Maoists Encounter: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ – Kannada News | Anti naxal operation in Odisha, 5 Maoists killed, 3 rifles recovered
ಭುಬನೇಶ್ವರ್, ಡಿಸೆಂಬರ್ 25: ಒಡಿಶಾದ ಕಂಧಮಾಲ್ ಜಿಲ್ಲೆಯ ವಿವಿಧೆಡೆ ನಿನ್ನೆ ಮತ್ತು ಇಂದು ನಡೆದ ಎರಡು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಐವರು ಮಾವೋವಾದಿ ಹೋರಾಟಗಾರರು ಹತರಾಗಿದ್ದಾರೆ. ನಿನ್ನೆ ಬುಧವಾರ ಬೆಲಗಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಮ್ಮ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಕೊಲ್ಲಲಾಗಿದೆ. ಇಂದು ಗುರುವಾರ ಚಾಕಪಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರಿಗ್ ಜೊಲ್ಲ ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ಈ ಎರಡು ದಿನಗಳ ಕಾರ್ಯಾಚರಣೆಯಲ್ಲಿ…