All posts by nagaraj11081993

ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಕಿಡ್ನಿ ಆರೋಗ್ಯವಾಗಿ ಇರಬೇಕು ಅಂದ್ರೆ ಆರೋಗ್ಯ ತಜ್ಞರು ಹೇಳಿದ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಲೇಬೇಕು!

ಇತ್ತೀಚಿನ ಕೆಲವು ವರ್ಷಗಳಲ್ಲಿ ಕಿಡ್ನಿ (Kidney) ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ. ಅಸ್ವಸ್ಥ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಮಾಡಿಕೊಂಡ ಅನೇಕ ರೀತಿಯ ಬದಲಾವಣೆಗಳು ಇಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣಗಳಾಗಿವೆ. ಆದರೆ ಕೆಲ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ ಕಿಡ್ನಿಯ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಈ ಬಗ್ಗೆ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಹಿಮಾಂಶು ವರ್ಮಾ ಮಾತನಾಡಿದ್ದು ಕಿಡ್ನಿ ಆರೋಗ್ಯವಾಗಿರಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು, ಇದರಿಂದ ಕಿಡ್ನಿ ಆರೋಗ್ಯ ಹೇಗೆ ಸುಧಾರಿಸುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಈ ಸಲಹೆಗಳನ್ನು ತಪ್ಪದೆ ಪಾಲನೆ ಮಾಡುವುದರಿಂದ ಕಿಡ್ನಿ ಆರೋಗ್ಯ ಹಾಳಾಗುವುದನ್ನು ತಡೆಯಬಹುದಾಗಿದೆ.

ಕಿಡ್ನಿಯನ್ನು ಆರೋಗ್ಯವಾಗಿಡಲು ಸಲಹೆಗಳು;

ನೀರು ಕುಡಿಯಿರಿ: ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕಿಡ್ನಿ ಆರೋಗ್ಯಕ್ಕೆ ಅಗತ್ಯ. ಇದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ ಮತ್ತು ಕಿಡ್ನಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಉಪ್ಪಿನ ಸೇವನೆಯನ್ನು ನಿಯಂತ್ರಿಸಿ: ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು, ಇದು ಕಿಡ್ನಿಗೆ ಹಾನಿಕಾರಕ. ಆದ್ದರಿಂದ ದಿನನಿತ್ಯ ಸೇವನೆ ಮಾಡುವ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸುವುದು ಅಗತ್ಯ.

ರಕ್ತದೊತ್ತಡ ಮತ್ತು ಶುಗರ್ ನಿಯಂತ್ರಣದಲ್ಲಿರಲಿ: ಯಾರಾದರೂ ಹೈ ಬಿಪಿ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಅವುಗಳನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮುಖ್ಯ. ಇಲ್ಲವಾದರೆ ಕಿಡ್ನಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ನಿಯಮಿತ ವ್ಯಾಯಾಮ ಮಾಡಿ: ಪ್ರತಿ ದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿದರೆ ದೇಹ ಫಿಟ್ ಆಗಿರುತ್ತದೆ ಮತ್ತು ಕಿಡ್ನಿ ಕಾಯಿಲೆಗಳ ಅಪಾಯ ಕಡಿಮೆಯಾಗಬಹುದು.

ಇದನ್ನೂ ಓದಿ: ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್ ಸೂಚಕವೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು

ವೈದ್ಯರ ಸಲಹೆ ಇಲ್ಲದೆ ಪೇನ್‌ಕಿಲರ್ ಬಳಸದಿರಿ: ಕೆಲವು ಪೇನ್‌ಕಿಲರ್ ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಕಿಡ್ನಿಗೆ ಹಾನಿಯಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

35 ವರ್ಷಗಳ ನಂತರ ಪೂರ್ಣ ಆರೋಗ್ಯ ತಪಾಸಣೆ: ಡಾ. ಹಿಮಾಂಶು ಹೇಳುವ ಪ್ರಕಾರ 35 ವರ್ಷಗಳ ನಂತರ ನಿಯಮಿತವಾಗಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಯಾವುದೇ ಕಾಯಿಲೆಯನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಸರ ಕಳ್ಳತನ: ಸಾರಿಗೆ ಬಸ್ ಸಮೇತ ಪೊಲೀಸ್ ಠಾಣೆಗೆ ಬಂದ ಮಹಿಳೆ

ಹಾವೇರಿ, ಮಾರ್ಚ್​ 12: ಸಾರಿಗೆ ಬಸ್​​ನಲ್ಲಿ ಚಿನ್ನದ ಸರ ಕಳ್ಳತನವಾಗಿದ್ದು (Gold Theft), ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿರುವಂತಹ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಹಿರೇಬಾಸೂರು ಗ್ರಾಮದ ನಿವಾಸಿ ಮೀನಾಕ್ಷಿ ಕಾಗಿನೆಲೆ 10 ಗ್ರಾಂನ ಚಿನ್ನದ ಸರ ಕಳೆದುಕೊಂಡ ಮಹಿಳೆ. ಅಡಮಾನ ಇಟ್ಟಿದ್ದ ಚಿನ್ನ ಬಿಡಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್​ನಲ್ಲಿ ಕಳ್ಳತನವಾಗಿದೆ. ನನಗೆ ಚಿನ್ನದ ಸರ ಹುಡುಕಿ ಕೊಡಿ ಎಂದು ಬಸ್ ಸಮೇತ ಮಹಿಳೆ ಪೊಲೀಸ್ ಠಾಣೆಗೆ ಬಂದಿದ್ದಾರೆ.

ದೇವಿ ದೇವಾಲಯದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಬೆಳ್ಳಿ ಆಭರಣ ಕಳ್ಳತನ

ತುಮಕೂರಿನ ಇತಿಹಾಸ ಪ್ರಸಿದ್ಧ ವಡ್ಡಗೆರೆ ವೀರನಾಗಮ್ಮ ದೇವಿ ದೇವಾಲಯದಲ್ಲಿ ಬರೋಬ್ಬರಿ 10 ಕೆ.ಜಿಗೂ ಅಧಿಕ ಲಕ್ಷಾಂತರ ರೂ ಬೆಲೆ ಬಾಳುವ ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದಿರುವಂತಹ ಘಟನೆ ನಿನ್ನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ದೇವಸ್ಥಾನದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಗ್ಯಾಸ್ ಕಟರ್ ಬಳಸಿ ದೇವಸ್ಥಾನದ ಬಾಗಿಲು ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ಬಳಿಕ ಸಿಸಿಟಿವಿ, ಡಿವಿಆರ್​​ ಅನ್ನು ಚಾಲಾಕಿ ಕಳ್ಳರು ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆ ದೇವಸ್ಥಾನದ ಪೂಜೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಯೋವೃದ್ಧ ದಂಪತಿಗೆ ವಂಚಿಸಿದ ಮನೆಗೆಲಸದ ಮಹಿಳೆ ಬಂಧನ

ವಯೋವೃದ್ಧ ದಂಪತಿಗೆ ವಂಚಿಸಿದ ಮನೆಗೆಲಸದ ಮಹಿಳೆಯನ್ನು ಬೆಂಗಳೂರಿನ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಧನಲಕ್ಷ್ಮೀಯಿಂದ 54 ಗ್ರಾಂ ಚಿನ್ನಾಭರಣ ಮತ್ತು 8 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಮನೆ ನಿರ್ವಹಣೆಗೆ ಪ್ರತಿ ತಿಂಗಳು ವೃದ್ಧ ದಂಪತಿ ಮನೆಗೆಲಸದಾಕೆ ಧನಲಕ್ಷ್ಮೀ ಜೊತೆ ತೆರಳಿ ಹಣ ಡ್ರಾ ಮಾಡುತ್ತಿದ್ದರು. ವೃದ್ಧ ದಂಪತಿ ಮನೆಯಲ್ಲಿ ಹಣ ಇಡುವುದನ್ನು ಧನಲಕ್ಷ್ಮೀ ಗಮನಿಸಿದ್ದಳು. ಒಂದು ವರ್ಷದಿಂದ ಹಣ, ಚಿನ್ನಾಭರಣ ಕದಿಯುತ್ತಿದ್ದಳು. ಕಳ್ಳತನದ ಬಗ್ಗೆ ವೃದ್ಧ ದಂಪತಿ ಅಳಿಯ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪುಲಿಕೇಶಿನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್​ ತನಿಖೆ ವೇಳೆ ಧನಲಕ್ಷ್ಮೀ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಧನಲಕ್ಷ್ಮೀ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕ್ ಆಟಗಾರನನ್ನು 2.34 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್; ಭುಗಿಲೆದ್ದ ಆಕ್ರೋಶ

ಮುಂಬರುವ ದಿ ಹಂಡ್ರೆಡ್ ಲೀಗ್​ಗೆ ಇಂದು ಹರಾಜು ನಡೆಯುತ್ತಿದೆ. ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಕಂಪನಿಗಳು ಫ್ರಾಂಚೈಸಿಗಳನ್ನು ಖರೀದಿಸಿವೆ. ಹೀಗಾಗಿ ಈ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರು ಆಡುವುದರಿಂದ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರನನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಪಾಕ್ ಆಟಗಾರರನ್ನು ಖರೀದಿಸಿದರೆ, ಭಾರತೀಯರ ಕೋಪಕ್ಕೆ ಗುರಿಯಾಗುವುದು ಖಚಿತವಾಗಿತ್ತು. ಆದಾಗ್ಯೂ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತನ್ನ ತಂಡಕ್ಕೆ ಖರೀದಿ ಮಾಡಿದೆ. ಪಾಕಿಸ್ತಾನಿ ಆಟಗಾರನನ್ನು ಖರೀದಿಸಿರುವ ಕಾವ್ಯ ಮಾರನ್ ಅವರ ಈ ನಿರ್ಧಾರವು ಈಗ ವಿವಾದವನ್ನು ಹುಟ್ಟುಹಾಕಿದೆ.

