All posts by nagaraj11081993

ಒಂದು ದಿನಕ್ಕೆ ನೀವು ಎಷ್ಟು ಪ್ರಮಾಣದ ಬಿಯರ್​​ ಕುಡಿಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ

Source link

ಯುದ್ಧದ ಎಫೆಕ್ಟ್: ಬೆಂಗಳೂರಿನ ಪಿಜಿಗಳಿಗೂ ಸಂಕಷ್ಟ; ಊಟದ ಮೆನುನೇ ಚೇಂಜ್

ಬೆಂಗಳೂರು, ಮಾರ್ಚ್​ 10: ಮಧ್ಯಪ್ರಾಚ್ಯದಲ್ಲಿನ ಯುದ್ಧ (iran israel war) ಎಷ್ಟರಮಟ್ಟಿಗೆ ಎಫೆಕ್ಟ್ ತಟ್ಟಿದೆ ಅಂದರೆ ಸದ್ಯ ದೇಶಾದ್ಯಂತ ಗ್ಯಾಸ್​ ಸಿಲಿಂಡರ್​​​ಗೆ ಹಾಹಾಕರ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್​​ಗೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇಡೀ ಹೋಟೆಲ್​​ ​ಉದ್ಯಮ ಸೇರಿದಂತೆ ಇದೀಗ (PG) ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ.

ಪಿಜಿ ಮಾಲೀಕರಿಗೂ ತಟ್ಟಿದ ಯುದ್ಧದ ಎಫೆಕ್ಟ್

ಸಿಲಿಕಾನ್​ ಸಿಟಿ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಹೀಗೆ ಆಗಮಿಸುವವರು ಹೆಚ್ಚಾಗಿ ಪಿಜಿಗಳನ್ನೇ ಅವಲಂಬಿಸುತ್ತಾರೆ. ಆದರೆ ಪ್ರಸ್ತುತ ನಗರದಲ್ಲಿ 15 ಸಾವಿರ ಪಿಜಿಗಳಲ್ಲಿದ್ದು, 10 ಲಕ್ಷಕ್ಕೂ ಹೆಚ್ಚರು ಜನರು ವಾಸಿಸುತ್ತಿದ್ದಾರೆ. ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ.

ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿಕೆ ನೀಡಿದ್ದು, ಪಿಜಿಗಳಿಗೆ ಕಮರ್ಷಿಯಲ್ ಗ್ಯಾಸ್‌ ಸಿಗುತ್ತಿಲ್ಲ. ಸದ್ಯ ಇನ್ನೊಂದು ವಾರ ಇರುವ ಸಿಲಿಂಡರ್​ನಲ್ಲೇ ಮ್ಯಾನೇಜ್ ಮಾಡುತ್ತೇವೆ. ಮುಂದೆ‌ ಹೇಗೆ ಎಂಬ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

ಊಟದ ಮೆನು ಕೂಡ ಚೇಂಜ್​​

ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ನೋಡಬೇಕಾಗುತ್ತೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕಿದೆ ಎಂದು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಬದಲಾವಣೆಯ ಗಾಳಿ

2026 ರ ಟಿ20 ವಿಶ್ವಕಪ್ (T20 World Cup) ಗೆದ್ದ ಟೀಂ ಇಂಡಿಯಾಗೆ (Team India) ಬಿಸಿಸಿಐನಿಂದ ಭರ್ಜರಿ ಬಹುಮಾನ ಘೋಷಣೆಯಾಗಿದೆ. ಐಸಿಸಿ ನೀಡಿದ 27.48 ಕೋಟಿ ರೂಗಳ ಜೊತೆಗೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಪಾಳದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ತಂಡವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮಖ ಪಾತ್ರವಹಿಸಿದ ಫೀಲ್ಡಿಂಗ್ ಕೋಚ್ ಟಿ. ದಿಲೀಪ್ (T. Dilip) ಅವರನ್ನು ಈ ಹುದ್ದೆಯಿಂದ ತೆಗೆದುಹಾಕಬಹುದು ಎಂದು ಹೇಳಲಾಗಲುತ್ತಿದೆ. 2021 ರಿಂದ ತಂಡದ ಫೀಲ್ಡಿಂಗ್‌ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್ ಇಷ್ಟರಲ್ಲೇ ಈ ಹುದ್ದೆಯಿಂದ ಕೆಳಗಿಳಿಯಬಹುದು

ಅತಿ ಹೆಚ್ಚು ಕ್ಯಾಚ್‌ ಕೈಬಿಟ್ಟ ಭಾರತ

ವಾಸ್ತವವಾಗಿ, ಟೀಂ ಇಂಡಿಯಾ ಪ್ರಶಸ್ತಿ ಗೆದ್ದರೂ, ತಂಡದ ಫೀಲ್ಡಿಂಗ್‌ ಮಾತ್ರ ಕಳಪೆಯಾಗಿತ್ತು. ಹಲವಾರು ಪಂದ್ಯಗಳಲ್ಲಿ ತಂಡವು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿತ್ತು. ಹೀಗಾಗಿ ಇಡೀ ಪಂದ್ಯಾವಳಿಯಲ್ಲಿ ತಂಡದ ಫೀಲ್ಡಿಂಗ್‌ನಲ್ಲಿನ ಲೋಪಗಳು ಸಾಕಷ್ಟು ಚರ್ಚೆಯಾಗಿದ್ದವು. ಅಲ್ಲದೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡ ಎಂಬ ಬೇಡದ ದಾಖಲೆ ಕೂಡ ಟೀಂ ಇಂಡಿಯಾ ಪಾಲಾಗಿದೆ ಅಂತಹ ಪರಿಸ್ಥಿತಿಯಲ್ಲಿ, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಭವಿಷ್ಯದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಇದಕ್ಕೆ ಇನ್ನೊಂದು ದೊಡ್ಡ ಕಾರಣವೆಂದರೆ ಟಿ. ದಿಲೀಪ್ ಅವರ ಒಪ್ಪಂದವು ಜೂನ್ 2026 ರಲ್ಲಿ ಮುಕ್ತಾಯಗೊಳ್ಳುತ್ತಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಬಿಸಿಸಿಐ ದಿಲೀಪ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸುವ ಸಾಧ್ಯತೆಗಳಿಲ್ಲ. ಹೀಗಾಗಿ ಅವರ ಬದಲಿಯಾಗಿ ವಿದೇಶಿ ಫೀಲ್ಡಿಂಗ್ ಕೋಚ್ ನೇಮಕಕ್ಕೆ ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.

ಒಪ್ಪಂದ 2ನೇ ಬಾರಿಗೆ ವಿಸ್ತರಣೆ

ಮೇಲೆ ಹೇಳಿದಂತೆ 2021 ರಿಂದ ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್ ಆಗಿರುವ ದಿಲೀಪ್, ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಈ ಹುದ್ದೆಗೇರಿದ್ದರು. 2024 ರ ಟಿ 20 ವಿಶ್ವಕಪ್ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತ್ತಾದರೂ ಅವರ ಒಪ್ಪಂದವನ್ನು ಮಾರ್ಚ್ 2025 ರವರೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ಆದರೆ ರೋಹಿತ್ ಶರ್ಮಾ ಮತ್ತೆ ದಿಲೀಪ್ ಅವರನ್ನೇ ಈ ಹುದ್ದೆಯಲ್ಲಿ ಮುಂದುವರೆಸುವಂತೆ ಬಿಸಿಸಿಐ ಬಳಿ ವಿನಂತಿಸಿಕೊಂಡಿದ್ದರು. ರೋಹಿತ್ ಅವರ ಹಸ್ತಕ್ಷೇಪದಿಂದಾಗಿ, ದಿಲೀಪ್ ಒಂದು ವರ್ಷದ ವಿಸ್ತರಣೆಯನ್ನು ಪಡೆದು ಇಂಗ್ಲೆಂಡ್ ಪ್ರವಾಸಕ್ಕಾಗಿ ತಂಡವನ್ನು ಸೇರಿಕೊಂಡಿದ್ದರು. ಆ ಬಳಿಕ ಟಿ20 ವಿಶ್ವಕಪ್​ನಲ್ಲಿಯೂ ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದಾಗ್ಯೂ, ಭವಿಷ್ಯದಲ್ಲಿ ಅವರು ತಂಡದ ಭಾಗವಾಗುತ್ತಾರೆಯೇ ಎಂಬುದು ಈಗ ಬಿಸಿಸಿಐ ಕೈಯಲ್ಲಿದೆ.

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

ವಿದೇಶಿ ಫೀಲ್ಡಿಂಗ್ ಕೋಚ್ ಹುಡುಕಾಟದಲ್ಲಿ ಬಿಸಿಸಿಐ

ಕಳೆದ ವರ್ಷ ಟಿ. ದಿಲೀಪ್ ತಂಡಕ್ಕೆ ಮರು ಪ್ರವೇಶ ಪಡೆಯಲು ಪ್ರಮುಖ ಕಾರಣವೆಂದರೆ ಅವರ ಬದಲಿಯಾಗಿ ಸೂಕ್ತ ಫೀಲ್ಡಿಂಗ್ ಕೋಚ್ ಸಿಗದೆ ಇದ್ದದ್ದು. ವರದಿಗಳ ಪ್ರಕಾರ, ಬಿಸಿಸಿಐ ವಿದೇಶಿ ಫೀಲ್ಡಿಂಗ್ ಕೋಚ್ ಅನ್ನು ಹುಡುಕುತ್ತಿತ್ತು, ಆದರೆ ಅಭ್ಯರ್ಥಿ ಸಿಗದಿದ್ದಾಗ, ದಿಲೀಪ್ ಅವರನ್ನು ಮುಂದುವರೆಸಲಾಯಿತು. ಇದೀಗ ದಿಲೀಪ್ ಅವರನ್ನು ಬದಲಿಸಲು ಬಿಸಿಸಿಐಗೆ ಸಾಕಷ್ಟು ಸಮಯವಿದ್ದು, ಅವರ ಸ್ಥಾನಕ್ಕೆ ಬೇರೋಬ್ಬ ಫೀಲ್ಡಿಂಗ್‌ ಕೋಚ್ ಬರುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?

ಡಾ. ಬಸವರಾಜ ಗುರೂಜಿಯವರು 2026ರ ಯುಗಾದಿ ಪರಾಭವನಾಮ ಸಂವತ್ಸರದ ವೃಶ್ಚಿಕ ರಾಶಿಯ ಭವಿಷ್ಯವನ್ನು ವಿವರಿಸಿದ್ದಾರೆ. ಈ ವರ್ಷವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಗುರು ಗ್ರಹವು 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಸಂಚಾರ ಮಾಡುವುದರಿಂದ ಅದೃಷ್ಟ ಕೂಡಿ ಬರುವ ಕಾಲ ಇದಾಗಿದೆ. ಶನಿಯು ಪಂಚಮದಲ್ಲಿದ್ದರೆ, ರಾಹು ನಾಲ್ಕರಿಂದ ಮೂರಕ್ಕೆ ಮತ್ತು ಕೇತು ಹತ್ತರಿಂದ ಒಂಬತ್ತಕ್ಕೆ ಸಂಚಾರ ಮಾಡಲಿದೆ.

ಆರೋಗ್ಯ ಸ್ಥಿತಿ ಉತ್ತಮವಾಗಿರಲಿದ್ದು, ಸುಖ-ದುಃಖದ ಅನುಪಾತ 6:3 ಇರಲಿದೆ. ವೃತ್ತಿ, ವ್ಯಾಪಾರ ಹಾಗೂ ಆರ್ಥಿಕವಾಗಿ ಸಬಲತೆಯನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಪ್ರಗತಿ, ಬಾಕಿ ವಸೂಲಿ, ಅರ್ಧಂಬರ್ಧ ಕೆಲಸಗಳ ಪೂರ್ಣ, ಅಣ್ಣ-ತಮ್ಮಂದಿರಿಂದ ಸಹಕಾರ ದೊರೆಯಲಿದೆ. ರಿಯಲ್ ಎಸ್ಟೇಟ್, ಭೂ ವ್ಯಾಪಾರಿಗಳು, ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಇದು ಜಾಕ್‌ಪಾಟ್ ವರ್ಷವೆಂದು ಗುರುಗಳು ಹೇಳಿದ್ದಾರೆ. ಕೋಪ-ತಾಪಗಳನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಕಾಡಬಹುದು. ಪಾಲುದಾರಿಕೆ ಮತ್ತು ಆಸ್ತಿ ವಿಚಾರಗಳಲ್ಲಿ ಎಚ್ಚರ ಅಗತ್ಯ. ಒಟ್ಟಾರೆಯಾಗಿ, ಶೇ.75 ಶುಭಫಲಗಳನ್ನು ವೃಶ್ಚಿಕ ರಾಶಿಯವರು ನಿರೀಕ್ಷಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

