All posts by nagaraj11081993

ಹಣ ಡ್ರಾ ಮಾಡಿಕೊಡಿ ಅಂದ್ರೆ ATM ಕಾರ್ಡ್ ಬದಲಿಸಿ 60 ಸಾವಿರ ಎಗರಿಸಿದ್ರು! – Kannada News | Miscreant cheats man of Rs 60 thousand in the guise of helping withdraw cash at ATM In Raichur

ರಾಯಚೂರು, (ಮಾರ್ಚ್ 04): ಎಟಿಎಂ ಪಿನ್ (ಪಾಸ್​ವರ್ಡ್​​) ಯಾರೊಂದಿಗೆ ಹಂಚಿಕೊಳ್ಳಬೇಡಿ ಎಂದು ಪೊಲೀಸರು, ಬ್ಯಾಂಕಿನವರು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದ್ರೆ, ಹಳ್ಳಿ ಕಡೆಗಳಲ್ಲಿ ಏನು ತಳಿಯದ ಜನ ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಬೇರೆಯವರ ಮೊರೆ ಹೋಗುತ್ತಾರೆ. ಅದರಂತೆ ರಾಯಚೂರಿನಲ್ಲಿ ವ್ಯಕ್ತಿಯೋರ್ವ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಲು ಬೇರೆಯವನ ಸಹಾಯಕ ಪಡೆದುಕೊಂಡು 64,000 ಕಳೆದುಕೊಂಡಿದ್ದಾರೆ. ಹೌದು…ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್​​ನಲ್ಲಿ ಫೆಬ್ರವರಿ 26ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

ಫೆಬ್ರವರಿ 26ರಂದು ಭೀಮಪ್ಪ ಎನ್ನುವ ವ್ಯಕ್ತಿ ಎಟಿಎಂನಿಂದ ಹಣ ಡ್ರಾಮಾಡಿಕೊಳ್ಳಲು ಹೋಗಿದ್ದಾನೆ. ಆದ್ರೆ, ಗೊತ್ತಾಗಿದ್ದಾಗ ಬೇರೊಬ್ಬರಿಗೆ ಹಣ ತೆಗೆದುಕೊಡಲು ಎಟಿಎಂ ಪಿನ್ ಸಹ ಹೇಳಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, ಭೀಮಪ್ಪನಿಗೆ ಬದಲಿಗೆ ಎಟಿಎಂ ಕಾರ್ಡ್ ನೀಡಿ ನಂತರ ಬೇರೆ ಕಡೆ ಹೋಗಿ ಭೀಮಪ್ಪನ ಎಟಿಎಂನಿಂದ 64,000 ಹಣ ಡ್ರಾ ಮಾಡಿಕೊಂಡಿದ್ದಾನೆ. ಬಳಿಕ ಬ್ಯಾಂಕ್​ಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಿದಾಗ ಮೋಸಹೋಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಭೀಮಪ್ಪ ನೀಡಿದ ದೂರಿನ ಅನ್ವಯ ಮುದಗಲ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸಿದ್ದಾರೆ.

Source link

Video: ಕೆಂಡ ಹಾಯುವಾಗ ಕಾಲ್ತುಳಿತ, ಒಬ್ಬರನ್ನೊಬ್ಬರು ತಳ್ಳಿಕೊಂಡು ಕೆಂಡದ ಮೇಲೆ ಬಿದ್ದ ಭಕ್ತರು – Kannada News | Stampede Erupts During Fire Ritual at Temple Festival in Nalgonda

ನಲ್ಗೊಂಡ, ಮಾರ್ಚ್​ 04: ಹಲವು ದೇವಸ್ಥಾನಗಳ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕೆಂಡ ಹಾಯುವುದು ಕೂಡ ಪ್ರಮುಖವಾಗಿರುತ್ತದೆ. ತೆಲಂಗಾಣದ ನಲ್ಗೊಂಡದ ವೇಮುಲಪಲ್ಲಿ ಮಂಡಲದ ಅಮನಗಲ್ಲು ಶ್ರೀ ಪಾರ್ವತಿ ರಾಮಲಿಂಗೇಶ್ವರ ಸ್ವಾಮಿ ಉತ್ಸವದ ಸಂದರ್ಭದಲ್ಲಿ ಅವಘಡ ಅಂಭವಿಸಿದೆ. ಭಕ್ತರು ಕೆಂಡ ಹಾಯಲು ಹೋದಾಗ ಅಲ್ಲಿ ಕಾಲ್ತುಳಿದ ಸಂಭವಿಸಿದ ಕಾರಣ ಒಬ್ಬರನ್ನೊಬ್ಬರು ತಳ್ಳಿಕೊಂಡು ಕೆಂಡದ ಮೇಲೆಯೇ ಬಿದ್ದಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

5+3+3 ಸೂತ್ರದಲ್ಲಿ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ – Kannada News | India Playing XI For Semi final vs England

T20 World Cup 2026: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಭಾರತ (India) ಮತ್ತು ಇಂಗ್ಲೆಂಡ್ (England) ಮುಖಾಮುಖಿಯಾಗಲಿದೆ. ಗುರುವಾರ (ಮಾ.5) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದ ತಂಡ ಫೈನಲ್​ಗೇರಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ.

ಇದಕ್ಕಾಗಿ ಟೀಮ್ ಇಂಡಿಯಾ  5+3+3 ಸೂತ್ರದಲ್ಲಿ ಪ್ಲೇಯಿಂಗ್ ಇಲೆವೆನ್​ ಸಂಯೋಜಿಸಲಿದೆ. ಅಂದರೆ ಐವರು ಪೂರ್ಣ ಪ್ರಮಾಣದ ಬ್ಯಾಟರ್​ಗಳು, ಮೂವರು ಆಲ್​ರೌಂಡರ್​ಗಳು ಹಾಗೂ ಮೂವರು ಬೌಲರ್​ಗಳನ್ನು ಕಣಕ್ಕಿಳಿಸಲಿದ್ದಾರೆ. ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿಯಲಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಮತ್ತು ಐದನೇ ಕ್ರಮಾಂಕಗಳಲ್ಲಿ ಸೂರ್ಯಕುಮಾರ್ ಯಾದವ್  ಹಾಗೂ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ.

ಮತ್ತೊಂದೆಡೆ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್​ಗೆ ಸ್ಥಾನ ಲಭಿಸಲಿದೆ. ಇನ್ನು ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಕಾಣಿಸಿಕೊಳ್ಳುವುದು ಖಚಿತ. ಹಾಗೆಯೇ ಜಸ್​ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ವೇಗಿಗಳಾಗಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಇರಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  • ಅಭಿಷೇಕ್ ಶರ್ಮಾ
  • ಇಶಾನ್ ಕಿಶನ್
  • ಸೂರ್ಯಕುಮಾರ್ ಯಾದವ್ (ನಾಯಕ)
  • ತಿಲಕ್ ವರ್ಮಾ
  • ಹಾರ್ದಿಕ್ ಪಾಂಡ್ಯ
  • ಶಿವಂ ದುಬೆ
  • ಅಕ್ಷರ್ ಪಟೇಲ್
  • ವರುಣ್ ಚಕ್ರವರ್ತಿ
  • ಜಸ್​ಪ್ರೀತ್ ಬುಮ್ರಾ
  • ಅರ್ಷದೀಪ್ ಸಿಂಗ್.

ಇದನ್ನೂ ಓದಿ: ಟಿ20 ವಿಶ್ವಕಪ್​ ನಡುವೆ ಊರಿಗೆ ತೆರಳಿ ಸಿಕ್ಕಾಕೊಂಡ ನ್ಯೂಝಿಲೆಂಡ್ ಆಟಗಾರ

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ಗಾಂಜಾ ಅಮಲಿನಲ್ಲಿ ಅಟ್ಟಹಾಸ: ಹೊಸ ಕಾರಿನ ಗ್ಲಾಸ್​​ ಒಡೆದು ಕಿಡಿಗೇಡಿಗಳಿಂದ ವಿಕೃತಿ – Kannada News | Drug Influenced Miscreants Vandalise Car in Shivamogga, Case Registered

ಶಿವಮೊಗ್ಗ, ಮಾರ್ಚ್​ 04: ನಗರದಲ್ಲಿ ಗಾಂಜಾ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದ್ದು, ಮಾದಕ ವಸ್ತುವಿನ ಅಮಲಿನಲ್ಲಿ ದುಷ್ಕರ್ಮಿಗಳು ಹೊಸ ಕಾರನ್ನು ಜಖಂಗೊಳಿಸಿರುವ ಘಟನೆ ಶರಾವತಿ ನಗರದ ಹಂದಿಜೋಗಿ ಕ್ಯಾಂಪ್‌ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್‌ಗಳನ್ನು ಪುಡಿಪುಡಿ ಮಾಡಿದ್ದಾರೆ. ಕಾರಿನ ಮಾಲೀಕ ಸುರೇಶ್ ಅವರು ಕೇವಲ ನಾಲ್ಕು ತಿಂಗಳ ಹಿಂದೆ ಈ ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಗಾಂಜಾ ಸೇದುವುದು, ಕುಡಿಯುವುದು, ಗಲಾಟೆ ಮಾಡುವುದು, ಹಾಗೂ ಜನರಿಗೆ ತೊಂದರೆ ನೀಡುವುದು ಸಾಮಾನ್ಯವಾಗಿದೆ. ಬೈಕ್‌ಗಳನ್ನು ಜಖಂಗೊಳಿಸುವುದು, ಪೆಟ್ರೋಲ್ ಕಳವು ಮಾಡುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಪುಂಡರ ಹಾವಳಿಯಿಂದ ಬೇಸತ್ತ ಸ್ಥಳೀಯ ನಿವಾಸಿಗಳು ತಮಗೂ ಮತ್ತು ತಮ್ಮ ಆಸ್ತಿಪಾಸ್ತಿಗಳಿಗೂ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಇಂದು ಕಾರುಗಳಿಗೆ ಹಾನಿ ಮಾಡಿರುವ ಇವರು ನಾಳೆ ತಮ್ಮ ಕುಟುಂಬಗಳಿಗೂ ತೊಂದರೆ ನೀಡಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಿಂದಿಯಲ್ಲಿ ರಾಯನ ಪಾತ್ರಕ್ಕೆ ಯಶ್​​ನಿಂದಲೇ ಡಬ್ಬಿಂಗ್? ಮುಂಬೈ ಸ್ಟುಡಿಯೋದಲ್ಲಿ ಯಶ್ ಇರೋದೇಕೆ? – Kannada News | Yash Oversees Toxic Hindi Dubbing: Sachin Gole Returns as KGF Voice Artist

ರಾಕಿಂಗ್ ಸ್ಟಾರ್ ಯಶ್ (Yash) ಅವರು ಸದ್ಯ ‘ಟಾಕ್ಸಿಕ್’ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಜವಾಬ್ದಾರಿಗಳನ್ನು ಅವರು ಹೆಗಲಮೇಲೆ ಹಾಕಿಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್​ ದಾಸ್ ಜೊತೆ ಸೇರಿ, ಜವಾಬ್ದಾರಿ ಹಂಚಿಕೊಂಡು ಯಶ್ . ಈಗ ‘ಟಾಕ್ಸಿಕ್’ ಚಿತ್ರದ ಹಿಂದಿ ಡಬ್ಬಿಂಗ್ ನಡೆಯುತ್ತಿದೆ. ಹಾಗಾದರೆ ಯಶ್ ಅವರೇ ಹಿಂದಿಗೂ ಡಬ್ ಮಾಡುತ್ತಿದ್ದಾರಾ? ಯಶ್ ಮುಂಬೈ ಡಬ್ಬಿಂಗ್ ಸ್ಟುಡಿಯೋದಲ್ಲಿ ಕುಳಿತಿದ್ದು ಏಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ‘ಟಾಕ್ಸಿಕ್’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ಅವರು ಕನ್ನಡ ವರ್ಷನ್​​ಗೆ ಡಬ್ಬಿಂಗ್ ಮುಗಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರು ಹಿಂದಿ ವರ್ಷನ್​ ಕಡೆ ಗಮನ ಹರಿಸುತ್ತಿದ್ದಾರೆ. ಈ ಚಿತ್ರ ಸದ್ಯ ತನ್ನ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿಕೊಂಡಿದೆ. ಸದ್ಯ ಯಶ್ ಅವರು ಹಿಂದಿ ವರ್ಷನ್ ಅನ್ನು ಉತ್ತಮವಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಈ ಕಾರಣದಿಂದ ಅವರು ಡಬ್ಬಿಂಗ್​​ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಹಿಂದಿ ವರ್ಷನ್​​ಗೆ ಯಶ್ ಡಬ್ಬಿಂಗ್ ಮಾಡುತ್ತಿಲ್ಲ. ಬದಲಿಗೆ ಹಿರಿಯ ಕಲಾವಿದ ಸಚಿನ್ ಗೋಲೆ ಅವರು ಧ್ವನಿ ನೀಡುತ್ತಿದ್ದಾರೆ. ಅವರು ಈ ಮೊದಲು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದ ರಾಕಿ ಪಾತ್ರಕ್ಕೆ ವಾಯ್ಸ್ ಕೊಟ್ಟಿದ್ದರು. ‘ಕೆಜಿಎಫ್ 2’ ರಿಲೀಸ್ ವೇಳೆ ಯಶ್​​ಗೆ ಹಿಂದಿ ವರ್ಷನ್​ಗೆ ಧ್ವನಿ ಕೊಡೋ ಬಗ್ಗೆ ಕೋರಿಕೆ ಬಂದಿತ್ತು. ಆಗ ಯಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದರು.

ಹಿಂದಿ ಪ್ರೇಕ್ಷಕರಿಗೆ ಯಶ್ ಎಂದಾಗ ಸಚಿನ್ ಧ್ವನಿಯೇ ನೆನಪಾಗುತ್ತದೆ. ಹೀಗಾಗಿ, ಧ್ವನಿ ಬದಲಿಸಿದರೆ ಪ್ರೇಕ್ಷಕರು ಅದನ್ನು ಒಪ್ಪಿಕೊಳ್ಳದೆ ಇರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸಚಿನ್ ಅವರೇ ಧ್ವನಿ ನೀಡಲಿ ಎಂದು ಯಶ್ ಹೇಳಿದ್ದರು. ಈ ಕಾರಣದಿಂದ ‘ಟಾಕ್ಸಿಕ್’ ಚಿತ್ರಕ್ಕೂ ಯಶ್ ಅವರನ್ನೇ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಯಶ್ ಅವರ ಈ ಆಲೋಚನೆಯೇ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ..

ಸದ್ಯ ಯಶ್ ಅವರು ಮುಂಬೈನ ಡಬ್ಬಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಸಚಿನ್ ಅವರಿಗೆ ಡೈಲಾಗ್ ಡೆಲಿವರಿಗೆ, ಡೈಲಾಗ್​​ ಅಲ್ಲಿ ಭಾವನೆ ತುಂಬಲು ಸಹಕಾರಿ ಆಗುತ್ತಿದ್ದಾರೆ. ಇದು ಅವರ ಸಿನಿಮಾ ಪ್ರೇಮವನ್ನು ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್​ಸಿ: ವಿರೋಧದ ನಡುವೆ ವಿದ್ಯುತ್​​ ದರ ಏರಿಕೆ – Kannada News | Karnataka Power Hike 2025 26: KERC Raises Commercial & Industrial Electricity Rates

ಬೆಂಗಳೂರು, ಮಾರ್ಚ್​​ 04: ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಾಕ್​​ ಕೊಟ್ಟಿದೆ. 2025-26ರ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಈ ನಿರ್ಧಾರ ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಗರಂ ಆಗಿದ್ದಾರೆ. ದರ ಏರಿಕೆ ಸಂಬಂಧ ಫೆಬ್ರವರಿ 20ರಂದು ಸಾರ್ವಜನಿಕರ ಜೊತೆ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಲ್ಲವೆಂದು ಕೆಇಆರ್​ಸಿ ಭರವಸೆ ನೀಡಿತ್ತು. ಆದರೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಯುಟರ್ನ್​​ ಹೊಡೆದಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಯೂನಿಟ್​​ಗೆ ಎಷ್ಟು ದರ ಏರಿಕೆ?

  • LT-3(A) ವಾಣಿಜ್ಯ ಬಳಕೆ ವಿದ್ಯುತ್ ದರ ₹7ರಿಂದ ₹7.10ಕ್ಕೆ ಏರಿಕೆ
  • LT-5 ಕೈಗಾರಿಕೆಗೆ ಬಳಸುವ ವಿದ್ಯುತ್ ದರ ₹4.50ನಿಂದ ₹5.20ಕ್ಕೆ ಏರಿಕೆ
  • HT-2(A) ಮೆಟ್ರೋ, ರೈಲ್ವೆ & ಇತರೆ ವಿದ್ಯುತ್ ದರ ₹6.60ನಿಂದ 6.70ಕ್ಕೆ ಏರಿಕೆ
  • HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್​ಗೆ ಬಳಸು ವಿದ್ಯುತ್ ದರ 5.95 ರೂ.ನಿಂದ 6.90 ರೂ.ಗೆ ಏರಿಕೆ

ಇದನ್ನೂ ಓದಿ: ಕೆಪಿಎಸ್​ಸಿ ವಿರುದ್ಧ ಮತ್ತೆ ಅಕ್ರಮ ಆರೋಪ; ಧ್ವನಿ ಎತ್ತಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಪ್ರಹ್ಲಾದ್ ಜೋಶಿ ಕಿಡಿ

KERCಯಿಂದ ವಾಣಿಜ್ಯ, ಕೈಗಾರಿಕೆ ಬಳಕೆ ವಿದ್ಯುತ್ ದರ ಹೆಚ್ಚಳ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ದರ ಏರಿಸುವುದರಲ್ಲಿ ರಾಜ್ಯ ಸರ್ಕಾರ ಹಾಫ್​ ಸೆಂಚುರಿ ಬಾರಿಸಿದೆ. ಇದುವರೆಗೆ 50ಕ್ಕೂ ಹೆಚ್ಚು ವಸ್ತುಗಳು, ಸೇವೆಗಳ ದರ ಹೆಚ್ಚಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಇದು ಕಾಂಗ್ರೆಸ್ ದುರಾಡಳಿತದ ಪರಮಾವಧಿಯಾಗಿದೆ. ಕೈಗಾರಿಕೆಗಳು ಕರ್ನಾಟಕ ಬಿಟ್ಟೋಗುವಂತೆ ಈ ರೀತಿ ಮಾಡ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ವಿರೋಧಿಯಾಗಿದ್ದು, ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು, ವಿತ್ತೀಯ ಶಿಸ್ತು ಮಾಯವಾಗಿದೆ. ಕರ್ನಾಟಕ ರಾಜ್ಯದ ಒಟ್ಟು ಸಾಲ 8.4 ಲಕ್ಷ ಕೋಟಿಗೆ ತಲುಪಿದೆ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:35 pm, Wed, 4 March 26

Source link

ಕೆಪಿಎಸ್​ಸಿ ವಿರುದ್ಧ ಮತ್ತೆ ಅಕ್ರಮ ಆರೋಪ: ಬಿಜೆಪಿ ಮುಖಂಡ ಭಾಸ್ಕರ್ ರಾವ್ ಕಿಡಿ – Kannada News | BJP leader Bhaskar Rao spark on KPSC accuses of illegality again

ಬೆಂಗಳೂರು, ಮಾರ್ಚ್​ 04: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ ಕೇಳಿಬಂದಿದೆ. ಕೆಪಿಎಸ್​ಸಿಯ ಕೆಎಎಸ್​​ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ (Bhaskar Rao)​​ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಜವಾಬ್ದಾರಿಯುತ ಸಂಸ್ಥೆಯ ನಂಬಿಕೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆಂದು ಕಿಡಿಕಾರಿದ್ದಾರೆ.

ಕೆಪಿಎಸ್​ಸಿ ಹಗರಣದ ಸುದ್ದಿಗಳು ತೀವ್ರ ಕಳವಳಕಾರಿ ಎಂದ ಭಾಸ್ಕರ್ ರಾವ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಪೋಸ್ಟ್ ಮಾಡಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಮತ್ತೊಂದು ಅಕ್ರಮದ ಸುದ್ದಿ ಹೊರಬಿದ್ದಿರುವುದು ಕೇವಲ ಆತಂಕಕಾರಿಯಷ್ಟೇ ಅಲ್ಲ, ಇದು ನಮ್ಮ ಆಡಳಿತ ವ್ಯವಸ್ಥೆಯ ನೈತಿಕ ಅಧಃಪತನದ ಸಂಕೇತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಅರ್ಹತೆ ಮತ್ತು ಪ್ರತಿಭೆಯನ್ನು ಒರೆಗೆ ಹಚ್ಚುವ ಪವಿತ್ರ ಪ್ರಕ್ರಿಯೆಯಾಗಬೇಕು. ಆದರೆ, ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿನ ಅಕ್ರಮಗಳು ಮತ್ತು ನೇಮಕಾತಿ ಭ್ರಷ್ಟಾಚಾರಗಳು, ವ್ಯವಸ್ಥೆಯ ಮೇಲಿನ ಯುವಜನತೆಯ ನಂಬಿಕೆಯನ್ನು ಬುಡಮೇಲು ಮಾಡುತ್ತಿವೆ. ಇದು ಕೇವಲ ಒಂದು ಹುದ್ದೆಯ ಕಳ್ಳತನವಲ್ಲ, ಬದಲಾಗಿ ನಾಡಿನ ಭವಿಷ್ಯದ ಆಡಳಿತ ಯಂತ್ರದ ಮೇಲೆ ನಡೆಯುತ್ತಿರುವ ಪ್ರಹಾರವಾಗಿದೆ ಎಂದಿದ್ದಾರೆ.

