All posts by nagaraj11081993

ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?

ಮಾಳು ಹಾಗೂ ಸೂರಜ್ ಅವರು ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಇಬ್ಬರೂ ಮನೆಯಿಂದ ಹೊರ ಹೋದರು. ಇವರ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಸಿಕ್ಕಿತ್ತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಗಿಲ್ಲಿ ಆಡಿದ ಮಾತು. ರಕ್ಷಿತಾ ಅವರು ಮಾಳು ಹಾಗೂ ಸೂರಜ್ ಬಳಿ ಹೋಗಿ ಅತ್ತಿದ್ದರಂತೆ. ಇವರು ಹೋಗುವ ಬಗ್ಗೆ ರಕ್ಷಿತಾಗೆ ಮೊದಲೇ ಸೂಚನೆ ಇತ್ತು ಎಂದು ಗಿಲ್ಲಿ ನಟ ಮಾತನಾಡಿದ್ದಾರೆ. ಆ ಬಗ್ಗೆ ಚರ್ಚೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮೀ ಹಣ – Kannada News | Gruhalakshmi Schemes 24th Instalment Credited to Belagavi Beneficiaries

ಬೆಳಗಾವಿ, ಡಿಸೆಂಬರ್​​ 30: ಹೊಸ ವರ್ಷದ ಸಂದರ್ಭದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಯೋಜನೆಯ 24ನೇ ಕಂತಿನ 2,000 ರೂ.  ಬೆಳಗಾವಿ ಜಿಲ್ಲೆಯ ಹಲವು ಮಹಿಳೆಯರ ಖಾತೆಗೆ ಸಂದಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಟಿವಿ9 ನಿರಂತರವಾಗಿ ವರದಿ ಪ್ರಸಾರ ಮಾಡಿತ್ತು. ಇನ್ನು ಹಣ ಪಡೆದ ಫಲಾನುಭವಿಗಳು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಣ ಹಾಕೋದು ವಿಳಂಬವಾದ ಹಿನ್ನೆಲೆ ಮಹಿಳೆಯರಲ್ಲಿ ಅಸಮಾಧಾನವಿತ್ತು.  ಆದರೆ ಈಗ ಹೊಸ ವರ್ಷದ ಹೊತ್ತಲ್ಲಿ ಹಣ ಬಂದಿರುವುದು ಸಂತಸ ತಂದಿದೆ ಎಂದು ಫಲಾನುಭವಿಗಳು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಾಂಧಿ ಕುಟುಂಬದಲ್ಲಿ ಶೀಘ್ರ ಮೊಳಗಲಿದೆ ಓಲಗದ ಸದ್ದು, ಮದುವೆ ಯಾರದ್ದು? – Kannada News | Raihan Vadra Takes Next Step, Engaged to Longtime Partner Aviva Baig

ನವದೆಹಲಿ, ಡಿಸೆಂಬರ್ 30: ಶೀಘ್ರವೇ ಗಾಂಧಿ ಕುಟುಂಬದಲ್ಲಿ ಮೊಳಗಲಿದೆ ಓಲಗದ ಸದ್ದು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi Vadra) ಮತ್ತು ರಾಬರ್ಟ್​ ವಾದ್ರಾ ಪುತ್ರ ರೆಹಾನ್ ವಾದ್ರಾ ಶೀಘ್ರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರೆಹಾನ್ ತನ್ನ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ರೆಹಾನ್ ವಾದ್ರಾ ಮತ್ತು ಅವಿವಾ ಕಳೆದ 7 ವರ್ಷಗಳಿಂದ ಪರಿಚಯವಿತ್ತು.

ರೆಹಾನ್ ಇತ್ತೀಚೆಗೆ ಅವಿವಾಗೆ ಪ್ರಪೋಸ್ ಮಾಡಿದ್ದಾರೆ. ಎರಡೂ ಕುಟುಂಬಗಳು ಅವರ ಮದುವೆಗೆ ಒಪ್ಪಿಗೆ ನೀಡಿವೆ. ಅವಿವಾ ರೆಹಾನ್ ಅವರ ವಿವಾಹ ಪ್ರಸ್ತಾಪವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಹೊಸ ವರ್ಷದ ಮೊದಲು ಈ ಸಂತೋಷದ ಸಂಬಂಧದ ಔಪಚಾರಿಕ ಆರಂಭವನ್ನು ನಿರೀಕ್ಷಿಸಲಾಗಿದೆ.

ನಿಶ್ಚಿತಾರ್ಥ ಸಮಾರಂಭವು ರಾಜಸ್ಥಾನದಲ್ಲಿ ನಡೆಯಲಿದ್ದು, ಇದು ಎರಡು ಮೂರು ದಿನಗಳ ಖಾಸಗಿ ಕಾರ್ಯಕ್ರಮವಾಗಿದೆ. ನಿಶ್ಚಿತಾರ್ಥದ ದಿನಾಂಕಗಳನ್ನು ಇನ್ನೂ ಬಹಿರಂಗಗೊಂಡಿಲ್ಲ. ನಿಶ್ಚಿತಾರ್ಥವು 2026 ರ ಜನವರಿ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ. ರೆಹಾನ್ ಮತ್ತು ಅವಿವಾ ಅವರ ನಿಶ್ಚಿತಾರ್ಥದ ಬಗ್ಗೆ ಯಾವುದೇ ಕುಟುಂಬ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮದುವೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಅವಿವಾ ಬೇಗ್ ಅವರ ಕುಟುಂಬ ದೆಹಲಿಯವರು.

ಮತ್ತಷ್ಟು ಓದಿ: ನೀವು ಚುನಾವಣೆಗಾಗಿ ಮಾತ್ರ, ನಾವು ದೇಶಕ್ಕಾಗಿ: ಬಿಜೆಪಿ ವಿರುದ್ಧ ಗುಡುಗಿದ ಪ್ರಿಯಾಂಕಾ ಗಾಂಧಿ

ಕಲೆ ಮತ್ತು ಛಾಯಾಗ್ರಹಣದಲ್ಲಿ ಉತ್ಸಾಹಿಯಾಗಿರುವ ರೆಹಾನ್, ರಾಜಕೀಯದಿಂದ ದೂರ ಇದ್ದಾರೆ,ದೆಹಲಿಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದೃಶ್ಯ ಕಲಾವಿದ ರೆಹಾನ್ ವಾದ್ರಾ ಡೆಹ್ರಾಡೂನ್ ಮತ್ತು ಲಂಡನ್‌ನಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ ರೆಹಾನ್ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅವಿವಾ ಬೇಗ್ ಅವರ ಕುಟುಂಬವನ್ನು ವಾದ್ರಾ ಕುಟುಂಬಕ್ಕೆ ಹತ್ತಿರವೆಂದು ಪರಿಗಣಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವಿವಾ ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ರೆಹಾನ್ ಅವರಂತೆಯೇ, ಅವಿವಾ ಬೇಗ್ ಕೂಡ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಛಾಯಾಗ್ರಾಹಕರಾಗಿದ್ದಾರೆ.

ಮಾಜಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿ ಅವಿವಾ ಬೇಗ್ ವೃತ್ತಿಪರ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಕೂಡ.ಯು ಕ್ಯಾನ್ಟ್ ಮಿಸ್ ದಿಸ್ ಮತ್ತು ದಿ ಇಲ್ಯೂಸರಿ ವರ್ಲ್ಡ್ ನಂತಹ ಪ್ರದರ್ಶನಗಳ ಮೂಲಕ ಖ್ಯಾತಿ ಗಳಿಸಿದ ಅವಿವಾ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೋರ್ಟಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೆಹಾನ್ ಅವರಂತೆಯೇ, ಅವಿವಾ ಬೇಗ್ ಕೂಡ ಪ್ರಕೃತಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಕಾಕ್ ಸಿಡಿಲಬ್ಬರ… ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್

ಸೌತ್ ಆಫ್ರಿಕಾ ಟಿ20 ಲೀಗ್​ನ 5ನೇ ಪಂದ್ಯದಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಭರ್ಜರಿ ಜಯ ಸಾಧಿಸಿದೆ. ಗೆಬೆಹಾದಲ್ಲಿ ಸೇಂಟ್ ಜಾರ್ಜ್​ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪ್ರಿಟೋರಿಯ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 77 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 20 ಓವರ್​ಗಳಲ್ಲಿ 188 ರನ್ ಕಲೆಹಾಕಿತು.

