All posts by nagaraj11081993

ಗ್ಯಾಸ್ ಸಂಕಷ್ಟ ಬೆನ್ನಲ್ಲೇ ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು

ಗ್ಯಾಸ್ ಸಂಕಷ್ಟ ಬೆನ್ನಲ್ಲೇ ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು

ಮಂಗಳೂರು, ಮಾರ್ಚ್ 13: ಇರಾನ್-ಇಸ್ರೇಲ್ ಯುದ್ಧದ ತೀವ್ರತೆಯು ಭಾರತದ ಗ್ರಾನೈಟ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಗ್ಯಾಸ್ ಕೊರತೆಯು ಟೈಲ್ಸ್, ಗ್ರಾನೈಟ್ ಮತ್ತು ವೆಟ್ರಿಫೈಡ್ ಟೈಲ್ಸ್ ಉತ್ಪಾದನೆಗೆ ದೊಡ್ಡ ಅಡಚಣೆಯಾಗಿದೆ. ಈಗಾಗಲೇ ದೇಶದಾದ್ಯಂತ ನೂರಾರು ಫ್ಯಾಕ್ಟರಿಗಳು ಮುಚ್ಚಲ್ಪಟ್ಟಿವೆ. ಮಂಗಳೂರಿಗೆ ಸರಬರಾಜು ಮಾಡುತ್ತಿದ್ದ ಹಲವು ಘಟಕಗಳಿಗೂ ಬೀಗ ಜಡಿಯಲಾಗಿದೆ. ಟೈಲ್ಸ್ ಮತ್ತು ವೆಟ್ರಿಫೈಡ್ ಟೈಲ್ಸ್ ತಯಾರಿಕೆಗೆ ನೈಸರ್ಗಿಕ ಅನಿಲವನ್ನು ಹೀಟಿಂಗ್ ಮತ್ತು ಕೂಲಿಂಗ್ ಪ್ರಕ್ರಿಯೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಗ್ಯಾಸ್ ಕೊರತೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಮತ್ತು ಉತ್ಪನ್ನಗಳ ಲಭ್ಯತೆ ಕುಸಿದಿದೆ. ಇದರ ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಟೈಲ್ಸ್ ಮತ್ತು ವೆಟ್ರಿಫೈಡ್ ಉತ್ಪನ್ನಗಳ ತೀವ್ರ ಕೊರತೆ ಎದುರಾಗಿದ್ದು, ಗ್ರಾಹಕರಿಗೆ ಆರ್ಡರ್ ಮಾಡಿದ ಉತ್ಪನ್ನಗಳು ಸಿಗುತ್ತಿಲ್ಲ. ಹೊಸ ಆರ್ಡರ್‌ಗಳನ್ನು ಅಂಗಡಿ ಮಾಲೀಕರು ಸಹ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಪರಿಸ್ಥಿತಿಯು ಸಾವಿರಾರು ಕಾರ್ಖಾನೆಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ, ಉದ್ಯೋಗಿಗಳ ಮೇಲೆ ಕೂಡ ಪರಿಣಾಮ ಬೀರಿದೆ. ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮಗಳು ದೇಶದ ಆರ್ಥಿಕತೆಯ ವಿವಿಧ ವಲಯಗಳ ಮೇಲೆ ವ್ಯಾಪಕವಾಗಿ ಹರಡುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಿನೊಳಗೆ ಕುಳಿತು ಬರೋಬ್ಬರಿ ಐದು ವರ್ಷಗಳ ಕಾಲ ಸುರಂಗ ತೋಡಿದ ಕೈದಿ, ಕೊನೆಗೆ ಹೋಗಿದ್ದೆಲ್ಲಿಗೆ?

ಬ್ರೆಜಿಲ್, ಮಾರ್ಚ್​ 13: ಕೈದಿ(Prisoner)ಗಳು ಹೇಗಾದರೂ ಮಾಡಿ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ಹಲವು ಸಾಹಸಗಳನ್ನು ಮಾಡುತ್ತಾರೆ. ಅದರಲ್ಲಿ ಇದು ಕೂಡ ಒಂದು. ಕೆಲವರು ಜೈಲಿನ ಗೋಡೆ ಹತ್ತಿ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವರು ಆರೋಗ್ಯ ಸರಿಯಿಲ್ಲ ಎನ್ನುವ ನೆಪವೊಡ್ಡಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವವರಿದ್ದಾರೆ.

