All posts by nagaraj11081993

ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ: ಸಿದ್ದರಾಮಯ್ಯ ಬಜೆಟ್​​ಗೆ ಪ್ರಹ್ಲಾದ ಜೋಶಿ ವ್ಯಂಗ್ಯ

ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ: ಸಿದ್ದರಾಮಯ್ಯ ಬಜೆಟ್​​ಗೆ ಪ್ರಹ್ಲಾದ ಜೋಶಿ ವ್ಯಂಗ್ಯ

ನವದೆಹಲಿ, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 17ನೇ ಬಜೆಟ್ 4.48 ಲಕ್ಷ ಕೋಟಿ ರೂಪಾಯಿ ಬೃಹತ್ ಗಾತ್ರದ ಹೆಗ್ಗಳಿಕೆಗಷ್ಟೇ ಸೀಮಿತ. ಅಂತೆಯೇ ರಾಜ್ಯದ ಸಾಲ ಹೆಚ್ಚಳ ಮತ್ತು ವಿತ್ತೀಯ ಕೊರತೆಯಲ್ಲಿ ಸಹ ದಾಖಲೆ ನಿರ್ಮಿಸಿದ್ದಲ್ಲದೆ, “ವೋಟ್ ಬ್ಯಾಂಕ್” ಪ್ರೇರಿತ ಎಂಬಂತಿದೆ. ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ನಲ್ಲಿ (Karnataka Budget) ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ ಬಜೆಟ್ ಮೀಸಲಿಟ್ಟಂತೆ ಕಾಣುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ (Union Minister Pralhad Joshi) ಕಿಡಿಕಾರಿದ್ದಾರೆ.

ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ

ಪ್ರಸ್ತುತ 4.48 ಲಕ್ಷ ಕೋಟಿ ದೊಡ್ಡ ಗಾತ್ರದ ಬಜೆಟ್ ಆಗಿದ್ದರೂ ಇದೊಂದು ಸ್ಪಷ್ಟ ಅರ್ಥ ನೀತಿ ಬಿಂಬಿಸದ, ‘ಅರ್ಥ’ವಿಲ್ಲದ ಈ ಆಯವ್ಯಯ ಥೇಟ್ ರಾಜಕೀಯ ಭಾಷಣದಂತಿದೆಯೇ ಹೊರತು ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಟ್ಟಂತೆ ಕಾಣುತ್ತಿಲ್ಲ. ಪ್ರಸಕ್ತ ಬಜೆಟ್ ನಲ್ಲಿ 97,449 ಕೋಟಿ ವಿತ್ತೀಯ ಕೊರತೆ ಮತ್ತು 29,957 ಕೋಟಿ ರಾಜಸ್ವ ಸಂಗ್ರಹ ಕೊರತೆ ತೋರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕರಾಮಯ್ಯ ಅಲ್ಲ, ಸಂಪದ್ಭರಿತವಾಗಿದ್ದ ಕರುನಾಡಿನ ಪಾಲಿಗೆ 1.32 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ “ಸಾಲರಾಮಯ್ಯ” ಆಗಿದ್ದಾರೆಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆ ಬಜೆಟ್, ಮಿತಿಮೀರದ ಸಾಲ, ವಿತ್ತೀಯ ಶಿಸ್ತು: ಸರ್ಕಾರದ ಸಾಧನೆ ಹೇಳಿದ ಸಿದ್ದರಾಮಯ್ಯ

ಜಿ ರಾಮ್ ಜಿ ಗೆ ನಯಾ ಪೈಸೆ ಇಲ್ಲ

ಜನಕ್ಕೆ 125 ದಿನಗಳ ಉದ್ಯೋಗ ಖಾತ್ರಿ ನೀಡುವುದರೊಂದಿಗೆ ನಗರ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ‘ಜಿ ರಾಮ್ ಜಿ ‘ ಯೋಜನೆಗೆ ರಾಜ್ಯ ಸರ್ಕಾರ ತನ್ನ ಬಜೆಟ್ ಅಲ್ಲಿ ನಯಾ ಪೈಸೆ ಅನುದಾನ ಒದಗಿಸಿಲ್ಲ. ಇದು ಇವರ ಅಭಿವೃದ್ಧಿ ವಿರೋಧಿ ನೀತಿಯನ್ನು ತೋರ್ಪಡಿಸುತ್ತದೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.

ರಾಜ್ಯದ ಆರ್ಥಿಕಾಭಿವೃದ್ಧಿ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಇದು ರಾಜ್ಯದ ಪಾಲಿಗೆ “ಗ್ಯಾರೆಂಟಿ ಸಾಲ ಶೂಲ”ದ ಬಜೆಟ್ ಆಗಿದೆ. ‘ವೋಟ್ ಬ್ಯಾಂಕ್’ ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ನಾಮಕರಣ ಘೋಷಿಸಿದ ‘ಕಾಂಗ್ರೆಸ್ ಹೈ ಕಮಾಂಡ್ ಓಲೈಕೆ’ಯ ಆಯವ್ಯಯ ಎಂದು ಟೀಕಿಸಿದ್ದಾರೆ.

ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಿಸಿದ ಸಿಎಂ, ರಾಜ್ಯ ಜಿಡಿಪಿಯ 2.95ಕ್ಕೆ ಮಿತಿಗೊಳಿಸಿದ್ದರೂ ಒಟ್ಟು ಸಾಲದ ಗಾತ್ರವನ್ನು 8.24 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ರಾಜ್ಯದ ಆರ್ಥಿಕ ಇತಿಹಾಸದಲ್ಲೇ ಇದು ದಾಖಲೆ. ಇದೇ ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ಆದರೆ, ತಮ್ಮ ವಿತ್ತೀಯ ಅಶಿಸ್ತಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಭ್ಯಾಸಬಲ ಎನ್ನುವಂತೆ ಮತ್ತೆ ಕೇಂದ್ರ ಸರ್ಕಾರದತ್ತ ಬೆರಳು ತೋರಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.

ಬಜೆಟ್‌ ಅನ್ನು ಸಮಗ್ರವಾಗಿ ಅವಲೋಕಿಸಿದರೆ ಸಿಎಂ ಅವರ ಸರ್ವ ಸಮಾನತೆ ಸ್ಲೋಗನ್ ಗೆ ತಕ್ಕಂತೆ ಯಾವುದೇ ಅಂತಃಸತ್ವ ಇಲ್ಲವೆಂದೇ ಹೇಳಬೇಕು. ಎಂದಿನಂತೆ ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಮುಂದುವರೆದಿದೆ ಅಷ್ಟೇ. ಅಲ್ಪಸಂಖ್ಯಾತ ಕಾಲೋನಿಗಳಿಗೆ ಬರೋಬ್ಬರಿ ₹1635 ಕೋಟಿ ಅನುದಾನ ನೀಡಿದ್ದಲ್ಲದೆ, ಅಲ್ಪಸಂಖ್ಯಾತ ನಿಗಮ ಮಂಡಳಿಗಳಲ್ಲಿ ಸಾಲ ಪಡೆದವರ ಸಂಪೂರ್ಣ ಬಡ್ಡಿ ಮನ್ನಾ ಮಾಡಿದೆ. 5000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗೆ ₹ 50000 ಘೋಷಿಸಿದೆ. ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಘೋಷಿಸಿದೆ. ಆದರೆ ಬಹುತೇಕ ಸಮಾಜಗಳನ್ನು ಕಡೆಗಣಿಸಿದೆ ಎಂದಿದ್ದಾರೆ.

ದಾವಣಗೆರೆ “ವೋಟ್ ಬ್ಯಾಂಕ್ “ಗೆ ಕೊಡುಗೆ: ಪ್ರಸಕ್ತ ಬಜೆಟ್ ಅಲ್ಲಿ ವಿಶೇಷವಾಗಿ ಮುಸ್ಲಿಂ ಮತದಾರರೇ ಹೆಚ್ಚಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ದೃಷ್ಟಿಯಿಂದ 100 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಆರೋಪಿಸಿರುವ ಪ್ರಹ್ಲಾದ ಜೋಶಿ ಉಳಿದ ಕ್ಷೇತ್ರಗಳಿಗೆ ಏಕಿಲ್ಲ? ಇದು ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ಬಜೆಟ್ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

