ಎಚ್‌ಐವಿ ಇದೆ ಎಂದು ತಿಳಿದು ಮದುವೆ ರದ್ದುಗೊಳಿಸಿದ್ದಕ್ಕೆ ಕೋಪಗೊಂಡು ಯುವತಿಗೆ ತನ್ನ ರಕ್ತವಿರುವ ಇಂಜೆಕ್ಷನ್ ಚುಚ್ಚಿದ ವ್ಯಕ್ತಿ
ಹೈದರಾಬಾದ್,ಮಾರ್ಚ್ 15: ಎಚ್‌ಐವಿ ಇದೆ ಎಂದು ತಿಳಿದ ಬಳಿಕ ಮದುವೆ(Marriage) ರದ್ದುಗೊಳಿಸಿದ್ದಕ್ಕೆ ಕೋಪಗೊಂಡು ವ್ಯಕ್ತಿ ಯುವತಿಗೆ ತನ್ನ ರಕ್ತವಿರುವ ಇಂಜೆಕ್ಷನ್ ಚುಚ್ಚಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. 22 ವರ್ಷದ ಯುವತಿಗೆ ಆತ ಎಚ್‌ಐವಿ ರಕ್ತವನ್ನು ಬಲವಂತವಾಗಿ ಚುಚ್ಚಿದ್ದಾನೆ.ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆರೋಪಿಯು ಸಂತ್ರಸ್ತೆಯ ಮನೆಯಲ್ಲಿ ಬಲವಂತವಾಗಿ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ. ಪೊಲೀಸರ ಪ್ರಕಾರ ಆರೋಪಿ ಹಾಗೂ ಸಂತ್ರಸ್ತೆ ಸಂಬಂಧಿಕರು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ ಮದುವೆಯನ್ನು ಅವನೊಂದಿಗೆ ಮಾಡಬೇಕೆಂದುಕೊಂಡಿದ್ದರು. ಆತನ…