ಕೈದಿಯೊಬ್ಬ ಬರೋಬ್ಬರಿ ಐದು ವರ್ಷಗಳ ಕಾಲ ಸುರಂಗ ತೋಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಪ್ರಯತ್ನವೇನೋ ಚೆನ್ನಾಗಿತ್ತು ಆದರೆ ಆ ಸುರಂಗ ಹೋಗಿದ್ದೆಲ್ಲಿಗೆ ಗೊತ್ತಾ, ಭದ್ರತಾ ಸಿಬ್ಬಂದಿ ಕೋಣೆಗೆ.

ಜೈಲಿನಿಂದ ತಪ್ಪಿಸಿಕೊಳ್ಳುವ ಪರಿ ಸಿನಿಮಾದಂತೆ ಕಾಣುತ್ತದೆ. ಶಾಂತ ಯೋಜನೆ, ತಾಳ್ಮೆ ಮತ್ತು ಸ್ವಾತಂತ್ರ್ಯದ ಒಂದೇ ಭರವಸೆ ಇಲ್ಲಿದೆ. ಬ್ರೆಜಿಲ್​​ನಲ್ಲಿ ಒಬ್ಬ ಕೈದಿಯು ಸುಮಾರು ಐದು ವರ್ಷಗಳ ಕಾಲ ಭಾರೀ ಭದ್ರತೆಯಿರುವ ಜೈಲಿನ ಕೆಳಗೆ ರಹಸ್ಯವಾಗಿ ಸುರಂಗವನ್ನು ಅಗೆಯುತ್ತಿದ್ದ.

ಮತ್ತಷ್ಟು ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ವರದಿಗಳ ಪ್ರಕಾರ, ಕೈದಿ ವರ್ಷಗಳ ಕಾಲ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದ, ಅಂತಿಮ ತಪ್ಪಿಸಿಕೊಳ್ಳುವಿಕೆಗೆ ತಯಾರಿ ನಡೆಸಿದ್ದ, ಅಂತಿಮವಾಗಿ ಸುರಂಗವು ಪೂರ್ಣಗೊಂಡಾಗ, ಆತ ತೆರೆದ ಗಾಳಿ ಮತ್ತು ಸ್ವಾತಂತ್ರ್ಯವನ್ನು ನಿರೀಕ್ಷಿಸುತ್ತಾ ತುದಿವರೆಗೆ ತೆವಳುತ್ತಾ ಹೋದ. ಬದಲಾಗಿ ಸುರಂಗವು ನೇರವಾಗಿ ಅಧಿಕಾರಿಗಳು ಈಗಾಗಲೇ ಇದ್ದ ಭದ್ರತಾ ಸಿಬ್ಬಂದಿ ಕೋಣೆಯೊಳಲ್ಲಿ ಕೊನೆಗೊಂಡಿದೆ.

ಇದು ಬ್ರೆಜಿಲ್‌ನ ಜೈಲು ವ್ಯವಸ್ಥೆಯ ಕೆಲವು ಭಾಗಗಳೊಳಗಿನ ಕಿಕ್ಕಿರಿದ ಮತ್ತು ಕಷ್ಟಕರ ಪರಿಸ್ಥಿತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿತು. ಆತ ಸುರಂಗದಿಂದ ಹೊರಬರುತ್ತಿದ್ದಂತೆ ಅತ್ತ ಅಧಿಕಾರಿಗಳು ಆತನನ್ನು ಕೆಳಗಿಳಿಸಿದ್ದಾರೆ. 2023ರ ವರದಿ ಪ್ರಕಾರ, ವಿಸ್ತೀರ್ಣದ ಆಧಾರದಲ್ಲಿ 5ನೇ ಅತಿದೊಡ್ಡ ದೇಶ ಎನಿಸಿಕೊಂಡಿರುವ ಬ್ರೆಜಿಲ್‌ನಲ್ಲಿ ಅಪರಾಧಿಗಳ ಸಂಖ್ಯೆ ಕೂಡಾ ಹೆಚ್ಚೇ ಇದೆ. ಬ್ರೆಜಿಲ್‌ನಲ್ಲಿ ಒಟ್ಟು 8,11,707 ಮಂದಿ ಕೈದಿಗಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ತಾಪಮಾನ ಹೆಚ್ಚಳದೊಂದಿಗೆ ಶುಷ್ಕ ವಾತಾವರಣ

