ತುಮಕೂರು: 2 ತಿಂಗಳು ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಸಾವು: ಸಾವಿನ ಸುತ್ತ ಅನುಮಾನದ ಹುತ್ತ – Kannada News | Tumakuru: Newlywed Man dead Body Found; Confusion behind death
ತುಮಕೂರು, ಮಾರ್ಚ್ 05: ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿ ಕೊಲೆಯಾದ (murder) ಸ್ಥಿತಿಯಲ್ಲಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟ ಒಂದರಲ್ಲಿ ನಡೆದಿದೆ. ಮನ್ಸೂರ್ (32) ಕೊಲೆಯಾದ ವ್ಯಕ್ತಿ. ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮನ್ಸೂರ್ ಸಾವಿನ ಹಿಂದೆ ಅನುಮಾನಗಳು ಹುಟ್ಟಿಕೊಂಡಿದ್ದು, ಸದ್ಯ ತಿಪಟೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ. ನಡೆದಿದ್ದೇನು? ತಿಪಟೂರು ನಗರದ ಆರ್ ಸಿಸಿ ಟ್ಯಾಂಕ್ ರಸ್ತೆಯ 3ನೇ ಕ್ರಾಸ್ನ ನಿವಾಸಿ ಮನ್ಸೂರ್, ಗುಜುರಿ…