ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಈ ಹಣ್ಣುಗಳನ್ನು ಸೇವನೆ ಮಾಡಲೇಬೇಕು – Kannada News | These are the fruits that keep the body cool on hot summer
ಮಾರ್ಚ್ ತಿಂಗಳ ಆರಂಭದೊಂದಿಗೆ ಬೇಸಿಗೆಯೂ (summer) ಶುರುವಾಗಿದೆ. ಈ ಸುಡು ಬೇಸಿಗೆಯಲ್ಲಿ ವಾತಾವರಣ ಮಾತ್ರವಲ್ಲ ದೇಹ ಕೂಡ ತುಂಬಾನೆ ಬಿಸಿಯಾಗಿರುತ್ತದೆ. ಇನ್ನೂ ತಾಪಮಾನ ಹೆಚ್ಚಾದಂತೆ ನಿರ್ಜಲೀಕರಣ, ಶಾಖದ ಹೊಡೆತ ಮತ್ತು ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಹೀಗಿರುವಾಗ ದೇಹವನ್ನು ತಂಪಾಗಿರಿಸಲು ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರ ಜೊತೆಗೆ ಈ ಬೇಸಿಗೆಯಲ್ಲಿ ಕೆಲವೊಂದಷ್ಟು ಹಣ್ಣುಗಳನ್ನು ಸೇವನೆ ಮಾಡಬೇಕು. ಇದು ನಿರ್ಜಲೀಕರಣವನ್ನು ತಡೆಯುವುದು ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ…