Headlines

nagaraj11081993

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 12ರ ದಿನಭವಿಷ್ಯ

ಸಾಯಿಬಾಬಾ ಅಥವಾ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡುವುದು ಮತ್ತು ಮನೆಯಲ್ಲಿನ ಹಿರಿಯರ ಕಾಲಿಗೆ ನಮಸ್ಕರಿಸಿ ದಿನದ ಕೆಲಸ ಆರಂಭಿಸುವುದು ಸಕಲ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಮನೆಗೆ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂಥ ಯೋಗ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವಂಥವರು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು, ಕಂಪನಿಗಳ ಸಿಇಒ, ಸಿಒಒ ಇಂಥ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಬಹಳ ಒಳ್ಳೆ ದಿನ ಇದು….

Read More

ಡೆಲಿವರಿ ಬಾಯ್​​ ಕೊಟ್ಟ ಪಂಚ್​​​ಗೆ ಗ್ರಾಹಕನ ಮೂಗಿನ ಮೂಳೆ ಮುರಿತ: ಆಗಿದ್ದೇನು?

ಬೆಂಗಳೂರು, ಮಾರ್ಚ್​ 11: ಇವಾಗೇನಿದ್ರೂ ಆನ್ ಲೈನ್ ಜಮಾನಾ. ಎಲ್ಲವೂ ಆನ್​ಲೈನ್​ನಲ್ಲೇ ಸಿಕ್ಕಿಬಿಡುತ್ತೆ. ಊಟ ತಿಂಡಿ, ದವಸ-ಧಾನ್ಯದಿಂದ ಹಿಡಿದು ಗೃಹಪಯೋಗಿ ವಸ್ತುಗಳು ಕೂಡ ದೊರಕಿಬಿಡುತ್ತೆ. ಇದೇ ರೀತಿ ಓರ್ವ ವ್ಯಕ್ತಿ ಬ್ಲಿಂಕ್ ಇಟ್ ಆ್ಯಪ್​ನಲ್ಲಿ ತಿನ್ನುವುದಕ್ಕೆ ಅಂತಾ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಆರ್ಡರ್ ತಗೊಂಡು ಬಂದ ಡೆಲಿವರಿ ಬಾಯ್ (Delivery Boy) ಗ್ರಾಹಕನ ಮೂಗಿನ ಮೂಳೆಯನ್ನೇ ಮುರಿದ ಘಟನೆ ಕೋರಮಂಗಲ 8ನೇ ಬಾಕ್ಲ್​ನಲ್ಲಿ ನಡೆದಿದೆ. ನಡೆದಿದ್ದೇನು? ಮಾರ್ಚ್ 7ರ ಬೆಳಗಿನ ಜಾವ 2ಗಂಟೆಯ ಸಮಯ. ಕೋರಮಂಗಲ 8ನೇ…

Read More

ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ; ಇರಾನ್ ಮೇಲಿನ ಯುದ್ಧ ಬೇಗ ಕೊನೆಯಾಗಲಿದೆ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್ 11: ಇರಾನ್‌ನೊಂದಿಗಿನ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಳಿವು ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಈಗಾಗಲೇ ದೇಶದಲ್ಲಿ ಲಭ್ಯವಿರುವ ಹೆಚ್ಚಿನ ಟಾರ್ಗೆಟ್​​ಗಳನ್ನು ನಾಶಪಡಿಸಿವೆ. “ಇರಾನ್​​ನಲ್ಲಿ ಪ್ರಾಯೋಗಿಕವಾಗಿ ಗುರಿಯಿಡಲು ಇನ್ನೇನೂ ಉಳಿದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯು ಇರಾನಿಗೆ ಈಗಾಗಲೇ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್​ನವರ ಕ್ಷಿಪಣಿಗಳು ಚದುರಿಹೋಗಿವೆ. ಅವರ ಡ್ರೋನ್‌ಗಳನ್ನು ಎಲ್ಲೆಡೆ ಸ್ಫೋಟಿಸಲಾಗುತ್ತಿದೆ, ಅವುಗಳ ಡ್ರೋನ್‌ಗಳ ತಯಾರಿಕೆಯೂ ನಿಂತಿದೆ. ಟೆಹ್ರಾನ್…

Read More

ವಾಹನ ಮಾಲೀಕರ ಗಮನಕ್ಕೆ: ಇನ್ಮುಂದೆ ಗಾಡಿ ಎಫ್ಸಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಬೆಂಗಳೂರು, (ಮಾರ್ಚ್ 11): ಬೆಂಗಳೂರಿನ ಆರ್‌ಟಿಒ ಕಚೇರಿಗಳಲ್ಲಿ ಹೊರರಾಜ್ಯದ ವಾಹನಗಳಿಗೆ ಯಾವುದೇ ತಪಾಸಣೆ ಮಾಡದೇ ಅಕ್ರಮವಾಗಿ ಅರ್ಹತಾ ಪತ್ರ (fitness certificate) ನೀಡಲಾಗುತ್ತಿದೆ. ಆರ್ಟಿಓ ಅಧಿಕಾರಿಗಳು ವಾಹನಗಳು ತಪಾಸಣೆ ಮಾಡದೆ,ಕೆಲ ವಾಹನಗಳು ರಾಜ್ಯಕ್ಕೆ ‌ಬಾರದಿದ್ದರೂ ಅಂತಹ ವಾಹನಗಳಿಗೆ ಅನಧಿಕೃತವಾಗಿ ಎಫ್ಸಿ ನೀಡಲಾಗುತ್ತಿದ್ದು, ಈ ಬಗ್ಗೆ ನಿಮ್ಮ ಟಿವಿ9, ಆರ್​​ಟಿಓಗಳ ಕರ್ಮಕಾಂಡದ ಬಗ್ಗೆ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ರಾಜ್ಯ ಸಾರಿಗೆ ಇಲಾಖೆ, ಎಫ್ಸಿ ಮಾಡಲು ಕಠಿಣ ರೂಲ್ಸ್ ಜಾರಿಗೆ ತಂದಿದ್ದು, ಇನ್ಮುಂದೆ ಎಫ್ಸಿ ಮಾಡಬೇಕು…