189 ರನ್​ಗಳ ಗುರಿ ಬೆನ್ನತ್ತಿದ ಪ್ರಿಟೋರಿಯ ಕ್ಯಾಪಿಟಲ್ಸ್ ತಂಡವು 18 ಓವರ್​ಗಳಲ್ಲಿ 140 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು 48 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಭರ್ಜರಿ ಗೆಲುವಿನೊಂದಿಗೆ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಬೋನಸ್ ಪಾಯಿಂಟ್ ಪಡೆದುಕೊಂಡಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ 1.25 ಕ್ಕಿಂತ ಹೆಚ್ಚಿನ ರನ್ ರೇಟ್ ವ್ಯತ್ಯಾಸದಲ್ಲಿ ಗೆಲ್ಲುವ ತಂಡಕ್ಕೆ ಹೆಚ್ಚುವರಿ ಒಂದು ಅಂಕಗಳನ್ನು ನೀಡಲಾಗುತ್ತದೆ. ಅದರಂತೆ ಪ್ರಿಟೋರಿಯ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಸನ್​ರೈಸರ್ಸ್ ಈಸ್ಟರ್ನ್​ ಕೇಪ್ ತಂಡವು ಒಟ್ಟು 5 ಅಂಕಗಳನ್ನು ಪಡೆದುಕೊಂಡಿದೆ.

 

Source link

ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್​’ ನೋಡ್ತಾರೆ ಸುದೀಪ್; ಇಲ್ಲಿದೆ ವಿವರ – Kannada News | Kichcha Sudeep to Watch Mark with Fans on Dec 31st: Bengaluru and Mysuru Screenings

ನಟ ಕಿಚ್ಚ ಸುದೀಪ್ (Kichcha Sudeep) ಅವರು ಮೊದಲ ದಿನ ಅಭಿಮಾನಿಗಳ ಜೊತೆ ಸಿನಿಮಾ ನೋಡೋದನ್ನು ನಿಲ್ಲಿಸಿ ಬಹಳ ಸಮಯ ಕಳೆದಿದೆ. ನೂಕು ನುಗ್ಗಲು ಉಂಟಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಅವರು ಅವಾಯ್ಡ್ ಮಾಡುತ್ತಾ ಬರುತ್ತಿದ್ದಾರೆ. ಈಗ ‘ಮಾರ್ಕ್’ ಸಿನಿಮಾ ಹಿಟ್ ಆಗಿದ್ದು, ಅವರು ಅಭಿಮಾನಿಗಳ ಜೊತೆ ಚಿತ್ರ ನೋಡಲು ನಿರ್ಧರಿಸಿದ್ದಾರೆ. ಡಿಸೆಂಬರ್ 31ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಸುದೀಪ್ ‘ಮಾರ್ಕ್’ ವೀಕ್ಷಣೆ ಮಾಡಲಿದ್ದಾರೆ.

ಕಳೆದ ವರ್ಷ ಡಿಸೆಂಬರ್ 25ರಂದು ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿತ್ತು. ಡಿಸೆಂಬರ್ 31ರಂದು ಅವರು ಪತ್ನಿ ಪ್ರಿಯಾ, ನಿರ್ದೇಶಕ ವಿಜಯ್ ಕಾರ್ತಿಕೇಯ, ಗಾಯಕ ವಿಜಯ್ ಪ್ರಕಾಶ್ ಹಾಗೂ ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದರು. ಈ ಬಾರಿ ಡಿಸೆಂಬರ್ 31ರಂದು ಫ್ಯಾನ್ಸ್ ಜೊತೆ ‘ಮಾರ್ಕ್’ ಸಿನಿಮಾ ನೋಡಲಿದ್ದಾರೆ.

ಡಿಸೆಂಬರ್ 31ರಂದು ಬೆಂಗಳೂರಿನ ಗಾಂಧಿ ನಗರದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30ರ ಶೋನ ಸುದೀಪ್ ವೀಕ್ಷಿಸಲಿದ್ದಾರೆ. ಈ ಶೋ ಪೂರ್ಣಗೊಂಡ ಬಳಿಕ ಅವರು ಅಲ್ಲಿಂದ ನೇರವಾಗಿ ಮೈಸೂರಿಗೆ ತೆರಳಲಿದ್ದಾರೆ. ಮೈಸೂರಿನ ಸಂಗಮ ಚಿತ್ರಮಂದಿರದಲ್ಲಿ ಸಂಜೆ 4.30ಕ್ಕೆ ಅಭಿಮಾನಿಗಳ ಜೊತೆ ಸಿನಿಮಾ ನೋಡಲಿದ್ದಾರೆ.

