ದಾವಣಗೆರೆ ಬೈ ಎಲೆಕ್ಷನ್: ಬಿಜೆಪಿ ಮನೆಯೊಂದು 3 ಬಾಗಿಲು, ಕಾಂಗ್ರೆಸ್ ಮನೆಯೊಂದು ಎರಡು ಬಾಗಿಲು
ದಾವಣಗೆರೆ, (ಮಾರ್ಚ್ 13): ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ಸರಿಪಡಿಸಲು ಹೋರಾಡುತ್ತಿರುವ ಬಿಜೆಪಿ (BJP) ಈಗ ಉಪಚುನಾವಣೆಯನ್ನು (Davanagere South By Election) ಗೆದ್ದು ಕೊಳ್ಳುವ ನೆಪದಲ್ಲಾದರೂ ಭಿನ್ನಮತಕ್ಕೆ ಕೊನೆ ಹಾಡಲು ಸರ್ಕಸ್ ಮುಂದುವರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಜೊತೆಗೆ ಎರಡೂ ಬಣಗಳನ್ನು ಕೂರಿಸಿ ಚರ್ಚೆ ನಡೆಸಲಾಗಿದೆ. ಇನ್ನು ಕಾಂಗ್ರೆಸ್ನಲ್ಲೂ (Congress) ಸಹ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಇದಕ್ಕೆ…