Source link

ವ್ಹಾವ್! ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ

ಬೆಂಗಳೂರು, (ಮಾರ್ಚ್ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು (Bengaluru) ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ (international bus station)ತಲೆ ಎತ್ತಲಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು (ಮಾರ್ಚ್ 10) ವಿಧಾನಪರಿಷತ್​​ನಲ್ಲಿ ಉತ್ತರ ನೀಡಿದ ರಾಮಲಿಂಗಾರೆಡ್ಡಿ ಅವರು, ಈಗ ಮೆಜೆಸ್ಟಿಕ್​ ವ್ಯಾಪ್ತಿಯಲ್ಲಿ 32 ಎಕರೆ ಜಾಗ ಇದೆ. ಪ್ರತಿದಿನ ಇಲ್ಲಿ 11 ಸಾವಿರ ಬಸ್​​ಗಳ ಸಂಚಾರ ಇರುತ್ತೆ. ಮೆಜೆಸ್ಟಿಕ್​​ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ. ಸಿಂಗಾಪುರಕ್ಕಿಂತಲೂ ಅತ್ಯುತ್ತಮ ಬಸ್​ ನಿಲ್ದಾಣ ಮಾಡುತ್ತೇವೆ. ಬಸ್​​​ ನಿಲ್ದಾಣ ಸಂಬಂಧ ವರದಿ ಪಡೆಯಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್​​​​ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

‘ಪ್ರಾಜೆಕ್ಟ್ ಮೆಜೆಸ್ಟಿಕ್​​’ ಹೆಸರಿನಲ್ಲಿ ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಬಸ್​ ನಿಲ್ದಾಣ ಮಾಡಲಾಗುತ್ತೆ. ತಜ್ಞರ ಸಲಹೆ ಪಡೆದು ಬಸ್​​ ನಿಲ್ದಾಣ ನಿರ್ಮಿಸಲು ನಿರ್ಧರಿಸಿದ್ದೇವೆ. ಸಿಂಗಾಪುಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Anganwadi Recruitment 2026: ಕಲಬುರಗಿ ಅಂಗನವಾಡಿ ನೇಮಕಾತಿ; 412 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾಗಿದ್ರೆ ಸಾಕು!

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಕಲಬುರಗಿ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 412 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ 89 ಅಂಗನವಾಡಿ ಕಾರ್ಯಕರ್ತೆಯರು ಮತ್ತು 323 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಲಭ್ಯವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 16ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅಗತ್ಯ.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಕನಿಷ್ಠ ಪಿಯುಸಿ (PUC) ಉತ್ತೀರ್ಣರಾಗಿರಬೇಕು ಮತ್ತು ಸಹಾಯಕಿಯರ ಹುದ್ದೆಗೆ 10ನೇ ತರಗತಿ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ (karnemakaone.kar.nic.in) ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಶೈಕ್ಷಣಿಕ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರವನ್ನು ಸಿದ್ಧಪಡಿಸಿಕೊಂಡು, ಅಧಿಸೂಚನೆಯಲ್ಲಿನ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಲು ಇಲಾಖೆ ಸೂಚಿಸಿದೆ. ಆನ್‌ಲೈನ್ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಕಡ್ಡಾಯವಾಗಿ ಸುರಕ್ಷಿತವಾಗಿಟ್ಟುಕೊಳ್ಳುವುದು ಅವಶ್ಯಕ. ಫೆಬ್ರವರಿ 20 ರಿಂದ ಪ್ರಾರಂಭವಾದ ಈ ಅರ್ಜಿ ಪ್ರಕ್ರಿಯೆಯು ಮಾರ್ಚ್ 16 ರಂದು ಮುಕ್ತಾಯಗೊಳ್ಳಲಿದ್ದು, ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಆಡಳಿತ ಮಂಡಳಿ ತಿಳಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೈಲಲ್ಲೇ ಪ್ಲ್ಯಾನ್​​ ಮಾಡಿ ಫಿಲ್ಮಿ ಸ್ಟೈಲ್​ನಲ್ಲಿ ಪೆಟ್ರೋಲ್​​ ಬಂಕ್ ಸಿಬ್ಬಂದಿ​ ದೋಚಿದ್ದ ಐವರು ಅರೆಸ್ಟ್​