ಕಾವ್ಯ ಮಾರನ್ ಫ್ರಾಂಚೈಸಿ, ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿದೆ. ಅಬ್ರಾರ್ ಅಹ್ಮದ್​ಗಾಗಿ ಟ್ರೆಂಟ್ ರಾಕೆಟ್ಸ್ ಹಾಗೂ ಸನ್‌ರೈಸರ್ಸ್ ಲೀಡ್ಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕಾವ್ಯ ಮಾರನ್, ಅಬ್ರಾರ್ ಅಹ್ಮದ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕಾವ್ಯ ಮಾರನ್ ಪಾಕ್ ಆಟಗಾರನನ್ನು ಖರೀದಿಸಿದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಕೆಗಳ ಮಳೆ ಶುರುವಾಗಿದೆ. ಕಾವ್ಯ ಮಾರನ್ ಮತ್ತು ಅವರ ದಿ ಹಂಡ್ರೆಡ್ ಫ್ರಾಂಚೈಸಿಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾತೆ. ಕೆಲವರು ಈ ನಿರ್ಧಾರವನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆಯುತ್ತಿದ್ದರೆ, ಇತರರು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್​ಗಿಂತಲೂ ಈತ ಟೂರ್ನಮೆಂಟ್ ಆಟಗಾರ ಪ್ರಶಸ್ತಿಗೆ ಅರ್ಹ ಎಂದ ಡಿವಿಲಿಯರ್ಸ್

Source link

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ

ಬೆಂಗಳೂರು, ಮಾರ್ಚ್​​ 12: ಗಲ್ಫ್​ ರಾಷ್ಟ್ರಗಳ ಯುದ್ಧದಿಂದಾಗಿ ದೇಶದ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಅದರಲ್ಲೂ ಗ್ಯಾಸ್​​​​​​ ಪೂರೈಕೆಯಲ್ಲಿನ ವ್ಯತ್ಯಯವೂ ರಾಜ್ಯದ ಜನ ಜೀವನದ ದಿಕ್ಕೇ ಬದಲಾಗುತ್ತಿದೆ. ಹೋಟೆಲ್​​​ಗಳು ಬಂದ್ ಆಗುತ್ತಿವೆ. ಇನ್ನು ಈ ಮಧ್ಯೆ ಬೆಂಗಳೂರಿನಲ್ಲಿ LPG​ ಸಿಲಿಂಡರ್ ಕೊರತೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದ್ದು, ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ. ಸುಳ್ಳು ವದಂತಿಗೆ ಕಿವಿಕೊಡಬೇಡಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಹೇಳಿದ್ದಾರೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಯುದ್ಧದಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ಉಂಟಾಗಿದೆ. ಯುದ್ಧದ ಮೋಹದಿಂದ ಜಗತ್ತಿಗೆ ತೈಲದ ಹೊರೆಬಿದ್ದಿದೆ. ಅದರಲ್ಲೂ, ಭಾರತದಲ್ಲಂತೂ ಗ್ಯಾಸ್ ಗಂಡಾಂತರವನ್ನೇ ಸೃಷ್ಟಿಸಿದೆ. ಮರ್ಷಿಯಲ್ ಗ್ಯಾಸ್ ಪೂರೈಕೆ ಆಗದೆ ಹೋಟೆಲ್​ಗಳು ಬಂದ್ ಆಗುತ್ತಿವೆ.

ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ: ಸುಳ್ಳು ವದಂತಿಗೆ ಕಿವಿಕೊಡಬೇಡಿ: ಜಿಲ್ಲಾಧಿಕಾರಿ

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್​ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅನಿಲದ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಹಾಗೂ ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಇದಲ್ಲಿ ಸಹಾಯವಾಣಿ 9611404384 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ: ಪಿಸಿ ರಾವ್​​ 

ಇನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್​​ ಪ್ರತಿಕ್ರಿಯಿಸಿದ್ದು, ನಮ್ಮ ಉದ್ಯಮ ಉಳಿಯಬೇಕು. ಕಾರ್ಮಿಕರಿಗೂ, ಗ್ರಾಹಕರಿಗೂ ತೊಂದರೆ ಆಗಬಾರದು. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು. ಯಾರೂ ಕೂಡ ಹೋಟೆಲ್ ಬಾಗಿಲು ಹಾಕಬಾರದು. ಬೆಂಗಳೂರಿನಲ್ಲಿ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ. ಬಂದ್ ಆಗಿರುವ ಹೋಟೆಲ್​​ಗಳನ್ನ ಮತ್ತೆ ತೆರೆಯುವ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಹೋಟೆಲ್​ ಬಾಗಿಲು ಹಾಕಿದರೆ ಎಲ್ಲರಿಗೂ ತೊಂದರೆ

ಪಿಜಿಯಲ್ಲಿರುವ ಬ್ಯಾಚುಲರ್ಸ್, ಐಟಿ ಕಂಪನಿ, ಆಸ್ಪತ್ರೆಗಳಿಗೆ ಹೋಟೆಲ್​ಗಳು ಹೆಚ್ಚು ನೆರವು ಆಗುತ್ತಿವೆ. ಬಾಗಿಲು ಹಾಕಿದರೆ ಮಾಲೀಕರು, ಕಾರ್ಮಿಕರು, ಜನರಿಗೂ ತೊಂದರೆ ಆಗುತ್ತೆ. ಕೇವಲ 20% ಕಡಿಮೆ ಬಳಕೆ ಮಾಡುತ್ತಿದ್ದೇವೆ. ನಮಗೆ ಒದಗಿಸುವ ಗ್ಯಾಸ್​ನಲ್ಲಿ 50% ಕೊಡಿ ಸಾಕು. ಪೆಟ್ರೋಲಿಯಂ ಕಂಪನಿಗಳ‌ ಮುಖ್ಯಸ್ಥರ ಜೊತೆ, ಸರ್ಕಾರದ ಕಾರ್ಯದರ್ಶಿಗಳ‌ ಜೊತೆ ಪರ್ಯಾಯ ಮಾರ್ಗಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲ್ಲಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್! ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ

ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಎರಡು ಹಡಗು ಭಾರತ ತಲುಪಿದೆ. ಇನ್ನೂ ನಮಗೆ ಕೈಗೆ ಬರಬೇಕಿದೆ. ಯುಗಾದಿ, ರಂಜಾನ್ ಸಮಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 50% ಅಗತ್ಯವಿರುವ ಗ್ಯಾಸ್ ಸಿಗಬಹುದು ಎಂಬ ವಿಶ್ವಾಸ ಇದೆ. ನಾಳೆಯಿಂದ ಹೋಟೆಲ್ ಎಲ್ಲವೂ ತೆರೆದಿರುತ್ತೆ. ಮೆಜೆಸ್ಟಿಕ್​ನಲ್ಲಿ ಬಂದ್ ಆಗಿರುವ ಹೋಟೆಲ್ ಓಪನ್ ಆಗುತ್ತೆ. 13% ಗ್ಯಾಸ್ ಬೆಂಗಳೂರಿಗೆ ಅಗತ್ಯ ಇದೆ. ಆದರೆ 7% ಗ್ಯಾಸ್ ಸಿಕ್ಕಿದ್ರೂ ನಿರ್ವಹಣೆ ಮಾಡಬಹುದು ಎಂದರು.

ಇನ್ನು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್​​ನಲ್ಲಿ ಬೆಲೆ ಏರಿಕೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ಅವರು ಬೆಲೆ ಏರಿಸಿದರೆ ಸಂಘ ಜವಾಬ್ದಾರವಲ್ಲ. 98% ಹೋಟೆಲ್​​ಗಳು ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಲ್ಲ ಎಂದು ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಬೇಸಿಗೆಯ ದಣಿವು ತಣಿಸಲು ಸಹಕಾರಿ ಈ ಪಾನೀಯ

ಬೇಸಿಗೆ  ಋತುವಿನಲ್ಲಿ (summer) ವಿಪರೀತ ಶಾಖ ಇರುವ ಕಾರಣ ನಿರ್ಜಲೀಕರಣ, ಆಯಾಸ, ದಣಿವು, ದೇಹ ಉರಿ, ಶಾಖದ ಹೊಡೆದ, ಜೀರ್ಣಕಾರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ.  ಹಾಗಾಗಿ ಈ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಬಹುತೇಕರು ಹೆಚ್ಚಿನ ನೀರಿನಂಶವಿರುವ ಕಾಲೋಚಿತ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಸೇವನೆ ಮಾಡುತ್ತಾರೆ. ಇದರ ಜೊತೆಗೆ ಈ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವ ಮೂಲಕ ಬೇಸಿಗೆಯ ದಣಿವನ್ನು ತಣಿಸಬಹುದು.

ಬೇಸಿಗೆಯ ದಾಹ ನೀಗಿಸಲು  ಸಹಕಾರಿ ಈ ಪಾನೀಯ:

ನಿಂಬೆ ಶರಬತ್ತು ಮತ್ತು ಆಮ್‌ ಪನ್ನಾ: ಬೇಸಿಗೆಯ ದಾಹ ತಣಿಸಲು ನಿಂಬೆ ಶರಬತ್ತು ಸೇವನೆ ಮಾಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದರ ವಿಟಮಿನ್ ಸಿ ಮತ್ತು ಎಲೆಕ್ಟ್ರೋಲೈಟ್‌ಗಳು ತ್ವರಿತ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತವೆ. ಇದಲ್ಲದೆ ಹಸಿ ಮಾವಿನಿಂದ ತಯಾರಿಸಿದ ಆಮ್ ಪನ್ನಾವನ್ನೂ ಸಹ ಸೇವನೆ ಮಾಡಬಹುದ. ಇದು ವಿಟಮಿನ್ ಎ, ವಿಟಮಿನ್ ಸಿ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಇದು ದೇಹವನ್ನು ತಂಪಾಗಿಸುವುದಲ್ಲದೆ, ಶಾಖದ ಹೊಡೆತದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಪುದೀನ ಮತ್ತು ಸೌತೆಕಾಯಿ ಶರಬತ್ತು: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಪುದೀನ ಮತ್ತು ಸೌತೆಕಾಯಿಯಿಂದ ತಯಾರಿಸಿದ ಪಾನೀಯವನ್ನು ಸೇವನೆ ಮಾಡುವುದು ಉತ್ತಮ. ಇವೆರಡರಲ್ಲೂ ನೀರಿನಾಂಶ ಹೆಚ್ಚಿದ್ದು, ಇದು ದೇಹವನ್ನು ದೀರ್ಘಕಾಲದವರೆಗೆ ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಪೋಷಿಸುವುದು ಮಾತ್ರವಲ್ಲದೆ ಶಾಖದಿಂದ ಪರಿಹಾರವನ್ನು ನೀಡುತ್ತದೆ.

