All posts by nagaraj11081993

13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ನವದೆಹಲಿ, ಮಾರ್ಚ್​ 11: ಕಳೆದ ಹದಿಮೂರು ವರ್ಷಗಳಿಂದ ಕೋಮಾ(Coma)ದಲ್ಲಿರುವ ಹರೀಶ್ ರಾಣಾ ದಯಾಮರಣ( Euthanasia)Supreme Court passive euthanasia verdict, India passive euthanasia ruling, Supreme Court end of life decision, right to die case India, Harish Rana 13 years coma verdict,
ಕ್ಕೆ ಸುಪ್ರೀಂಕೋರ್ಟ್​ ಇಂದು(ಮಾರ್ಚ್​ 11) ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗದೆ ಜೀವಂತ ಶವದಂತಾಗಿದ್ದಾನೆ. ಆತನ ವೃದ್ಧ ಪೋಷಕರು, ಅವರ ಚೇತರಿಕೆಯ ಭರವಸೆಯನ್ನು ತ್ಯಜಿಸಿ, ತಮ್ಮ ಮಗನ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಅಂತೂ ಅಸ್ತು ಎಂದಿದೆ.

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.

ಹರೀಶ್ ಅವರ ಪೋಷಕರು, ಇತರ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದಾರೆ, ದೆಹಲಿಯಲ್ಲಿರುವ ತಮ್ಮ ಮನೆಯನ್ನು ಮಾರಿ, ಏಮ್ಸ್‌ನಲ್ಲಿ ಅವರ ಹಾಸಿಗೆಯ ಪಕ್ಕದಲ್ಲಿಯೇ ಇರಲು ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡರು. ವರ್ಷಗಳಲ್ಲಿ, ತಮ್ಮ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ಅವರು ದಯಾಮರಣಕ್ಕೆ ಕಾನೂನು ಅನುಮತಿಯನ್ನು ಕೋರಿದ್ದರು.

ಮತ್ತಷ್ಟು ಓದಿ: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು

ಏಮ್ಸ್ ಸಲ್ಲಿಸಿದ ವೈದ್ಯಕೀಯ ಮೌಲ್ಯಮಾಪನದ ಪ್ರಕಾರ, ರಾಣಾ ಅವರ ಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ವರದಿಯು ಅತ್ಯಂತ ದುಃಖಕರವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಗಮನಿಸಿದ್ದಾರೆ. ಇದು ನಮಗೆ ಕಷ್ಟಕರವಾದ ನಿರ್ಧಾರ, ಆದರೆ ಈ ಹುಡುಗ ಇಷ್ಟೊಂದು ಯಾತನೆಯಲ್ಲಿ ಉಳಿಯಲು ನಾವು ಬಿಡುವುದಿಲ್ಲ, ಇಂದು ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದರು.

ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ 2011 ರ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಗುರುತಿಸಿತು ಮತ್ತು ನಂತರ 2018 ರಲ್ಲಿ ಕಾಮನ್ ಕಾಸ್ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನ ಅಡಿಯಲ್ಲಿ ಕಾನೂನುಬದ್ಧಗೊಳಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Unibrow Astrology: ಎರಡು ಹುಬ್ಬುಗಳು ಪರಸ್ಪರ ಸಂಧಿಸಿದ್ದರೆ ಅಶುಭವೇ? ಶಾಸ್ತ್ರಗಳು ಹೇಳುವುದೇನು?

ಸಮಾಜದಲ್ಲಿ ದೈಹಿಕ ಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುಣಲಕ್ಷಣ ಅಥವಾ ಭವಿಷ್ಯವನ್ನು ಅಳೆಯುವ ಸಂಪ್ರದಾಯ ಬಹಳ ಹಳೆಯದು. ತಲೆಯ ಮೇಲಿನ ಸುಳಿ, ಅಂಗೈ ರೇಖೆಗಳಂತೆಯೇ ‘ಜೋಡು ಹುಬ್ಬು’ (Unibrow) ಅಥವಾ ಹುಬ್ಬುಗಳ ರಚನೆಯ ಬಗ್ಗೆಯೂ ವಿಭಿನ್ನ ನಂಬಿಕೆಗಳು ಚಾಲ್ತಿಯಲ್ಲಿವೆ. ಹಿರಿಯರ ಅನುಭವ ಮತ್ತು ಜ್ಯೋತಿಷ್ಯ ಶಾಸ್ತ್ರದ ಹಿನ್ನೆಲೆಯಲ್ಲಿ ಇವುಗಳನ್ನು ನೋಡುವುದಾದರೆ ಕುತೂಹಲಕಾರಿ ವಿಷಯಗಳು ಬೆಳಕಿಗೆ ಬರುತ್ತವೆ.

ವಿವಾಹ ಮತ್ತು ಜೀವನದ ಬಗೆಗಿನ ನಂಬಿಕೆಗಳು:

ಜೋಡು ಹುಬ್ಬು ಹೊಂದಿರುವವರ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವು ಹಿರಿಯರ ಪ್ರಕಾರ, ಎರಡು ಹುಬ್ಬುಗಳು ಒಂದಕ್ಕೊಂದು ಅಂಟಿಕೊಂಡಿರುವವರು ಜೀವನದಲ್ಲಿ ಎರಡು ಮದುವೆಯಾಗುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಇನ್ನು ಕೆಲವರು ಅಂತಹ ವ್ಯಕ್ತಿಗಳಿಗೆ ದಾಂಪತ್ಯ ಸುಖ ಅಷ್ಟಾಗಿ ಇರುವುದಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಇವೆಲ್ಲವೂ ಕೇವಲ ನಂಬಿಕೆಗಳಾಗಿದ್ದು, ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

ಜ್ಯೋತಿಷ್ಯ ಶಾಸ್ತ್ರದ ವಿಶ್ಲೇಷಣೆ:

ಸಮುದ್ರಿಕಾ ಶಾಸ್ತ್ರ ಅಥವಾ ಜ್ಯೋತಿಷ್ಯದ ಪ್ರಕಾರ, ಹುಬ್ಬುಗಳು ವ್ಯಕ್ತಿಯ ಶ್ರಮಜೀವಿ ಗುಣವನ್ನು ಸೂಚಿಸುತ್ತವೆ. ಆದರೆ ಇದರ ಪರಿಣಾಮ ಸ್ತ್ರೀ ಮತ್ತು ಪುರುಷರ ಮೇಲೆ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಲಾಗುತ್ತದೆ:

ಮಹಿಳೆಯರ ಮೇಲೆ ಪ್ರಭಾವ:

ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಜೋಡು ಹುಬ್ಬು ಹೊಂದಿರುವ ಮಹಿಳೆಯರು ಅತ್ಯಂತ ಅದೃಷ್ಟವಂತರು. ಇವರು ಕಾಲಿಟ್ಟ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ತಮ್ಮ ಅತ್ತೆ-ಮಾವ ಮತ್ತು ಪತಿಗೆ ಅದೃಷ್ಟ ತರುವ ಇವರು, ಕುಟುಂಬದ ಅಭಿವೃದ್ಧಿಗೆ ಕಾರಣರಾಗುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಪುರುಷರ ಮೇಲೆ ಪ್ರಭಾವ:

ಪುರುಷರ ವಿಷಯಕ್ಕೆ ಬಂದರೆ ಈ ನಂಬಿಕೆಗಳು ಸ್ವಲ್ಪ ಭಿನ್ನವಾಗಿವೆ. ಹತ್ತಿರವಾಗಿರುವ ಅಥವಾ ಜೋಡು ಹುಬ್ಬು ಹೊಂದಿರುವ ಪುರುಷರು ಜೀವನದಲ್ಲಿ ಅತಿಯಾದ ಸಂಘರ್ಷ ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ. ಎಷ್ಟೇ ಶ್ರಮವಹಿಸಿದರೂ ಸಣ್ಣ ಪುಟ್ಟ ವಿಷಯಗಳಿಗೂ ಅಡೆತಡೆಗಳು ಎದುರಾಗುವುದು ಮತ್ತು ನಿರೀಕ್ಷಿತ ಫಲ ಸಿಗದಿರುವುದು ಇವರನ್ನು ಕಾಡಬಹುದು ಎನ್ನಲಾಗುತ್ತದೆ.

ಆಧ್ಯಾತ್ಮಿಕ ಮತ್ತು ಜಾಗತಿಕ ನಂಬಿಕೆಗಳು:

ಹುಬ್ಬುಗಳನ್ನು ಕೇವಲ ದೈಹಿಕ ಭಾಗವಾಗಿ ನೋಡದೆ, ಅವುಗಳನ್ನು ಆಧ್ಯಾತ್ಮಿಕ ಶಕ್ತಿಯ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ಕೆಲವು ವಿದೇಶಿ ಸಂಸ್ಕೃತಿಗಳಲ್ಲಿ, ಜೋಡು ಹುಬ್ಬು ಹೊಂದಿರುವ ಪುರುಷರು ವಿಶೇಷವಾದ ಮಾಂತ್ರಿಕ ಅಥವಾ ಅದೀಂದ್ರಿಯ ಶಕ್ತಿಗಳನ್ನು ಹೊಂದಿರುತ್ತಾರೆ ಎಂದು ನಂಬಲಾಗುತ್ತದೆ. ಇನ್ನು ತೆಳ್ಳಗಿನ ಅಥವಾ ವಿರಳವಾದ ಹುಬ್ಬುಗಳನ್ನು ಹೊಂದಿರುವವರು ದೈಹಿಕವಾಗಿ ಸ್ವಲ್ಪ ದುರ್ಬಲರಾಗಿರುತ್ತಾರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಬೇಗ ತುತ್ತಾಗುತ್ತಾರೆ ಎಂಬ ನಂಬಿಕೆಯೂ ಅಸ್ತಿತ್ವದಲ್ಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅಲ್ಲು ಕುಟುಂಬ ಹಲವು ದಶಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಮಾತ್ರವೇ ಅಲ್ಲದೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ.

ಅಲ್ಲು ಅರ್ಜುನ್ ಅವರು ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಿಸಿದ್ದು, ಹೈದರಾಬಾದ್​​ನ ಈ ವರೆಗಿನ ಮಲ್ಟಿಪ್ಲೆಕ್ಸ್​ಗಳಲ್ಲಿಯೇ ಅತ್ಯಂತ ಗುಣಮಟ್ಟದ ಮಲ್ಟಿಪ್ಲೆಕ್ಸ್ ಇದಾಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್​ನ ಕೋಕಾಪೇಟೆಯಲ್ಲಿ ಎಎ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ನಾಳೆ (ಮಾರ್ಚ್ 12) ಇದರ ಉದ್ಘಾಟನಾ ಸಮಾರಂಭ ಆಯೋಜನೆಯಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖುದ್ದು ಈ ಮಲ್ಟಿಪ್ಲೆಕ್ಸ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಏಷಿಯನ್ ಸಿನಿಮಾಸ್ ಜೊತೆಗೆ ಕೈ ಜೋಡಿಸಿ ಎಎಎ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದರು. ಇದೀಗ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಅಲ್ಲು ಅರ್ಜುನ್ ಮಾರ್ಕ್ಯೂ ಮಲ್ಟಿಪ್ಲೆಕ್ಸ್​ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರಿಗೆ ಅತ್ಯುನ್ನತ ಸಿನಿಮಾ ವೀಕ್ಷಣೆ ಅನುಭವವನ್ನು ನೀಡಲಿದೆ. ಈ ಮಲ್ಟಿಪ್ಲೆಕ್ಸ್​​ನಲ್ಲಿ ನಾಲ್ಕು ಸ್ಕ್ರೀನ್​​ಗಳು ಇರಲಿದ್ದು, ಇವುಗಳಲ್ಲಿ ಮೂರು ಸಾಮಾನ್ಯ ಸ್ಕ್ರೀನ್​​ಗಳಾಗಿದ್ದರೆ ಒಂದು ಮಾತ್ರ ವಿಶೇಷ ಡಾಲ್ಬಿ ಸ್ಕ್ರೀನ್ ಆಗಿರಲಿದೆ. ಡಾಲ್ಬಿ ಸಿನಿಮಾಸ್ ಸ್ಕ್ರೀನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ. ಡ್ಯುಯಲ್ 4K ಲೇಸರ್ ಪ್ರೊಜೆಕ್ಷನ್, ಡಾಲ್ಬಿ ವಿಷನ್, ಡಾಲ್ಬಿ 3D ಸಾಮರ್ಥ್ಯ ಮತ್ತು ಇಮ್ಮರ್ಸಿವ್ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಅನ್ನು ಹೊಂದಿರಲಿದೆ. ಕಪ್ಪು ಬಣ್ಣವೇ ಪ್ರಧಾನವಾಗಿರುವ ಒಳಾಂಗಣ ವಿನ್ಯಾಸವನ್ನು ಈ ಮಲ್ಟಿಪ್ಲೆಕ್ಸ್ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಪರದೆಗಳು ಮತ್ತು ಸೌಂಡ್ ಅನ್ನು ಒಳಗೊಂಡಿರಲಿವೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್​ಡೇಗೆ ಸಿಗಲಿದೆ ದೊಡ್ಡ ಗಿಫ್ಟ್

ಹೈದರಾಬಾದ್​​ನಲ್ಲಿ ಈಗಾಗಲೇ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್​​ಗಳು ಇವೆ. ಇದೀಗ ಅಲ್ಲು ಅರ್ಜುನ್ ಸಹ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್​​ಗೆ ಕೈಹಾಕಿದ್ದು ಈ ಇಬ್ಬರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಲಿದ್ದಾರೆ. ಅಲ್ಲು ಅರ್ಜುನ್ ಅವರ ಈ ಹೊಸ ಮಲ್ಟಿಪ್ಲೆಕ್ಸ್​ ಅನ್ನು ನಾಳೆ (ಮಾರ್ಚ್ 12) ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಅದರ ಬಳಿಕ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥವಾಗಿ ಪ್ರದರ್ಶನ ಮಾಡಲಾಗುವುದಂತೆ ಅದರಲ್ಲಿ ಹಾಲಿವುಡ್​ನ ‘ಎಫ್ 1’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥ ಪ್ರದರ್ಶಿಸಲಾಗುತ್ತಿದೆ. ಅದಾದ ಬಳಿಕ ಮಾರ್ಚ್ 19ಕ್ಕೆ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ. ಟಿಕೆಟ್ ಬೆಲೆ 295 ರಿಂದ 500 ರೂಪಾಯಿಗಳ ವರೆಗೆ ಇರಲಿದೆ.

ಅಲ್ಲು ಅರ್ಜುನ್ ಅವರು ಖುದ್ದು ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್​​ನಲ್ಲಿ ಅಲ್ಲು ಅರ್ಜುನ್ ಅವರ ಪಬ್ಬು, ಬಫೆಲೊ ವಿಂಗ್ಸ್ ಹೆಸರಿನ ಐಶಾರಾಮಿ ಸ್ಪೋರ್ಟ್ ರೆಸ್ಟೊರೆಂಟ್​ಗಳು ಸಹ ಇವೆ. ಇವುಗಳ ಜೊತೆಗೆ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ಒಟಿಟಿಯಲ್ಲಿಯೂ ಅವರ ಪಾಲಿದೆ. ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ. ಇದೀಗ ಮಲ್ಟಿಪ್ಲೆಕ್ಸ್​ ಸಹ ಪ್ರಾರಂಭಿಸಿದ್ದು, ಒಟ್ಟಾರೆ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ ಅಲ್ಲು ಅರ್ಜುನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂಪಾಯಿಗೆ ಏರಿಕೆ?

ಹುಬ್ಬಳ್ಳಿ, ಮಾರ್ಚ್​​ 11: ಹೋಟೆಲ್ ಉದ್ಯಮವು ತೀವ್ರ LPG ಸಿಲಿಂಡರ್ ಕೊರತೆಯಿಂದ ತತ್ತರಿಸಿದೆ. ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಿಲ್ಲದೆ ಹೋಟೆಲ್ ಮಾಲೀಕರು ಪರದಾಡುತ್ತಿದ್ದಾರೆ. ಒಂದು ಸಿಲಿಂಡರ್‌ಗೆ 4,000-5,000 ನೀಡಲು ಸಿದ್ಧರಿದ್ದರೂ ಸಿಲಿಂಡರ್‌ಗಳು ಸಿಗುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆಯಿಂದಾಗಿ ಹೋಟೆಲ್‌ಗಳು ದೋಸೆ, ಪೂರಿ ಸೇರಿದಂತೆ ಹಲವು ಖಾದ್ಯಗಳ ತಯಾರಿಕೆಯನ್ನು ನಿಲ್ಲಿಸಿವೆ. ಸಿಲಿಂಡರ್ ಕೊರತೆಯು ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರಿದೆ. ಹಲವು ಹೋಟೆಲ್‌ಗಳು ಈಗಾಗಲೇ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿವೆ, ಇನ್ನೂ ಕೆಲವು ಹೋಟೆಲ್‌ಗಳು ಮುಚ್ಚುವ ಭೀತಿಯಲ್ಲಿವೆ. ಇದರಿಂದ ಪ್ರತಿದಿನ ದುಡಿದು ಜೀವನ ಸಾಗಿಸುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ತಮ್ಮ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಕ್ಕ-ತಂಗಿ ಅಂದು, ಇಂದು; ರಶ್ಮಿಕಾ-ಶಿಮನ್ ಕ್ಯೂಟ್ ಫೋಟೋ ವೈರಲ್

