ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್
ಭೋಪಾಲ್, ಮಾರ್ಚ್ 12: ಯುವತಿಯರನ್ನು ಯಾರ್ಯಾರದ್ದೋ ಮನೆಗೆ ಕಳುಹಿಸಿ, ಅತ್ಯಾಚಾರದ ನಾಟಕವಾಡಿಸಿ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಜನರನ್ನು ಬೆದರಿಸಿ ಅವರಿಂದ ಸುಲಿಗೆ ಮಾಡುವ ಗ್ಯಾಂಗ್ ಕಟ್ಟಿದ್ದ ಆಕಾಶ್ ನೀಲಕಂಠ್ ಎಂಬಾತನನ್ನು ಆತನ ಮದುವೆ(Marriage) ದಿನವೇ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ಅಲಿಯಾಸ್ ಆಕಾಶ್ ನೀಲಕಂಠ, ಈತ ಇಲ್ಲೀಗಲ್ ಗ್ಯಾಂಗ್ ಎಂಬ ಗ್ಯಾಂಗ್ ಅನ್ನು ಕಟ್ಟಿಕೊಂಡಿದ್ದ, ಆತನ ಮದುವೆ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ ಪೊಲೀಸರು…