All posts by nagaraj11081993

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್; ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ?

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಸಾಕಷ್ಟು ತಿರವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈಗ ಧಾರಾವಾಹಿಗೆ ಹೊಸ ಟ್ವಿಸ್ಟ್ ಒಂದು ಸಿಗುತ್ತಿದೆ. ಹಾಗಾದರೆ ಏನು ಆ ಟ್ವಿಸ್ಟ್? ಆ ಬಗ್ಗೆ ನಾವು ಹೇಳುತ್ತಿದ್ದೇವೆ. ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದ ಗುಣದಲ್ಲಿ ಬದಲಾವಣೆ ಬರುವ ಸೂಚನೆ ಸಿಕ್ಕಿದೆ. ಹಾಗಾದ್ರೆ ಧಾರಾವಾಹಿಗೆ ವಿಲನ್ ಇರೋದೆ ಇಲ್ವಾ? ಆ ಬಗ್ಗೆ ಇಲ್ಲಿದೆ ವಿವರ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಮಾಳವಿಕಾ ಎಷ್ಟು ಕೆಟ್ಟವಳು ಎಂಬುದು ಮಾಯಾಗೆ ಗೊತ್ತಾಗಿ ಹೋಗಿದೆ. ಈ ಕಾರಣಕ್ಕೆ ಆಕೆಗೆ ತಲೆಬಿಸಿ ಶುರುವಾಗಿದೆ. ಅಂಬಿಕಾನ ಸಾವಿಗೆ ನಾನೇ ಕಾರಣ ಎಂದು ಆಕೆಗೆ ಅನಿಸಿತ್ತು. ಆದರೆ, ಇದರ ಹಿಂದೆ ಮಾಳವಿಕಾ ಕೈವಾಡ ಇದೆ ಎಂಬ ಅನುಮಾನ ಅವಳಿಗೆ ಬಂದಿದೆ.

ಈ ವಿಷಯವನ್ನು ಮಾಯಾ, ಅಂಬಿಕಾ ಆತ್ಮದ ಬಳಿ ಪ್ರಶ್ನೆ ಮಾಡಿದ್ದಾಳೆ. ‘ನಿನ್ನ ಕೊಲೆಯಲ್ಲಿ ಮಾಳವಿಕಾ ಕೈವಾಡ ಇದೆ ಅಲ್ಲವೆ? ನಾನು ಕೇವಲ ಅಸ್ತ್ರ ಮಾತ್ರ ಆಗಿದ್ದೆ ಅಲ್ಲವೇ’ ಎಂದು ಮಾಯಾ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅಂಬಿಕಾ ಹೌದು ಎಂಬ ಉತ್ತರ ನೀಡಿದ್ದಾಳೆ. ಇದರಿಂದ ಅವಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಮುಂದೇನು ಮಾಡಬೇಕು ಎಂಬ ಚಿಂತೆ ಬಹುವಾಗಿ ಕಾಡುತ್ತಿದೆ.

ಆಕೆಯ ಮುಂದೆ ಈಗ ಎರಡು ಆಯ್ಕೆ ಇದೆ. ಒಂದು ಆಕೆ ನೇರವಾಗಿ ಅಂಬಿಕಾಗೆ ಸಹಾಯ ಮಾಡಬೇಕು ಅಥವಾ ಮಾಳವಿಕಾ ಪರವಾಗಿ ನಿಂತು ತಾನೂ ಕಷ್ಟ ಅನುಭವಿಸಬೇಕು. ಹೀಗಾಗಿ, ಆಕೆಯ ಗುಣದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್

ಈಗ ಸದ್ಯ ಅವಳು ಅಂಬಿಕಾಳನ್ನು ದ್ವೇಷಿಸೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾಳೆ. ಆದರೆ, ದಿನ ಕಳೆದಂತೆ ಮಾಯಾ ಪಾತ್ರದಲ್ಲಿ ಬದಲಾವಣೆ ಕಾಣಬಹುದು. ಅವುಳು ಕೂಡ ಮಾಳವಿಕಾಳ ಅಸ್ತ್ರ ಆಗಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL​ನಿಂದ ಔಟ್​: ಪಾಕಿಸ್ತಾನ್​ ಸೂಪರ್​ ಲೀಗ್​ಗೆ 47 ವಿದೇಶಿ ಆಟಗಾರರು ಎಂಟ್ರಿ