ಈ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ್ದ ಸುದೀಪ್, ‘ಫಸ್ಟ್​ ಡೇ ಸಿನಿಮಾ ನೋಡ್ತೀರಾ’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ‘ಸದ್ಯಕ್ಕೆ ಆ ಬಗ್ಗೆ ಆಲೋಚನೆ ಇಲ್ಲ. ಸಿನಿಮಾ ಚೆನ್ನಾಗಿ ಹೋದರೆ ಅಭಿಮಾನಿಗಳ ಜೊತೆ ಡಿಸೆಂಬರ್ 31ರಂದು ಸಿನಿಮಾ ನೋಡುತ್ತೇನೆ’ ಎಂದಿದ್ದರು. ಈಗ ಚಿತ್ರಕ್ಕೆ ಮೆಚ್ಚುಗೆ ಸಿಕ್ಕ ಹಿನ್ನೆಲೆಯಲ್ಲಿ ಅವರು ಫ್ಯಾನ್ಸ್ ಜೊತೆ ‘ಮಾರ್ಕ್’ ಸಿನಿಮಾ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಮಾರ್ಕ್’; ದಾಖಲೆ ನಿರ್ಮಾಣ

ಡಿಸೆಂಬರ್ 25ರಂದು ರಿಲೀಸ್ ಆದ ‘ಮಾರ್ಕ್’ ಸಿನಿಮಾ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಸೂಪರ್ ಹಿಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:20 pm, Tue, 30 December 25

Source link

ಅಪರೂಪದ ದಾಖಲೆ ಬರೆಯಲಿರುವ ‘ಅವತಾರ್’ ನಿರ್ದೇಶಕ ಜೇಮ್ಸ್ ಕ್ಯಾಮರನ್ – Kannada News | James Cameron to be create record by Avatar fire and Ash

ಅವತಾರ್ 3’ (Avatar 3) ಸಿನಿಮಾ ಬಿಡುಗಡೆ ಆಗಿ ಕೆಲ ವಾರಗಷ್ಟೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವಿಶ್ವಮಟ್ಟದಲ್ಲಿ ವ್ಯಕ್ತವಾಗಿದೆ. ಜೇಮ್ಸ್ ಕ್ಯಾಮರನ್ ಈ ವರೆಗೆ ನಿರ್ದೇಶಿಸಿರುವ ಸಿನಿಮಾಗಳಲ್ಲಿಯೇ ಕಡಿಮೆ ಗುಣಮಟ್ಟದ ಸಿನಿಮಾ ಇದೆಂದು ಸಹ ಕೆಲವು ವಿಮರ್ಶಕರು ಟೀಕೆ ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್​​ನಲ್ಲಿ ‘ಅವತಾರ್ 3’ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿದೆ. ಇದೆಲ್ಲದರ ಹೊರತಾಗಿಯೂ ‘ಅವತಾರ್ 3’ ಸಿನಿಮಾ ಹಾಗೂ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಜೇಮ್ಸ್ ಕ್ಯಾಮರನ್ ವಿಶ್ವ ಬಾಕ್ಸ್ ಆಫೀಸ್​​ನ ಸುಲ್ತಾನರೇ ಆಗಿದ್ದಾರೆ. ಅವರು ನಿರ್ದೇಶಿಸಿರುವ ಮೂರು ಸಿನಿಮಾಗಳು ಒಂದರ ಹಿಂದೆ ಒಂದರಂತೆ 10000 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿವೆ. ಇದೀಗ ‘ಅವತಾರ್ 3’ ಸಿನಿಮಾ ಸಹ ಅದೇ ಹಾದಿಯಲ್ಲಿದ್ದು, ಆ ಮೂಲಕ ಜೇಮ್ಸ್ ಕ್ಯಾಮರನ್ ನಿರ್ದೇಶನದ ಸತತ ನಾಲ್ಕನೇ ಸಿನಿಮಾ ಹತ್ತು ಸಾವಿರ ಕೋಟಿ ಗಳಿಕೆ ಮಾಡಿದಂತಾಗಲಿದೆ.

ಜೇಮ್ಸ್ ಕ್ಯಾಮರನ್ ನಿರ್ದೇಶಿಸಿದ್ದ ‘ಟೈಟಾನಿಕ್’ ಸಿನಿಮಾ ಮೊದಲ ಬಾರಿಗೆ ಒಂದು ಬಿಲಿಯನ್ ಅಥವಾ ಎಂಟು ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತು. ಅದಾದ ಬಳಿಕ 2000 ರಲ್ಲಿ ಜೇಮ್ಸ್ ಅವರು ‘ಅವತಾರ್’ ಸಿನಿಮಾ ನಿರ್ದೇಶಿಸಿದರು. ಈ ಸಿನಿಮಾ 2.9 ಬಿಲಿಯನ್​​ಗೂ ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಸಿತು. ಬಳಿಕ ಜೇಮ್ಸ್ ‘ಅವತಾರ್ 2’ ನಿರ್ದೇಶಿಸಿದರು. ಈ ಸಿನಿಮಾ ಸಹ ಎರಡು ಬಿಲಿಯನ್​​ಗೂ ಹೆಚ್ಚು ಮೊತ್ತವನ್ನು ಗಳಿಸಿತು. ಇದೀಗ ‘ಅವತಾರ್ 3’ (ಅವತಾರ್: ಫೈರ್ ಆಂಡ್ ಆಶ್) ನಿರ್ದೇಶಿಸಿದ್ದು, ಈ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಮೊತ್ತ ಗಳಿಕೆಯಲ್ಲಿದ್ದು, ಶೀಘ್ರವೇ ಒಂದು ಬಿಲಿಯನ್ ಕಲೆಕ್ಷನ್ ದಾಟಲಿದೆ.

ಇದನ್ನೂ ಓದಿ:‘ಅವತಾರ್ 3’ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ

ಆ ಮೂಲಕ, ಸತತ ನಾಲ್ಕು ಬಾರಿ ಒಂದು ಬಿಲಿಯನ್​​ಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ ವಿಶ್ವದ ಏಕೈಕ ಸಿನಿಮಾ ನಿರ್ದೇಶಕ ಎಂಬ ಗೌರವಕ್ಕೆ ಜೇಮ್ಸ್ ಕ್ಯಾಮರನ್ ಪಾತ್ರರಾಗಲಿದ್ದಾರೆ. ಈ ಹಿಂದೆ ‘ಅವೇಂಜರ್ಸ್’ ಸರಣಿಯ ಎರಡು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಎರಡು ಬಿಲಿಯನ್​​ಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದ್ದವು. ಆ ದಾಖಲೆಯನ್ನು ಜೇಮ್ಸ್ ಕ್ಯಾಮರನ್ ಮುರಿದಿದ್ದು, ಹೊಸ ದಾಖಲೆಯನ್ನು ಬರೆಯಲು ಸಜ್ಜಾಗಿದ್ದಾರೆ.

‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ವಿಶ್ವ ಬಾಕ್ಸ್​ ಆಫೀಸ್​​ನಲ್ಲಿ ಈವರೆಗೆ 6800 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆ ಆಗಿ 12 ದಿನಗಳಷ್ಟೆ ಆಗಿದ್ದು, ಮುಂದಿನ ದಿನಗಳಲ್ಲಿ ಈ ಸಿನಿಮಾ 10000 ಕೋಟಿ ಗಳಿಕೆಯನ್ನು ದಾಟುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ತಿ ಮಾರಿ ಬಂದ 94 ಲಕ್ಷ ರೂನಲ್ಲಿ 38 ಲಕ್ಷ ರೂ ಕ್ಯಾಷ್; ಅಘೋಷಿತ ಆದಾಯವೆಂದು ಟ್ಯಾಕ್ಸ್ ನೋಟೀಸ್; ಕೇಸ್ ಗೆದ್ದ ಮಹಿಳೆ – Kannada News | Lady sells property, deposits cash into account, gets tax notice, but wins case at Mumbai ATAT

ಮುಂಬೈ, ಡಿಸೆಂಬರ್ 30: ಚಿರಾಸ್ತಿ ಮಾರಿ ಬಂದ ಹಣದಲ್ಲಿ ಒಂದಷ್ಟು ಕ್ಯಾಷ್ ಸಿಕ್ಕು, ಅದರಲ್ಲಿ ಸ್ವಲ್ಪವನ್ನು ಅಕೌಂಟ್​ಗೆ ಡೆಪಾಸಿಟ್ ಮಾಡಿದ್ದ ಮಹಿಳೆಗೆ ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟೀಸ್ ಬಂದಿದೆ. ಅಘೋಷಿತ ಆದಾಯ ಇದೆ ಎಂದು ವಿವರ ಕೇಳಿ ನೋಟೀಸ್ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆ ಮಹಿಳೆಯ ಪರವಾಗಿ ತೀರ್ಪು ಕೊಟ್ಟಿದೆ. ಆಸ್ತಿ ಮಾರುವವರಿಗೆ ಈ ಪ್ರಕರಣ ಕೆಲ ಕಾನೂನು ಅರಿವು ಪಡೆಯಲು ಸಹಾಯವಾಗಬಹುದು.

ಏನಿದು ಪ್ರಕರಣ?

ಮಹಿಳೆಯೊಬ್ಬರು (ಶ್ರೀಮತಿ ಚವಾಣ್) ಎಂಬುವವರು ತಮ್ಮ ಆಸ್ತಿಯೊಂದನ್ನು 94.06 ಲಕ್ಷ ರೂಗೆ ಮಾರಿದ್ದಾರೆ. ಇದರಲ್ಲಿ 38,15,000 ರೂ ಅನ್ನು ಕ್ಯಾಷ್ ರೂಪದಲ್ಲಿ ಪಡೆದಿದ್ದಾರೆ. ಅದು ನೊಂದಾಯಿತ ಕ್ರಯವಾಗಿತ್ತು. ಅಂದರೆ ರಿಜಿಸ್ಟರ್ಡ್ ಸೇಲ್ ಡೀಡ್. ಇದರಲ್ಲಿ ಕ್ಯಾಷ್ ರೂಪದಲ್ಲಿ ಹಣ ಪಡೆಯಲಾಗಿದ್ದನ್ನೂ ನಮೂದಿಸಲಾಗಿರುತ್ತದೆ.

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಚವಾಣ್ ಅವರು ತಮಗೆ ಬಂದ 38.15 ಲಕ್ಷ ರೂ ಕ್ಯಾಷ್ ಹಣದಲ್ಲಿ 13,00,500 ರೂ ಅನ್ನು ತಮ್ಮ ಐಸಿಐಸಿಐ ಬ್ಯಾಂಕ್ ಅಕೌಂಟ್​ಗೆ ಡೆಪಾಸಿಟ್ ಮಾಡಿದ್ದಾರೆ. ಆದರೆ, ಆ ವರ್ಷ ಇವರು ಐಟಿ ರಿಟರ್ನ್ ಸಲ್ಲಿಸಿಲ್ಲ. ಇವರ ಬ್ಯಾಂಕ್ ಖಾತೆಗೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಆಗಿರುವ ಬಗ್ಗೆ ಎಐಎಂಎಸ್ ಮಾಡ್ಯೂಲ್ ಮೂಲಕ ಆದಾಯ ತೆರಿಗೆ ಅಧಿಕಾರಿಗೆ ತಿಳಿಯುತ್ತದೆ. ಈ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಎಲ್ಲಿಂದ ಬಂತು, ಅದರ ಆದಾಯ ಮೂಲ ಏನು ಎಂದು ಹೇಳಿ ಅಸೆಸ್ಮೆಂಟ್ ಆಫೀಸರ್ ನೋಟೀಸ್ ಕೊಟ್ಟಿದ್ದಾರೆ. ಇದಾಗಿದ್ದು 2022 ಏಪ್ರಿಲ್ 28ರಂದು.

ಇದಾದ ಬಳಿಕ ಮಹಿಳೆಯು ಆ ವರ್ಷಕ್ಕೆ ಐಟಿಆರ್ ಸಲ್ಲಿಸಿದ್ದಾರೆ. ಅದರಲ್ಲಿ ನೊಂದಾಯಿತ ಸೇಲ್ ಡೀಡ್, ರೆಸಿಪ್ಟ್, ಬ್ಯಾಂಕ್ ಸ್ಟೇಟ್ಮೆಂಟ್, ಕ್ಯಾಷ್ ಡೆಪಾಸಿಟ್ ಇವೆಲ್ಲದಕ್ಕೂ ದಾಖಲೆಗಳು ಮತ್ತು ವಿವರಣೆಗಳನ್ನು ಕೊಟ್ಟಿದ್ದಾರೆ.