ಭಾಸ್ಕರ್ ರಾವ್ ಟ್ವೀಟ್​​

ಸಾಂವಿಧಾನಿಕ ಸಂಸ್ಥೆಯಾಗಿರುವ ಕೆಪಿಎಸ್ಸಿ, ತನ್ನ ಪಾವಿತ್ರ್ಯತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿರುವಂತೆ ಗೋಚರಿಸುತ್ತಿದೆ. ಒಂದು ಕಾಲದಲ್ಲಿ ಪ್ರತಿಭಾವಂತ ಯುವಕರು ಹೆಮ್ಮೆಯಿಂದ ನೋಡುತ್ತಿದ್ದ ಈ ಸಂಸ್ಥೆ, ಇಂದು ಆಡಳಿತಾತ್ಮಕ ಲೋಪಗಳ ಆರೋಪದ ನೆರಳಿನಲ್ಲಿ ನರಳುತ್ತಿದೆ. ಪರೀಕ್ಷಾ ಪ್ರಕ್ರಿಯೆಗಳಲ್ಲಿನ ಪಾರದರ್ಶಕತೆಯ ಕೊರತೆ, ತಂತ್ರಜ್ಞಾನದ ಸಮರ್ಪಕ ಅಳವಡಿಕೆಯಿಲ್ಲದಿರುವುದು ಮತ್ತು ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿನ ಅಸಹಾಯಕತೆ ಸಂಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಅರ್ಹರನ್ನು ಆಯ್ಕೆ ಮಾಡಬೇಕಾದ ವ್ಯವಸ್ಥೆಯೇ ಅನುಮಾನದ ಹುತ್ತವಾದರೆ, ರಾಜ್ಯದ ಆಡಳಿತದಲ್ಲಿ ದಕ್ಷತೆಯನ್ನು ನಿರೀಕ್ಷಿಸುವುದು ಹೇಗೆ ಎಂಬುದು ಬೌದ್ಧಿಕ ವಲಯದ ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ

ಈ ಸಾಲು ಸಾಲು ಅಕ್ರಮಗಳಿಗೆ ಕೇವಲ ಕೆಪಿಎಸ್ಸಿ ಮಾತ್ರವಲ್ಲ, ಆಡಳಿತ ಯಂತ್ರವನ್ನು ನಿಯಂತ್ರಿಸುವ ಸರ್ಕಾರಗಳ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಈ ಅಕ್ರಮಗಳ ತನಿಖೆಗಳು ಕೇವಲ ತಾತ್ಕಾಲಿಕ ಶಮನದ ತಂತ್ರಗಳಾಗುತ್ತಿವೆಯೇ ಹೊರತು, ವ್ಯವಸ್ಥೆಯ ಶಾಶ್ವತ ಶುದ್ಧೀಕರಣಕ್ಕೆ ದಾರಿಮಾಡಿಕೊಡುತ್ತಿಲ್ಲ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಹೊಸ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಮತ್ತು ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಪರೋಕ್ಷವಾಗಿ ಇಂತಹ ಅಕ್ರಮ ಜಾಲಗಳಿಗೆ ರಕ್ಷಣಾ ಕವಚವನ್ನು ಒದಗಿಸುತ್ತಿದೆ.
ಈ ಸಾಂಸ್ಥಿಕ ವೈಫಲ್ಯದ ಅತಿ ದೊಡ್ಡ ಬಲಿಪಶುಗಳೆಂದರೆ ಹಗಲಿರುಳು ಎನ್ನದೆ, ವರ್ಷಾನುಗಟ್ಟಲೆ ಓದಿ ಪರೀಕ್ಷೆ ಬರೆಯುವ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು. ತಮ್ಮ ಯೌವನದ ಅಮೂಲ್ಯ ವರ್ಷಗಳನ್ನು ಸಿದ್ಧತೆಗಾಗಿ ಮುಡಿಪಾಗಿಡುವ ಈ ಯುವಜನತೆಗೆ, ಇಂತಹ ಅಕ್ರಮದ ಸುದ್ದಿಗಳು ತೀವ್ರ ಮಾನಸಿಕ ಆಘಾತವನ್ನು ನೀಡುತ್ತವೆ. ಹಣ ಮತ್ತು ಪ್ರಭಾವವಿದ್ದವರಿಗೆ ಮಾತ್ರ ಅವಕಾಶ ಎಂಬ ಅಲಿಖಿತ ನಿಯಮ ಸೃಷ್ಟಿಯಾದರೆ, ಪ್ರತಿಭೆಗೆ ಬೆಲೆ ಎಲ್ಲಿದೆ? ಇದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ, ಯುವಸಮುದಾಯವನ್ನು ಹತಾಶೆಗೆ ತಳ್ಳಿ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುವ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದಿದ್ದಾರೆ.

ಇದು ಪರಸ್ಪರ ಕೆಸರೆರಚಾಟದ ಸಮಯವಲ್ಲ

ಇದು ಪರಸ್ಪರ ಕೆಸರೆರಚಾಟದ ಸಮಯವಲ್ಲ, ಬದಲಾಗಿ ಸಂಪೂರ್ಣ ನೇಮಕಾತಿ ವ್ಯವಸ್ಥೆಯನ್ನು ರಚನಾತ್ಮಕ ಸುಧಾರಣೆಗೆ ಒಳಪಡಿಸುವ ತುರ್ತು ಅಗತ್ಯವಿದೆ. ಕೆಪಿಎಸ್ಸಿಯನ್ನು ಯುಪಿಎಸ್ಸಿ ಮಾದರಿಯಲ್ಲಿ ಸಂಪೂರ್ಣವಾಗಿ ವೃತ್ತಿಪರಗೊಳಿಸುವುದು, ಪರೀಕ್ಷಾ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣಗೊಳಿಸಿ ಮಾನವ ಹಸ್ತಕ್ಷೇಪವನ್ನು ಕನಿಷ್ಠಗೊಳಿಸುವುದು ಇಂದಿನ ಜರೂರಾಗಿದೆ. ಸರ್ಕಾರವು ಕೇವಲ ತನಿಖೆಯ ಭರವಸೆ ನೀಡದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಒಂದು ನಿದರ್ಶನವನ್ನು ಸೃಷ್ಟಿಸಬೇಕು. ಇಲ್ಲವಾದಲ್ಲಿ, ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಪರಿಕಲ್ಪನೆ ಕೇವಲ ಭ್ರಮೆಯಾಗಿ ಉಳಿಯುತ್ತದೆ ಎಂದು ಭಾಸ್ಕರ್ ರಾವ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಸ್ಕ್ಯಾನಿಂಗ್ ಸೆಂಟರ್​ನ​ ಶೌಚಾಲಯದಲ್ಲಿ ಮಗುವಿಗೆ ಜನ್ಮಕೊಟ್ಟು ಕಸದ ಬುಟ್ಟಿಗೆ ಎಸೆದು ಹೋದ ಬಾಲಕಿ – Kannada News | Nagarkurnool: Minor Student Delivers Baby in Scan Center Restroom

ಹೈದರಾಬಾದ್, ಮಾರ್ಚ್​04: ಬಾಲಕಿಯೊಬ್ಬಳಿಗೆ ಹತ್ತನೇ ತರಗತಿ ಪರೀಕ್ಷೆ ಬರೆದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಸ್ಕ್ಯಾನಿಂಗ್ ಸೆಂಟರ್​ಗೆ ಹೋಗಿದ್ದಾಗ ಬಾತ್​​ರೂಮಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿಯೊಂದಿಗೆ ಸೇರಿ ಮಗುವನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದಾಳೆ.ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಬಾಲಕಿ ಯಾರನ್ನಾದರೂ ಪ್ರೇಮಿಸಿ ಮೋಸ ಹೋಗಿದ್ದಳೋ, ಅಥವಾ ಆಕೆಯ ಮೇಲೇನಾದರೂ ಲೈಂಗಿಕ ಕಿರುಕುಳ ನಡೆದಿತ್ತೇ ಎನ್ನುವ ಮಾಹಿತಿ ತಿಳಿದುಬಂದಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದೇಶ ಪ್ರವಾಸ ಮುಗಿಸಿ ಕಾಂಗ್ರೆಸ್​​ ಶಾಸಕರು ವಾಪಸ್: ಟ್ರಿಪ್​​ಗೆ ಹೋಗಿದ್ಯಾಕೆ? ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ! – Kannada News | Karnataka Congress MLAs Return: Foreign Trip Purpose Sparks Political Row

ವಿದೇಶ ಪ್ರವಾಸದಿಂದ ಕಾಂಗ್ರೆಸ್​​ ಸಾಸಕರು ವಾಪಸ್​

ದೇವನಹಳ್ಳಿ, ಮಾರ್ಚ್​​ 04: ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕಚ್ಚಾಟದ ನಡುವೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್​​ ಶಾಸಕರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ ಟ್ರಿಪ್ಗೆ ಹೋಗಿದ್ದೇಕೆ ಎಂಬ ವಿಚಾರದಲ್ಲಿ ಶಾಸಕರ ಹೇಳಿಕೆಯಲ್ಲೇ ಗೊಂದಲ ಕಂಡುಬಂದಿದೆ. ಇನ್ನು ಕೆಲ ಶಾಸಕರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಕಣ್ಣುತಪ್ಪಿಸಿ ತೆರಳಿದ್ದಾರೆ. ಹೆಚ್​.ಡಿ.ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್​ ಶಾಸಕರು ಮಧ್ಯರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದು, ಕ್ಯಾಮರಾ ಕಾಣುತ್ತಿದ್ದಂತೆ ಈ ಪೈಕಿ ಕೆಲ ಶಾಸಕರು ತರಾತುರಿಯಲ್ಲಿ ಕಾರು ಹತ್ತಿದ್ದಾರೆ.

ಇನ್ನು ಟೂರ್​​ ಬಗ್ಗೆ ಮಾತನಾಡಿರುವ ದೇವೇಂದ್ರಪ್ಪ, ಈ ಪ್ರವಾಸವು ಮುಖ್ಯವಾಗಿ ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರಗಳ ಕುರಿತು ಅಧ್ಯಯನ ನಡೆಸುವ ಉದ್ದೇಶವನ್ನು ಹೊಂದಿತ್ತು. ವಿದೇಶದಲ್ಲಿನ ಕೃಷಿ ಪದ್ಧತಿಗಳು ಮತ್ತು ಜನರಿಗೆ ಸಂಬಂಧಿಸಿದ ವ್ಯವಸ್ಥೆಗಳು, ಕಾನೂನುಗಳ ಅನುಷ್ಠಾನದಲ್ಲಿ ನಮ್ಮ ದೇಶಕ್ಕಿಂತ ಭಿನ್ನತೆಗಳಿವೆ. ಅಲ್ಲಿನ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರವಾಸವು ವೈಯಕ್ತಿಕ ಕಲಿಕೆಯ ಅನುಭವವಾಗಿದ್ದು, ಭವಿಷ್ಯದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಬೆಂಬಲಿಗರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದ ಅವರು, ವಿದೇಶದಲ್ಲಿ ಯಾವುದೇ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​​ ಆದ ಕಾಂಗ್ರೆಸ್​ ಶಾಸಕರು

‘ರಾಜಕೀಯ ಅಧ್ಯಯನ ಎಂಬುದು ಸುಳ್ಳು’


ಆದರೆ ಇವರ ಹೇಳಿಕೆ ವ್ಯತಿರಿಕ್ತವಾಗಿ ಮಾತನಾಡಿರುವ ಕಾಂಗ್ರೆಸ್ ಶಾಸಕ ಬಿ ಎಂ ನಾಗರಾಜ್, ತಮ್ಮ ಪ್ರವಾಸ ರಾಜಕೀಯ ಅಧ್ಯಯನಕ್ಕೆ ಮೀಸಲಾಗಿತ್ತು ಎಂಬ ಸುಳ್ಳು ಮಾಹಿತಿ . ನಾನು ಕುಟುಂಬದ ಜೊತೆ ಹೋಗಿದ್ದು. ಇದು ಕುಟುಂಬದ ಟ್ರಿಪ್. ತಮ್ಮ ಪ್ರವಾಸ ರಾಜಕೀಯ ಚರ್ಚೆ ಅಥವಾ ಅಧ್ಯಯನಕ್ಕೆ ಸಂಬಂಧಿಸಿಲ್ಲ ಎಂದಿದ್ದಾರೆ. ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. ಈ ನಡುವೆ ವಿದೇಶ ಪ್ರವಾಸದಿಂದ ಶಾಸಕರು ವಾಪಸಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್​​, ಏಕೆ ಹೋಗಿದ್ರು? ಯಾವ ಅಧ್ಯಯನಕ್ಕೆ ಹೋಗಿದ್ರು? ಎಂಬುದನ್ನ ಅವರ ಬಳಿಯೇ ಕೇಳಿ. ನಾನು ಹೇಳಿದ್ರೆ ಬರೀ ಊಹೆ ಆಗುತ್ತೆ. ಪ್ರವಾಸಕ್ಕೆ ಹೋದವರನ್ನೇ ಕೇಳಿದ್ರೆ ಸ್ಪಷ್ಟವಾಗಿ ಹೇಳುತ್ತಾರೆ ಎಂದಿದ್ದಾರೆ. ಒಟ್ಟಿನಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಶಾಸಕರ ಈ ಗೊಂದಲದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿರೋದಂತೂ ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ – Kannada News | Karna Serial Update Actor Nagabharana Exit from Serial

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕರ್ಣ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ರಮೇಶ್ ಪಾತ್ರ ಮಾಡುತ್ತಿದ್ದ ನಾಗಾಭರಣ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈ ಸ್ಥಾನಕ್ಕೆ ಹಿರಿಯ ನಟ ಅಭಿಜಿತ್ ಆಗಮಿಸಿದ್ದಾರೆ. ಇನ್ನುಮುಂದೆ ಕರ್ಣನ ಪಾತ್ರದಲ್ಲಿ ಅಭಿಜಿತ್ ಅವರೇ ಮುಂದುವರಿಯಲಿದ್ದಾರೆ. ಈ ವಿಷಯವನ್ನು ಜೀ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ರಿಲೀಸ್ ಆಗಿರೋ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link