಮಾಡಲು ಈ ಹೊಸ ಆಪರೇಟರ್​ಗಳಿಂದ ಸಾಧ್ಯವಾಗಬಹುದು.

ಸಿವಿಲ್ ಏವಿಯೇಶನ್ ಮಿನಿಸ್ಟರ್ ರಾಮಮೋಹನ್ ನಾಯ್ಡು ಕಿಂಜರಪು ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪೋಸ್ಟ್ ಹಾಕಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಸ್ಥೆಗಳಿಗೆ ಉತ್ತೇಜನ ಕೊಡಲು ಸರ್ಕಾರ ಆದ್ಯತೆ ಕೊಟ್ಟಿದೆ. ಈ ನಿಟ್ಟಿನಲ್ಲಿ, ಕಳೆದ ವಾರದಲ್ಲಿ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್​ಪ್ರೆಸ್​ನ ಪ್ರತಿನಿಧಿಗಳನ್ನು ಭೇಟಿ ಮಾಡಿದೆ. ಶಂಖ್ ಏರ್​ಗೆ ಈ ಹಿಂದೆ ಅನುಮತಿಸಲಾಗಿದೆ. ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್ ಎರಡಕ್ಕೂ ಈ ವಾರ ಎನ್​ಒಸಿ ಕೊಡಲಾಗಿದೆ.

ಇದನ್ನೂ ಓದಿ: ಭಾರತದೊಂದಿಗೆ ಇದು ಕೆಟ್ಟ ಒಪ್ಪಂದ: ನ್ಯೂಜಿಲೆಂಡ್ ಸರ್ಕಾರದೊಳಗೆಯೇ ಅಪಸ್ವರ; ಇವರ ತಕರಾರುಗಳೇನು?

ಕೇರಳದ ಅಲ್ ಹಿಂದ್ ಗ್ರೂಪ್ ಟ್ರಾವಲ್ ಮತ್ತು ಟೂರಿಸಂ ಸೇವೆ ನೀಡುತ್ತವೆ. ಅದರ ವಿಮಾನಗಳು ಕೊರಿಯರ್ ಸೇವೆಗೂ ಬಳಕೆ ಆಗುತ್ತವೆ. ಹೈದರಾಬಾದ್​ನ ಫ್ಲೈಎಕ್ಸ್​ಪ್ರೆಸ್ ಸಂಸ್ಥೆಯು ಸರಕು ಸಾಗಣೆಯ ವಿಮಾನ ಸೇವೆ ನೀಡುತ್ತದೆ.

ಈಗಾಗಲೇ ಎನ್​ಒಸಿ ಹೊಂದಿರುವ ಶಂಖ್ ಏರ್ ಸಂಸ್ಥೆ ಸದ್ಯದಲ್ಲೇ ಪ್ರಾದೇಶಿಕ ಮಟ್ಟದಲ್ಲಿ ವಿಮಾನ ಸೇವೆ ಆರಂಭಿಸಬಹುದು. ಉತ್ತರಪ್ರದೇಶದ ಲಕ್ನೋ, ವಾರಾಣಸಿ, ಆಗ್ರಾ, ಗೋರಖಪುರ್ ಮೊದಲಾದ ಪ್ರಮುಖ ನಗರಗಳ ನಡುವೆ ಶಂಕ್ ಏರ್ ವಿಮಾನಗಳು ಸಂಚರಿಸಲಿವೆ.

ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?

ಕೇಂದ್ರ ಸರ್ಕಾರದ ಉಡಾನ್ ಸ್ಕೀಮ್ ಅಡಿಯಲ್ಲಿ ಸ್ಟಾರ್ ಏರ್, ಇಂಡಿಯಾ ಒನ್ ಏರ್, ಫ್ಲೈ91 ಇತ್ಯಾದಿ ಸಣ್ಣಪುಟ್ಟ ಸಂಸ್ಥೆಗಳು ಪ್ರಾದೇಶಿಕ ವಿಮಾನ ಸೇವೆ ಒದಗಿಸುತ್ತಿವೆ. ಆದರೆ, ದೇಶದ ಶೇ. 90ರಷ್ಟು ಮಾರುಕಟ್ಟೆಯು ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳ ಹಿಡಿತದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Virat Kohli: 16 ವರ್ಷಗಳ ನಂತರ ಶತಕ ಚಚ್ಚಿದ ಕಿಂಗ್ ಕೊಹ್ಲಿ – Kannada News | Virat Kohli Scores Vijay Hazare Century After 16 Years; A Boost Before NZ Series

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ (Virat Kohli), ಇದೀಗ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ (Vijay Hazare Trophy) ತಮ್ಮ ಶತಕಗಳ ಓಟವನ್ನು ಮುಂದುವರೆಸಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಡೆಲ್ಲಿ ಪರ ಆಡುತ್ತಿರುವ ವಿರಾಟ್, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ್ದಾರೆ. ಅಲ್ಲದೆ 16 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ.

16 ವರ್ಷಗಳ ನಂತರ ವಿರಾಟ್ ಶತಕ

ವಿರಾಟ್ ಕೊಹ್ಲಿ ಕೊನೆಯ ಬಾರಿಗೆ 2009 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಬಾರಿಸಿದ್ದರು. ಹರಿಯಾಣ ವಿರುದ್ಧ ನಡೆದಿದ್ದ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 124 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಮಾತ್ರವಲ್ಲದೆ ಆ ಆವೃತ್ತಿಯಲ್ಲಿ ರನ್​ಗಳ ಮಳೆ ಹರಿಸಿದ್ದ ವಿರಾಟ್ ಕೊಹ್ಲಿ ನಾಲ್ಕು ಶತಕಗಳು ಸೇರಿದಂತೆ 534 ರನ್ ಕಲೆಹಾಕಿದ್ದರು. ಈಗ, ಮತ್ತೊಮ್ಮೆ ದೇಶಿ ಅಂಗಳದಲ್ಲಿ ಅಬ್ಬರಿಸಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ತಮ್ಮ ಫಾರ್ಮ್​ ಮುಂದುವರೆಸಿರುವುದು ಟೀಂ ಇಂಡಿಯಾಗೆ ಆನೆಬಲ ತಂದಿದೆ.

4 ಏಕದಿನ ಇನ್ನಿಂಗ್ಸ್‌ಗಳಲ್ಲಿ 3ನೇ ಶತಕ

ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ಕೊಹ್ಲಿ ತಮ್ಮ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ. ಮೇಲೆ ಹೇಳಿದಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದ ಕೊಹ್ಲಿ, ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಕಲೆಹಾಕಿದ್ದರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದ್ದಾರೆ.

Virat Kohli: ಖಾತೆ ತೆರೆದು ಕ್ರಿಕೆಟ್ ದೇವರ ದಾಖಲೆಯನ್ನು ಪುನರಾವರ್ತಿಸಿದ ಕಿಂಗ್ ಕೊಹ್ಲಿ

ಗೆಲುವಿನತ್ತ ಡೆಲ್ಲಿ

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಂಧ್ರಪ್ರದೇಶ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ತಂಡದ ಪರ ರಿಕಿ ಭುಯಿ 133 ರನ್​ಗಳ ಶತಕದ ಇನ್ನಿಂಗ್ ಆಡಿದರು. ಈ ಗುರಿ ಬೆನ್ನಟ್ಟಿರುವ ಡೆಲ್ಲಿ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಮಾತ್ರವಲ್ಲದೆ ಆರಂಭಿಕ ಪ್ರಿಯಾಂಶ್ ಆರ್ಯ ಜೊತೆಗೂಡಿ ಎರಡನೇ ವಿಕೆಟ್​ಗೆ 113 ರನ್​ಗಳ ಜೊತೆಯಾಟವನ್ನು ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Wed, 24 December 25

Source link

ಚುನಾವಣೆಯಲ್ಲಿ ಮುಸ್ಲಿಮರು ಸೋಲಲ್ಲ, ಅವರನ್ನು ಸೋಲಿಸ್ತಾರೆ: ಮಹೇಶ್ವರಾನಂದ ಸ್ವಾಮೀಜಿ – Kannada News | Maheshwarananda Swamiji says that Muslim community needs at least 30 MLAs in the next Karnataka election

ಬಾಗಲಕೋಟೆ, ಡಿಸೆಂಬರ್​​ 24: ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಕೋಟಿ ಜನ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿ ಹೇಳಿದ್ದೇನು?

ರಾಜ್ಯದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನ ಇದ್ದಾರೆ. ಆದರೆ ಅವರ ಸಮುದಾಯದ 59 ಜನ ಶಾಸಕರಿದ್ದಾರೆ. 60 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರ 46 ಜನ ಎಂಎಲ್​​ಎಗಳಿದ್ದಾರೆ. 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ. ಆದ್ರೆ ಮುಸ್ಲಿಂ ಸಮುದಾಯದಿಂದ ಈ ಸಂಖ್ಯೆ ಬಹಳ ಕಡಿಮೆ ಇದೆ. ಚುನಾವಣೆ ಸಂದರ್ಭದಲ್ಲಿ ಕೇವಲ 15 ಜನ ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷ‌ ಟಿಕೆಟ್ ಕೊಡುತ್ತೆ. ಅದರಲ್ಲಿ 9 ಜನ ಗೆಲ್ತಾರೆ 6 ಜನ ಸೋಲ್ತಾರೆ. ಆದರೆ ಮುಂದಿನ ಬಾರಿ ಮುಸ್ಲಿಂ ಸಮುದಾಯದ 30 ಜನ ಶಾಸಕರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?

ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ ಸೋಲುವುದಿಲ್ಲ, ಅವರನ್ನ ಸೋಲಿಸಲಾಗುತ್ತೆ. ವಿಜಯಪುರದಲ್ಲೂ ಹಮೀದ ಮುಷರಫಿ ಅವರ ಸ್ಥಿತಿ ಇದೇ ಆಗಿದೆ. ಆದರೆ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಆಣೆಗೂ ಹಮೀದ ಮುಷರಫಿ ಅವರನ್ನು ಸೋಲಿಸುವವರನ್ನ ಮುಂದಿನ ಬಾರಿ ನಾವು ಸೋಲಿಸುತ್ತೇವೆ ಎಂದು ಹೇಳುವ ಮೂಲಕ ಸ್ವಾಮೀಜಿ ಪರೋಕ್ಷವಾಗಿ ಯತ್ನಾಳ್​​ರನ್ನ ಬೆಂಬಲಿಸುವ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಟಿಪ್ಪು ಸುಲ್ತಾನ್​​ ಮತ್ತು ಅಬ್ದುಲ್​​ ಕಲಾಂ ಅವರ ಸಾಧನೆ ಬಗ್ಗೆಯೂ ಈ ವೇಳೆ ಉಲ್ಲೇಖಿಸಿರುವ ಅವರು, ಟಿಪ್ಪು ಸುಲ್ತಾನ್​​ ಕುರಿತು ನಟ ಶಾರುಖ್ ಖಾನ್ ಸಿನೆಮಾ ಮಾಡಬೇಕೆಂದೂ ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:01 pm, Wed, 24 December 25

Source link

‘ಧುರಂಧರ್’ ಯಶಸ್ಸಿನ ಬಳಿಕ ‘ದೃಶ್ಯಂ 3’ ಚಿತ್ರದಿಂದ ಹೊರಬಂದ ಅಕ್ಷಯ್ ಖನ್ನಾ? – Kannada News | Akshaye Khanna and Ranveer Singh Opts out of Drishyam 3 and Don 3 respectively

2025ರಲ್ಲಿ ಅತಿ ಹೆಚ್ಚು ಕೆಲಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಧುರಂಧರ್’ (Dhurandhar) ಪಾತ್ರವಾಗಿದೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಕೇವಲ 20 ದಿನಕ್ಕೆ 600 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ಈ ಸಿನಿಮಾದ ಅಬ್ಬರ ನಿಂತಿಲ್ಲ. ವಿದೇಶದಿಂದ ಬಂದ ಆದಾಯವನ್ನೂ ಸೇರಿಸಿದರೆ 20 ದಿನಕ್ಕೆ ಒಟ್ಟು ಕಲೆಕ್ಷನ್ 925 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ನಟ ಅಕ್ಷಯ್ ಖನ್ನಾ (Akshaye Khanna) ಅವರ ಖ್ಯಾತಿ ಹೆಚ್ಚಾಗಿದೆ. ಹಾಗಾಗಿ ಅವರ ಬೇಡಿಕೆ ಕೂಡ ಹೆಚ್ಚಿದೆ. ಇದರ ಪರಿಣಾಮವಾಗಿ ಅವರು ‘ದೃಶ್ಯಂ 3’ (Drishyam 3) ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಆಗಿರುವುದು ದುಬಾರಿ ಸಂಭಾವನೆ!

‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಮಾಡಿದ್ದಾರೆ. ಇದು ವಿಲನ್ ಪಾತ್ರ. ಈ ಪಾತ್ರಕ್ಕಾಗಿ ಅವರು 2.5 ಕೋಟಿಯಿಂದ 3 ಕೋಟಿ ರೂಪಾಯಿ ತನಕ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ‘ಧುರಂಧರ್’ ಸೂಪರ್ ಹಿಟ್ ಆಗಿದ್ದೇ ತಡ, ಅಕ್ಷಯ್ ಖನ್ನಾ ಅವರು ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

‘ದೃಶ್ಯಂ 3’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಪಾತ್ರ ಮಾಡಬೇಕಿತ್ತು. ಆದರೆ ಈಗ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದರಿಂದ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ. ಅಲ್ಲದೇ, ಅಕ್ಷಯ್ ಖನ್ನಾ ಅವರು ತಮ್ಮ ಪಾತ್ರದ ಲುಕ್ ಕೂಡ ಬದಲಾಗಬೇಕು ಎಂದು ಹಠ ಹಿಡಿದಿದ್ದಾರಂತೆ. ಈ ವಿಚಾರದಲ್ಲಿ ಚಿತ್ರತಂಡದ ಜೊತೆ ಮಾತುಕಥೆ ನಡೆದು, ಸಫಲವಾಗದ ಪರಿಣಾಮ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಅದೇ ರೀತಿ, ‘ಧುರಂಧರ್’ ಸಿನಿಮಾದ ನಾಯಕ ರಣವೀರ್ ಸಿಂಗ್ ಕೂಡ ತಮ್ಮ ಮುಂದಿನ ಸಿನಿಮಾಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ‘ಧುರಂಧರ್’ ಬಳಿಕ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅವರು ಆ ಸಿನಿಮಾ ಮಾಡಲು ಈಗ ಸಿದ್ಧರಿಲ್ಲ ಎನ್ನಲಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಒಂದೇ ರೀತಿಯ ಸಿನಿಮಾ ಮಾಡುವ ಬದಲು ಬೇರೆ ಏನಾದರೂ ಪ್ರಯತ್ನಿಸಬೇಕು ಎಂಬುದು ಅವರ ಆಲೋಚನೆ.

ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2026ರ ಜನವರಿಯಿಂದ ‘ಡಾನ್ 3’ ಸಿನಿಮಾದ ಶೂಟಿಂಗ್ ಆರಂಭಿಸಲು ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಸಜ್ಜಾಗುತ್ತಿದ್ದರು. ಆದರೆ ಈಗ ರಣವೀರ್ ಸಿಂಗ್ ಅವರು ತಮ್ಮ ಮನಸ್ಸು ಬದಲಾಯಿಸಿ ‘ಡಾನ್ 3’ ಮಾಡದೇ ಇರಲು ತೀರ್ಮಾನಿಸಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಆದರೆ ಈ ಎಲ್ಲ ಅಂತೆ-ಕಂತೆಗಳ ಬಗ್ಗೆ ರಣವೀರ್ ಸಿಂಗ್ ಅವರಾಗಲಿ, ಅಕ್ಷಯ್ ಖನ್ನಾ ಅವರಾಗಲಿ ಅಥವಾ ಚಿತ್ರತಂಡದವರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

2025ರ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಒಂದು ಕನ್ನಡ ಸಿನಿಮಾ

Source link

Virat Kohli: ಖಾತೆ ತೆರೆದು ಕ್ರಿಕೆಟ್ ದೇವರ ದಾಖಲೆಯನ್ನು ಪುನರಾವರ್ತಿಸಿದ ಕಿಂಗ್ ಕೊಹ್ಲಿ – Kannada News | Virat Kohli’s 16,000 List A Runs: Sachin Tendulkar Milestone in Vijay Hazare Trophy Return

ಮತ್ತೊಂದು ಪ್ರಸಿದ್ಧ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಇಂದಿನಿಂದ ಆರಂಭವಾಗಿದೆ. ದೇಶದ ನಾನಾ ಸ್ಥಳಗಳಲ್ಲಿ ಹಲವು ತಂಡಗಳು ಕಣಕ್ಕಿಳಿದಿವೆ. ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯ ವಿಶೇಷತೆಯೆಂದರೆ, ಟೀಂ ಇಂಡಿಯಾದ ಇಬ್ಬರು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಬರೋಬ್ಬರಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಪುನಾರವರ್ತಿಸಿದರು. ವಾಸ್ತವವಾಗಿ ಕೊಹ್ಲಿ ಒಂದು ರನ್‌ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ಪೂರ್ಣಗೊಳಿಸಿದರು.

ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಆಡುವ ಮೊದಲು, ವಿರಾಟ್ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 15,999 ರನ್ ಗಳಿಸಿದ್ದರು. 342 ಪಂದ್ಯಗಳ 329 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ, 57 ಶತಕಗಳು ಮತ್ತು 54 ಅರ್ಧಶತಕಗಳೊಂದಿಗೆ ಇಷ್ಟು ರನ್ ಕಲೆಹಾಕಿದ್ದರು. ಇದೀಗ ಆಂಧ್ರಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ 330 ನೇ ಲಿಸ್ಟ್ ಎ ಇನ್ನಿಂಗ್ಸ್ ಆಡಿದ ಕೊಹ್ಲಿ 16,000 ರನ್ ಪೂರೈಸಿದರು.

ಲಿಸ್ಟ್ ಎ ಕ್ರಿಕೆಟ್​ನಲ್ಲಿ 16,000 ರನ್ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ತಮ್ಮ 343 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿರುವ ವಿರಾಟ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಹೊಂದಿದ್ದ ಮೈಲಿಗಲ್ಲನ್ನು ಮೀರಿದ್ದಾರೆ. ಲಿಸ್ಟ್ ಎ ಕ್ರಿಕೆಟ್​ನಲ್ಲಿ 16,000 ರನ್ ಕಲೆಹಾಕಿದ ಮೊದಲ ಭಾರತೀಯ ಸಚಿನ್ ತೆಂಡೂಲ್ಕರ್.

ವಿರಾಟ್ ಕೊಹ್ಲಿ 15 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಕೊನೆಯ ಬಾರಿಗೆ ಈ ಪಂದ್ಯಾವಳಿಯಲ್ಲಿ 2010-11ರಲ್ಲಿ ಆಡಿದ್ದ ಕೊಹ್ಲಿ ಇದೀಗ ಆಡಿದ ಮೊದಲ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಪುನಾರವರ್ತಿಸಿದ್ದಾರೆ. ಕೊಹ್ಲಿಗೆ, ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯು 2027 ರ ಜನವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಸಿದ್ಧತೆಗಾಗಿ ನಿರ್ಣಾಯಕವಾಗಿದೆ.

Published On – 3:46 pm, Wed, 24 December 25

Source link

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ – Kannada News | Roddam Jewellers Under Scrutiny in Sabarimala Temple Gold Theft Case