ಮೈಸೂರು, ಮಾರ್ಚ್​ 10: ಕಿರುಮುದ್ದನಹಳ್ಳಿ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಫಿಲ್ಮಿ ಸ್ಟೈಲ್ ದರೋಡೆ ಪ್ರಕರಣವನ್ನ ಭೇದಿಸಿರುವ ಬಿಳಿಕೆರೆ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಡೀಸೆಲ್ ಕೇಳುವ ನೆಪದಲ್ಲಿ ಬಂದು ಮಚ್ಚು-ಡ್ರಾಗರ್ ತೋರಿಸಿ ಅಟ್ಟಹಾಸ ಮೆರೆದಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ದರೋಡೆಗೆ ಇವರು ಸ್ಕೆಚ್​​ ಹಾಕಿದ್ದಿದ್ದು ಮಂಡ್ಯದ ಸೆಂಟ್ರಲ್ ಜೈಲಿನಲ್ಲಿ ಎಂಬ ವಿಷಯವೂ ತನಿಖೆ ವೇಳೆ ಬಯಲಾಗಿದೆ. ಕಳೆದ ತಿಂಗಳು ಫೆಬ್ರವರಿ 12ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಿರುಮುದ್ದನಹಳ್ಳಿ ಬಳಿಯ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ದರೋಡೆ ಮಾಡಿದ್ದ ಐವರ ತಂಡ ಕೊನೆಗೂ ಜೈಲು ಪಾಲಾಗಿದೆ.

​ರಾತ್ರಿ 10 ಗಂಟೆ ಮೇಲೆ ಪಂಪ್ ಆಫ್ ಮಾಡಿ ಸಿಬ್ಬಂದಿ ಹಣ ಎಣಿಸುತ್ತಿದ್ದಾಗ, ಹಳೇ ಮಾಡೆಲ್‌ನ ಸ್ಕೋಡಾ ಕಾರ್‌ನಲ್ಲಿ ಬಂದಿದ್ದ ಐವರು ಕಿರಾತಕರು ಏಕಾಏಕಿ ಕಚೇರಿ ಒಳಗೆ ನುಗ್ಗಿದ್ದರು. ಮಚ್ಚು ಮತ್ತು ಡ್ರಾಗರ್ ತೋರಿಸಿ ಸಿಬ್ಬಂದಿ ಅಜಯ್ ಕುಮಾರ್ ಮತ್ತು ದಿನೇಶ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದರು. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಫೂಟೇಜ್ ಬೆನ್ನತ್ತಿದ ಪೊಲೀಸರು ಈ ಕೃತ್ಯದ ಪ್ರಮುಖ ಆರೋಪಿ ಮಂಡ್ಯ ಮೂಲದ ಲಕ್ಷ್ಮಣ್ ಸೇರಿ ಚನ್ನಪಟ್ಟಣ ಮತ್ತು ಹಾಸನ ಮೂಲದ ಒಟ್ಟು 5 ಜನರನ್ನು ಬಂಧಿಸಿದ್ದಾರೆ. ಇವರೆಲ್ಲರಿಗೂ ಮಂಡ್ಯ ಜೈಲಿನಲ್ಲಿ ಪರಿಚಯವಾಗಿತ್ತು. ಅಲ್ಲಿಯೇ ಪ್ಲಾನ್ ಮಾಡಿ ಈ ರಾಬರಿ ನಡೆಸಿದ್ದರು ಎಂಬುದು ಕೂಡ ಪೊಲೀಸರಿಗೆ ಗೊತ್ತಾಗಿದೆ. ಬಂಧಿತರಿಂದ ರಾಬರಿ ಮಾಡಿದ್ದ ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ರಿಕವರಿ ಮಾಡಲಾಗಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಪ್ರಮುಖ ಆರೋಪಿ ಲಕ್ಷ್ಮಣ್ ಈ ಹಿಂದೆ ಬೇರೆ ಕೇಸ್‌ನಲ್ಲಿ ಜೈಲು ಸೇರಿದ್ದಾಗ ಉಳಿದ ನಾಲ್ವರ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಮೇಲೆ ಈ ಗ್ಯಾಂಗ್ ಕಳ್ಳತನಕ್ಕೆ ಸ್ಕೆಚ್ ಹಾಕಿತ್ತು. ಮೊದಲು ಒಬ್ಬ ಬಂದು ನೀರು ಕುಡಿಯುವ ನೆಪದಲ್ಲಿ ಬಂಕ್ ಪರಿಶೀಲನೆ ಮಾಡಿದ್ದ. ನಂತರ ಪೇಟಿಎಂ ಸ್ಕ್ಯಾನರ್ ಫೋಟೋ ತಗೆದುಕೊಂಡು ಹೋಗಿ, ಸ್ವಲ್ಪ ಹೊತ್ತಿನಲ್ಲೇ ಗ್ಯಾಂಗ್ ಕಟ್ಟಿಕೊಂಡು ಬಂದು ಅಟ್ಯಾಕ್ ಮಾಡಿದ್ದ. ಒಟ್ಟಿನಲ್ಲಿ ಬಿಳಿಕೆರೆ ಪೊಲೀಸರ ಚಾಣಾಕ್ಷತನದಿಂದ ಸಿನಿಮೀಯ ದರೋಡೆಕೋರರು ಈಗ ಕಂಬಿ ಎಣಿಸುವಂತಾಗಿದೆ. ಪದೇ ಪದೇ ಇಂತಹ ಘಟನೆಗಳಿಂದ ಬೆಚ್ಚಿಬಿದ್ದಿದ್ದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಿಂದೂ ಮುಸ್ಲಿಂ ಪ್ರೇಮ:ಅಂತರ್ಜಾತಿ ವಿವಾಹಕ್ಕೆ ವಿರೋಧ, ನದಿಗೆ ಹಾರಿದ ಪ್ರೇಮಿಗಳು