Source link

ಈಕೆಗೆ ಅನುಕಂಪ ತೋರಿಸಿದ್ದೇ ತಪ್ಪಾಯಿತು: ಮದುವೆ ಹಾಲ್​​ನಲ್ಲಿ 120 ಗ್ರಾಂ ಚಿನ್ನಾಭರಣ ಕದ್ದ ಬುರ್ಖಾಧಾರಿ ಕಳ್ಳಿ

ಶಿವಮೊಗ್ಗ ಮಾ.11: ನಗರದ ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ತುಂಗಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬುರ್ಖಾ ಧರಿಸಿ, ವಬ್ಯಾಗ್ ಹಿಡಿದು ಗಪ್‌ಚುಪ್ ಆಗಿ ಚಿನ್ನಾಭರಣ ಎಗರಿಸುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಇಲಿಯಾಜ್ ನಗರದ ಪ್ರಸಿದ್ಧ ‘ಶಾದಿ ಮಹಲ್’ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕಳ್ಳತನಗಳು ವರದಿಯಾಗುತ್ತಿದ್ದವು. ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್‌ನಲ್ಲಿ ಇಡುವುದನ್ನೇ ಸಂಚು ಹೂಡಿ ಕಾಯುತ್ತಿದ್ದ ಈ ಮಹಿಳೆ, ಕ್ಷಣಾರ್ಧದಲ್ಲಿ ಅವುಗಳನ್ನು ಎಗರಿಸಿ ಪರಾರಿಯಾಗುತ್ತಿದ್ದಳು.ಕಳೆದ ಒಂದು ತಿಂಗಳ ಹಿಂದೆ ನಡೆದ ಮದುವೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಹಗಲಿರುಳು ಪರಿಶೀಲಿಸಿದಾಗ, ಆಕೆಯ ಕೈಯಲ್ಲಿದ್ದ ವಿಶಿಷ್ಟವಾದ ವ್ಯಾನಿಟಿ ಬ್ಯಾಗ್ ಕಳ್ಳಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವು ನೀಡಿತು.

ಇನ್ನು ಬಂಧಿತವಾಗಿರುವ ಕಳ್ಳಿ ರುಕ್ಸಾರ್ ಫಿರ್ದೋಸ್ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದಿದ್ದಾಳೆ ಎಂದು ಹೇಳಲಾಗಿದೆ. ಒಟ್ಟು ಇದರ ಬೆಲೆ ಅಂದಾಜು 18 ಲಕ್ಷ ರೂ ಇರಬಹುದು ಎಂದು ಅಂದಾಜಿಸಲಾಗಿದೆ. ಈಕೆಯ ಬಂಧನದಿಂದ 4 ಪ್ರಮುಖ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಈ ಹಿಂದೆ ಕೆಲವು ಮದುವೆ ಮನೆಗಳಲ್ಲಿ ಕಳ್ಳತನ ಮಾಡುವಾಗ ಈಕೆ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಳು. ಆದರೆ, ಮಹಿಳೆಯೆಂದು ಅನುಕಂಪ ತೋರಿಸಿದ ಜನರು ವಾರ್ನಿಂಗ್ ಮಾಡಿ ಬಿಟ್ಟು ಕಳಿಸಿದ್ದರು. ಇದನ್ನೇ ಲಾಭವನ್ನಾಗಿ ಮಾಡಿಕೊಂಡ ಈ ಕಿಲಾಡಿ ಕಳ್ಳಿ, ತನ್ನ ಕಳ್ಳತನದ ಕಾಯಕವನ್ನು ಮುಂದುವರಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಳು. ಕೊನೆಗೂ ತುಂಗಾ ನಗರ ಪೊಲೀಸರ ಚಾಣಾಕ್ಷತನದಿಂದ ಈಕೆಯ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ: 6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

ಮದುವೆ ಮನೆಗೆ ಚಿನ್ನಾಭರಣ ಹಾಕಿಕೊಂಡು ಬರುವ ಜನರನ್ನು ಇವಳು ವಾಚ್ ಮಾಡುತ್ತಿದ್ದಳು. ಅವರು ಚಿನ್ನಾಭರಣ ಬ್ಯಾಗ್ ನಲ್ಲಿ ಇಡುವುದನ್ನು ಗಮನಿಸಿದ ಬಳಿಕ ಅದನ್ನು ಗಪ್ ಚುಪ್ ಆಗಿ ಬುರ್ಖಾ ಹಾಕಿಕೊಂಡು ಬಂದು ಎಗರಿಸಿಕೊಂಡು ಹೋಗುತ್ತಿದ್ದಳು.ಕೆಲವು ಸಂದರ್ಭದಲ್ಲಿ ಇವಳ ಕಳ್ಳತನ ಮಾಡುವಾಗ ಸ್ಥಳೀಯರಿಗೆ ಸಿಕ್ಕಿದ್ದಾಳೆ. ಅಲ್ಲಿರುವ ಜನರು ಮಹಿಳೆ ಅಂತಾ ಅನುಕಂಪ ತೋರಿಸಿ ವಾರ್ನ್ ಮಾಡಿ ಬಿಟ್ಟು ಕಳಿಸಿದ್ದಾರೆ. ಇದರ ಬಳಿಕವೂ ಈ ಕಳ್ಳಿಯ ನಡವಳಿಕೆ ಬದಲು ಆಗಲಿಲ್ಲ. ಮತ್ತೆ ಇದೇ ಕಳ್ಳತನ ಮುಂದುವರೆಸಿದ್ದಳು. ಇತ್ತೀಚೆಗೆ ಮತ್ತೆ ನಾಲ್ಕು ಕಳ್ಳತನ ಪ್ರಕರಣವು ದಾಖಲು ಆಗಿದ್ದವು. ಈ ಕಳ್ಳತನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದಾಗ ಈ ಕಿಲಾಡಿ ಕಳ್ಳಿಯು ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೀಗೆ ಮಹಿಳೆಯಾಗಿ ಮದುವೆ ಸಮಾರಂಭದಲ್ಲಿ ಎಂಟ್ರಿಕೊಟ್ಟು ಚಿನ್ನಾಭರಣ ಕದ್ದುಕೊಂಡು ಹೋಗುತ್ತಿದ್ದಳು ಎಂದು ಮ್ಯಾರೇಜ್ ಹಾಲ್ ಮಾಲೀಕ ಮಹ್ಮದ್ ಜುಬೇಲ್ ಹೇಳಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ-ವಿಜಯ್; ಸಖತ್ ಕಲರ್​​ಫುಲ್

Source link

ಗೆಳೆಯನಿಂದ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ, ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ಶರಣು

ಮುಂಬೈ, ಮಾರ್ಚ್​ 11: ಗೆಳೆಯನ ಕಿರುಕುಳದಿಂದ ಬೇಸತ್ತು 24 ವರ್ಷದ ಸ್ನಾತಕೋತ್ತರ ದಂತ ವೈದ್ಯಕೀಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಆರು ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಗೆಳೆಯ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ಮೃತಳನ್ನು ಮಾಸ್ಟರ್ ಆಫ್ ಡೆಂಟಲ್ ಸರ್ಜರಿ ವಿದ್ಯಾರ್ಥಿನಿ ಸ್ತುತಿ ಸೋನಾವಾನೆ ಎಂದು ಗುರುತಿಸಲಾಗಿದೆ. ಆಂಟೋಪ್ ಹಿಲ್​​ನಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ವಿಮಾ ಏಜೆಂಟ್ ಆಗಿರುವ ಫಜಲ್ ಮೊಹಮ್ಮದ್ ಖಾನ್ ಹೆಸರು ಕೇಳಿಬಂದಿದ್ದು, ಆತನನ್ನು ಬಂಧಿಸಲಾಗಿದೆ.

ಮುಂಬೈನ ಆಂಟೋಪ್ ಹಿಲ್ ನೆರೆಹೊರೆಯಲ್ಲಿ ಸ್ತುತಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಳು. ನಿನ್ನೆ ಬೆಳಗ್ಗೆ 11 ಗಂಟೆಯವರೆಗೆ ಅವಳು ತನ್ನ ಕೋಣೆಯಿಂದ ಹೊರಬರದಿದ್ದಾಗ, ಅವಳ ಪೋಷಕರು ಅವಳಿಗೆ ಕರೆ ಮಾಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರು ಅವಳ ಕೋಣೆಯ ಬಾಗಿಲು ಒಡೆದು ನೋಡಿದಾಗ, ಆಕೆ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ.

ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವಳು ಸತ್ತಿದ್ದಾಳೆಂದು ಘೋಷಿಸಿದ್ದಾರೆ.
ಯುವತಿ ತನ್ನ ಕೋಣೆಯಲ್ಲಿ ಆರು ಪುಟಗಳ ‘ಆತ್ಮಹತ್ಯೆ ಪತ್ರ’ವನ್ನು ಬರೆದಿಟ್ಟಿದ್ದಾಳೆ. ಅದರಲ್ಲಿ ಅವಳು ಖಾನ್ ಹೆಸರಿಸಿದ್ದಾಳೆ ಮತ್ತು ಅವನು ನಿರಂತರವಾಗಿ ತನಗೆ ಕಿರುಕುಳ ನೀಡುತ್ತಿದ್ದ ಎಂದು ಬರೆದಿದ್ದಾಳೆ ಎಂದು ಆಂಟೋಪ್ ಹಿಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಯುವತಿ ಪೋಷಕರು ನೀಡಿರುವ ದೂರಿನ ಮೇಲೆ ಆರೋಪಿಯನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 108 ಸೇರಿದಂತೆ ಸಂಬಂಧಿತ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ ಮೃತ ಯುವತಿ ಹಾಗೂ ಆರೋಪಿ ಡೇಟಿಂಗ್ ಆ್ಯಪ್ ಮೂಲಕ ಪರಿಷಯವಾಗಿದ್ದರು, ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂಬುದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Air Quality: ಬೆಂಗಳೂರು, ಉಡುಪಿ, ಕಲಬುರಗಿಯಲ್ಲಿ ವಾಯು ಗುಣಮಟ್ಟ ಅಪಾಯಕಾರಿ

ಬೆಂಗಳೂರು, ಮಾ.11: ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದ ಮಟ್ಟದಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಇಂದು ಮಾರ್ಚ್ 11ರ ವರದಿಯ ಪ್ರಕಾರ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗಾಳಿಯ ಗುಣಮಟ್ಟವು ‘ತೃಪ್ತಿದಾಯಕ’ ಮತ್ತು ‘ಮಧ್ಯಮ’ (Moderate) ಮಟ್ಟದಲ್ಲಿದೆ. ಧೂಳು ಮತ್ತು ಹೊಗೆಯಿಂದಾಗಿ ಉಸಿರಾಟದ ತೊಂದರೆ ಎದುರಾಗುವ ಸಾಧ್ಯತೆ ಎಂದು ತಜ್ಞರು ಹೇಳಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ವಾಯು ಮಾಲಿನ್ಯದ ಮಟ್ಟವೂ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಇಂದು ಮಾರ್ಚ್ 11ರ ವರದಿಯ ಪ್ರಕಾರ, ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 100ರಿಂದ 170ರ ಆಸುಪಾಸಿನಲ್ಲಿದ್ದು, ಹಲವು ಪ್ರದೇಶಗಳಲ್ಲಿ ಗಾಳಿಯು ‘ಕಳಪೆ’ (Poor) ಮತ್ತು ‘ಅನಾರೋಗ್ಯಕರ’ (Unhealthy) ಹಂತಕ್ಕೆ ತಲುಪಿದೆ. ರಸ್ತೆ ಕಾಮಗಾರಿಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಏಳುತ್ತಿರುವ ಧೂಳು ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ಸೂರ್ಯನ ತೀವ್ರ ಬಿಸಿಲಿನಿಂದಾಗಿ ವಾಹನಗಳ ಹೊಗೆಯು ರಾಸಾಯನಿಕ ಕ್ರಿಯೆಗೆ ಒಳಗಾಗಿ ಓಜೋನ್ ಮಾಲಿನ್ಯವನ್ನು ಸೃಷ್ಟಿಸುತ್ತಿದೆ.

ಜಿಲ್ಲೆಯ ವಾಯುಮಾಲಿನ್ಯ ಮಟ್ಟ:

ನಗರ / ಪ್ರದೇಶ AQI ಸೂಚ್ಯಂಕ ವರ್ಗೀಕರಣ ಮುಖ್ಯ ಮಾಲಿನ್ಯಕಾರಕ
ಬೆಂಗಳೂರು (ಸರಾಸರಿ) 172 ಅನಾರೋಗ್ಯಕರ PM2.5 & Ozone
ಮಂಗಳೂರು 174 ಅನಾರೋಗ್ಯಕರ PM10
ಮೈಸೂರು 164 ಅನಾರೋಗ್ಯಕರ PM2.5
ಹುಬ್ಬಳ್ಳಿ-ಧಾರವಾಡ 163 ಅನಾರೋಗ್ಯಕರ PM10
ಕಲಬುರಗಿ 160 ಅನಾರೋಗ್ಯಕರ ಧೂಳು (Dust)
ಉಡುಪಿ 162 ಅನಾರೋಗ್ಯಕರ PM2.5

 

ಕರಾವಳಿ ತೀರದಲ್ಲಿ ಆರ್ದ್ರತೆ ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ PM2.5 ಕಣಗಳ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಉಡುಪಿಯಲ್ಲಿ AQI 150ರ ಗಡಿ ದಾಟಿದ್ದು, ಸೂಕ್ಷ್ಮ ಆರೋಗ್ಯವುಳ್ಳವರಿಗೆ ಕಿರಿಕಿರಿ ಉಂಟುಮಾಡಬಹುದು.ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಬಿಸಿ ಗಾಳಿ ಮತ್ತು ಧೂಳಿನ ಬಿರುಗಾಳಿ (Dust Storms) ಲಕ್ಷಣಗಳಿರುವುದರಿಂದ ಗಾಳಿ ಹೆಚ್ಚು ಕಲುಷಿತಗೊಂಡಿದೆ. ಕಲಬುರಗಿಯಲ್ಲಿ AQI 160 ದಾಟಿದ್ದು, ಇದು ‘ಕಳಪೆ’ ವಿಭಾಗಕ್ಕೆ ಸೇರುತ್ತದೆ.ಹುಬ್ಬಳ್ಳಿ-ಧಾರವಾಡದಲ್ಲಿ ವಾಯು ಗುಣಮಟ್ಟ ಸದ್ಯಕ್ಕೆ ನಿಯಂತ್ರಣದಲ್ಲಿದ್ದರೂ, ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಮಾಲಿನ್ಯ ಅಧಿಕವಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ಮುಂದಿನ 3 ದಿನಗಳ ಕಾಲ ಹೇಗಿರಲಿದೆ ವಾತಾವರಣ?

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬಿಗ್ ಬಾಸ್ ಹೋಸ್ಟ್ ಆದ ಸೌರವ್ ಗಂಗೂಲಿ; ಹೊಸ ಕ್ಷೇತ್ರಕ್ಕೆ ಕಾಲಿಟ್ಟ ದಾದ

ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಸೌರವ್ ಗಂಗೂಲಿ ಅವರು ಈಗ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅವರು ಬಣ್ಣದ ಲೋಕದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಬಿಗ್ ಬಾಸ್​ನ (Bigg Boss) ಬೆಂಗಾಲಿ ವರ್ಷನ್​​ಗೆ ಹೋಸ್ಟ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಭಾರತದ ಜನಪ್ರಿಯ ಶೋನ ಭಾಗವಾಗಲು ರೆಡಿ ಆಗಿದ್ದಾರೆ. ಶೀಘ್ರವೇ ಸ್ಟಾರ್ ಜಲ್ಶಾದಲ್ಲಿ ಈ ಶೋ ಪ್ರಸಾರ ಕಾಣಲಿದೆ.

‘ಬಿಗ್ ಬಾಸ್​​’ಗೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಕಿಚ್ಚ ಸುದೀಪ್, ಸಲ್ಮಾನ್ ಖಾನ್, ಕಮಲ್ ಹಾಸನ್, ನಾಗಾರ್ಜುನ, ವಿಜಯ್ ಸೇತುಪತಿಯಂತಹ ಸ್ಟಾರ್ ನಟರು ಇದರ ಹೋಸ್ಟ್ ಆಗಿ ಮಿಂಚಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ರಂಗಕ್ಕೆ ಸಂಬಂಧಿಸಿದವರೇ ಇದನ್ನು ಹೋಸ್ಟ್ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಕ್ರಿಕೆಟ್ ಕ್ಷೇತ್ರದ ಹಿನ್ನೆಲೆ ಹೊಂದಿರುವವರು ಬಿಗ್ ಬಾಸ್ ಶೋನ ನಡೆಸಿಕೊಡುತ್ತಿರುವುದು ವಿಶೇಷ.

‘ಬಿಗ್ ಬಾಸ್​’ಗೆ ವಿವಿಧ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಬರುತ್ತಾರೆ. ಅವರೆಲ್ಲರನ್ನೂ ಹ್ಯಾಂಡಲ್ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ಸಾಕಷ್ಟು ಖಡಕ್ ಆಗಿ ನಡೆದುಕೊಳ್ಳಬೇಕು. ಸೌರವ್ ಗಂಗೂಲಿ ಅವರು ಮೇಲ್ನೋಟಕ್ಕೆ ಸೈಲೆಂಟ್ ಇದ್ದಂತೆ ಕಂಡರೂ ಅವರು ಮೈದಾನದಲ್ಲಿ ತೋರಿಸಿದ ಅಗ್ರೆಷನ್ ಇನ್ನೂ ಜನರ ಕಣ್ಮುಂದೆ ಇದೆ. ಹೀಗಾಗಿ, ಅವರು ಬಿಗ್ ಬಾಸ್​ ನಡೆಸಿಕೊಡಲು ಉತ್ತಮ ಆಯ್ಕೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಕನ್ನಡ, ಹಿಂದಿ, ತೆಲುಗು ಮೊದಲಾದ ಭಾಷೆಗಳಲ್ಲಿ ಪ್ರತಿ ವರ್ಷವೂ ಬಿಗ್ ಬಾಸ್ ನಡೆಯಲಿದೆ. ಕನ್ನಡದಲ್ಲಿ ಮೊದಲ ಸೀಸನ್ ಆರಂಭ ಆಗಿದ್ದು 2013ರಲ್ಲಿ. ಇಲ್ಲಿ ಈಗಾಗಲೇ 12 ಸೀಸನ್​​ಗಳು ಪೂರ್ಣಗೊಂಡಿವೆ. ಮಜವಾದ ಸಂಗತಿ ಎಂದರೆ, ಬೆಂಗಾಲಿಯಲ್ಲೂ ಮೊದಲ ಸೀಸನ್ ನಡೆದಿದ್ದು 2013ರಲ್ಲಿ. ಇದಕ್ಕೆ ಮಿಥುನ್ ಚಕ್ರವರ್ತಿ ಹೋಸ್ಟ್ ಆಗಿದ್ದರು. ಎರಡನೇ ಸೀಸನ್ ಪ್ರಸಾರ ಕಂಡಿದ್ದು, 2016ರಲ್ಲಿ. ಇದಕ್ಕೆ ಜೀತ್ ನಿರೂಪಕರಾಗಿದ್ದರು. ಆದರೆ, ಎರಡೂ ಸೀಸನ್​​ಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ, ಅಲ್ಲಿ ಬಿಗ್ ಬಾಸ್ ನಡೆಯಲೇ ಇಲ್ಲ. ಈಗ 10 ವರ್ಷಗಳ ಬಳಿಕ ಶೋ ಬೆಂಗಾಲಿ ಭಾಷೆಗೆ ಮರಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಶುಭ ಕಾರ್ಯಗಳಲ್ಲಿ ಮೊದಲಿಗೆ ದೀಪವನ್ನ ಬೆಳಗೋದು ಯಾಕೆ?