ಗ್ಯಾರೆಂಟಿ ಕೈ ಬಿಡುವ ಸೂಚನೆಯೇ? ಪ್ರಸಕ್ತ ಬಜೆಟ್ ಅಲ್ಲಿ ತಾವೇ ಘೋಷಿಸಿದ್ದ ಗ್ಯಾರೆಂಟಿ ಯೋಜನೆ “ಯುವ ನಿಧಿ”ಗೆ ಈ ಬಾರಿ ಅನುದಾನವನ್ನೇ ಮೀಸಲಿಟ್ಟಿಲ್ಲ. ಇದು ಕ್ರಮೇಣ ಒಂದೊಂದೇ ಗ್ಯಾರೆಂಟಿಗಳನ್ನು ಕೈ ಬಿಡುವ ಮುನ್ಸೂಚನೆ ನೀಡಿದಂತಿದೆ. ಯುವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕಾರಣ “ಪ್ರಜ್ಞಾವಂತ ಯುವ ಸಮುದಾಯ ತಮ್ಮ ವೋಟ್ ಬ್ಯಾಂಕ್ ಅಲ್ಲ” ಎಂಬ ಸ್ಪಷ್ಟ ಭಾವನೆ ಮೂಡಿದಂತಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪ್ರಹ್ಲಾದ ಜೋಶಿ ವಿಶ್ಲೇಷಿಸಿದ್ದಾರೆ.

ರಾಜ್ಯ ಸರ್ಕಾರದ ಈ ಬಜೆಟ್ ಅಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳನ್ನು ಬಿಟ್ಟರೆ ಬೇರೆ ಯಾವುದೇ ವಲಯಕ್ಕೆ ಅಂಥಾ ದೊಡ್ಡ ಕೊಡುಗೆ ಏನಿಲ್ಲ. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಕ್ಷೇತ್ರ ಮತ್ತು ಕೃಷಿ ವಲಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಸಮಾಜ ಕಲ್ಯಾಣ, ಮೂಲಸೌಕರ್ಯ ಹಾಗೂ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಹೇಳಿದ್ದಾರೆ.

ಸಿಎಂ ದೂರದೃಷ್ಟಿಯ ಈ ಬಜೆಟ್ ಅಲ್ಲಿ ಒಟ್ಟಾರೆ ಇಂದಿರಾ ಕ್ಯಾಂಟೀನ್, ಬೆಂಗಳೂರು, ಮೈಸೂರು, ದಾವಣಗೆರೆ, ಮತ್ತು ಕಲ್ಬರ್ಗಿ ಅಷ್ಟೇ ಗೋಚರಿಸಿದಂತಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಬೇರೆ ಬೇರೆ ಪ್ರಾಂತ್ಯಗಳು, ಜಿಲ್ಲೆಗಳು ಹಿಂದುಳಿದಿವೆ. ಅಭಿವೃದ್ಧಿ ಶೂನ್ಯವಾಗಿದೆ ಎಂದಿದ್ದಾರೆ.

ದಿಕ್ಕು ದೆಸೆ ಇಲ್ಲದ ಮುಂಗಡ ಪತ್ರ: ರಾಜ್ಯದ ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಪ್ರಸ್ತಾಪವಿಲ್ಲ. ಕೇಂದ್ರದ ಅನುಮತಿ ನೆಪ ಹೇಳಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನವಷ್ಟೇ ಇವರ ಕಸರತ್ತಾಗಿದೆ. ಯಾವುದೇ ದಿಕ್ಕು ದೆಸೆ ಇಲ್ಲದ ಈ ಒಂದು ದಾಖಲೆಯ ಮುಂಗಡ ಪತ್ರದಿಂದ ಜನಕಲ್ಯಾಣವೂ ಇಲ್ಲ ಆರ್ಥಿಕ ಪ್ರಗತಿಯೂ ಇಲ್ಲ. ಒಟ್ಟಾರೆ ಇದೊಂದು ಕೇವಲ ಸಾಲದ ಹೊರೆ ಮತ್ತು ವೋಟ್ ಬ್ಯಾಂಕ್ ಪ್ರೇರಿತ ಬಜೆಟ್ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಿಡುಗಡೆಗೂ ಮುನ್ನ 31.5 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ ನಯನತಾರಾ

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanthara) ಮತ್ತು ಅವರ ಪತಿ ವಿಘ್ನೇಶ್ ಶಿವನ್ ಅವರು ತಮಿಳುನಾಡಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಚೆನ್ನೈನ ಪೋಯಸ್ ಗಾರ್ಡನ್ನಲ್ಲಿ ಬೃಹತ್ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 31.5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಪ್ರಾಪರ್ಟಿ ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್ ಜ್ಯಾಪ್‌ಕೀ (Zapkey) ಮೂಲಕ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಈ ಮನೆಯು ಚೆನ್ನೈನ ತೇನಾಂಪೇಟೆ ವ್ಯಾಪ್ತಿಯ ‘ಲೆಗಸಿ’ ಎಂಬ ಪ್ರೀಮಿಯಂ ವಸತಿ ಸಂಕೀರ್ಣದಲ್ಲಿದೆ.

ಅಪಾರ್ಟ್‌ಮೆಂಟ್ ಕಟ್ಟಡದ 4 ಮತ್ತು 5ನೇ ಮಹಡಿಯಲ್ಲಿ ಈ ಡ್ಯುಪ್ಲೆಕ್ಸ್ ಮನೆಯಿದ್ದು, ಸುಮಾರು 14,369 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿಶೇಷವೆಂದರೆ, ಈ ಆಸ್ತಿಯಲ್ಲಿ ನಯನತಾರಾ ಅವರು ಶೇಕಡ 90ರಷ್ಟು ಪಾಲನ್ನು ಹೊಂದಿದ್ದರೆ, ವಿಘ್ನೇಶ್ ಶಿವನ್ ಶೇಕಡ 10ರಷ್ಟು ಪಾಲು ಹೊಂದಿದ್ದಾರೆ. ಈ ಮನೆಗೆ ಎಂಟು ಪಾರ್ಕಿಂಗ್ ಜಾಗಗಳು ಮೀಸಲಾಗಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ಹೊಸ ಖರೀದಿಯೊಂದಿಗೆ ನಯನತಾರಾ ಅವರ ಆಸ್ತಿ ಪಟ್ಟಿಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಅವರು ಈಗಾಗಲೇ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ತಲಾ 15 ಕೋಟಿ ರೂ. ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಇದಲ್ಲದೇ ಕೇರಳದಲ್ಲಿರುವ ಅವರ ಪೂರ್ವಜರ ಮನೆ ರಾಜ್ಯದ ಅತ್ಯಂತ ಐಷಾರಾಮಿ ಮನೆಗಳಲ್ಲಿ ಒಂದು ಎನ್ನಲಾಗುತ್ತದೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಚಿರಂಜೀವಿ ಮತ್ತು ವೆಂಕಟೇಶ್ ಅಭಿನಯದ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದರು. ಸದ್ಯ ಅವರ ಕೈಯಲ್ಲಿ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರವಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ, ಯಶ್ ನಾಯಕನಾಗಿ ನಟಿಸುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಯನತಾರಾ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ನಯನತಾರಾ ಜನ್ಮದಿನಕ್ಕೆ 10 ಕೋಟಿ ರೂಪಾಯಿ ಎಲೆಕ್ಟ್ರಿಕ್​ ಕಾರು ಗಿಫ್ಟ್ ಕೊಟ್ಟ ವಿಘ್ನೇಶ್

ಹಲವು ವರ್ಷಗಳಿಂದ ನಯನತಾರಾ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದಿಗೂ ಅವರ ಬೇಡಿಕೆ ಕಡಿಮೆ ಆಗಿಲ್ಲ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​​ನಲ್ಲೂ ಅವರು ಹೆಸರು ಮಾಡಿದ್ದಾರೆ. ಜೂನ್ 4ರಂದು ‘ಟಾಕ್ಸಿಕ್’ ಬಿಡುಗಡೆ ಆಗಲಿದೆ. ಆ ಬಳಿಕ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಷ್ಟು ದುರಹಂಕಾರ ನೋಡಿ! ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು

ಜೈಪುರ, ಮಾರ್ಚ್ 6: ಹಳ್ಳಿಗಳಲ್ಲಿ ರಸ್ತೆಯ ಮೇಲೆ ಹಸುಗಳು ಮಲಗಿರುವುದು ಸಾಮಾನ್ಯ ದೃಶ್ಯ. ವೈರಲ್ (Viral Video) ಆಗಿರುವ ದೃಶ್ಯವೊಂದರಲ್ಲಿ ರಸ್ತೆಯ ಮೇಲೆ ಮಲಗಿದ್ದ ಹಸುವಿಗೆ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ಆ ಹಸುವನ್ನು ಕಾರಿನಲ್ಲಿ ತಳ್ಳಿಕೊಂಡು ಹೋಗಿದ್ದಾನೆ. ಈ ಘಟನೆ ರಾಜಸ್ಥಾನದ ಬುಂಡಿ ಪ್ರದೇಶದಲ್ಲಿ ನಡೆದಿದೆ. ಈ ವೀಡಿಯೊವನ್ನು ನೋಡಿದ ಜನರು ಕಾರು ಚಾಲಕನ ದುರಹಂಕಾರವನ್ನು ಟೀಕಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ದಾಂಡಿಗರ ಆರ್ಭಟಕ್ಕೆ SRH ತಂಡದ ವಿಶ್ವ ದಾಖಲೆ ಉಡೀಸ್

Source link

ಬೆಂಗಳೂರಿನ ಹೊರೆ ಇಳಿಸಲು ಬಜೆಟ್​ನಲ್ಲಿ ದೊಡ್ಡ ಘೋಷಣೆ: ರಾಜ್ಯದ 2ನೇ ಐಟಿ ಸಿಟಿಯಾಗಲಿದೆ ಮೈಸೂರು

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಕರ್ನಾಟಕ ಬಜೆಟ್ 2026 ರಲ್ಲಿ ಬೆಂಗಳೂರಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಇತರ ನಗರಗಳಲ್ಲಿ ತಂತ್ರಜ್ಞಾನ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ಮಹತ್ವದ ಯೋಜನೆಗಳನ್ನು ಪ್ರಕಟಿಸಲಾಗಿದೆ. ನವೋದ್ಯಮ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಬೆಂಗಳೂರು ಹೊರತುಪಡಿಸಿ, ಇತರೆ ನಗರಗಳಲ್ಲಿ 1000 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದರಲ್ಲಿ, ಮೈಸೂರನ್ನು 2ನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು ಸಹ ಪ್ರಮುಖವಾದದ್ದಾಗಿದೆ.

ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಂತಹ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕಿಯೋನಿಕ್ಸ್ ಮೂಲಕ ಇನ್‌ಕ್ಯುಬೇಷನ್ ಸೌಲಭ್ಯಗಳು ಮತ್ತು ಕ್ಲೀನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ರಾಜ್ಯದಲ್ಲಿ ESDM ಮತ್ತು ಸೆಮಿಕಂಡಕ್ಟರ್ ವಲಯಕ್ಕೆ ಬೃಹತ್ ಕಂಪನಿಗಳಿಂದ 45,000 ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಐಐಎಸ್ಸಿ, ಇಸ್ರೋ ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕ್ಯಾಂಪಸ್, ಮತ್ತು ರಾಯಚೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುವುದು. 2029 ರ ವೇಳೆಗೆ 500 ಹೊಸ ಜಿಸಿಸಿಗಳನ್ನು ಸ್ಥಾಪಿಸಿ 3.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್​ಡೇಟ್​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶರಣಾಗತಿ ಬಿಟ್ಟರೆ ಯಾವುದೇ ಒಪ್ಪಂದದ ಆಯ್ಕೆಯಿಲ್ಲ; ಇರಾನ್​ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಾಷಿಂಗ್ಟನ್, ಮಾರ್ಚ್ 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಇರಾನ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಇರಾನ್ ಮುಂದೆ ಇರುವುದು ಬೇಷರತ್ತಾದ ಶರಣಾಗತಿಯ ಮಾರ್ಗವೊಂದೇ. ಇರಾನ್ ಜೊತೆ ಬೇರಾವುದೇ ಒಪ್ಪಂದ ಸಾಧ್ಯವಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಶರಣಾಗತಿ ಮಾತ್ರ ಅವರ ಮುಂದೆ ಉಳಿದಿರುವ ಆಯ್ಕೆಯಾಗಿದೆ” ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಸಂಘರ್ಷ ಪೀಡಿತ ದೇಶದಲ್ಲಿ ಮುನ್ನಡೆಸಲು ಅಮೆರಿಕ ಮತ್ತು ಅದರ ಮಿತ್ರಪಕ್ಷಗಳು ಉತ್ತಮ ನಾಯಕನನ್ನು ಆಯ್ಕೆ ಮಾಡುತ್ತವೆ. ನಾವು ಇರಾನ್ ಅನ್ನು ವಿನಾಶದ ಅಂಚಿನಿಂದ ಮರಳಿ ತರಲು ಅವಿಶ್ರಾಂತವಾಗಿ ಕೆಲಸ ಮಾಡುತ್ತೇವೆ. ಅದನ್ನು ಆರ್ಥಿಕವಾಗಿ ಹಿಂದೆಂದಿಗಿಂತಲೂ ದೊಡ್ಡದಾಗಿ, ಉತ್ತಮ ಮತ್ತು ಬಲಶಾಲಿಯಾಗಿ ಮಾಡುತ್ತೇವೆ. ಇರಾನ್ ಉತ್ತಮ ಭವಿಷ್ಯವನ್ನು ಹೊಂದುವುದರಲ್ಲಿ ಅನುಮಾನವಿಲ್ಲ” ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ನಿಮ್ಮ ಮೇಲೆ ದಾಳಿ ನಿಲ್ಲಬೇಕಾದರೆ ಅಮೆರಿಕನ್ನರನ್ನು ಹೊರಹಾಕಿ; ಗಲ್ಫ್ ದೇಶಗಳಿಗೆ ಇರಾನ್ ಎಚ್ಚರಿಕೆ

ಕಳೆದ ವಾರದಲ್ಲಿ, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್‌ನಲ್ಲಿ ನಿರಂತರ ಮಿಲಿಟರಿ ದಾಳಿಗಳನ್ನು ನಡೆಸಿವೆ. ಈ ದಾಳಿಗಳಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟರು. ಇದು ಇನ್ನೂ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇದಕ್ಕೆ ಪ್ರತಿಕಾರವಾಗಿ, ಇರಾನ್ ಇಸ್ರೇಲ್ ಮತ್ತು ಗಲ್ಫ್ ಪ್ರದೇಶದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಪ್ರಾರಂಭಿಸಿತು. ಇರಾನ್‌ನಲ್ಲಿ ಯುದ್ಧದಿಂದಾಗಿ ಇದುವರೆಗೂ 1,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಟಟೀರೀ’ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ವಿವಾದಕ್ಕೆ ಸಿಲುಕಿದ ಗಾಯಕ ಬಾದ್​ಶಾ

ಖ್ಯಾತ ಗಾಯಕ ಬಾದ್‌ಶಾ (Badshah) ಅವರು ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರಿಯಾಣ್ವಿ ಭಾಷೆಯಲ್ಲಿ ಅವರ ಹೊಸ ಹಾಡು ‘ಟಟೀರಿ’ (Tateeree) ಇತ್ತೀಚೆಗೆ ಬಿಡುಗಡೆ ಆಯಿತು. ಈ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನ ಮಾಡುವ ಮತ್ತು ಅಶ್ಲೀಲ ಸಾಹಿತ್ಯ ಬಳಸಲಾಗಿದೆ ಎಂಬ ಆರೋಪದ ಮೇಲೆ ಹರಿಯಾಣ ರಾಜ್ಯ ಮಹಿಳಾ ಆಯೋಗ (HSCW) ಸಮನ್ಸ್ ಜಾರಿ ಮಾಡಿದೆ. ಈ ಮೊದಲು ಕೂಡ ಬಾದ್​ಶಾ ಅವರ ಹಾಡುಗಳ ಸಾಹಿತ್ಯದ ಬಗ್ಗೆ ಅನೇಕರಿಂದ ತಕರಾರು ವ್ಯಕ್ತವಾಗಿತ್ತು.

ಕೆಲವೇ ದಿನಗಳ ಹಿಂದಷ್ಟೇ ಬಿಡುಗಡೆಯಾದ ‘ಟಟೀರಿ’ ಹಾಡಿನಲ್ಲಿರುವ ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಹಾಡು ವಿಶೇಷವಾಗಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ.

ವಿವಾದಿತ ‘ಟಟೀರಿ’ ಹಾಡು:

ಮಾರ್ಚ್ 6ರಂದು ಹೊರಡಿಸಲಾದ ಸಮನ್ಸ್ ಪ್ರಕಾರ, ಬಾದ್‌ಶಾ ಅವರು ಮಾರ್ಚ್ 13ರಂದು ಬೆಳಿಗ್ಗೆ 11.30ಕ್ಕೆ ಪಾಣಿಪತ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ಈ ಸಂಬಂಧ ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಆಯೋಗವು ಪತ್ರ ಬರೆದಿದ್ದು, ಸಂಬಂಧಪಟ್ಟವರು ವಿಚಾರಣೆಗೆ ಹಾಜರಿರುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ: ‘ದುಡ್ಡುಕೊಟ್ರೆ ನಿಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀನಿ’ ಎಂದು ಟೀಕೆ; ಖಡಕ್ ಉತ್ತರ ಕೊಟ್ಟ ಬಾದ್​ಶಾ