ಬೆಂಗಳೂರು, ಮಾರ್ಚ್​ 13: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿದ್ದು, ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣ ಹವೆ?

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಲ್ಕ್ ಬೋರ್ಡ್ ಟ್ರಾಫಿಕ್​ಗೆ ಶೀಘ್ರ ಮುಕ್ತಿ: ಡಬಲ್ ಡೆಕ್ಕರ್ ಫ್ಲೈಓವರ್ ಮತ್ತೊಂದು ಭಾಗ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್

ಬೆಂಗಳೂರು, ಮಾರ್ಚ್ 13: ಬೆಂಗಳೂರಿನ (Bangalore) ಅತ್ಯಂತ ದಟ್ಟಣೆಯ ಮತ್ತು ಟ್ರಾಫಿಕ್ ಸಮಸ್ಯೆಗೆ ಕುಪ್ರಸಿದ್ಧವಾದ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರಮುಖವಾಗಿದೆ. ಈ ಭಾಗದಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಆದರೆ ಈಗ ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದ್ದು, ಈ ಭಾಗದ ಸವಾರರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಶುಭ ಸುದ್ದಿ ನೀಡಿದೆ. ಸಿಲ್ಕ್ ಬೋರ್ಡ್ ಭಾಗದ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್‌ನ ಇನ್ನೊಂದು ಭಾಗವನ್ನು ಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಈ ಮಾರ್ಗವನ್ನು ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

ಸುಮಾರು 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡಬಲ್ ಡೆಕ್ಕರ್ ಫ್ಲೈಓವರ್ 3.36 ಕಿಲೋಮೀಟರ್ ಉದ್ದ ಹೊಂದಿದ್ದು, ಲೂಪ್ ಮತ್ತು ಇಳಿಜಾರುಗಳನ್ನು ಸೇರಿಸಿ ಒಟ್ಟು 5.12 ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.

2024ರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಗಿಗುಡ್ಡದಿಂದ ಎಚ್‌ಎಸ್‌ಆರ್ ಲೇಔಟ್, ಹೊಸೂರು ರಸ್ತೆ ಮತ್ತು ಬೊಮ್ಮನಹಳ್ಳಿ ಮಾರ್ಗದ ಡಬಲ್ ಡೆಕ್ಕರ್ ಫ್ಲೈಓವರ್‌ನ ಒಂದು ಭಾಗವನ್ನು ಪ್ರಾಯೋಗಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಇದರಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೆಚ್ಚಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಕೆಲ ಮಟ್ಟಿಗೆ ಕಡಿಮೆಯಾಗಿತ್ತು.

ಡಬಲ್ ಡೆಕ್ಕರ್ ಫ್ಲೈಓವರ್ ಮತ್ತೊಂದು ಭಾಗದ ಕಾಮಗಾರಿ ಬಹುತೇಕ ಪೂರ್ಣ

ಆದರೆ ಫ್ಲೈಓವರ್‌ನ ಇನ್ನೊಂದು ಭಾಗದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಾರ್ಗವನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗಿರಲಿಲ್ಲ. ಇದರ ಪರಿಣಾಮವಾಗಿ ಎಚ್‌ಎಸ್‌ಆರ್ ಲೇಔಟ್ ಕಡೆಯಿಂದ ರಾಗಿಗುಡ್ಡ ಮಾರ್ಗಕ್ಕೆ ಸಂಚರಿಸುವ ವಾಹನ ಸವಾರರು ಇನ್ನೂ ಸಿಲ್ಕ್ ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್ ಜಂಕ್ಷನ್ ಸೇರಿದಂತೆ ಹಲವು ಸ್ಥಳಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದ್ದರು. ಪ್ರಸ್ತುತ ಫ್ಲೈಓವರ್‌ನ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೇಂಟಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳು ಮಾತ್ರ ಬಾಕಿಯಿವೆ. ಈ ಕಾರ್ಯಗಳು ಈ ತಿಂಗಳ ಕೊನೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಮಾರ್ಗ ಸಂಚಾರಕ್ಕೆ ತೆರೆಯಲಾದ ನಂತರ ಔಟರ್ ರಿಂಗ್ ರೋಡ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಭಾಗದಿಂದ ಬರುವ ವಾಹನ ಸವಾರರು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಹಿಂಭಾಗದಲ್ಲೇ ಫ್ಲೈಓವರ್ ಮೂಲಕ ನೇರವಾಗಿ ಸಾಗುವ ಅವಕಾಶ ದೊರೆಯಲಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಸುಮಾರು ಅರ್ಧದಷ್ಟು ಕಡಿಮೆಯಾಗಬಹುದು ಎಂದು ವಾಹನ ಸವಾರರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜನಗಳೇ ಗ್ಯಾಸ್ ಸಿಲಿಂಡರ್ ಚಿಂತೆ ಬಿಡಿ: ಆಹಾರ ಇಲಾಖೆ ಆಯುಕ್ತರ ಸ್ಪಷ್ಟನೆ ಕೇಳಿ

ಒಟ್ಟಿನಲ್ಲಿ, ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದ ಸಿಲ್ಕ್ ಬೋರ್ಡ್ ಭಾಗದ ಜನರಿಗೆ ಮತ್ತು ವಾಹನ ಸವಾರರಿಗೆ ಶೀಘ್ರದಲ್ಲೇ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಈ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ ಕನ್ನಡ ಚಿತ್ರರಂಗದಲ್ಲಿ ಅಪ್ಪು ಮೊದಲ ಫ್ರೆಂಡ್’; ಸಾಯಿ ಪಲ್ಲವಿ ಪ್ರೀತಿಯ ಮಾತು

ಪುನೀತ್ ರಾಜ್​​ಕುಮಾರ್ (Puneeth) ಹುಟ್ಟಿದ್ದು ಮಾರ್ಚ್ 17ರಂದು. ಅವರು ಇಂದು ನಮ್ಮ ಜೊತೆ ಇಲ್ಲ ಅಂಬ ನೋವು ಅಭಿಮಾನಿಗಳನ್ನು ಕಾಡಿದೆ. ಅವರು ಅನೇಕರಿಗೆ ಮಾದರಿ. ಕನ್ನಡದವರಿಗೆ ಮಾತ್ರವಲ್ಲ, ಪರಭಾಷೆಯವರಿಗೂ ಪುನೀತ್ ಅವರು ಇಷ್ಟು. ಅನುಪಮಾ ಪರಮೇಶ್ವರನ್, ಅದಾ ಶರ್ಮಾ ಸೇರಿದಂತೆ ಅನೇಕರು ಪುನೀತ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು ನೀವು ಕಾಣಬಹುದು. ಈಗ ಸಾಯಿ ಪಲ್ಲವಿ ಅವರ ಹೊಸ ವಿಡಿಯೋ ವೈರಲ್ ಆಗಿದೆ.

ಸಾಯಿ ಪಲ್ಲವಿ ಅವರು ಇತ್ತೀಚೆಗೆ ಪುನೀತ್ ರಾಜ್​​ಕುಮಾರ್ ಬಗ್ಗೆ ಮಾತನಾಡಿದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ವಿವರಿಸಿದ್ದರು. ‘ಈ ಇಂಡಸ್ಟ್ರಿಯಿಂದ ಮೊದಲು ಭೇಟಿ ಮಾಡಿದ್ದು ಅಂದರೆ ಅದು ಪುನೀತ್ ರಾಜ್ಕುಮಾರ್. ನಾನು, ಫಿಲ್ಮ್ ಫೇರ್ ಅವಾರ್ಡ್ನಲ್ಲಿ ಅವರು ಭೇಟಿ ಮಾಡಿದ್ದೆ. ನಾನು ಆಗತಾನೇ ಇಂಡಸ್ಟ್ರಿಗೆ ಬಂದಿದ್ದೆ. ಪ್ರೇಮಂ ಮಾಡಿದ್ದೆ’ ಎಂದು ಅವರು ಹೇಳಿದ್ದರು.

