ಬಳ್ಳಾರಿ, ಮಾರ್ಚ್ 08: ಹಾಸ್ಟೆಲ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಹಲವರ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದು ಈ ವೇಳೆ ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಘಟನೆ ಕುರಿತು ಬಳ್ಳಾರಿ ಎಸ್‌ಪಿ ಸುಮನ್ ಪನ್ನಕೇರ್ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು FIR ದಾಖಲಿಸಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಯಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ಇತರೆ ವಿದ್ಯಾರ್ಥಿಗಳ ಮೇಲೆ ರಾಡ್ನಿಂದ ಹಲ್ಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಲ್ಲಿ ಗಾಯಗೊಂಡಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಹಲ್ಲೆ ಬಾಲಕ ಎಸ್ಕೇಪ್ ಆಗಿರುವ ಬಾಲಕನಿಗಾಗಿ ನಗರದ ವಿವಿಧ ಕಡೆಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು 2026ರ ಪರಾಭವ ನಾಮ ಸಂವತ್ಸರದ ಕಟಕ ರಾಶಿ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷ ಕಟಕ ರಾಶಿಯವರಿಗೆ ಮಿಶ್ರ ಫಲಗಳು ಕಂಡುಬರಲಿವೆ. ಗುರು ಒಂದರಿಂದ ಎರಡನೇ ಮನೆಗೆ ಸಾಗಿದರೆ, ಶನಿಗ್ರಹ ವರ್ಷವಿಡೀ ಒಂಬತ್ತನೇ ಮನೆಯಲ್ಲಿ ಸಂಚರಿಸಲಿದೆ. ರಾಹು ಎಂಟರಿಂದ ಏಳಕ್ಕೆ, ಕೇತು ಒಂದರಿಂದ ಎರಡನೇ ಮನೆಗೆ ಚಲಿಸಲಿದೆ. ವರ್ಷದ ಕಡೆಯ ಭಾಗದಲ್ಲಿ ಕೇತು ಗ್ರಹ ಜನ್ಮಕ್ಕೆ ಬರುವುದು ಹೋರಾಟದ ಬದುಕನ್ನು ಸೂಚಿಸುತ್ತದೆ.
ಆದಾಯ ಎಂಟು ಪಾಲು ಮತ್ತು ವ್ಯಯ ಎರಡು ಪಾಲು ಇರುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದಲ್ಲಿ ಅಲ್ಪ ಸಮಸ್ಯೆಗಳು ಎದುರಾದರೂ, ಸುಖ ಏಳು ಮತ್ತು ದುಃಖ ನಾಲ್ಕು ಪ್ರಮಾಣದಲ್ಲಿರುತ್ತದೆ. ವ್ಯಾಪಾರದಲ್ಲಿ ಕಿರಿಕಿರಿಗಳು, ರಾಜಕೀಯದಲ್ಲಿ ಹಿನ್ನಡೆ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಾನಸಿಕ ಒತ್ತಡ ಎದುರಾಗಬಹುದು. ಆದಾಗ್ಯೂ, ಜುಲೈ-ಆಗಸ್ಟ್ ನಂತರ ಆಕಸ್ಮಿಕ ಧನಯೋಗವಿದೆ. ವಾಹನ ಯೋಗ ಉತ್ತಮವಾಗಿದ್ದು, ರೈತಾಪಿ ವರ್ಗದವರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಶುಭವಾಗಲಿದೆ. ಮಕ್ಕಳ ವಿಚಾರ, ವಿವಾಹ ಮತ್ತು ಧರ್ಮ ಕಾರ್ಯಗಳಲ್ಲಿ ಶುಭಫಲಗಳಿವೆ. ಹಣಕಾಸಿನ ಮುಗ್ಗಟ್ಟುಗಳನ್ನು ಎದುರಿಸಬೇಕಾದರೂ, ಸಿಕ್ಕಿಬಿದ್ದ ಹಣದಲ್ಲಿ ಶೇ.50 ಮರಳಿ ಬರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ‘ಧುರಂಧರ್’ ಸಿನಿಮಾ ಕೇವಲ ಹಿಂದಿಯಲ್ಲಿ ಬಿಡುಗಡೆ ಆಗಿತ್ತು. ಹಾಗಿದ್ದರೂ ಕೂಡ ಆ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ಸಿಕ್ಕಿತ್ತು. ಈಗ ಅದರ ಸೀಕ್ವೆಲ್ ಬರುತ್ತಿದೆ. ‘ಧುರಂಧರ್ 2’ (Dhurandhar 2) ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬುದು ವಿಶೇಷ. ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಪ್ಲ್ಯಾನ್ ಮಾಡಲಾಗಿದೆ. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ಮಾರ್ಚ್ 18ರ ಸಂಜೆಯೇ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶುರುವಾಗಲಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಟಿಕೆಟ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಬಹುಕೋಟಿ ರೂಪಾಯಿ ಬೆಲೆಯ ಟಿಕೆಟ್ಗಳು ಮಾರಾಟ ಆಗಿವೆ. ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಲಕ್ಷಣ ಕಾಣಿಸುತ್ತಿದೆ.
‘ಧುರಂಧರ್ 2’ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ರಣವೀರ್ ಸಿಂಗ್, ಸಂಜಯ್ ದತ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಮ್ಪಾಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮೊದಲ ಪಾರ್ಟ್ ಭಾರಿ ಕಲೆಕ್ಷನ್ ಮಾಡಿದ್ದರಿಂದ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಟ್ರೇಲರ್ ನೋಡಿದ ಬಳಿಕ ನಿರೀಕ್ಷೆ ಡಬಲ್ ಆಗಿದೆ.
‘ಧುರಂಧರ್ 2’ ಕನ್ನಡ ಟ್ರೇಲರ್:
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾದ ಜೊತೆ ‘ಟಾಕ್ಸಿಕ್’ ಸಿನಿಮಾ ಕೂಡ ಬಿಡುಗಡೆ ಆಗಬೇಕಿತ್ತು. ಆದರೆ ಇಸ್ರೇಲ್, ಅಮೆರಿಕಾ, ಇರಾನ್ ನಡುವಿನ ಯುದ್ಧದ ಪರಿಣಾಮದಿಂದಾಗಿ ‘ಟಾಕ್ಸಿಕ್’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಯಿತು. ಆದ್ದರಿಂದ ‘ಧುರಂಧರ್ 2’ ಸಿನಿಮಾಗೆ ದೊಡ್ಡ ಅನುಕೂಲ ಆಗಿದೆ.
ಕರ್ನಾಟಕದಲ್ಲಿ ‘ಧುರಂಧರ್ 2’ ಸಿನಿಮಾಗೆ ಟಫ್ ಸ್ಪರ್ಧೆ ನೀಡಲು ಯಾವುದೇ ಸಿನಿಮಾಗಳು ಇಲ್ಲ. ಹಾಗಾಗಿ ಕರ್ನಾಟಕದ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ ಬಾರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಟಿಕೆಟ್ ಬೆಲೆ ಗಗನಕ್ಕೇರಿದೆ. ಆದರೂ ಕೂಡ ಜನರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಆಗಲಿದೆ ಎಂಬುದಕ್ಕೆ ಈ ಮೂಲಕ ಸುಳಿವು ಸಿಗುತ್ತಿದೆ.
ಬೆಂಗಳೂರು, ಮಾರ್ಚ್ 08: ಜಯಮಹಲ್ ಬಳಿ ಹಿಟ್ ಆ್ಯಂಡ್ ರನ್ ಪ್ರಕರಣವೊಂದು ನಡೆದಿದೆ. ಇನ್ನೋವಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಸುಮಾರು ನಾಲ್ಕರಿಂದ ಐದು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಈ ಭೀಕರ ಅಪಘಾತದ ಪರಿಣಾಮವಾಗಿ ಬೈಕ್‌ನಲ್ಲಿ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದ ಕೂಡಲೇ ಇನ್ನೋವಾ ಚಾಲಕ ಮತ್ತು ಕಾರಿನಲ್ಲಿದ್ದ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾದ ಚಾಲಕನ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.
ವಾಷಿಂಗ್ಟನ್, ಮಾರ್ಚ್ 8: ಇರಾನ್ ಯುದ್ಧದಲ್ಲಿ ಬ್ರಿಟನ್ ವರ್ತನೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಸಮಾಧಾನ ಹೊಂದಿದ್ದಾರೆ. ಮಧ್ಯಪ್ರಾಚ್ಯದತ್ತ ಎರಡು ವಿಮಾನ ವಾಹಕಗಳನ್ನು (Aircraft Carrier) ಕಳುಹಿಸಲು ಗಂಭೀರವಾಗಿ ಯೋಚಿಸುತ್ತಿರುವುದಾಗಿ ಬ್ರಿಟನ್ ನೀಡಿರುವ ಹೇಳಿಕೆಯನ್ನು ಟ್ರಂಪ್ ಲೇವಡಿ ಮಾಡಿದ್ದಾರೆ. ಯುದ್ಧವೇ ಮುಗಿಯುತ್ತಿದೆ. ಈಗ್ಯಾಕೆ ಇವರ ನೆರವು. ಇವರ ಈ ಬುದ್ಧಿಯನ್ನು ಯಾವತ್ತೂ ನೆನಪಲ್ಲಿಟ್ಟಿರುತ್ತೇನೆ ಎಂದು ಅಮೆರಿಕ ಅಧ್ಯಕ್ಷರು ಗುಡುಗಿದ್ದಾರೆ.
ಕಳೆದ ಕೆಲ ದಿನಗಳಿಂದ ಡೊನಾಲ್ಡ್ ಟ್ರಂಪ್ ಅವರು ಬ್ರಿಟಿಷ್ ಪ್ರಧಾನಿ ಕೇರ್ ಸ್ಟಾರ್ಮರ್ (Keir Starmer) ಅವರನ್ನು ಟೀಕಿಸುತ್ತಲೇ ಇದ್ದಾರೆ. ಇರಾನ್ ಮೇಲೆ ದಾಳಿ ಮಾಡಲು ಅಮೆರಿಕಕ್ಕೆ ಬ್ರಿಟನ್ ನೆಲೆಗಳನ್ನು ನೀಡಲು ಅಸಮ್ಮತಿಸಿದ ಬಳಿಕ ಟ್ರಂಪ್ ವ್ಯಗ್ರಗೊಂಡಿದ್ದಾರೆ.
ಐತಿಹಾಸಿಕವಾಗಿ ನಿಕಟ ಸಂಬಂಧ ಇರುವ ದೇಶಗಳನ್ನು ಹಾಳು ಮಾಡಲು ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ ಸಹಾಯವಾಗಿದ್ದಾರೆ ಎಂದು ಟ್ರಂಪ್ ಬಾರಿ ಬಾರಿ ಆರೋಪಿಸುತ್ತಿದ್ದಾರೆ.
‘ಒಂದು ಕಾಲದಲ್ಲಿ ನಮ್ಮ ದೊಡ್ಡ ಮಿತ್ರನಾಗಿದ್ದ, ನಮ್ಮ ಮಿತ್ರರಲ್ಲೇ ಅತಿಹೆಚ್ಚಿನವರಾಗಿದ್ದ ಯುನೈಟೆಡ್ ಕಿಂಗ್ಡಂ ಕೊನೆಗೂ ಮಧ್ಯಪ್ರಾಚ್ಯಕ್ಕೆ ಎರಡು ಏರ್ಕ್ರಾಫ್ಟ್ ಕ್ಯಾರಿಯರ್ಗಳನ್ನು ಕಳುಹಿಸಲು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಪರವಾಗಿಲ್ಲ ಪ್ರಧಾನಿ ಸ್ಟಾರ್ಮರ್ ಅವರೆ, ನಮಗೆ ಅವುಗಳ ಅವಶ್ಯಕತೆ ಈಗ ಇಲ್ಲ. ಆದರೆ, ಇದು ನೆನಪ್ಪಿರುತ್ತದೆ. ನಾವು ಈಗಾಗಲೇ ಯುದ್ಧ ಗೆದ್ದಾದ ಬಳಿಕ ನೆರವಾಗಲು ಬರುವ ಜನರ ಅವಶ್ಯಕತೆ ಇಲ್ಲ’ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬ್ರಿಟನ್ ಸೇನಾ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ನಿರಾಕರಿಸಿದ್ಯಾಕೆ?
ಇರಾನ್ ಮೇಲೆ ದಾಳಿಗಳನ್ನು ಮಾಡಲು ಬ್ರಿಟಿಷ್ ನೆಲೆಗಳನ್ನು ಬಳಸಲು ಅಮೆರಿಕ ಮುಂದಾಗಿತ್ತು. ಆದರೆ, ಅದಕ್ಕೆ ಅವಕಾಶ ಕೊಡಲಿಲ್ಲ. ಸರಿಯಾಗಿ ಯೋಜಿಸಲಾಗಿದೆಯಾ ಮತ್ತು ಕಾನೂನಾತ್ಮಕವಾಗಿದೆಯಾ ಎಂಬುದು ಮನವರಿಕೆ ಆದರೆ ಮಾತ್ರ ಸೇನಾ ನೆಲೆಗಳನ್ನು ಬಳಸಲು ಅನುಮತಿಸಬಹುದು ಎಂಬುದು ಬ್ರಿಟನ್ ನಿಲುವು. ಆದರೆ, ರಕ್ಷಣಾ ಉದ್ದೇಶಕ್ಕೆ ಸೇನಾ ನೆಲೆಗಳನ್ನು ಬಳಸಲು ನಂತರ ಅನುಮತಿಸಿತ್ತು ಬ್ರಿಟನ್.
ಬ್ರಿಟನ್ ಮಾತ್ರವಲ್ಲ, ಹಲವು ಐರೋಪ್ಯ ದೇಶಗಳು ಅಮೆರಿಕದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಗ್ರೀನ್ಲ್ಯಾಂಡ್ ಅನ್ನು ಅಮೆರಿಕ ಖರೀದಿಸುವ ಪ್ರಸ್ತಾಪವನ್ನು ಅನೇಕ ಐರೋಪ್ಯ ದೇಶಗಳು ವಿರೋಧಿಸಿವೆ. ಅದರಲ್ಲೂ ಬ್ರಿಟನ್ನಿಂದ ತೀವ್ರ ಪ್ರತಿರೋಧ ಬಂದಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆಪ್ಟಿಕಲ್ ಇಲ್ಯೂಷನ್ (Optical Illusion) ಒಗಟಿನ ಚಿತ್ರಗಳೇ ಹಾಗೆ, ಗೊಂದಲಕ್ಕೀಡು ಮಾಡುವುದು ಸಹಜ. ಕೆಲವೊಮ್ಮೆ ಈ ಒಗಟಿನ ಚಿತ್ರಗಳು ತಲೆಗೆ ಹುಳ ಬಿಡುತ್ತವೆ. ಆದರೆ, ಕೆಲವರು ಕ್ಷರ್ಣಾಧದಲ್ಲಿ ಒಗಟು ಬಿಡಿಸಿ ಉತ್ತರ ಕಂಡು ಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಒಗಟು ಬಿಡಿಸಲು ಸಾಧ್ಯವಾಗಲ್ಲ. ನಿಮಗೂ ಇದೇ ರೀತಿ ಆಗಿರಬಹುದು. ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರದಲ್ಲಿ ಚುಕ್ಕೆಗಳಿಲ್ಲದ ಶ್ವಾನವೊಂದಿದೆ. ನೀವು ಈ ನಿಷ್ಠಾವಂತ ಪ್ರಾಣಿಯನ್ನು ಐದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.
ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?
ಈ ಇಲ್ಯೂಷನ್ ಚಿತ್ರ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಅದೇ ರೀತಿಯಾಗಿದ್ದು, ಈ ಚಿತ್ರದಲ್ಲಿ ಸಾಲಾಗಿ ಬಿಳಿ ನಾಯಿಗಳಿವೆ. ಎಲ್ಲಾ ನಾಯಿಗಳ ಮೇಲೂ ಚುಕ್ಕೆಗಳಿವೆ. ಈ ಚಿತ್ರದಲ್ಲಿ ಚುಕ್ಕೆಗಳಿಲ್ಲದ ಶ್ವಾನವನ್ನು ಕಂಡುಹಿಡಿಯುವುದು. ನೀವು 5 ಸೆಕೆಂಡುಗಳ ಒಳಗೆ ನಿಷ್ಠಾವಂತ ಪ್ರಾಣಿಯನ್ನು ಹುಡುಕಲು ಸಾಧ್ಯವಾದರೆ ನೀವು ಅತೀ ಬುದ್ಧಿವಂತರು ಎಂದರ್ಥ.
ಇದು ಟ್ರಿಕ್ಕಿ ಒಗಟಿನ ಚಿತ್ರವಾಗಿರುವುದರಿಂದ ಚುಕ್ಕೆಗಳಿಲ್ಲದ ಶ್ವಾನವನ್ನು ಕಂಡು ಹಿಡಿಯುವುದು ಕಷ್ಟ. ನೀವು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಬಹುದು. ಹೆಚ್ಚು ಚಿಂತಿಸಬೇಡಿ. ಈ ಕೆಳಗಿನ ಫೋಟೋವನ್ನು ನೋಡಿ. ಶ್ವಾನ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
254 ವರ್ಷಗಳ ಕ್ರಿಕೆಟ್ ಇತಿಹಾಸ ಹೊಂದಿರುವ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಇದೇ ಮೊದಲ ಬಾರಿಗೆ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಬೌಲರ್ರೊಬ್ಬರು 5 ಎಸೆತಗಳಲ್ಲಿ ಸತತ 5 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ಬೌಲರ್ ಹೆಸರು ಬ್ರೆಟ್ ರಾಂಡೆಲ್.