ಈ ಕುರಿತು ಪ್ರತಿಕ್ರಿಯಿಸಿದ ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ, ‘ಇಂತಹ ಆಕ್ಷೇಪಾರ್ಹ ಸಾಹಿತ್ಯವುಳ್ಳ ಹಾಡುಗಳು ಹೇಗೆ ಬಿಡುಗಡೆಯಾಗುತ್ತವೆ? ಸೆನ್ಸಾರ್ ಮಂಡಳಿಯ ಕಣ್ಣಿನಿಂದ ಇವು ಹೇಗೆ ತಪ್ಪಿಸಿಕೊಳ್ಳುತ್ತವೆ ಎಂಬುದು ದೊಡ್ಡ ಪ್ರಶ್ನೆ’ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ತಾವೂ ಕೂಡ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅವರು, ಇಂತಹ ವಿಷಯಗಳು ಸಮಾಜದ ನೈತಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

GST ಹೊಡೆತ ಬಿದ್ದರೂ ಕರ್ನಾಟಕ 2ನೇ ಸ್ಥಾನ: ಕೇಂದ್ರಕ್ಕಿಂತ ರಾಜ್ಯದ ಬೆಳವಣಿಗೆ ಉತ್ತಮ ಎಂದ ಸಿದ್ದು

ಬೆಂಗಳೂರು, ಮಾರ್ಚ್​​ 06: ಜಿಎಸ್‌ಟಿ ಹಣ ಕೊಡದಿದ್ದರಿಂದ ರಾಜ್ಯದ ಬೆಳವಣಿಗೆ ಕಡಿಮೆಯಾಗಿದೆ. ಆದರೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್​​ ಮಂಡನೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026-27ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದ್ದೇನೆ. ರಾಜ್ಯದ ಬೆಳವಣಿಗೆ ಪ್ರಮಾಣ ಶೇ.4ರಷ್ಟು ಕಡಿಮೆಯಾಗಿದೆ. ಕೆಲ ರಾಜ್ಯಗಳು ಇನ್ನೂ ಚೇತರಿಸಿಕೊಂಡಿಲ್ಲ, ಮೈನಸ್ ಗ್ರೋತ್‌ನಲ್ಲಿದ್ದಾವೆ. ಆದರೂ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲು 10,000 ಕೋಟಿ ರೂ ಕಡಿಮೆ. ಮುಂದೆ ಇದು 15 ಸಾವಿರ ಕೋಟಿ ರೂ ಕಡಿಮೆಯಾಗುತ್ತೆ. ಆದರೂ ನಾವು ವಿತ್ತೀಯ ಶಿಸ್ತು ಉಲ್ಲಂಘನೆಯನ್ನು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸಾಮಾಜಿಕ ಜಾಲತಾಣ ಬಳಕೆ ನಿಷೇಧ ಮಾಡಿದ್ದು ಸರಿನಾ ತಪ್ಪಾ? ವಿದ್ಯಾರ್ಥಿಗಳು ಏನ್ ಹೇಳ್ತಾರೆ?

ಬೆಂಗಳೂರು, (ಮಾರ್ಚ್ 06): ಚಿಕ್ಕ ಮಕ್ಕಳನ್ನು (children) ಕಾಡುತ್ತಿರುವ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ (social media) ವ್ಯಸನಕ್ಕೆ ಬ್ರೇಕ್​ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಕರ್ನಾಟಕದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ದಿನವಿಡೀ ಮೊಬೈಲ್​ ಬಳಕೆಯನ್ನೇ ಮಗ್ನರಾಗಿರುತ್ತಿದ್ದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರದ ಈ ನಡೆಗೆ ಮೆಚ್ಚುಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ಮಕ್ಕಳನ್ನು ವಿಚಾರಿಸಿದಾಗ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Karnataka Budget 2026:16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