ಇಷ್ಟಕ್ಕೆ ಐಟಿ ಇಲಾಖೆ ಸಮಾಧಾನಗೊಳ್ಳಬೇಕಿತ್ತು. ಆದರೆ, ಮಹಿಳೆ ಸಲ್ಲಿಸಿದ್ದ ಐಟಿಆರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ಅಸಿಂಧು ಎಂದು ಪರಿಗಣಿಸಲಾಗಿದೆ. ಅವರು ಕೊಟ್ಟಿದ್ದ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನೂ ಪರಿಗಣಿಸಲಾಗಿಲ್ಲ. ವಿಚಿತ್ರ ಎಂದರೆ 13 ಲಕ್ಷ ರೂ ಕ್ಯಾಷ್ ಡೆಪಾಸಿಟ್ ಅಷ್ಟೇ ಅಲ್ಲ, ಆಸ್ತಿ ಮಾರಾಟದಲ್ಲಿ ಬಂದ 94 ಲಕ್ಷ ರೂ ಇಡೀ ಹಣವನ್ನೇ ಅಘೋಷಿತ ಆದಾಯ ಎಂದು ವಾದಿಸಿದೆ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ಈ ಪ್ರಕರಣವು ಮುಂಬೈನ ಇನ್ಕಮ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿಯ ಮೆಟ್ಟಿಲೇರಿದೆ. ಮಹಿಳೆ ಒದಗಿಸಿರುವ ದಾಖಲೆಗಳನ್ನು ಕೋರ್ಟ್ ಮಾನ್ಯ ಮಾಡಿ 2025ರ ನವೆಂಬರ್ 13ರಂದು ಆಕೆಯ ಪರವಾಗಿ ತೀರ್ಪು ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ: ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು – Kannada News | Wife lodges a complaint against husband alleging assault and unacceptable behavior in Bengaluru

ಬೆಂಗಳೂರು, ಡಿಸೆಂಬರ್​​ 30: ಅವರಿಬ್ಬರು ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಹೆಚ್​​ಆರ್​​ ಆಗಿದ್ದ ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ ಸೆಪ್ಟೆಂಬರ್​​ 03, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಆದರೀಗ ಸೈಕೋ ಪತಿ ಕಾಟಕ್ಕೆ ಪತ್ನಿ ಬೆಚ್ಚಿಬಿದ್ದಿದ್ದಾಳೆ. ತಾನು ಮದುವೆಯಾಗಿದ್ದು ಇಂತವನನ್ನಾ ಎಂದು ಗೋಗರೆಯುತ್ತಿದ್ದಾಳೆ.

ಹೌದು, ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ​ ಸೈಕೋ ರೀತಿ ವರ್ತಿಸುತ್ತಿರೋದನ್ನು ಕಂಡು ಪತ್ನಿ ಬೆಚ್ಚಿಬಿದ್ದಿದ್ದಾಳೆ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುವ ಈತ, ಮನೆಯಲ್ಲಿ ಎಲ್ಲರ ಮುಂದೆಯೇ ಬೆತ್ತಲೆಯಾಗಿ ಓಡಾಡ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಹಾಗೆಯೇ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡ್ತಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಗಂಡನ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತಿರೋ ಮಹಿಳೆ ಇದೀಗ ಪೊಲೀಸ್​​ ಠಾಣೆ ಮೆಟ್ಟಿಲೇರಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ; ಪತಿಗಾಗಿ ಪತ್ನಿ ಪ್ರೊಟೆಸ್ಟ್​​

ದೂರಲ್ಲಿ ಏನಿದೆ?

ತನಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್​​ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ತನ್ನ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ತನಿಖೆ‌ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Spiritual Tips: ರಾತ್ರಿ ಮಲಗುವ ಮುನ್ನ ಮಹಿಳೆಯರು ಈ ಕೆಲಸ ಮಾಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ! – Kannada News | 4 things women must avoid at night banish negative energy

ರಾತ್ರಿ ಮಲಗುವ ಮುನ್ನ ಮಹಿಳೆಯರು ಈ ಕೆಲಸ ಮಾಡಲೇಬಾರದು

ವಾಸ್ತುಶಾಸ್ತ್ರದಲ್ಲಿ, ರಾತ್ರಿಯಲ್ಲಿ ಮೊಸರು ತಿನ್ನುವುದು, ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಮತ್ತು ಬಟ್ಟೆ ಹೊಲಿಯುವುದು ಮುಂತಾದ ಅನೇಕ ವಿಷಯಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಈ ನಿಯಮಗಳು ಪುರುಷರು ಮತ್ತು ಮಹಿಳೆಯರಿಗೆ ಅನ್ವಯಿಸುತ್ತವೆ. ಆದರೆ ಕೆಲವು ನಿಯಮಗಳು ಮಹಿಳೆಯರಿಗೆಂದೇ ಮಾಡಲಾಗಿದೆ. ಮಹಿಳೆಯರು ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ, ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೂದಲು ಕಟ್ಟಿಕೊಂಡು ಮಲಗುವುದು:

ಮಹಿಳೆಯರು ರಾತ್ರಿಯಲ್ಲಿ ಕೂದಲು ಕಟ್ಟಿಕೊಂಡು ಮಲಗಬಾರದು. ವಿಶೇಷವಾಗಿ ನೀವು ಒಬ್ಬಂಟಿಯಾಗಿ ಮಲಗುತ್ತಿದ್ದರೆ, ಕೂದಲು ಕಟ್ಟಿಕೊಂಡು ಮಲಗಬೇಡಿ. ಇದು ನಕಾರಾತ್ಮಕ ಶಕ್ತಿ ಅಥವಾ ದುಷ್ಟಶಕ್ತಿಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಸುಗಂಧ ದ್ರವ್ಯ:

ಮಹಿಳೆಯರು ರಾತ್ರಿಯಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ಅಥವಾ ಸುಗಂಧ ದ್ರವ್ಯವನ್ನು ಹಚ್ಚಿಕೊಂಡು ಮಲಗುವುದನ್ನು ತಪ್ಪಿಸಬೇಕು. ಸುಗಂಧ ದ್ರವ್ಯದ ವಾಸನೆಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಸುಗಂಧ ದ್ರವ್ಯವನ್ನು ಹಚ್ಚಬಾರದು.

ಇದನ್ನೂ ಓದಿ: ಮನೆಯಲ್ಲಿ ಮೂರು ಬರ್ನರ್‌ಗಳಿರುವ ಗ್ಯಾಸ್ ಸ್ಟೌವ್ ಬಳಸುತ್ತಿದ್ದೀರಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ತಲೆ ಬಾಚುವುದು:

ಅನೇಕ ಮಹಿಳೆಯರು ರಾತ್ರಿಯಲ್ಲಿ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡು ಮಲಗುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ, ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು.

ಜಗಳ ಅಥವಾ ವಾದ:

ಮಹಿಳೆಯರು ರಾತ್ರಿಯಲ್ಲಿ ಜಗಳ ಅಥವಾ ವಾದಗಳನ್ನು ತಪ್ಪಿಸಬೇಕು. ವಾಸ್ತವವಾಗಿ, ಈ ಕೆಲಸಗಳನ್ನು ಸಂಜೆ ಕೂಡ ಮಾಡಬಾರದು. ರಾತ್ರಿಯಲ್ಲಿ ಜಗಳಗಳು ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಜೊತೆಗೆ ಮಾನಸಿಕ ಅಶಾಂತಿಯು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿದ ವೈಕುಂಠ ಏಕಾದಶಿ – Kannada News | Mantralaya Vaikuntha Ekadashi: Grand Celebrations at Venkateshwara swamy temple

ರಾಯಚೂರು, ಡಿಸೆಂಬರ್ 30: ಮಂತ್ರಾಲಯ ರಾಯರ ಮಠದಲ್ಲಿ ವೈಕುಂಠ ಏಕಾದಶಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಮಂತ್ರಾಲಯದ ಓಲ್ಡ್ ಟೌನ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಬಗೆಯ ಹೂವುಗಳಿಂದ ಶ್ರೀಮಠ ಹಾಗೂ ದೇವಸ್ಥಾನವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಶ್ರೀ ರಾಘವೇಂದ್ರ ಸ್ವಾಮಿಗಳು ಸ್ಥಾಪಿಸಿದ ಈ ದೇವಾಲಯಕ್ಕೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ತುಳಸಿ ಅರ್ಚನೆ, ಪುಷ್ಪಾರ್ಚನೆ ನೆರವೇರಿಸಿ ವೆಂಕಟೇಶ್ವರ ಸ್ವಾಮಿಗೆ ಮಂಗಳಾರತಿ ಸಲ್ಲಿಸಿದರು. ನಂತರ ಪವಿತ್ರ ವೈಕುಂಠ ದ್ವಾರವನ್ನು ಉದ್ಘಾಟಿಸಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link