ದಾವಣಗೆರೆ, (ಮಾರ್ಚ್ 10): ತಮ್ಮ ಪ್ರೀತಿಗೆ (Love)  ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ (Hindu Muslim) ಜೋಡಿಯೊಂದು ತುಂಗಾಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ. ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಪ್ರೇಮಿಗಳು ಬದುಕುಳಿದಿದ್ದಾರೆ. ಸಾಯಲು ಯತ್ನಿಸಿದವರನ್ನು ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಇರುವ ಆಂಜನೇಯ ಕಾಟಲ್ ಮಿಲ್ ಪ್ರದೇಶ ನಿವಾಸಿಗಳಾದ ಸಿಂಚನ ಹಾಗೂ ಸಮೀರ್ ಎಂದು ಗುರುತಿಸಲಾಗಿದೆ. ಇನ್ನು ಈ ಜೋಡಿ ಈಜಿ ನದಿಯ ಮಧ್ಯ ದ್ವೀಪದಂತಿದ್ದ ನಡುಗಡ್ಡೆಯಲ್ಲಿ ಆಶ್ರಯ ಪಡೆದು ಗಮನ ಸೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮೀರ್ ಹಾಗೂ ಹಿಂದೂ ಧರ್ಮದ ಸಿಂಚನ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದ್ರೆ, ಇಬ್ಬರು ಪರಸ್ಪರ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಇವರ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡಿ ಸಾಯುವುದಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ನೇಹಿತೆಯ ಲವ್​​ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ

ಇದಕ್ಕೂ ಮೊದಲು ಈ ಜೋಡಿ ಮನೆ ಬಿಟ್ ಹೋಗಿದ್ದು, ಮೈಸೂರು, ಶಿವಮೊಗ್ಗ ಸುತ್ತಾಡಿ ಬಳಿಕ ಹೊನ್ನಾಳಿಗೆ ಬಂದಿದ್ದು, ಬಳಿಕ ತುಂಗಭದ್ರ ಸೇತುವೆ ಮೇಲಿಂದ ನದಿಗೆ ಹಾರಿದೆ. ಆದ್ರೆ, ಅದೃಷ್ಟವಶಾತ್ ನದಿಯಲ್ಲಿ ನೀರು ಕಡಿಮೆ ಇದ್ದರಿಂದ ಈಜಿ ಹೋಗಿ ನಡುಗಡ್ಡೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಪ್ರೇಮಿಗಳನ್ನು ರಕ್ಷಿಸಿ ನಡುಗಡ್ಡೆಯಿಂದ ದಡಕ್ಕೆ ಕರೆತಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಟ್ರೈಲರ್ ದಾಖಲೆ: ಆದರೂ ಟಾಪ್ 10 ಪಟ್ಟಿಯಲ್ಲಿ ಸ್ಥಾನವಿಲ್ಲ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಯೂಟ್ಯೂಬ್​​ನಲ್ಲಿ ಸಖತ್ ಟ್ರೆಂಡ್ ಸಹ ಆಗುತ್ತಿದೆ. ಸಿನಿಮಾದ ಟ್ರೈಲರ್ ಹಿಂದಿ ಮಾತ್ರವೇ ಅಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಆಗಿದೆ. ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿದೆ. ಹಾಗಿದ್ದರೂ ಸಹ ಟಾಪ್ 10 ಪಟ್ಟಿ ಸೇರಲು ವಿಫಲವಾಗಿದೆ.

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar: The Revenge) ಚಿತ್ರದ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೇವಲ 48 ಗಂಟೆಗಳಲ್ಲಿ ಎಲ್ಲಾ ಭಾಷೆಗಳಿಂದ ಸೇರಿ ಬರೋಬ್ಬರಿ 312 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಸಿನಿಮಾ ಬಾಲಿವುಡ್ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ಇಷ್ಟು ದೊಡ್ಡ ಸಂಖ್ಯೆಯ ವೀವ್ಸ್ ಅನ್ನು ಬಾಲಿವುಡ್​​ನ ಇನ್ಯಾವುದೇ ಸಿನಿಮಾ ಪಡೆದಿಲ್ಲ. ಆದರೆ ನೆನಪಿರಲಿ, 312 ಮಿಲಿಯನ್, ಕೇವಲ ಒಂದು ಭಾಷೆಯ ಟ್ರೈಲರ್​​ನಿಂದ ಬಂದಿರುವ ವೀವ್ಸ್ ಅಲ್ಲ ಬದಲಿಗೆ ಎಲ್ಲ ಭಾಷೆಗಳ ಟ್ರೈಲರ್​​ಗೆ ಸಿಕ್ಕಿರುವ ವೀವ್ಸ್ ಸಂಖ್ಯೆ ಆಗಿದೆ.

ಮಾರ್ಚ್ 7 ರಂದು ಬಿಡುಗಡೆಯಾದ ಈ ಚಿತ್ರದ ಹಿಂದಿ ಟ್ರೈಲರ್ ಮೊದಲ 24 ಗಂಟೆಗಳಲ್ಲಿ 39.2 ಮಿಲಿಯನ್ (39,200,000) ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಆದರೆ, ಈ ಸಂಖ್ಯೆಯು ಬಾಲಿವುಡ್‌ನ ಟಾಪ್ 10 ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್‌ಗಳ ಪಟ್ಟಿಗೆ ಸೇರಲು ಸ್ವಲ್ಪದರಲ್ಲಿ ವಿಫಲವಾಯಿತು. 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ಟ್ರೈಲರ್​​ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ‘ಸಲಾರ್’ ಸಿನಿಮಾ, ಎರಡನೇ ಸ್ಥಾನದಲ್ಲಿರುವುದು ಕನ್ನಡದ ‘ಕೆಜಿಎಫ್’, ಮೂರನೇ ಸ್ಥಾನದಲ್ಲಿ ‘ಪುಷ್ಪ 2’ ಸಿನಿಮಾ ಇದ್ದರೆ ನಾಲ್ಕನೇ ಸ್ಥಾನದಲ್ಲಿ ‘ಆದಿಪುರುಷ್’ ಸಿನಿಮಾ ಇದೆ. ಈ ಪಟ್ಟಿಯ ಹತ್ತನೇ ಸ್ಥಾನದಲ್ಲಿ ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ಇದೆ. ಈ ಸಿನಿಮಾದ ಟ್ರೈಲರ್ 24 ಗಂಟೆಗಳಲ್ಲಿ 55 ಮಿಲಿಯನ್ ವೀವ್ಸ್ ಗಳಿಸಿತ್ತು. ಈ ದಾಖಲೆಯನ್ನು ಸಹ ‘ಧುರಂಧರ್ 2’ ಮುರಿದಿಲ್ಲ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಅಡ್ವಾನ್ಸ್ ಬುಕಿಂಗ್ ಕೂಡ ಭರ್ಜರಿಯಾಗಿ ಆರಂಭವಾಗಿದೆ. ವರದಿಗಳ ಪ್ರಕಾರ, ಮಾರ್ಚ್ 09ರ ವೇಳೆಗಾಗಲೆ ಸುಮಾರು 2 ಲಕ್ಷಕ್ಕೂ ಅಧಿಕ ಪ್ರೀಮಿಯರ್ ಶೋ ಟಿಕೆಟ್‌ಗಳು ಮಾರಾಟವಾಗಿವೆ. ಮಾರ್ಚ್ 18 ರಂದು ಪೇಯ್ಡ್ ಪ್ರೀಮಿಯರ್ ಪ್ರದರ್ಶಿತವಾಗಲಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ. ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಬಲಿಷ್ಠ ತಾರಾಗಣವಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವು ಹಳೆಯ ದಾಖಲೆಗಳನ್ನು ಧೂಳೀಪಟ ಮಾಡುವುದು ಖಚಿತ ಎಂದು ಸಿನಿ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸುಳ್ಳು ಹೇಳಿ ಸಿಕ್ಕಿಬಿದ್ದ ಆಮಿರ್ ಖಾನ್; ಟ್ರೋಲ್ ಆದ ಬಾಲಿವುಡ್ ನಟ

