‘ನಾನು ಸುದೀಪ್ ಸರ್ ಬಗ್ಗೆ ಹಗುರವಾಗಿ ಮಾತನಾಡಿಲ್ಲ’; ಉಲ್ಟಾ ಹೊಡೆದ ಸತೀಶ್
ಸತೀಶ್ (Satish) ಅವರು ಸದಾ ಸುದ್ದಿಯಲ್ಲಿರಲು ಬಯಸುತ್ತಾರೆ. ಇತ್ತೀಚೆಗೆ ಅವರು ಸುದೀಪ್ ಬಗ್ಗೆ ಆಡಿದ ಮಾತು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ಈ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆದರಿಕೆಗಳು ಬಂದವು. ಈಗ ತಾವು ಆ ರೀತಿ ಹೇಳಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ‘ನಾನು, ಸರ್ ಬಗ್ಗೆ ಎಲ್ಲಿ ಹಗುರವಾಗಿ ಮಾತನಾಡಿದ್ದೇನೆ. ನಟರಿಗೆ ಕೊಂಬಿರುತ್ತದೆಯೇ ಎಂದು ನಾನು ಕೇಳಿದೆನೇ ಹೊರತು, ಸುದೀಪ್ ಸರ್ಗೆ ಕೇಳಿದ್ದಲ್ಲ. ಈ ಬಗ್ಗೆ ನಾನು…