ಎಳನೀರು: ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಅಗತ್ಯ ಅಂಶಗಳನ್ನು ಹೊಂದಿದ್ದು, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ದಿನಕ್ಕೊಂದು ಬಾರಿ ಎಳನೀರು ಕುಡಿಯುವುದರಿಂದ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ಕಬ್ಬಿನ ರಸ: ಬೇಸಿಗೆಯಲ್ಲಿ ಕಬ್ಬಿನ ರಸವು ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಇದರಲ್ಲಿ ಗ್ಲೂಕೋಸ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅನೇಕ ಅಗತ್ಯ ಖನಿಜಗಳಿವೆ, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೆವರಿನ ವಾಸನೆಯನ್ನು ಹೋಗಲಾಡಿಸಿ, ದಿನವಿಡೀ ಫ್ರೆಶ್‌ ಆಗಿರಲು ಏನು ಮಾಡಬೇಕು?

ಮಜ್ಜಿಗೆ: ಈ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದು ಸಹ ತುಂಬಾನೇ ಒಳ್ಳೆಯದು. ಇದು ಹೊಟ್ಟೆಗೆ ತಂಪಾಗಿಸುವ ಮತ್ತು ಉಲ್ಲಾಸಕರ ಅನುಭವವನ್ನು ನೀಡುತ್ತದೆ. ಅಲ್ಲದೆ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಆಮ್ಲೀಯತೆಯಿಂದ ಪರಿಹಾರವನ್ನು ಒದಗಿಸುತ್ತದೆ.

ಸಾಕಷ್ಟು ನೀರು ಕುಡಿಯುವುದು ಮುಖ್ಯ: ಬೇಸಿಗೆಯಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಸಾಕಷ್ಟು ನೀರು ಕುಡಿಯುವುದು. ಆರೋಗ್ಯವಂತ ವ್ಯಕ್ತಿಯು ಪ್ರತಿದಿನ ಸುಮಾರು ಎರಡೂವರೆ ರಿಂದ ಮೂರು ಲೀಟರ್ ನೀರು ಕುಡಿಯಬೇಕು. ಕಠಿಣ ಕೆಲಸ ಮಾಡುವ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವ ಜನ ಇನ್ನೂ ಹೆಚ್ಚು ನೀರು ಕುಡಿಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಗ ಚೈತನ್ಯ ಸಿಕ್ಸ್ ಪ್ಯಾಕ್: ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳಿಗೆ ಅಚ್ಚರಿ

ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಅಂದ್ರೆ ತಕ್ಷಣ ನೆನಪಾಗೋದು ಅವರ ಲವರ್ ಬಾಯ್ ಇಮೇಜ್. ಆದರೆ, ಅವರ ಮುಂದಿನ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ (Vrushakarma) ಸಿನಿಮಾಗಾಗಿ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಈಗ ವೈರಲ್ ಆಗಿವೆ. ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ (Six Pack) ಅವತಾರದಲ್ಲಿ ನಾಗ ಚೈತನ್ಯ ಮಿಂಚುತ್ತಿದ್ದಾರೆ. ಅಭಿಮಾನಿಗಳಿಗೆ ಈ ಲುಕ್ ಇಷ್ಟ ಆಗಿದೆ.

ಯಾವಾಗಲೂ ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಗ ಚೈತನ್ಯ, ಈ ಬಾರಿ ಮಸಲ್ ಬೆಳೆಸಿ, ದಪ್ಪ ಗಡ್ಡ ಮತ್ತು ಬೇರೆ ಹೇರ್ ಸ್ಟೈಲ್ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ವರ್ಕ್‌ಔಟ್ ಫೋಟೋ ಹಂಚಿಕೊಂಡಿರುವ ಅವರು, ಕೈಯಲ್ಲಿ ಡಂಬ್ಬೆಲ್ಸ್ ಹಿಡಿದು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ. ‘ವೃಷಕರ್ಮ’ ಚಿತ್ರದಲ್ಲಿ ಅವರು ನಿಧಿ ಶೋಧಕನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಲುಕ್ ಪಾತ್ರಕ್ಕೆ ಪೂರಕವಾಗಿದೆ.

ತಮ್ಮ ಬದಲಾವಣೆಯ ಬಗ್ಗೆ ಮಾತನಾಡಿರುವ ನಾಗ ಚೈತನ್ಯ, ‘ವೃಷಕರ್ಮ ಚಿತ್ರದಲ್ಲಿ ನಾನು ನಿಧಿ ಹುಡುಕುವ ಸಾಹಸಿಯ ಪಾತ್ರ ಮಾಡುತ್ತಿದ್ದೇನೆ. ನಿರ್ದೇಶಕರು ಮತ್ತು ನಾನು ಚರ್ಚಿಸಿ, ಈ ಪಾತ್ರಕ್ಕೆ ಅಥ್ಲೆಟಿಕ್ ಬಾಡಿ ಇರಬೇಕು ಎಂದು ನಿರ್ಧರಿಸಿದೆವು. ಇದಕ್ಕಾಗಿ ಸ್ಟ್ರೆಂತ್ ಟ್ರೇನಿಂಗ್, ಈಜು ಮತ್ತು ಯೋಗ ಒಳಗೊಂಡ ವಿಶೇಷ ವರ್ಕ್‌ಔಟ್ ಮಾಡಿದ್ದೇನೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದೇನೆ’ ಎಂದಿದ್ದಾರೆ. ಫಿಟ್ನೆಸ್ ಟ್ರೇನರ್ ಅರುಣವ ಭಟ್ಟಾಚಾರ್ಯ ಕೂಡ ಚೈತನ್ಯ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.