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರ ವಿವಾಹದ ಫೋಟೋಗಳು ವೈರಲ್ ಆಗಿವೆ. ವಿವಾಹ ಪೂರ್ವ ಕಾರ್ಯಕ್ರಮ, ವಿವಾಹ ಶಾಸ್ತ್ರಗಳು ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದವು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಹಾಗೂ ಅವರ ಸಹೋದರಿಯ ಕ್ಯೂಟ್ ಫೋಟೋಗಳು ವೈರಲ್ ಆಗಿವೆ. ಅಂದು ಹೇಗಿದ್ದರು ಹಾಗೂ ಈಗ ಹೇಗಿದ್ದಾರೆ ಎಂಬ ಕೊಲ್ಯಾಜ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ರಶ್ಮಿಕಾ ಮಂದಣ್ಣ ಸಹೋದರಿ ಹೆಸರು ಶಿಮನ್. ಇಬ್ಬರ ಮಧ್ಯೆ ಸುಮಾರು 16 ವರ್ಷಗಳ ವಯಸ್ಸಿನ ಅಂತರ ಇದೆ. ರಶ್ಮಿಕಾ ಜನಿಸಿದ್ದು, 1996ರ ಏಪ್ರಿಲ್ 5ರಂದು. ಅವರಿಗೆ ಈ ಏಪ್ರಿಲ್​​ಗೆ 30 ವರ್ಷ ತುಂಬಲಿದೆ. ಶಿಮನ್​​ಗೆ ಈಗಿನ್ನೂ 14 ವರ್ಷ. ಅವಳು ಅಕ್ಕನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.

ಈ ದೊಡ್ಡ ವಯಸ್ಸಿನ ಅಂತರದಿಂದಾಗಿ,ರಶ್ಮಿಕಾಗೆ ಶಿಮನ್‌ ಮಗಳಂತೆ ಭಾಸವಾಗುತ್ತಾಳಂತೆ. ಅವರ ಬಿಡುವಿಲ್ಲದ ವೃತ್ತಿಜೀವನದಿಂದಾಗಿ ಶಿಮನ್ ಬೆಳೆಯುವುದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಿರುವುದಕ್ಕೆ ರಶ್ಮಿಕಾಗೆ ಬೇಸರ ಇದೆ.

ರಶ್ಮಿಕಾ ಅವರು ತಂಗಿಯ ಜೊತೆ ಫೋಟೋ ಹಂಚಿಕೊಂಡಿದ್ದು ಕಡಿಮೆ. ಅವಳ ಖಾಸಗಿತನಕ್ಕೆ ದಕ್ಕೆ ಬರಬಾರದು ಎಂಬ ಕಾರಣಕ್ಕೆ ತಂಗಿ ಜೊತೆ ರಶ್ಮಿಕಾ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರಲಿಲ್ಲ. ಆದರೆ, ಮದುವೆ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಶ್ಮಿಕಾ ಹಂಚಿಕೊಳ್ಳದೆ ಇರಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್​​ಫುಲ್

ಮೊದಲ ಫೋಟೋ 2020ರಲ್ಲಿ ತೆಗೆದಿದ್ದು ಎನ್ನಲಾಗಿದೆ. ಅಂದರೆ, ಆಗ ಶಿಮನ್​​ಗೆ 8 ವರ್ಷ. ಈಗ ಆಕೆಗೆ 14 ವರ್ಷ. ಈ ಎರಡೂ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿ ಅಲ್ಲೇ ಹೋಯ್ತು ಪ್ರಾಣ

ತೆಲಂಗಾಣ, ಮಾರ್ಚ್​ 11: ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಮೂವರು ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಏಕಾಏಕಿ ಇಬ್ಬರ ಮೇಲೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ಘಟನೆ ತೆಲಂಗಾಣದ ಮದರಿಪೇಟೆಯಲ್ಲಿ ನಡೆದಿದೆ. ಈ ಘಟನೆ ಬಳಿಕ ಸ್ಟ್ಯಾಂಡ್​ಗೆ ಅಂಟಿಕೊಂಡಿದ್ದ ದೇಹಗಳನ್ನು ಅದರಿಂದ ಬಿಡಿಸಲು ಹರಸಾಹಸ ಪಡಬೇಕಾಯಿತು.  ಯಾವುದೇ ಕಾರಣಕ್ಕೂ ಕಬ್ಬಿಣದ ಏಣಿ ಅಥವಾ ಇತರೆ ವಸ್ತುಗಳನ್ನು ರಸ್ತೆಯಲ್ಲಿ ತೆಗೆದುಕೊಂಡು ಹೋಗುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಸ್ತಿ ತೆರಿಗೆ ಪಾವತಿಗೂ EMI?: ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಬೆಂಗಳೂರು, ಮಾರ್ಚ್​​ 11: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(GBA) ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆಗಳ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಹಣಕಾಸು ಆಯೋಗ (SFC) ವಿಶೇಷ ಪರಿಹಾರವನ್ನು ಸೂಚಿಸಿದೆ. ಆಸ್ತಿ ತೆರಿಗೆ ಪಾವತಿಗೆ EMI ಯೋಜನೆ ಜೊತೆಗೆ ರಿಯಾಯಿತಿ ನೀಡುವಂತೆ ಶೀಫಾರಸು ಮಾಡಿದೆ. ಐದನೇ ರಾಜ್ಯ ಹಣಕಾಸು ಆಯೋಗದ ವರದಿ ಪ್ರಕಾರ, ಈ ಕ್ರಮದಿಂದ ಆಸ್ತಿ ತೆರಿಗೆ ಸಂಗ್ರಹಣೆಯ ಕಾರ್ಯಕ್ಷಮತೆ ಹೆಚ್ಚಬಹುದು. ಪ್ರತಿ ವರ್ಷ ಒಮ್ಮೆಲೇ ದೊಡ್ಡ ಮೊತ್ತವನ್ನು ಪಾವತಿಸುವುದು ಕೆಲವರಿಗೆ ಕಷ್ಟವಾಗಬಹುದು. ಅದನ್ನು ತಿಂಗಳ ಕಂತುಗಳಾಗಿ (EMI) ಪಾವತಿಸುವ ವ್ಯವಸ್ಥೆ ಮಾಡಿದರೆ ಪಾವತಿ ಸುಲಭವಾಗುತ್ತದೆ ಮತ್ತು ಜನರ ಮೇಲೆ ಇರುವ ಒತ್ತಡವೂ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರ ಜೊತೆಗೆ ಆಸ್ತಿ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರಿಗೆ ರಿಯಾಯಿತಿ ನೀಡುವಂತೆ ಕೂಡ ಆಯೋಗ ಶಿಫಾರಸು ಮಾಡಿದೆ. ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೀಡುತ್ತಿದ್ದಂತೆ ಶೇಕಡಾ 5ರಷ್ಟು ರಿಯಾಯಿತಿ ನೀಡುವ ಕ್ರಮವನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಇದರಿಂದ ಜನರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಲು ಉತ್ತೇಜನ ದೊರೆಯುತ್ತದೆ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಜಿಬಿಎಯಿಂದ ಭರ್ಜರಿ ಶಾಕ್​​; ಹೆಚ್ಚುವರಿ ತೆರಿಗೆಗೆ ಬಿಜೆಪಿಗರು ಕೆಂಡ