‘ನಾನು ಅವಾರ್ಡ್ ಫಂಕ್ಷನ್ನಿಂದ ತೆರಳುತ್ತಿದ್ದೆ. ಆಗ ಅವರು ಕರೆದು ಮಾತನಾಡಿಸಿದರು. ನಿಮ್ಮನ್ ಸಿನಿಮಾ ನೋಡಿದೆ. ಸಿನಿಮಾ ಚೆನ್ನಾಗಿದೆ ಎಂದು ಅವರು ನನಗೆ ಹೇಳಿದ್ದರು’ ಎಂಬುದಾಗಿ ಸಾಯಿ ಪಲ್ಲವಿ ವಿವರಿಸಿದ್ದರು. ಸಾಯಿ ಪಲ್ಲವಿ ಅವರ ಈ ವಿಡಿಯೋ ಗಮನ ಸೆಳೆಯುತ್ತಿದೆ. ಎಲ್ಲರೂ ಸಾಯಿ ಪಲ್ಲವಿ ಅವರನ್ನು ಹೊಗಳುತ್ತಿದ್ದಾರೆ. ಪುನೀತ್ ಬಗ್ಗೆ ಇಷ್ಟೊಳ್ಳೆಯ ಮಾತನ್ನು ಆಡಿದ ಅವರಿಗೆ ಧನ್ಯವಾದ ಹೇಳಿದ್ದಾರೆ ಸಾಯಿ ಪಲ್ಲವಿ.

ಇದನ್ನೂ ಓದಿ: ಪುನೀತ್, ವಿನಯ್, ಯುವ ರಾಜ್​​ಕುಮಾರ್ ಒಟ್ಟಿಗೆ ವರ್ಕೌಟ್ ಮಾಡಿದ ಅಪರೂಪದ ವಿಡಿಯೋ

ಪುನೀತ್ ರಾಜ್​​ಕುಮಾರ್ ಅವರು ನಿಧನ ಹೊಂದಿದ್ದು, ಅನೇಕರಿಗೆ ಬೇಸರ ಇದೆ. ಈ ವಿಷಯದಲ್ಲಿ ಅಭಿಮಾನಿಗಳಿಗೆ ಯಾವಾಗಲೂ ಬೇಸರ ಇದೆ. ಅವರು ಇದ್ದಿದ್ದರೆ ಹಲವು ಚಿತ್ರಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈಗ ಬರ್ತ್​​​ಡೇಗೆ ಅವರ ಹೊಸ ಸಿನಿಮಾ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಇಂದಿನಿಂದ ಶನಿ ಅಸ್ತಂಗತ, ಯಾವ ರಾಶಿ ಮೇಲೆ ಪರಿಣಾಮ?

ಬೆಂಗಳೂರು, ಮಾರ್ಚ್​​ 1 3​​: ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದಿನಿಂದ ಶನಿ ಅಸ್ತಂಗತ, ಯಾವ ರಾಶಿ ಮೇಲೆ ಪರಿಣಾಮ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೂರ್ಯನಿಗೆ ಹತ್ತಿರ ಬಂದಾಗ ಶನಿ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದನ್ನು “ಅಸ್ತಂಗತ” ಎಂದು ಕರೆಯಲಾಗುತ್ತದೆ. ಸುಮಾರು 40 ದಿನಗಳ ಈ ಅವಧಿಯಲ್ಲಿ ಶನಿ ಗ್ರಹದ ಪ್ರಭಾವ ಕಡಿಮೆಯಾಗಿರುತ್ತದೆ.