Source link

ಬೆಂಗಳೂರಿನಲ್ಲಿ ಸೈನ್ಸ್ ಸಿಟಿ, ಎಲ್ಲಾ ಜಿಲ್ಲೆಗಳಲ್ಲಿ ಸೈನ್ಸ್ ಸೆಂಟರ್, 11 ಜಿಲ್ಲೆಗಳಲ್ಲಿ ಪ್ಲಾನಿಟೇರಿಯಂ ಸ್ಥಾಪನೆ: ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 6: ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ (Bio Technology), ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜಿಸಲು ಬಜೆಟ್​ನಲ್ಲಿ ಸಿದ್ದರಾಮಯ್ಯ (Siddaramaiah) ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಹೊಸ ಸೈನ್ಸ್ ಸಿಟಿ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇಂದು ನಾಲ್ಕೂವರೆ ಲಕ್ಷ ಕೋಟಿ ರೂ ಮೊತ್ತದ ದಾಖಲೆಯ ಬಜೆಟ್ (Karnataka Budget 2026) ಮಂಡಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ‘ವಿಜ್ಞಾನ ನಗರ’ (Science City) ಸ್ಥಾಪಿಸಲಾಗುವುದು ಎಂದಿದ್ದಾರೆ. ಈ ಸೈನ್ಸ್ ಸಿಟಿಯನ್ನು 233 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳೀಸಿದ್ದಾರೆ.

ಇದಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು (ಪ್ಲಾನಿಟೋರಿಯಂ) ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 4 ಕೋಟಿ ರೂಗಳಂತೆ ಒಟ್ಟು 24 ಕೋಟಿ ರೂ ವೆಚ್ಚದಲ್ಲಿ ಆರು ತಾರಾಲಯಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿವಿ, ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ

ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿ: ಸಿದ್ದರಾಮಯ್ಯ

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯದ ಟೆಕ್ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಕೊಡಲು ಈ ಕೆಳಗಿನ ಕೆಲ ಕ್ರಮಗಳನ್ನು ಪ್ರಕಟಿಸಿದ್ದಾರೆ.

  • KDEM ಸಂಸ್ಥೆಯ ಸಹಯೋಗದೊಂದಿಗೆ “Super 100 Industry-Academia Adoption Program” ಅನ್ನು ಜಾರಿಗೊಳಿಸಲಾಗುವುದು.
  • ಕೆ–ಕಾಂಬಿನೇಟರ್ (K-Combinator) ಮೂಲಕ ನವೋದ್ಯಮಿಗಳಿಗೆ ವೇಗವರ್ಧಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
  • ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಉದ್ಯಮಿಗಳಿಗೆ Incubation ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ʻಲೀಪ್‌ ಲ್ಯಾಬ್ಸ್‌ʼ ಗಳನ್ನು ಸ್ಥಾಪಿಸಲಾಗುವುದು.
  • ಜಾಗತಿಕ ಟೆಕ್ನಾಲಜಿ ಕಂಪನಿಗಳಿಂದ ರಾಜ್ಯದಲ್ಲಿ 45,000 ಕೋಟಿ ರೂಗಳ ಹೂಡಿಕೆ ಆಗಲಿದೆ.
  • GCC ನೀತಿಯಡಿಯಲ್ಲಿ 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ GCCಗಳನ್ನು ಸ್ಥಾಪಿಸುವ ಗುರಿ ಇದೆ. ಈಗಾಗಲೇ ರಾಜ್ಯದಲ್ಲಿ 550ಕ್ಕೂ ಅಧಿಕ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಿವೆ.
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಕ್ರಮ.
  • ಐಐಐಟಿ ಬೆಂಗಳೂರು ಮತ್ತು ನಿಮ್ಹಾನ್ಸ್ ಸಹಭಾಗಿತ್ವದಲ್ಲಿ ನರಶಸ್ತ್ರಚಿಕಿತ್ಸೆಗೆ ಪೂರಕವಾಗಲು ಸುಧಾರಿತ ಸರ್ಜಿಕಲ್ ಸಹಾಯಕ ರೋಬೋಗಳನ್ನು ತಯಾರಿಸಲಾಗುವುದು.
  • ಕ್ವಾಂಟಂ ಕ್ಷೇತ್ರಕ್ಕೆ ಮಾನವ ಸಂಪನ್ಮೂಲ ಪೂರೈಸಲು ಕರ್ನಾಟಕ ಕ್ವಾಂಟಂ ರೋಡ್​ಮ್ಯಾಪ್​ನ ಪ್ರಥಮ ಹಂತದ ಅನುಷ್ಠಾನಕ್ಕೆ ಕ್ರಮ
  • ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ನಿರ್ಮಾಣ ಮಾಡಲಾಗುತ್ತದೆ. 11 ಜಿಲ್ಲೆಗಳಲ್ಲಿ ತಾರಾಲಯಗಳನ್ನೂ ನಿರ್ಮಿಸಲಾಗುತ್ತದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link