ಕಳೆದ ವರ್ಷದ ಸೆಪ್ಟೆಂಬರ್ ವೇಳೆಗೆ, BBMP ಸುಮಾರು 2.75 ಲಕ್ಷ ಡಿಫಾಲ್ಟರ್‌ಗಳನ್ನು ಗುರುತಿಸಿತ್ತು. ಇವರಿಂದ ಸುಮಾರು 786 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಇದಕ್ಕೂ ಮೊದಲು, ಬಾಕಿ ತೆರಿಗೆ ವಸೂಲಿಗಾಗಿ ಜಾರಿಗೊಳಿಸಿದ್ದ ಒನ್​​ ಟೈಂ ಸೆಟಲ್​​ಮೆಂಟ್​​ ಯೋಜನೆ ಮೂಲಕ BBMP ಸುಮಾರು 1,200 ಕೋಟಿ ಬಾಕಿ ತೆರಿಗೆಯನ್ನು ಸಂಗ್ರಹಿಸಿತ್ತು. ಈ ಯೋಜನೆಯಲ್ಲಿ ಬಾಕಿ ತೆರಿಗೆಯ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದ್ದು, ದಂಡದಲ್ಲಿ 50 ಶೇಕಡಾ ಕಡಿತ ನೀಡಲಾಗಿತ್ತು.

ರಾಜ್ಯ ಹಣಕಾಸು ಆಯೋಗದ ಪ್ರಕಾರ, ತೆರಿಗೆ ವ್ಯಾಪ್ತಿಗೆ ಇನ್ನೂ ಸೇರಿಸದಿರುವ ಆಸ್ತಿಗಳನ್ನು ಈ ವ್ಯಾಪ್ತಿಗೆ ತಂದರೆ ವರ್ಷಕ್ಕೆ ಸುಮಾರು 1,000 ಕೋಟಿ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆ ಇದೆ. ಇದಕ್ಕಾಗಿ GIS ಆಧಾರಿತ ಇ-ಖಾತಾ ವ್ಯವಸ್ಥೆಯನ್ನು ಆಸ್ತಿ ತೆರಿಗೆ ವ್ಯವಸ್ಥೆಯೊಂದಿಗೆ ಏಕೀಕರಿಸುವ ಕೆಲಸ ನಡೆಯುತ್ತಿದೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಆಸ್ತಿಗಳು ಇನ್ನೂ ತೆರಿಗೆ ವ್ಯಾಪ್ತಿಗೆ ಸೇರಿಸದೇ ಉಳಿದಿವೆಎಂದು ವರದಿ ತಿಳಿಸಿದೆ. ಅಲ್ಲದೆ ಹೊಸ ವಿದ್ಯುತ್ ಸಂಪರ್ಕಗಳ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು BESCOM ಡೇಟಾವನ್ನು ಆಸ್ತಿ ತೆರಿಗೆ ದಾಖಲೆಗಳೊಂದಿಗೆ ಹೋಲಿಕೆ ಮಾಡುವ ವ್ಯವಸ್ಥೆ ಸ್ಥಾಪಿಸುವಂತೆ ಆಯೋಗ ಶಿಫಾರಸು ಮಾಡಿದೆ. ಇದಕ್ಕಾಗಿ GBAಯ ಕಟ್ಟಡ ಪರವಾನಗಿ (Building Licence) ಮಾಹಿತಿಯನ್ನು ಬಳಸುವಂತೆ ಸೂಚಿಸಲಾಗಿದೆ ಎಂದಿ ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಪಿಜಿಯಿಂದ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆದಾಗ ತನ್ನ ಖರ್ಚು ವೆಚ್ಚ ವಿವರಿಸಿದ ಬೆಂಗಳೂರಿನ ಮಹಿಳೆ

ಬೆಂಗಳೂರು, ಮಾರ್ಚ್ 11: ಬೆಂಗಳೂರು (Bengaluru) ಅಂದ್ರೇನೆ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇಲ್ಲಿ ಬಾಡಿಗೆ ಮನೆಯಿಂದ ತಿಂಗಳ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳುವಷ್ಟರಲ್ಲಿ ಕೈ ಖಾಲಿಯಾಗಿರುತ್ತದೆ. ಇದೀಗ ಬೆಂಗಳೂರಿನ ಮಹಿಳೆಗೂ ಇಂತಹದ್ದೇ ಅನುಭವವಾಗಿದೆ.  ಮಹಿಳೆಯೊಬ್ಬರು ಪಿಜಿಯಿಂದ 2ಬಿಹೆಚ್‌ಗೆ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಗೊಳ್ಳುವಾಗ 62,150 ರೂ ಖರ್ಚು ಮಾಡಿದೆ. ಈ ವೆಚ್ಚಗಳ ಬಗ್ಗೆ ನಿಮಗೆ ಯಾರು ಕೂಡ ಎಚ್ಚರಿಕೆ ಕೊಡಲ್ಲ ಎಂದು ಹೇಳಿದ್ದಾರೆ. ಈ ಮಹಿಳೆ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

krishnankuttyy ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಕೃಷ್ಣನಂದಿನಿ, ರೂಮ್‌ಮೇಟ್‌ನೊಂದಿಗೆ 2 ಬಿಹೆಚ್‌ಕೆ ಫ್ಲಾಟ್‌ಗೆ ಸ್ಥಳಾಂತರಗೊಳ್ಳುವಾಗ ಮಾಡಿದ ಖರ್ಚುಗಳನ್ನು ವಿವರಿಸಿದ್ದಾರೆ. ಬೆಂಗಳೂರಿನ ಬಾಡಿಗೆ ದುಬಾರಿ ಎಂದು ಎಲ್ಲರೂ ಹೇಳುತ್ತಾರೆ, ಆದರೆ ನೀವು ಪಿಜಿಯಿಂದ ಬೆಂಗಳೂರಿನ ಫ್ಲಾಟ್‌ಗೆ ಬದಲಾಯಿಸಿದಾಗ ನೀವು ನಿಜವಾಗಿಯೂ ಎಷ್ಟು ಹಣವನ್ನು ಖರ್ಚು ಮಾಡುತ್ತೀರಿ ಎಂದು ಯಾರೂ ನಿಮಗೆ ಹೇಳುವುದಿಲ್ಲ. ನಾನು ಇಲ್ಲಿ ಗುಪ್ತ ವೆಚ್ಚಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಫ್ಲಾಟ್‌ಗೆ 60,000 ರೂ ಠೇವಣಿ ಅಗತ್ಯವಿದ್ದ ಕಾರಣ, ನಾನು ಮತ್ತೆ ನನ್ನ ರೂಮ್‌ಮೇಟ್ ಮೊತ್ತವನ್ನು ಹಂಚಿಕೊಂಡೆವು. ಒಬ್ಬರು ತಲಾ 30,000 ರೂ ಪಾವತಿಸಬೇಕಾಯಿತು. 12,000 ರೂ ಬ್ರೋಕರೇಜ್ ಶುಲ್ಕಗಳು ವಿಧಿಸಲಾಯಿತು. ಒಬ್ಬರಿಗೆ ಮೊದಲ ತಿಂಗಳ ಬಾಡಿಗೆ 10,500 ರೂ ಆಗಿದ್ದು, ಫ್ಲಾಟ್‌ನಲ್ಲಿ ಉಪಕರಣಗಳು ಇಲ್ಲದ ಕಾರಣ, ಇಬ್ಬರೂ ಸೇರಿ ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ವಾಟರ್ ಪ್ಯೂರಿಫೈಯರ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆದುಕೊಂಡೆವು. ಇದೆಲ್ಲಕ್ಕೂ ತಿಂಗಳಿಗೆ 2,500 ರೂ ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ಎಸಿಟಿ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕೆ ತಿಂಗಳಿಗೆ ಸುಮಾರು 930 ರೂ ವೆಚ್ಚವಾಗುತ್ತದೆ. ಇದಕ್ಕಾಗಿ ಮೂರು ತಿಂಗಳಿಗೆ ಸುಮಾರು 2,700 ರೂ ಮುಂಗಡ ಪಾವತಿ ಮಾಡಿದೆವು. ಸಿಲಿಂಡರ್ ಮತ್ತು ಸ್ಟೌವ್ ಸೇರಿದಂತೆ 4200 ರೂ ರೂ ತಗುಲಿತು. ದಿನಸಿ ಸಾಮಾನುಗಳಿಗಾಗಿ ತಲಾ 4,500 ರೂ ಖರ್ಚು ಮಾಡಿದ್ದೇವೆ. ಮೊದಲ ಎರಡು ದಿನಗಳಲ್ಲಿ ನಾವು ಮೂಲ ದಿನಸಿಗಾಗಿ 10 ಅಥವಾ 12 ಬಾರಿ ಜೆಪ್ಟೊದಲ್ಲಿ  ಆರ್ಡರ್ ಮಾಡಿದ್ದೇವೆ. ಆದರೆ ನಾವು ಏನನ್ನಾದರೂ ಖರೀದಿಸಿದಾಗಲೆಲ್ಲಾ ಇನ್ನೇನನ್ನು ಕಳೆದುಕೊಂಡಿದ್ದೇವೆ ಎಂದು ನಮಗೆ ಅರಿವಾಯಿತು. ಇನ್ನು ಉಳಿದಂತೆ ಒಂದು ಹಾಸಿಗೆಗೆ 1,900 ರೂ ಮತ್ತು 4,800 ಗೆ ಆನ್‌ಲೈನ್‌ನಲ್ಲಿ ಖರೀದಿಸಿದ ಹಾಸಿಗೆ ಸೇರಿವೆ. ಎಲ್ಲವನ್ನು ಸೇರಿಸಿದಾಗ ಒಟ್ಟು 62,150 ರೂ ಖರ್ಚಾಯಿತು ಎಂದು ಹೇಳಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಬೆಂಗಳೂರಿನ ಜನ್ರು ತುಂಬಾ ಒಳ್ಳೆಯವ್ರು; ಪ್ರಾಮಾಣಿಕ ಅನುಭವ ಹಂಚಿಕೊಂಡ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಖರ್ಚು ವೆಚ್ಚಗಳು ನಿಖರವಾಗಿದೆ. ಆದರೆ, ನೀವು ಬೇರೆಡೆಗೆ ಶಿಫ್ಟ್ ಆಗುವಾಗ ನಿಮ್ಮನ್ನು ನಿಜವಾಗಿಯೂ ಈ ಗುಪ್ತ ವೆಚ್ಚಗಳು ಅಚ್ಚರಿ ಪಡಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಕಳೆದ ವರ್ಷ ನಾನು ನನ್ನ ಫ್ಲಾಟ್‌ಗೆ ಸ್ಥಳಾಂತರಗೊಂಡಾಗ ಬಹುತೇಕ ಅಷ್ಟೇ ಹಣವನ್ನು ಖರ್ಚು ಮಾಡಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೊಸ ಮನೆಗೆ ಶಿಫ್ಟ್ ಆಗುವುದು ಸುಲಭದ ಮಾತಲ್ಲ. ಕೈಯಲ್ಲಿ ಅಷ್ಟೇ ದುಡ್ಡು ಇಟ್ಟುಕೊಳ್ಳೋದು ಸೇಫ್ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪಾಡ್‌ಕ್ಯಾಸ್ಟ್‌ನಲ್ಲಿ ಪತ್ನಿಗೆ ವಿಚ್ಛೇದನ ನೀಡಿದ ಕೋಟ್ಯಾಧಿಪತಿ ಯೂಟ್ಯೂಬರ್

ಪಾಕಿಸ್ತಾನದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಮತ್ತು ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ರಜಬ್ ಬಟ್ ಪ್ರಸ್ತುತ ತಮ್ಮ ಖಾಸಗಿ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ, ಅವರು ತಮ್ಮ ಪತ್ನಿ ಎಮಾನ್ ಫಾತಿಮಾ ಅವರಿಗೆ ವಿಚ್ಛೇದನ ನೀಡುತ್ತಿರುವುದಾಗಿ ಘೋಷಿಸುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಅದರ ನಂತರ, ರಜಬ್ ತಮ್ಮ ಪತ್ನಿಗೆ ಕಾನೂನು ನೋಟಿಸ್ ಅನ್ನು ಸಹ ಕಳುಹಿಸಿದ್ದಾರೆ. ವಿಚ್ಛೇದನದ ನೋಟಿಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಎಮನ್ ಈ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ.

ಮದುವೆ ಆಗಿ ಕೇವಲ ಒಂದೂವರೆ ವರ್ಷಗಳ ನಂತರ ರಜಬ್ ತಮ್ಮ ಪತ್ನಿಯಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ ತಾವು ಇನ್ನು ಮುಂದೆ ನಕಲಿ ಸಂಬಂಧವನ್ನು ಹೊಂದಲು ಇಷ್ಟಪಡುವುದಿಲ್ಲ ಎಂದು ರಜಬ್ ಹೇಳಿದ್ದಾರೆ. ಇದು ಮಾತ್ರವಲ್ಲದೆ, ಅವರು ತಮ್ಮ ಪತ್ನಿ ಮತ್ತು ಅತ್ತೆ ಮಾವಂದಿರ ವಿರುದ್ಧವೂ ಅನೇಕ ಆರೋಪಗಳನ್ನು ಮಾಡಿದ್ದಾರೆ.

‘ಈ ಮದುವೆಯಲ್ಲಿ ನನಗೆ ಯಾವುದೇ ಗೌರವವಿರಲಿಲ್ಲ. ನನ್ನ ಹೆಂಡತಿ ನನ್ನ ತಾಯಿಯನ್ನು ಅವಮಾನಿಸಿದಳು. ಆಕೆಯ ಕುಟುಂಬ ಸದಸ್ಯರು ನನ್ನ ತಂದೆಯ ಸ್ಥಿತಿಯನ್ನು ಪ್ರಶ್ನಿಸಿದರು. ಈಗ ನನ್ನ ಹೆತ್ತವರಿಂದ ನನಗೆ ಇನ್ನು ಅಗೌರವ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಈ ಸಂಬಂಧಕ್ಕೆ ಮತ್ತೊಂದು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ ರಜಬ್.

‘ನಾನು ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಆದರೆ ನನ್ನ ಹೆಂಡತಿ ನನ್ನೊಂದಿಗೆ ಕೇವಲ ಒಂದೂವರೆ ತಿಂಗಳು ಇದ್ದಳು’ ಎಂದು ರಜಬ್ ಪಾಡ್‌ಕ್ಯಾಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ, ಎಮಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಚ್ಛೇದನ ನೋಟಿಸ್ ಅನ್ನು ಹಂಚಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಈ ಸಂಬಂಧವನ್ನು ಉಳಿಸಲು ನಾನು ಮೌನವಾಗಿದ್ದೆ. ಆದರೂ, ಪಾಡ್‌ಕ್ಯಾಸ್ಟ್‌ನಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಯಿತು ಮತ್ತು ನಂತರ ಈ ಕಾನೂನು ನೋಟಿಸ್ ಕಳುಹಿಸಲಾಗಿದೆ. ನಾನು ಕೇಳಲು ಬಯಸುವುದು ನನ್ನ ಮತ್ತು ನನ್ನ ಮಗನಿಗೆ ಏನು ತಪ್ಪಾಗಿದೆ? ನನಗೆ ಹೇಳಲು ಬಹಳಷ್ಟು ಇದೆ. ಆದರೆ ರಂಜಾನ್ ತಿಂಗಳ ಪಾವಿತ್ರ್ಯವನ್ನು ಪರಿಗಣಿಸಿ, ನಾನು ಇನ್ನೂ ಮೌನವಾಗಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ

ರಜಬ್ ಮತ್ತು ಇಮಾನ್ 2024 ರಲ್ಲಿ ವಿವಾಹವಾದರು. ಅವರ ವಿವಾಹವು ಪಾಕಿಸ್ತಾನದ ಅತ್ಯಂತ ಅದ್ಧೂರಿ ವಿವಾಹಗಳಲ್ಲಿ ಒಂದಾಗಿತ್ತು. ಈ ವಿವಾಹದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಬರ್​ನ  ಕೈಬಿಟ್ಟಿಲ್ಲ… ಬೇರೆಯವರಿಗೆ ಚಾನ್ಸ್ ನೀಡಲು ಹೊರಗಿಟ್ಟಿದ್ದೀವಿ ಅಷ್ಟೇ..!

ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ್ ತಂಡವು ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಗಾಗಿ ಸಜ್ಜಾಗಿದೆ. ಮೂರು ಪಂದ್ಯಗಳ ಈ ಏಕದಿನ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಬಾಬರ್ ಆಝಂಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.  ಟಿ20 ವಿಶ್ವಕಪ್​ನಲ್ಲಿನ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್​ನನ್ನು ಕೈ ಬಿಡಲಾಗಿದೆ ಎನ್ನಲಾಗಿತ್ತು. ಆದರೆ ಈ ವರದಿಯನ್ನು ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಅಲ್ಲೆಗೆಳೆದಿದ್ದಾರೆ.

ಪಾಕಿಸ್ತಾನ್ ಏಕದಿನ ತಂಡದಿಂದ ಬಾಬರ್ ಆಝಂ ಅವರನ್ನು ಕೈ ಬಿಟ್ಟಿಲ್ಲ. ಬದಲಾಗಿ 2027ರ ಏಕದಿನ ವಿಶ್ವಕಪ್​ಗೂ ಮುನ್ನ ಯುವ ಆಟಗಾರರಿಗೆ ಅವಕಾಶ ನೀಡಲು ಅವರನ್ನು ಹೊರಗಿಡಲಾಗಿದೆ ಎಂದು ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ.

ಅಂದರೆ ಬಾಬರ್ ಆಝಂ ಯಾವಾಗ ಬೇಕಿದ್ದರೂ ತಂಡಕ್ಕೆ ಮರಳಬಹುದು. ಸದ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ ಅಷ್ಟೇ ಎಂದು ಶಾಹೀನ್ ಶಾ ಅಫ್ರಿದಿ ಸ್ಪಷ್ಟನೆ ನೀಡಿದ್ದಾರೆ.

ಆದರೆ ಅತ್ತ ಪಾಕ್ ತಂಡದ ಕೋಚ್ ಮೈಕ್ ಹೆಸ್ಸನ್ ಅವರು ಬಾಬರ್ ಆಝಂ ಅವರ ಬ್ಯಾಟಿಂಗ್ ಹಾಗೂ ಸ್ಟ್ರೈಕ್ ರೇಟ್​​ನಿಂದ ಸಂತುಷ್ಟರಾಗಿಲ್ಲ. ಹೀಗಾಗಿಯೇ ಟಿ20 ವಿಶ್ವಕಪ್​ನ ಕೊನೆಯ ಪಂದ್ಯಗಳ ವೇಳೆ ಬಾಬರ್​ನನ್ನು ಪ್ಲೇಯಿಂಗ್ ಇಲೆವೆನ್​ನಿಂದ ಹೊರಗಿಡಲಾಗಿತ್ತು. ಇದೀಗ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯಿಂದಲೂ ಅವರನ್ನು ಕೈ ಬಿಡಲಾಗಿದೆ.

ಇತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಈ ನಡೆಯ ವಿರುದ್ಧ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ಬಾಬರ್ ಆಝಂ ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಟಿ20 ಕ್ರಿಕೆಟ್​ನಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿಯೇ ಟಿ20 ಕ್ರಿಕೆಟ್​ಗೆ ಬಾಬರ್ ಸೂಕ್ತ ಆಟಗಾರನಲ್ಲ ಎಂಬ ಅಭಿಪ್ರಾಯಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ.

ಆದರೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ಕ್ರಿಕೆಟ್​ನಲ್ಲಿನ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡು ಬಾಬರ್ ಆಝಂ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದಾರೆ. ಹೀಗಾಗಿಯೇ ಇದೀಗ ಪಾಕ್ ತಂಡದ ನೂತನ ನಾಯಕ ಶಾಹೀನ್ ಶಾ ಅಫ್ರಿದಿ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ ಎಂಬ ಹೇಳಿಕೆಯ ಮೂಲಕ ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ ತಂಡದೊಂದಿಗಿನ ‘ಅಂತರ’ ಬೆಳೀತಾ ಹೋಗ್ತಿದೆ!

ಪಾಕಿಸ್ತಾನ್ ಏಕದಿನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಮ್, ಹಾರಿಸ್ ರೌಫ್, ಹುಸೇನ್ ತಲತ್, ಮಾಝ್ ಸದಾಕತ್, ಮೊಹಮ್ಮದ್ ⁠ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಮುಹಮ್ಮದ್ ಗಾಝಿ ಘೋರಿ (ವಿಕೆಟ್ ಕೀಪರ್), ಸಾದ್ ಮಸೂದ್, ಸಾಹಿಬ್​ಝಾದ ಫರ್ಹಾನ್, ಸಲ್ಮಾನ್ ಅಲಿ ಅಘಾ ಮತ್ತು ಶಾಮಿಲ್ ಹುಸೇನ್.

 

Source link