ಬೆಂಗಳೂರು, ಮಾ.11: ನಿತ್ಯ ಭಕ್ತಿ ಕಾರ್ಯಕ್ರಮಕ್ಕೆ ಸುಸ್ವಾಗತ. ಯಾವುದೇ ಶುಭ ಸಮಾರಂಭ, ಉದ್ಘಾಟನೆ ಅಥವಾ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ದೀಪ ಬೆಳಗುವುದು ನಮ್ಮ ಸನಾತನ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ. ಈ ಪದ್ಧತಿಯ ಹಿಂದಿನ ಮಹತ್ವವನ್ನು ನಾವು ಅರಿಯಬೇಕು. ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನಃ ದೀಪೋ ಹರತು ಮೇ ಪಾಪಾನಿ ಸಂಧ್ಯಾ ದೀಪ ನಮೋಸ್ತುತೇ ಎಂಬ ಶ್ಲೋಕ ದೀಪದ ಆಧ್ಯಾತ್ಮಿಕ ಶಕ್ತಿಯನ್ನು ಸಾರುತ್ತದೆ. ದೀಪವನ್ನು ಭಗವಂತನ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ದೀಪದ ಜ್ವಾಲೆಯು ಯಾವಾಗಲೂ ಊರ್ಧ್ವಮುಖವಾಗಿ ಉರಿಯುತ್ತದೆ. ಇದು ಅಭಿವೃದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೀಪವು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಅಜ್ಞಾನವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನೀಡುತ್ತದೆ. ನಮ್ಮ ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಪೂಜೆ ಪ್ರಾರಂಭಿಸುವ ಮೊದಲು ದೀಪ ಬೆಳಗುವ ಸಂಪ್ರದಾಯವಿದೆ. ದೀಪಾವಳಿಯಂತಹ ಹಬ್ಬಗಳಲ್ಲಿ ಮನೆ ತುಂಬ ದೀಪಗಳನ್ನು ಹಚ್ಚಿ ಸಂಭ್ರಮಿಸಲಾಗುತ್ತದೆ. ಈ ಮೂಲಕ ದೀಪವು ನಮ್ಮ ಜೀವನದಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೂ ತಟ್ಟಿದ ಯುದ್ಧದ ಬಿಸಿ: ಭಕ್ತರ ಗಮನಕ್ಕೆ ಇಂದಿನಿಂದ ಈ ಸೇವೆ ಸ್ಥಗಿತ

ಬೆಂಗಳೂರು, ಮಾ.11: ಇರಾನ್ ಇಸ್ರೇಲ್​​​, ಅಮೆರಿಕ ಯುದ್ಧ ಪರಿಣಾಮ ಇಡೀ ಜಗತ್ತಿಗೆ ಉಂಟಾಗಿದೆ. ಇದೀಗ ಭಾರತ ಕೂಡ ಇದರ ಎಫೆಕ್ಟ್​​​ನ್ನು ಅನುಭವಿಸುತ್ತಿದೆ, ಎಲ್​​​ಪಿಜಿ ಗ್ಯಾಸ್​​​ಗಳ ಬೆಲೆ ಕೂಡ ಹೆಚ್ಚಾಗಿದೆ. ಜತೆಗೆ ಕೊರತೆ ಕೂಡ ಉಂಟಾಗಿದೆ. ಈಗಾಗಲೇ ಬೆಂಗಳೂರಿನ ಹೊಟೇಲ್​​ಗಳಲ್ಲೂ ಕೂಡ ಇದರ ಪರಿಣಾ ಎದ್ದು ಕಾಣುತ್ತಿದೆ. ಇದರ ಪರಿಣಾಮ ರಾಜಧಾನಿಯ ಅತ್ಯಂತ ಪ್ರಸಿದ್ಧ ಮತ್ತು ಭಕ್ತರ ನೆಚ್ಚಿನ ಧಾರ್ಮಿಕ ಕೇಂದ್ರವಾದ ಬನಶಂಕರಿ ದೇವಸ್ಥಾನದಲ್ಲಿ ಇಂದಿನಿಂದ (ಮಾರ್ಚ್ 11) ಉಚಿತ ಅನ್ನ ಪ್ರಸಾದ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಅಭಾವವೇ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ.

ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನ ಪ್ರಸಾದ ಸಿದ್ಧಪಡಿಸಲು ಪ್ರತಿದಿನ 5 ರಿಂದ 6 ಕಮರ್ಷಿಯಲ್ ಸಿಲಿಂಡರ್‌ಗಳ ಅಗತ್ಯವಿರುತ್ತದೆ. ಸದ್ಯ ದೇವಸ್ಥಾನದಲ್ಲಿ ಕೇವಲ 4 ಸಿಲಿಂಡರ್‌ಗಳು ಮಾತ್ರ ಲಭ್ಯವಿದ್ದು, ಅವು ಇಂದಿನ ಅಡುಗೆಗೆ ಸಾಕಾಗುವುದಿಲ್ಲ. ಗ್ಯಾಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪ್ರಸಾದ ಸೇವೆ ಬಂದ್ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಈ ಅನ್ನದಾಸೋಹಕ್ಕೆ ಇದೀಗ ಎಲ್‌ಪಿಜಿ ಅಭಾವದಿಂದಾಗಿ ಅಡ್ಡಿ ಉಂಟಾಗಿದೆ. ಮುಂಜಾನೆ ನೀಡಲಾಗುವ ರೈಸ್ ಬಾತ್ ಮತ್ತು ಸಿಹಿ ಪ್ರಸಾದ ಹಾಗೂ ಮಧ್ಯಾಹ್ನದ ಊಟಕ್ಕೆ ಭಕ್ತರು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಇಂದು ಈ ರಾಶಿಯವರ ಸಂಬಳ ಹೆಚ್ಚಾಗುತ್ತದೆ

ದೇವಸ್ಥಾನದಲ್ಲಿ ಪ್ರಸಾದ ಸೇವೆಯನ್ನು ನೆಚ್ಚಿಕೊಂಡಿರುವ ಸಾವಿರಾರು ಭಕ್ತರು ಮತ್ತು ಬಡವರು ಈ ನಿರ್ಧಾರದಿಂದ ತೀವ್ರ ಬೇಸರಗೊಂಡಿದ್ದಾರೆ. “ಸರ್ಕಾರವು ಇಂತಹ ದೊಡ್ಡ ದೇವಸ್ಥಾನಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ಆದ್ಯತೆ ನೀಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ಭಕ್ತರು ಆಗ್ರಹಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Horoscope March 11: ಇಂದು ಈ ರಾಶಿಯವರ ಸಂಬಳ ಹೆಚ್ಚಾಗುತ್ತದೆ

ಬೆಂಗಳೂರು, ಮಾ.11: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ (ಮಾ.11) ವಿಶ್ಲೇಷಿಸಿದ್ದಾರೆ. ವಿಶ್ವಾ ವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ ಅಷ್ಟಮಿ, ಜೇಷ್ಠ ನಕ್ಷತ್ರ, ವಜ್ರಯೋಗ, ಬಾಲವಕರಣದಿಂದ ಕೂಡಿದ ಈ ದಿನವು ಕಾಲಾಷ್ಟಮಿ ಎಂದೂ ಗುರುತಿಸಲ್ಪಟ್ಟಿದೆ. ಈ ದಿನ ಕಾಲಭೈರವನ ಪೂಜೆಯಿಂದ ಸಮಯವನ್ನು ಅನುಕೂಲಕರವಾಗಿ ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಚಂದ್ರನು ಜೇಷ್ಠ ನಕ್ಷತ್ರದ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ ವಿವಿಧ ಫಲಗಳನ್ನು ನೀಡಲಿದೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಶುಭ, ಕೌಟುಂಬಿಕ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಪ್ರಯಾಣದ ಯೋಗಗಳು ಪ್ರತಿಯೊಂದು ರಾಶಿಯವರಿಗೂ ವಿಭಿನ್ನವಾಗಿವೆ. ರಾಶಿಗಳಿಗೆ ಅನ್ವಯವಾಗುವ ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ಅವರು ಪ್ರಸ್ತುತಪಡಿಸಿದ್ದಾರೆ. ಇಂದು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭಾಶಯ ಕೋರಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link