ಬಾಲಿವುಡ್ ಆಮಿರ್ ಖಾನ್ (Aamir Khan) ಅವರು ಪರ್ಫೆಕ್ಷನಿಸ್ಟ್ ಎನಿಸಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ಸಾಕಷ್ಟು ಗೌರವಿಸುತ್ತಾರೆ. ಈಗ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ‘ಸಿತಾರೆ ಜಮೀನ್​​ಪರ್’ ಸಿನಿಮಾ ಈ ಮೊದಲು ಥಿಯೇಟರ್​​ನಲ್ಲಿ ರಿಲೀಸ್ ಆಯಿತು. ಆ ಬಳಿಕ ಯೂಟ್ಯೂಬ್​​​ನಲ್ಲಿ ರಿಲೀಸ್ ಆಯಿತು. ಈ ವೇಳೆ ಆಮಿರ್ ಖಾನ್ ಹೇಳಿದ ಸುಳ್ಳು ಈಗ ಹೊರ ಬಿದ್ದಿದೆ. ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಾ ಇದ್ದಾರೆ.

ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಗೆ ಮಾರಾಟ ಮಾಡಲಿರಲಿಲ್ಲ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆದ ಈ ಚಿತ್ರ ಯೂಟ್ಯೂಬ್​​​ನಲ್ಲಿ ಬಿಡುಗಡೆ ಮಾಡಲಾಯಿತು. ಯೂಟ್ಯೂಬ್​​​ನಲ್ಲಿ ಯಾರು ಬೇಕಾದರೂ ಕೇವಲ 100 ರೂಪಾಯಿ ನೀಡಿ ಸಿನಿಮಾ ನೋಡಬಹುದಿತ್ತು. ಒಮ್ಮೆ ಪಾವತಿಸಿದರೆ 48 ಗಂಟೆಗಳವರೆಗೆ ಈ ಚಿತ್ರ ನೋಡುವ ಅವಕಾಶ ಇತ್ತು. ಹೆಚ್ಚು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ನಾವು ಈ ರೀತಿ ಮಾಡಿದ್ದೆವು ಎಂದು ಅವರು ಹೇಳಿದ್ದರು.

ಆ ಸಮಯದಲ್ಲಿ ಆಮಿರ್ ಖಾನ್ ಮಾತನಾಡಿದ್ದು ಕೇಳಿ, ಸಿನಿಮಾ ಒಟಿಟಿಗೆ ಬರೋದಿಲ್ಲ, ಅವರಿಗೆ ಜನರ ಬಗ್ಗೆ ಸಾಕಷ್ಟು ಪ್ರೀತಿ ಇದೆ ಎಂದೆಲ್ಲ ಜನರು ಅಂದುಕೊಂಡಿದ್ದರು. ಆದರೆ, ಇದು ಇದು ಸುಳ್ಳು ಎಂಬುದು ಈಗ ಗೊತ್ತಾಗಿದೆ. ಏಕೆಂದರೆ, ಸೋನಿ ಲಿವ್​​​ ಅಲ್ಲಿ ಈ ಸಿನಿಮಾ ಪ್ರಸಾರ ಕಾಣಲಿದೆ. ದಿನಾಂಕ ಇನ್ನೂ ಫೈನಲ್ ಆಗಿಲ್ಲ.

ಇದನ್ನೂ ಓದಿ: ‘ಧುರಂದರ್’ ಗೆಲುವಿನ ಬಗ್ಗೆ ಆಮಿರ್ ಖಾನ್​​ಗೆ ಇಲ್ಲ ಪೂರ್ಣ ಸಂತೋಷ

ಸದ್ಯ ಆಮಿರ್ ಖಾನ್ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಅವರು ನಡೆದುಕೊಂಡ ರೀತಿ ಸರಿ ಅಲ್ಲ ಎಂದು ಅನೇಕರು ಹೇಳಿದ್ದಾರೆ. ದುಡ್ಡಿಗಾಗಿ ಅವರು ಸುಳ್ಳು ಹೇಳಿದ್ದಾರೆ ಎಂದೆಲ್ಲ ಅವರು ಆರೋಪಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link