‘ವಿರೂಪಾಕ್ಷ’ ಖ್ಯಾತಿಯ ಕಾರ್ತಿಕ್ ನಿರ್ದೇಶನ ಮಾಡಿರುವ ‘ವೃಷಕರ್ಮ’ ಚಿತ್ರವು ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ನಾಗ ಚೈತನ್ಯ ಅವರಿಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಉಳಿದಂತೆ ಜಯರಾಮ್, ಸತ್ಯ ಅಕ್ಕಲ ಮತ್ತು ಸ್ಪರ್ಶ್ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 20ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.

ಇದನ್ನೂ ಓದಿ: ವೇದಿಕೆಯಲ್ಲಿ ಜಾರಿಬಿದ್ದ ನಾಗ ಚೈತನ್ಯ

ನಾಗ ಚೈತನ್ಯ ಅವರ ಈ ಹೊಸ ಫೋಟೋ ನೋಡಿದ ಅಭಿಮಾನಿಗಳು, ‘ಇದು ನಿಮ್ಮ ಎರಡನೇ ಇನಿಂಗ್ಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರದಿಂದಾಗಿ ‘ವೃಷಕರ್ಮ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ತನ್ನ ಕಾಲೆರಡು ಸ್ವಾಧೀನ ಕಳೆದುಕೊಂಡಂತೆ ನಟಿಸಿ ಆಹಾರ ಗಿಟ್ಟಿಸಿಕೊಂಡ ಶ್ವಾನ

ಈ ಮನುಷ್ಯರು ತಮ್ಮವರನ್ನು ಬಿಡಿ, ಅಪರಿಚಿತರನ್ನು ಯಾಮಾರಿಸುವುದರಲ್ಲಿ ಬುದ್ಧಿವಂತರು ಅಂದುಕೊಳ್ತೇವೆ. ಆದರೆ ಈ ದೃಶ್ಯ ನೋಡಿದ ಮೇಲೆ ಈ ಶ್ವಾನವು (dog) ಕೂಡ ಯಾಮಾರಿಸೋದ್ರಲ್ಲಿ ಯಾರಿಗೂ ಕಡಿಮೆ ಇಲ್ಲ ಎಂದೆನಿಸುತ್ತದೆ. ಅದಲ್ಲದೇ, ಈ ಹಸಿವು ಅನ್ನುವುದು ಎಂತಹ ಕೆಲಸಕ್ಕೂ ಕೈ ಹಾಕುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಶ್ವಾನವೊಂದು ಹಸಿವಿನಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ತನ್ನ ಎರಡು ಕಾಲು ಸ್ವಾಧೀನ ಕಳೆದುಕೊಂಡಂತೆ ನಟಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ.

D Ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆಹಾರ ಗಿಟ್ಟಿಸಿಕೊಳ್ಳಲು ನಾಯಿಯೊಂದು ನಟನೆ ಮಾಡಿದ ರೀತಿಯನ್ನು ನೋಡಬಹುದು. ಹೌದು, ಫುಡ್ ಸ್ಟಾಲ್ ಮುಂಭಾಗದಲ್ಲಿ ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನವೊಂದು ಬಂದು ಕುಳಿತಿದೆ. ತನ್ನ ಕಾಲನ್ನು ಎಳೆದುಕೊಂಡು ಹೋಗುತ್ತಿದ್ದ ಶ್ವಾನವನ್ನು ಕಂಡ ‌ಸ್ಟಾಲ್‌ ಮಾಲೀಕಳು ಅದಕ್ಕೆ ತಿಂಡಿ ಹಾಕಿದ್ದಾಳೆ. ಹೊಟ್ಟೆ ತುಂಬಿಸಿಕೊಂಡ ಈ ಶ್ವಾನವು ಏನು ಆಗಿಲ್ಲವೆಂಬಂತೆ  ನಾಲ್ಕು ಕಾಲುಗಳಲ್ಲಿ ನಡೆದುಕೊಂಡು ಹೋಗಿದೆ. ಈ ನಾಯಿಯ ಆಕ್ಟಿಂಗ್ ಕಂಡು ಅಲ್ಲೇ ಇದ್ದವರು ಶಾಕ್ ಆಗಿದ್ದು ಜೋರಾಗಿ ನಕ್ಕಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಾಲೆರಡು ಸ್ವಾಧೀನ ಕಳೆದುಕೊಂಡಂತೆ ನಟಿಸಿ ಆಹಾರ ಗಿಟ್ಟಿಸಿಕೊಂಡ ಶ್ವಾನ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ಶ್ವಾನದ ಆಕ್ಟಿಂಗ್ ಮೆಚ್ಚಲೇ ಬೇಕು ಎಂದಿದ್ದಾರೆ. ಮತ್ತೊಬ್ಬರು, ಒಂದು ಕ್ಷಣ ತಲೆ ಗ್ರಿರ್ ಅಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಷ್ಟು ಬುದ್ಧಿವಂತ ಪ್ರಾಣಿಯಿದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮೆಟ್ಟಿಲು ಹತ್ತಿದ್ರೆ ಹೃದಯ ಬಡಿತ ವೇಗವಾಗುತ್ತಾ? ಈ ರೀತಿ ಆಗುವುದಕ್ಕೆ ಕಾರಣವೇನು ತಿಳಿದುಕೊಳ್ಳಿ

