ಒಳ ಉಡುಪಿನಲ್ಲಿ ಗಾಂಜಾ ತಂದು ಕೈದಿಗಳಿಗೆ ಸಪ್ಲೈ! ಪರಪ್ಪನ ಅಗ್ರಹಾರದಲ್ಲಿ ವಾರ್ಡನ್ನಿಂದಲೇ ಕಳ್ಳಾಟ
ಬೆಂಗಳೂರು, ಮಾರ್ಚ್ 12: ಹಲವು ತಿಂಗಳುಗಳಿಂದ ಒಂದಲ್ಲಾ ಒಂದು ರೀತಿಯ ಅಕ್ರಮಗಳಿಂದ ಸುದ್ದಿಯಾಗುತ್ತಿರುವ ನಗರದ ಪರಪ್ಪನ ಅಗ್ರಹಾರ (Parappana Agrahara)ಕೇಂದ್ರ ಕಾರಾಗೃಹ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಗಾಂಜಾ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ. ಗಾಂಜಾ ತಂದರೆ 10 ಸಾವಿರ ಕೊಡ್ತೀನಿ ಎಂದಿದ್ದ ಕೈದಿ ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ…