ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 14ರ ದಿನಭವಿಷ್ಯ
ಈ ದಿನ ಧರ್ಮ ಗ್ರಂಥಗಳನ್ನು ಓದಿ. ರಾಮಾಯಣ ಅಥವಾ ಭಗವದ್ಗೀತೆಯ ಯಾವುದಾದರೂ ಒಂದು ಅಧ್ಯಾಯವನ್ನು ಓದುವುದು ಮನಸ್ಸಿಗೆ ಸ್ಥಿರತೆ ನೀಡುತ್ತದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಹಪ್ಪಳ, ಸಂಡಿಗೆ, ಚಟ್ನಿಪುಡಿ, ಹುಳಿಪುಡಿ- ಸಾರಿನಪುಡಿ ಇಂಥದ್ದನ್ನು ಮಾರಾಟ ಮಾಡುವಂಥವರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ದೊಡ್ಡ ಏರಿಕೆ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಪದೋನ್ನತಿ ದೊರೆಯಲಿದೆ. ಅದರ ಬಗ್ಗೆ…