Read More

ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು

ವಿವಾದಿತ ಕಥಾಹಂದರ ಹೊಂದಿದೆ ಎಂಬ ಕಾರಣಕ್ಕೆ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಈ ಸಿನಿಮಾವನ್ನು ಬಿಜೆಪಿಯ ಕೆಲವು ಶಾಸಕರು ವೀಕ್ಷಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿಮಾಲ್​​ನಲ್ಲಿ ಸಿನಿಮಾ ವೀಕ್ಷಣೆ ಮಾಡಲಾಗಿದೆ. ವಿಪಕ್ಷ ನಾಯಕರಾದ ಆರ್. ಅಶೋಕ್ (R Ashok), ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಶಾಸಕರು ಮತ್ತು ಪರಿಷತ್ ಸದಸ್ಯರು ಸಿನಿಮಾ ನೋಡಿದ್ದಾರೆ. ರಾಜ್ಯ ಬಿಜೆಪಿಯಿಂದ ಸಿನಿಮಾ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಈ ಸಿನಿಮಾಗೆ ಕಾಮಾಕ್ಯ…

Read More

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಬೆಂಗಳೂರು, ಮಾರ್ಚ್​​ 11: ಆತ ಚಾಲಕ (Driver). ಕಳೆದ ಹತ್ತು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನ ಬಹಳ ಆತ್ಮೀಯತೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೇ ನಿಜಕ್ಕೂ ರೋಚಕ. ಉಂಡ ಮನೆಗೆ ದ್ರೋಹ ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು…

Read More

ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ ಮೊನಾಲಿಸಾ

ಒಂದೆಡೆ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇನ್ನೊಂದೆಡೆ ರಿಯಲ್ ಕೇರಳ ಸ್ಟೋರಿ ನಡೆದಿದೆ. ಮುಸ್ಲಿಂ ಪ್ರಿಯಕರ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿನಾ ಭೋಸ್ಲೆ (Monalisa Bhosle) ಮದುವೆ ನಡೆದಿದೆ. ತಮ್ಮ ವಿವಾಹಕ್ಕೆ ಕೇರಳವೇ ಸೂಕ್ತ ಮತ್ತು ಸುರಕ್ಷಿತ ಸ್ಥಳ ಎಂದು ತೀರ್ಮಾನಿಸಿ ಮೊನಾಲಿಸಾ ಮತ್ತು ಫರ್ಮಾನ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೂ ದೇವಾಲಯದಲ್ಲಿ ಈ ಜೋಡಿಯ ಮದುವೆ ನಡೆದಿದೆ. ಮೊನಾಲಿಸಾಗೆ ಫರ್ಮಾನ್ ಅವರು ತಾಳಿ ಕಟ್ಟಿ, ಕುಂಕುಮ ಇಟ್ಟಿದ್ದಾರೆ. ಕೇರಳದ…

Read More

ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಮುಖಭಂಗ; ಸ್ಪೀಕರ್ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸೋಲು

ನವದೆಹಲಿ, ಮಾರ್ಚ್ 11: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಇಂದು ಸದನದಲ್ಲಿ ಧ್ವನಿ ಮತದಿಂದ ತಿರಸ್ಕರಿಸಲಾಯಿತು. ಹಲವಾರು ವಿರೋಧ ಪಕ್ಷದ ಸಂಸದರ ಬೆಂಬಲದೊಂದಿಗೆ ಕಾಂಗ್ರೆಸ್‌ನ ಮೊಹಮ್ಮದ್ ಜಾವೇದ್ ಅವರು ಈ ನಿರ್ಣಯವನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದ ವೇಳೆ ವಿರೋಧ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರು ಭಾರತದ ಪ್ರಜಾಪ್ರಭುತ್ವದ…

Read More

ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ

2025ರ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬುಧವಾರ (ಮಾರ್ಚ್ 11) ಸಂಜೆ ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ (Monalisa Bhosle Marriage) ನೆರವೇರಿದೆ. ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ (Muhammad Farman) ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ತಿರುವನಂತಪುರಂನ ಅರುಮನೂರಿನಲ್ಲಿರುವ ಮಂದಿರದಲ್ಲಿ ನಡೆದ…

Read More

IPL 2026: ಇಲ್ಲಿದೆ ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ, ಸೇವ್ ಮಾಡಿಟ್ಟುಕೊಳ್ಳಿ

ಭಾರತದ ದೊಡ್ಡ ಕ್ರಿಕೆಟ್ ಉತ್ಸವವಾದ ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) ಮೊದಲ ಹಂತದ ಒಟ್ಟು 20 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಇದೇ ಮಾರ್ಚ್ 28ರಿಂದ ಪ್ರಾರಂಭವಾಗಲಿದ್ದು, ಮೊದಲ ಉದ್ಘಾಟನಾ ಪಂದ್ಯವನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಲಿದೆ. ಅದು ತವರು ಅಂಗಳ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಐಪಿಎಲ್ ಸೀಸನ್ 19ರ ಮೊದಲ ಹಂತದ ಪಂದ್ಯಗಳು ಮಾರ್ಚ್ 28ರಿಂದ ಏಪ್ರಿಲ್ 12ರವರೆಗೂ ನಡೆಯಲಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ತಂಡ…

Read More