ಬಳ್ಳಾರಿ,ಡಿ.24: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ನಡೆದ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ತಂಡ (ಎಸ್ಐಟಿ) ಬಳ್ಳಾರಿಯ ರೊದ್ದಂ ಜುವೆಲರ್ಸ್ ಮೇಲೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಕೇರಳದ ಐವರು ಅಧಿಕಾರಿಗಳು ಜುವೆಲರಿ ಅಂಗಡಿಯನ್ನು ಸಂಪೂರ್ಣವಾಗಿ ಮುಚ್ಚಿ ಪರಿಶೀಲನೆ ನಡೆಸಿದ್ದಾರೆ. ಈ ಅಂಗಡಿಯ ಮಾಲೀಕ ಗೋವರ್ಧನ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿದೆ. ಗೋವರ್ಧನ್ ಅವರು ಕದ್ದ ಚಿನ್ನದಲ್ಲಿ ಸುಮಾರು 475 ಗ್ರಾಂ ಖರೀದಿಸಿದ್ದರು ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಈ ಹಿಂದೆ 2019ರಲ್ಲಿ ಅಯ್ಯಪ್ಪ ದೇಗುಲದ ದ್ವಾರಪಾಲಕ ಮೂರ್ತಿಗಳಿಗೆ ಚಿನ್ನ ಲೇಪನ ಮಾಡುವ ಜವಾಬ್ದಾರಿಯನ್ನು ಉನ್ನಿಕೃಷ್ಣನ್ ಅವರಿಗೆ ವಹಿಸಲಾಗಿತ್ತು. ಆದರೆ ಹಿಂದಿರುಗಿಸುವಾಗ ಚಿನ್ನದ ತೂಕದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ಪ್ರಕರಣದ ತನಿಖೆ ಇದೀಗ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ಗೋವರ್ಧನ್ ಅವರ ಹೇಳಿಕೆಗಳು ಮತ್ತು ಜ್ಯುವೆಲರಿ ಅಂಗಡಿಯಲ್ಲಿ ಲಭ್ಯವಿರುವ ದಾಖಲೆಗಳನ್ನು ತಾಳೆ ಹಾಕಿ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಅಂಗಡಿಯಲ್ಲಿ ಕೆಲಸ ಮಾಡುವ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗಿದೆ. ರೊದ್ದಂ ಜುವೆಲರ್ಸ್ ಮೇಲೆ ಮಾತ್ರವಲ್ಲದೆ, ಗೋವರ್ಧನ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನ್ಯಾಯಾಲಯದ ಸೂಚನೆಯ ನಂತರ ಎಸ್ಐಟಿ ತಂಡವು ತನಿಖೆಯನ್ನು ಚುರುಕುಗೊಳಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ – Kannada News | A little boy sang a bhajan of Lord Krishna, video goes viral

ಮುದ್ದು ಮಕ್ಕಳ (little kids) ಆಟ-ತುಂಟಾಟಗಳನ್ನು ನೋಡುವುದೇ ಚಂದ. ಪುಟಾಣಿಗಳ ಬಾಯಲ್ಲಿ ತೊದಲು ನುಡಿ, ಹಾಡುಗಳನ್ನು ಕೇಳಿದರೆ ಮನಸ್ಸಿನ ನೋವೆಲ್ಲಾ ಮರೆಯಾಗುತ್ತದೆ. ಈ ಪುಟಾಣಿಗಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ಸ್ತೋತ್ರವನ್ನು ಭಕ್ತಿಭಾವದಿಂದ ಹಾಡಿದೆ. ಮುದ್ದು ಕಂದನ ಕಂಠಸಿರಿಯಲ್ಲಿ ಮೂಡಿಬಂದ ಈ ಭಜನಾ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.

ಮಣಿಕರ್ಣಿಕ ಕಟೋಚ್ (Manikarnika Katoch) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ದೇವರ ಕೋಣೆಯಲ್ಲಿ ಕುಳಿತುಕೊಂಡು ಕೈಯಲ್ಲಿ ಪೂಜಾ ತಟ್ಟೆ ಹಿಡಿದುಕೊಂಡು ಭಜನೆಯಲ್ಲಿ ಮುಳುಗಿದೆ. ಈ ಪುಟಾಣಿಯೂ “ಅಚ್ಯುತಂ ಕೇಶವಂ” ಎಂಬ ಪ್ರಸಿದ್ಧ ಸ್ತೋತ್ರವನ್ನು ಹಾಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಈ ವಿಡಿಯೋ 6 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕೇನಿಸುವ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ವಿಡಿಯೋ ನನ್ನ ಹೃದಯ ಗೆದ್ದಿದೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಅಪ್ಪಟ ಕೃಷ್ಣ ಭಕ್ತ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Wed, 24 December 25

Source link