ಮೆಟ್ಟಿಲು ಏರಿ ಮೇಲೆ ಹೋಗುವಾಗ ಅಥವಾ ಸ್ವಲ್ಪ ದೂರ ನಡೆದು ಹೋದಾಗ ಹೃದಯ ಬಡಿತ (Heart Beats) ಹೆಚ್ಚಾಗುವುದು ಸಾಮಾನ್ಯವೆಂದು ಕೆಲವರು ಭಾವಿಸುತ್ತಾರೆ. ಆದರೆ ಕೆಲವರು ಸ್ವಲ್ಪ ದೂರ ನಡೆದರೂ ಉಸಿರಾಟ ಹೆಚ್ಚಾಗಿ ಹೃದಯ ಬಡಿತ ವೇಗವಾಗುತ್ತದೆ. ಇದನ್ನು ಕೆಲವರು ಉಸಿರಾಟದ ಸಮಸ್ಯೆ ಎಂದುಕೊಳ್ಳುತ್ತಾರೆ, ಇನ್ನೂ ಕೆಲವರು ಹೃದಯ ಸಂಬಂಧಿತ ಸಮಸ್ಯೆಯೆಂದು ಭಾವಿಸಿ ಚಿಕಿತ್ಸೆ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಬ್ಬರಲ್ಲಿಯೂ ಹೃದಯ ಬಡಿತ ಹೆಚ್ಚಾಗುವುದು ಕೇವಲ ದೈಹಿಕ ಸಮಸ್ಯೆಯೇನಾ, ಅಥವಾ ಇದಕ್ಕೆ ಮಾನಸಿಕ ಆರೋಗ್ಯದ ಸಂಬಂಧವೂ ಇದೆಯೇ ಎಂಬುದರ ಕುರಿತ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ದಿಲ್ಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ಸೇರಿದ ಕಾರ್ಡಿಯಾಲಜಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಮೆಟ್ಟಿಲು ಏರಿದಾಗ ಹೃದಯ ಬಡಿತ ತುಂಬಾ ವೇಗಗೊಂಡು ಉಸಿರಾಟವೂ ಹೆಚ್ಚಾದರೆ ಅದು ಹೃದಯ ಸಂಬಂಧಿತ ಸಮಸ್ಯೆಯ ಸೂಚನೆಯಾಗಿರಬಹುದು. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಆದಾಗ ಹೃದಯಕ್ಕೆ ಸಮರ್ಪಕವಾಗಿ ಆಮ್ಲಜನಕ ದೊರೆಯುವುದಿಲ್ಲ. ಇದರಿಂದ ಹೃದಯ ಹೆಚ್ಚು ಕೆಲಸ ಮಾಡಬೇಕಾಗಿ ಬರುತ್ತದೆ ಮತ್ತು ಪರಿಣಾಮವಾಗಿ ಉಸಿರಾಟ ಹೆಚ್ಚಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತಿಯಾಗಿ ಯೋಚಿಸುವವರಲ್ಲಿ ನೀವು ಒಬ್ಬರಾ? ಇದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತಾ?

ಆತಂಕದಿಂದ ಹೃದಯ ಬಡಿತ ಹೆಚ್ಚಾಗಬಹುದೇ?

ಕೆಲವೊಮ್ಮೆ ಹೃದಯ ಬಡಿತ ವೇಗವಾಗುವುದಕ್ಕೆ ಆತಂಕ ಅಥವಾ ಮಾನಸಿಕ ಒತ್ತಡವೂ ಕಾರಣವಾಗಬಹುದು. ಉದಾಹರಣೆಗೆ, ಯಾವುದಾದರೂ ಸ್ಥಳಕ್ಕೆ ಹೋಗುವ ಮೊದಲು ಭಯ ಅಥವಾ ಗಾಬರಿ ಆಗುವುದು, ಕಚೇರಿಯ ಸಭೆಗೂ ಮುನ್ನ ಹೃದಯ ಬಡಿತ ಹೆಚ್ಚಾಗುವುದು ಅಥವಾ ಸದಾ ಯಾವುದಾದರೂ ವಿಷಯದ ಬಗ್ಗೆ ಚಿಂತಿಸುವುದು ಇವು ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಮನೋವೈದ್ಯರನ್ನು ಸಂಪರ್ಕಿಸುವುದು ಒಳಿತು. ಕೆಲವರ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೂ ಹೃದಯ ಬಡಿತ ಹೆಚ್ಚಾಗಬಹುದು. ಇದನ್ನು ಅನಿಮಿಯಾ ಎಂದು ಕರೆಯುತ್ತಾರೆ. ಇದರ ಜೊತೆಗೆ ಥೈರಾಯ್ಡ್ ಸಮಸ್ಯೆಯಲ್ಲಿಯೂ ಹೃದಯದ ಬಡಿತ ವೇಗವಾಗಬಹುದು ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ.

ತಡೆಗಟ್ಟಲು ಏನು ಮಾಡಬೇಕು?

ಪ್ರತಿದಿನ ಕನಿಷ್ಠ 30 ನಿಮಿಷ ನಡೆದು ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವುದು, ಯೋಗ ಅಥವಾ ಧ್ಯಾನ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಂಜಿಆರ್ ಬಗ್ಗೆ ತೆಲುಗು ನಟನ ಹೇಳಿಕೆ: ಕ್ಷಮೆಗೆ ಒತ್ತಾಯಿಸಿದ ತಮಿಳು ನಟರು

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ವಿಜೇತ ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮಿಳಿನ ಸೂಪರ್ ಸ್ಟಾರ್ ನಟ ಮತ್ತು ಮಾಜಿ ಸಿಎಂ ಸಹ ಆಗಿರುವ ಎಂಜಿಆರ್ ಬಗ್ಗೆ ತೀರ ತುಚ್ಛವಾಗಿ ಮಾತನಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಇದೀಗ ತಮಿಳಿನ ಕೆಲವು ನಟರು, ಸ್ಟಾರ್ ನಟರುಗಳು ಇದನ್ನು ತೀವ್ರವಾಗಿ ಖಂಡಿಸಿದ್ದು, ರಾಜೇಂದ್ರ ಪ್ರಸಾದ್ ಕೂಡಲೇ ಕ್ಷಮೆ ಕೇಳಬೇಕು ಎಂದಿದ್ದಾರೆ.

ತೆಲುಗಿನ ಹಿರಿಯ ನಟ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರನ್ನು ಕೊಂಡಾಡುತ್ತಾ, ‘ಕಾಂತಾರಾವ್ ಅವರ ನಟನೆ ಮತ್ತು ಕ್ರೇಜ್ ನೋಡಿ ಅಂದಿನ ತಮಿಳು ಸೂಪರ್ ಸ್ಟಾರ್, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಅವರೇ ಹೆದರಿ ಮೂತ್ರ ವಿಸರ್ಜೆ ಮಾಡಿಕೊಳ್ಳುತ್ತಿದ್ದರು’ ಎಂದಿದ್ದರು. ತಮ್ಮ ಭಾಷಣದಲ್ಲಿ ಅನವಶ್ಯಕವಾಗಿ ಅವರು ಎಂಜಿಆರ್ ಅವರಿಗೆ ಅವಮಾನಕಾರ ಪದಗಳನ್ನು ಬಳಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ವಿವಾದಕ್ಕೆ ಕಾರಣವಾಯ್ತು.

ಇದೀಗ ತಮಿಳಿನ ಹಲವು ನಟರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತೀಯ ಕಲಾವಿದರ ಸಂಘದ (SIAA) ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಕೇಳಿ ಆಘಾತವಾಗಿದೆ. ಒಬ್ಬ ನಟ ಮತ್ತೊಬ್ಬ ನಟನನ್ನು ಹೊಗಳುವುದು ಒಳ್ಳೆಯದು, ಆದರೆ ಇನ್ನೊಬ್ಬ ದಂತಕಥೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ಎಂಜಿಆರ್ ಅವರು ಕೇವಲ ನಟರಲ್ಲ, ತಮಿಳುನಾಡಿನ ಶ್ರೇಷ್ಠ ನಾಯಕ. ನಿಮ್ಮ ಹೇಳಿಕೆ ನಮ್ಮ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ದಯವಿಟ್ಟು ಇದಕ್ಕೆ ಕ್ಷಮೆಯಾಚಿಸಿ ಈ ವಿವಾದಕ್ಕೆ ತೆರೆ ಎಳೆಯಿರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ತಮಿಳುನಾಡಿನ ನಟರ ಸಂಘದ ಅಧ್ಯಕ್ಷ ನಾಸರ್ ಕೂಡ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಜೇಂದ್ರ ಪ್ರಸಾದ್ ಅವರೇ, ನೀವು ಕಾಂತಾರಾವ್ ಅವರನ್ನು ಹೊಗಳಿದ್ದು ಕೇಳಿ ಖುಷಿಯಾಯಿತು. ಆದರೆ ಎಂಜಿಆರ್ ಅವರ ಬಗ್ಗೆ ನೀವು ಮಾಡಿದ ಹೋಲಿಕೆ ನನಗೆ ನೋವು ತಂದಿದೆ. ಕೇವಲ ತಮಿಳರಿಗಷ್ಟೇ ಅಲ್ಲ, ತೆಲುಗು ಚಿತ್ರರಂಗದ ನಿಮ್ಮ ಕೆಲವು ಸಹೋದ್ಯೋಗಿಗಳಿಗೂ ಇದು ಇಷ್ಟವಾಗಿಲ್ಲ. ಎಂಜಿಆರ್ ಅವರು ಎನ್.ಟಿ.ಆರ್ ಅವರ ಆಪ್ತರಾಗಿದ್ದರು. ಯಾವುದೇ ರಾಜಕೀಯವಿಲ್ಲದೆ ನಾವು ಅವರನ್ನು ಗೌರವಿಸುತ್ತೇವೆ. ದಯವಿಟ್ಟು ಹೃದಯಪೂರ್ವಕವಾಗಿ ಕ್ಷಮೆಯಾಚಿಸಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

ತಮಿಳು ಚಿತ್ರರಂಗದ ಇತರೆ ಕೆಲವು ನಟರು, ಚಿತ್ರರಂಗಕ್ಕೆ ಸಂಬಂಧಿಸಿದವರು ಸಹ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಬಗ್ಗೆ ಆಡಿರುವ ಮಾತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರಾಜೇಂದ್ರ ಪ್ರಸಾದ್ ಅವರು ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಆಲಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link