ಈ ಶನಿ ಅಸ್ತಂಗತವು ಭೂಗೋಳದ ಮೇಲೆ ಹಾಗೂ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಜಾಗತಿಕವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಬದಲಾವಣೆಗಳು, ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಟಾಲಿವುಡ್ ಸ್ಟಾರ್ ಹೀರೋಗಳು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್​​ಗಳನ್ನು ಹೊಂದುತ್ತಿದ್ದಾರೆ. ವಿಜಯ್ ದೇವರಕೊಂಡ, ಮಹೇಶ್ ಬಾಬು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಈಗ ಅಲ್ಲು ಅರ್ಜುನ್ (Allu Arjun) ಕೂಡ ಈ ಉದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು, ಹೈದರಾಬಾದ್​ ಅಲ್ಲಿ ಅಲ್ಲು ಸಿನಿಮಾಸ್ ಆರಂಭಿಸಿದ್ದಾರೆ. ಗುರುವಾರ (ಮಾರ್ಚ್ 12) ಇದರ ಉದ್ಘಾಟನೆ ಆಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಅಲ್ಲು ಅರ್ಜುನ್ ಅವರನ್ನು ಸಿಎಂ ಹೊಗಳಿದ್ದಾರೆ.

‘ಅಲ್ಲು ಅರ್ಜುನ್ ಭವಿಷ್ಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಮಿಂಚಬೇಕು. ತೆಲುಗು ನಟರ ಪ್ರತಿಭೆ ಅಲ್ಲಿಗೂ ತಲುಪಬೇಕು. ಇಲ್ಲಿಯವರೆಗೆ, ನಾವು ನಮ್ಮ ತೆಲುಗು ಸಿನಿಮಾಗಳನ್ನು ಬಾಲಿವುಡ್‌ನೊಂದಿಗೆ ಹೋಲಿಸುತ್ತಿದ್ದುದು ಕಲೆಕ್ಷನ್ ವಿಷಯದಲ್ಲಿ ಮಾತ್ರ’ ಎಂದು ರೇವಂತ್ ರೆಡ್ಡಿ ಹೇಳಿದರು.

ವರ್ಷಗಳು ಕಳೆದಂತೆ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನುಮುಂದೆ ಎಲ್ಲಾ ಭಾಷೆಯ ಸಿನಿಮಾಗಳು, ಎಲ್ಲರನ್ನೂ ತಲುಪುತ್ತವೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಕಥೆ ಚೆನ್ನಾಗಿದ್ದರೆ ಯಾವುದೇ ದೇಶದ ಜನ ಇರಲಿ, ಯಾವುದೇ ರಾಜ್ಯದ ಜನ ಇರಲಿ ಸಿನಿಮಾನ ನೋಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.

‘ಹಾಲಿವುಡ್‌ನೊಂದಿಗೆ ಟಾಲಿವುಡ್​ ಸ್ಪರ್ಧಿಬೇಕೆ ಹೊರತು, ನೆರೆಯ ರಾಜ್ಯಗಳು ಅಥವಾ ಬಾಲಿವುಡ್‌ನೊಂದಿಗೆ ಇನ್ನು ಮುಂದೆ ಸ್ಪರ್ಧಿಸಬಾರದು’ ಎಂದು ಅವರು ಹೇಳಿದ್ದಾರೆ. ಚಿತ್ರರಂಗಕ್ಕೆ ಸಂಪೂರ್ಣ ಬೆಂಬಲ ನೀಡೋದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಅಲ್ಲು ಅರ್ಜುನ್ ಅವರು ವಿವಿಧ ಉದ್ಯಮಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ತಮ್ಮದೇ ಕ್ಷೇತ್ರದಲ್ಲೂ ಅವರು ಬಿಸ್ನೆಸ್ ಆರಂಭಿಸಿದ್ದಾರೆ. ಅಲ್ಲು ಸಿನಿಮಾಸ್ ನಿರ್ಮಾಣ ಮಾಡುವ ಮೂಲಕ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಅವರು AA22xA6 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅಟ್ಲೀ ಇದರ ನಿರ್ದೇಶಕ. ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಬಸ್ಸಿನ ಹಿಂಭಾಗದಲ್ಲಿ ನೇತಾಡುತ್ತಾ ಶಾಲೆಗೆ ಹೊರಟ ಬಾಲಕ

