ಇಂದಿರಾಗಾಂಧಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಬೆಡ್ ಹಿಡಿದಿದ್ದ ಬಾಲಕ; ಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಗುಣಮುಖ!
ಹೊಸಕೋಟೆ, ಮಾ.31 : ಬಡ ಮಕ್ಕಳಿಗಾಗಿಯೇ ಮೀಸಲಾಗಿರುವ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಆರೋಪ ಭಾರಿ ಸಂಚಲನ ಮೂಡಿಸಿದೆ. ಸ್ಪೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಹೊಸಕೋಟೆಯ 14 ವರ್ಷದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೇ ಒಂದು ವರ್ಷಗಳ ಕಾಲ ಪರಿತಪಿಸುವಂತೆ ಮಾಡಿದ್ದ ಆಸ್ಪತ್ರೆಯ ವಿರುದ್ಧ ಬಡ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳೆದೊಂದು ವರ್ಷದಿಂದ ಬೆಡ್ ಹಿಡಿದಿದ್ದ ಬಾಲಕನ ಪೋಷಕರು, ಇಂದಿರಾಗಾಂಧಿ ಆಸ್ಪತ್ರೆಗೆ ತಿಂಗಳಾನುಗಟ್ಟಲೆ ಓಡಾಡಿದ್ದಾರೆ. ಆದರೆ ವೈದ್ಯರು ಸಮಸ್ಯೆಯ ಮೂಲವನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದರು. ಬ್ರೈನ್,…