nagaraj11081993

Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

ವಸಾಯಿ, ಮಾರ್ಚ್​ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು…

Read More

ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ

ಬೆಂಗಳೂರು, ಮಾರ್ಚ್​​ 31: ವಿಧಾನಸಭೆ ಬಜೆಟ್​​ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​​. ಅಶೋಕ್​​ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ…

Read More

ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಶಾಕ್​​: ಎಸ್ಕಾಂಗಳಿಂದ ಹಳೆ ಬಾಕಿ ವಸೂಲಿ; ಯಾವ ವರ್ಗಕ್ಕೆ ಎಷ್ಟು ದರ ಏರಿಕೆ?

ಬೆಂಗಳೂರು, ಮಾ,31: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOMs) ನಷ್ಟವನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ದರ ಪರಿಷ್ಕರಣೆಗೆ ಹಸಿರು ನಿಶಾನೆ ತೋರಿಸಿದ್ದು, ಏಪ್ರಿಲ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ವಿಶೇಷವೆಂದರೆ, ಈ ದರ ಏರಿಕೆಯು 2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಘೋಷಿಸಲಾಗಿದೆ. ಅಂದರೆ, ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ…

Read More

ಶ್ರವಣ ದೋಷದಿಂದ ಬಳಲುತ್ತಿರುವ ಗಾಯಕಿ ಅಲ್ಕಾ ಯಾಗ್ನಿಕ್; ಇನ್ಮುಂದೆ ಹಾಡೋದು ಅನುಮಾನ

ಬಾಲಿವುಡ್‌ನ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷ ತಮಗೆ ಅಪರೂಪದ ಶ್ರವಣ ದೋಷ (Sensory Neural Nerve Hearing Loss) ಇರುವುದಾಗಿ ಅವರು ಬಹಿರಂಗಪಡಿಸಿದ್ದರು. ಆತಂಕದ ವಿಚಾರ ಏನೆಂದರೆ, ಈಗಲೂ ಅವರು ಆ ಸಮಸ್ಯೆಯಿಂದ ಗುಣಮುಖರಾಗಿಲ್ಲ. ಈ ನೋವಿನ ಸುದ್ದಿಯನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರು ಹಾಡುವುದು ಕಷ್ಟ ಎಂಬಂತಾಗಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅಲ್ಕಾ ಯಾಗ್ನಿಕ್ ಅವರು ತಮ್ಮ ಆರೋಗ್ಯದ ಬಗ್ಗೆ…

Read More

ಉದ್ಯಮಿ ಆತ್ಮಹತ್ಯೆಗೆ ಕೇಸ್​ಗೆ ಬಿಗ್‌ ಟ್ವಿಸ್ಟ್: ಪತ್ನಿ ಸೌಮ್ಯಳ ನವರಂಗಿ ಆಟ ಬಿಚ್ಚಿಟ್ಟ ಹಳೆ ಲವರ್

ಮಂಗಳೂರು, (ಮಾರ್ಚ್ 31): ಮದುವೆಯಾದ ಒಂದೇ ತಿಂಗಳಿಗೆ  ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ Sandeep Suicide case) ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಪತ್ನಿ ಸೌಮ್ಯಾಳ ನವರಂಗಿ ಆಟದಿಂದ ಬೇಸತ್ತು ಮದ್ವೆಯಾದ ಒಂದೇ ತಿಂಗಳಲ್ಲಿ ಪತಿ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಬೆನ್ನಲ್ಲೇ ಸೌಮ್ಯ ಶೆಟ್ಟಿ ಒಂದೊಂದೇ ಕರ್ಮಕಾಂಡಗಳು ಬಯಲಿಗೆ ಬರುತ್ತಿವೆ. ಸೌಮ್ಯ ಶೆಟ್ಟಿ ಸಾಮಾನ್ಯ ಕಲಾವಿದೆ…

Read More

ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ

ಬೆಂಗಳೂರು, ಮಾ.31: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಘಟನೆ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್‌ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ ತುಂಬಿಸಿಕೊಂಡು ಯಾರಿಗೂ ಹೆದರದೆ…

Read More

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ನವದೆಹಲಿ, ಮಾರ್ಚ್ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲ ನಿಯಮಗಳಲ್ಲಿ ಬದಲಾವಣೆ ಇರಲಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್​ಡ್ರಾಯಲ್, ಲಾಕರ್, ಎಫ್​ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್​ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆ ಇದೆ. ಏಪ್ರಿಲ್ 1ರಿಂದ ಕೆಲ ಮಹತ್ವದ ಹಣಕಾಸು ನಿಯಮಗಳ (Financial Rules) ಬದಲಾವಣೆ ಏನೇನು ಎನ್ನುವ…

Read More

TV9-Sensodyne Campaign |ಈ ಅಭಿಯಾನದ ಮೂಲಕ ನಿಮ್ಮ ದಂತ ವಯಸ್ಸನ್ನು ತಿಳಿಯಿರಿ: ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ

ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಗಿಂತಲೂ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಎಲ್ಲರ ಮಿಷನ್ ಆಗಿದೆ. ಈ ನಿಟ್ಟಿನಲ್ಲಿ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ…

Read More

ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಬೆಂಗಳೂರು, (ಮಾರ್ಚ್ 31): ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್​​​ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ (Bengaluru) ತಿಗಳರಪಾಳ್ಯದಲ್ಲಿ ನಡೆದಿದೆ.  ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್(38) ಹತ್ಯೆಯಾದ ವ್ಯಕ್ತಿ. ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿ ಯಾದಗಿರಿ ಮೂಲದ ಹನುಮಂತಪ್ಪ, ನಿನ್ನೆ (ಮಾರ್ಚ್ 30) ಮ್ಯಾನೇಜರ್ ರಾಹುಲ್ ಗೆ ಚಾಕುವಿನಿಂದ ಇರಿದಿದ್ದ. ಇದರಿಂದ ಗಾಯಗೊಂಡ ರಾಹುಲ್​ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ರಾಹುಲ್ ಆಸ್ಪತ್ರೆಯಲ್ಲಿ…

Read More

ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ

ವಿಜಯಪುರ, ಮಾರ್ಚ್​​ 31: ಸಾರಿಗೆ ಬಸ್​, ಬೈಕ್​ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್​​ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್​​ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್​​ ಕೂಡ…

Read More