ಶಿಕ್ಷಣವೆಂಬ ಕನಸಿನ ಬೆನ್ನೇರಿದಾಗ ಅಡ್ಡ ಬರುವ ಕಷ್ಟಗಳೆಲ್ಲಾ ನಗಣ್ಯ, ಹಿಂದಿನ ಕಾಲದವರು ಹೇಳಿದಂತೆ ಮಳೆ ಬರಲಿ, ಹೊಳೆ ಕಟ್ಟಲಿ ಸಾಧಿಸುವ ಛಲ ಬಿಡಬಾರದು. ಹಾಗೆಯೇ ಮಂಡಿಯಲ್ಲಿ ಬಾಲಕನೊಬ್ಬ ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ಬಸ್ಸಿನ ಹಿಂಭಾಗದಲ್ಲಿ ನೇತಾಡುತ್ತಾ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಒಂದು ಸಣ್ಣ ತಪ್ಪು ಸಂಭವಿಸಿದರೂ, ಸರ್ಕಾರ, ಶಾಲೆ , ಬಸ್ ಚಾಲಕ, ವ್ಯವಸ್ಥೆ ಯಾರು ಹೊಣೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Horoscope Today 13​​​​​​​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಶುಭ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 13​​​​​​​​, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ದಶಮಿ, ಪೂರ್ವಾಷಾಢ ನಕ್ಷತ್ರ, ವ್ಯತೀಪಾತ ಯೋಗ ಮತ್ತು ವಣಿಜ ಕರಣದ ವಿಶೇಷತೆಗಳನ್ನು ತಿಳಿಸಲಾಗಿದೆ.

ಇಂದು ಸಂಜೆ 7:13 ರಿಂದ ಶನಿ ಗ್ರಹವು 40 ದಿನಗಳ ಕಾಲ ಅಸ್ತಂಗತ ಸ್ಥಿತಿಗೆ ಪ್ರವೇಶಿಸಲಿದೆ. ಏಪ್ರಿಲ್ 22 ರವರೆಗೆ ಈ ಸ್ಥಿತಿ ಮುಂದುವರಿಯಲಿದ್ದು, ಶನಿಯ ಶಕ್ತಿ ಕೊಂಚ ಕಡಿಮೆಯಾಗಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನಸ್ಸು ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ಶ್ರೀ ಮಹಾಲಕ್ಷ್ಮಿ, ಆಂಜನೇಯ ಸ್ವಾಮಿ, ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ರಥೋತ್ಸವಗಳು ನಡೆಯಲಿವೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಗಳಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು, ಪ್ರಯಾಣ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ದೈನಂದಿನ ಜಪ ಮಂತ್ರಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

 

 

 

Source link

66ನೇ ವರ್ಷಕ್ಕೆ ಪ್ರೆಗ್ನೆಂಟ್ ಆದ ನೀನಾ ಗುಪ್ತಾ? ಖುಷಿಯಾಗುತ್ತಿದೆ ಎಂದ ನಟಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ತುಂಬಾನೇ ವೇಗ ಪಡೆದುಕೊಂಡಿದೆ. ಒಂದು ಸಣ್ಣ ಫೋಟೋದಿಂದ ದೊಡ್ಡ ವಿವಾದ ಹಾಗೂ ಗುಲ್ಲು ಹಬ್ಬಿ ಬಿಡುತ್ತದೆ. ಈಗ ನೀನಾ ಗುಪ್ತಾಗೂ (Neena Gupta) ಹಾಗೆಯೇ ಆಗಿದೆ. ಅವರು ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಾಗ, ಹೊಟ್ಟೆ ಹಿಡಿದುಕೊಂಡಿದ್ದರು. ಹೊಟ್ಟೆ ದೊಡ್ಡದಾಗಿ ಕಾಣಿಸುತ್ತಾ ಇತ್ತು. ಈ ಕಾರಣದಿಂದ ಅವರು ಪ್ರೆಗ್ನೆಂಟ್ ಎಂಬ ವಿಷಯ ಹಬ್ಬಿತ್ತು. ಇದಕ್ಕೆ ಉತ್ತರಿಸಿರೋ ಅವರು, ‘ನನಗೆ ಬೇಕಾಗಿರಿದೋ ಇಷ್ಟೇ, ನಿಜ ಜೀವನದ ಬಧಾಯಿ ಹೋ’ ಎಂದಿದ್ದಾರೆ.