ನ್ಯೂಝಿಲೆಂಡ್ನ ಪ್ಲಂಕೆಟ್ ಶೀಲ್ಡ್ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಪಂದ್ಯದಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಹಾಗೂ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಪರ ಕಣಕ್ಕಿಳಿದ ಬ್ರೆಟ್ ರಾಂಡೆಲ್ ಕೇವಲ 5 ಎಸೆತಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.
ರಾಂಡೆಲ್ ಅವರು ತಮ್ಮ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಪಡೆದಿದ್ದರು. ಆ ನಂತರ ತಮ್ಮ ಮುಂದಿನ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಸತತವಾಗಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಐದು ಎಸೆತಗಳಲ್ಲಿ ಐದು ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಕೇವಲ 25 ರನ್ ನೀಡಿದ ಬ್ರೆಟ್ ರಾಂಡೆಲ್ 7 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ನಾರ್ದನ್ ಡಿಸ್ಟ್ರಿಕ್ಟ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 82 ರನ್ಗಳಿಗೆ ಆಲೌಟ್ ಆಗಿದೆ.
ನವದೆಹಲಿ, ಮಾರ್ಚ್ 08: ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್ಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ 33,500 ಕೋಟಿ ರೂ. ಮೌಲ್ಯದ ಇತರ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ಕೊಟ್ಟಿದ್ದಾರೆ. ಪಿಂಕ್ ಲೈನ್‌ನಲ್ಲಿ 12.3 ಕಿಮೀ ಮಜ್ಲಿಸ್ ಪಾರ್ಕ್-ಮೌಜ್‌ಪುರ್-ಬಾಬರ್‌ಪುರ್ ಕಾರಿಡಾರ್ ಮತ್ತು ಮೆಜೆಂಟಾ ಲೈನ್‌ನಲ್ಲಿ 9.9 ಕಿಮೀ ದೀಪಾಲಿ ಚೌಕ್-ಮಜ್ಲಿಸ್ ಪಾರ್ಕ್ ವಿಸ್ತರಣೆಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದು.
ಬುರಾರಿ, ಜಗತ್‌ಪುರ್-ವಜೀರಾಬಾದ್, ಖಜುರಿ ಖಾಸ್, ಭಜನ್‌ಪುರ ಮತ್ತು ಯಮುನಾ ವಿಹಾರ್‌ನಂತಹ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಪಿಂಕ್ ಲೈನ್ ವಿಸ್ತರಣೆಯು ಸುಮಾರು 71.56 ಕಿಮೀ ದೂರದಲ್ಲಿ ಪೂರ್ಣಗೊಳ್ಳಲಿದ್ದು, ದೆಹಲಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಿಂಗ್ ಮೆಟ್ರೋ ಹೊಂದಿರುವ ಭಾರತದ ಮೊದಲ ನಗರವಾಗಿದೆ.
ಇದು ಈಶಾನ್ಯ ಮತ್ತು ವಾಯುವ್ಯ ದೆಹಲಿಯ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಏತನ್ಮಧ್ಯೆ, ಮೆಜೆಂಟಾ ಲೈನ್ ವಿಸ್ತರಣೆಯು ಜಾಲವನ್ನು ಸುಮಾರು 49 ಕಿ.ಮೀ.ಗೆ ವಿಸ್ತರಿಸುತ್ತದೆ, ಮಧುಬನ್ ಚೌಕ್, ಉತ್ತರ ಪಿತಂಪುರಾ-ಪ್ರಶಾಂತ್ ವಿಹಾರ್, ಹೈದರ್ಪುರ್ ಬದ್ಲಿ ಮೋರ್ ಮತ್ತು ಭಾಲಸ್ವಾ ಮುಂತಾದ ವಸತಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಈ ಸೇರ್ಪಡೆಗಳು ವಾಣಿಜ್ಯ ಮತ್ತು ವಸತಿ ವಲಯಗಳನ್ನು ಹೇಗೆ ಸಂಯೋಜಿಸುತ್ತವೆ, ಸುಗಮ, ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತವೆ ಎಂಬುದನ್ನು ಮುಖ್ಯಮಂತ್ರಿ ಗುಪ್ತಾ ಒತ್ತಿ ಹೇಳಿದರು.
ತುಮಕೂರು, ಮಾರ್ಚ್ 08: ವಿದ್ಯುತ್ ಪರಿವರ್ತಕ ಅಳವಡಿಸುವಾಗ ಶಾಕ್ ತಗುಲಿ ಲೈನ್ಮ್ಯಾನ್ ಮೃತಪಟ್ಟಿರುವ ಘಟನೆ ತಿಪಟೂರು ತಾಲೂಕಿನ ಚೌಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಕೆ.ಪಿ. ಮನು (26) ಮೃತ ದುರ್ದೈವಿಯಾಗಿದ್ದು, ಈತನ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಎನ್ನಲಾಗಿದೆ. ಟಿಸಿ ಬದಲಾಯಿಸುವ ವೇಳೆ ಬೆಸ್ಕಾಂ ಅಧಿಕಾರಿಗಳು ಲೈನ್ ಕ್ಲಿಯರೆನ್ಸ್ ನೀಡದೆ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದ್ದ ಆರೋಪ ಕೇಳಿಬಂದಿದ್ದು, ಲೈನ್ಮ್ಯಾನ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಘಟನೆ ಬಗ್ಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಸಾವು
ಗದಗ ತಾಲೂಕಿನ ಲಕ್ಕುಂಡಿಯ ಕಣಗಿನಾಳ ರಸ್ತೆ ಸಮೀಪ ಅಕ್ರಮವಾಗಿ ನಡೆಸಲಾಗಿರುವ ಮಣ್ಣು ಗಣಿಗಾರಿಕೆಯ ಹೊಂಡದ ನೀರಲ್ಲಿ ಮುಳುಗಿ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಿನ್ನೆ ಬಣ್ಣ ಆಡಿ ಆರೇಳು ಸ್ನೇಹಿತರು ಸ್ನಾನಕ್ಕೆ ತೆರಳಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. ಗದಗ ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, 30-40 ಅಡಿ ಆಳ ಹೊಂಡ ತೆಗೆಯಲಾಗ್ತಿದೆ. ಈ ಹಿಂದೆ ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ, ಚಿಂಚಲಿ ಗ್ರಾಮಗಳಲ್ಲಿ ಇದೇ ರೀತಿಯ ಹೊಂಡದಲ್ಲಿ ಬಿದ್ದು ಮಕ್ಕಳು, ಯುವಕರು ಮೃತಪಟ್ಟಿದ್ದರು. ಕಳೆದ ವಾರವಷ್ಟೇ ಚಿಂಚಲಿ ಗ್ರಾಮದಲಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಹೀಗಿದ್ದರೂ ಸಂಬಂಧಪಟ್ಟ ಇಲಾಖೆ ಇವುಗಳಿಗೆ ಬ್ರೇಕ್ ಹಾಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೋಲಾರ ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಬಿದ್ದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷ ವೆಂಕಟೇಶ್ ಮೃತಪಟ್ಟಿದ್ದಾರೆ. ಇವರು ಕೋಲಾರ ತಾಲೂಕಿನ ತುರಾಂಡಹಳ್ಳಿ ನಿವಾಸಿಯಾಗಿದ್ದು, ನಾಳೆಯಿಂದ ಕೋಲಾರದಲ್ಲಿ ರೈತ ಸಂಘದ ರಾಜ್ಯ ಸಮ್ಮೇಳನ ಹಿನ್ನೆಲೆ, ಕಾರ್ಯಕ್ರಮದ ಸಿದ್ಧತೆಗಳನ್ನು ಮುಗಿಸಿ ಹೋಗುವ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಬೆಂಗಳೂರಿನಲ್ಲೂ ಅಭಿಮಾನಿಗಳು ಇದ್ದಾರೆ. ಇಂದು (ಮಾರ್ಚ್ 8) ಮಹಾದೇವಪುರ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಏನ್ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಆಸ್ಪತ್ರೆಯ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಈ ವೇಳೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಜೂನಿಯರ್ ಎನ್ಟಿಆರ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆಯಿಂದ ಹಲವರು ಆಸ್ಪತ್ರೆಯ ಒಳಗೆ ನುಗ್ಗಿದರು. ಇದರಿಂದ ಆಸ್ಪತ್ರೆಯ ಎಸ್ಕಲೇಟರ್ಗೆ ಹಾನಿ ಆಗಿದೆ ಎಂಬ ಮಾಹಿತಿ ಕೇಳಿಬಂದಿದೆ.