‘ಯಾವುದೇ ಖುಷಿ ಸುದ್ದಿ ಇಲ್ಲ. ನಾನು ಪ್ರೆಗ್ನೆಂಟ್ ಅಲ್ಲ. ಅಸಲಿ ವಿಷಯ ಏನೆಂದರೆ ಸೀರೆಯ ಮಟೀರಿಯಲ್ ದಪ್ಪವಾಗಿತ್ತು. ಈ ಕಾರಣಕ್ಕೆ ಹೊಟ್ಟೆ ದಪ್ಪವಾಗಿ ಕಾಣಿಸುತ್ತಿತ್ತು. ಈ ವಯಸ್ಸಿನಲ್ಲಿ ನಾನು ಪ್ರೆಗ್ನೆಂಟ್ ಎಂಬ ವದಂತಿ ಹರಿದಾಡುತ್ತಿರುವುದನ್ನು ಕೇಳುತ್ತಿದ್ದರೆ ಖುಷಿಯಾಗುತ್ತಿದೆ. ನಾವು ಒಂದು ರಾಷ್ಟ್ರವಾಗಿ ವಿಕಸನಗೊಳ್ಳುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ’ ಎಂದಿದ್ದಾರೆ ನೀನಾ.

ಇದನ್ನೂ ಓದಿ: ಮದುವೆ ಆಗದೆ ವಿವಿ ರಿಚರ್ಡ್​ರಿಂದ ಮಗು ಪಡೆದಿದ್ದ ನೀನಾ ಗುಪ್ತಾ

ನೀನಾ ಗುಪ್ತಾ ಅವರು ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ರಿಸೆಪ್ಶನ್​ ಅಲ್ಲಿ ಭಾಗಿ ಆಗಿದ್ದರು. ಅವರು ಈವೆಂಟ್​​​ಗೆ ಬಂದು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಈ ಸಂದರ್ಭದ ವಿಡಿಯೋ ಇದಾಗಿದೆ. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಯಿತು. ಕೆಲವರು, ನಟಿಗೆ ಬೇಬಿ ಬಂಪ್ ಬಂದಿದೆ ಎಂದೆಲ್ಲ ಹೇಳಿದರು. ಈ ವಿಷಯ ನೀನಾ ಕಿವಿಗೂ ಬಿದ್ದಂತೆ ಇದೆ. ಹೀಗಾಗಿ, ಸ್ಪಷ್ಟನೆ ಕೊಟ್ಟಿದ್ದಾರೆ.

ನೀನಾ ಗುಪ್ತಾ ಅವರು ವಿವಾಹ ಆಗದೆ ಮಗು ಪಡೆದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. 1980ರಲ್ಲಿ ನೀನಾ ಗುಪ್ತಾ ಅವರು ವೆಸ್ಟ್ ಇಂಡೀಸ್​ನ ಅಂದಿನ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ರಿಲೇಶನ್​​ಶಿಪ್​​ನಲ್ಲಿದ್ದರು. ಇದರಿಂದ ಮಗು ಕೂಡ ಜನಿಸಿತು. ಆದರೆ, ರಿಚರ್ಡ್ ವಿವಾಹ ಆಗಲು ನಿರಾಕರಿಸಿದರು. ಮಗುವನ್ನು ದೂರ ಮಾಡದೇ ನೀನಾ ಸಾಕಲು ನಿರ್ಧರಿಸಿದರು. ಆಗಿನ ಸಮಾಜ ಇದನ್ನು ಅಷ್ಟಾಗಿ ಒಪ್ಪುತ್ತಿರಲಿಲ್ಲ. ಆದರೂ ನೀನಾ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಮಗುವನ್ನು ಸಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link