ಅಸಭ್ಯವಾಗಿ ನಟಿಯರ ಫೋಟೋ, ವಿಡಿಯೋ ತೆಗೆದಿದ್ದಕ್ಕೆ ಕನ್ನಡ ಚಿತ್ರರಂಗ ಗರಂ – Kannada News | Kannada Film Industry express displeasure over indecent photos and videos of actresses
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್, ಕಮೆಂಟ್ ಮತ್ತು ವೀವ್ಸ್ ಪಡೆಯುವ ಉದ್ದೇಶದಿಂದ ಜನರು ಇಲ್ಲಸಲ್ಲದ ಗಿಮಿಕ್ ಮಾಡುತ್ತಾರೆ. ಅದರಿಂದಾಗಿ ಕನ್ನಡ ಚಿತ್ರರಂಗದ (Kannada Film Industry) ನಟಿಯರಿಗೆ ತೊಂದರೆ ಆಗಿದೆ. ಸಿನಿಮಾ ಕಾರ್ಯಕ್ರಮಗಳನ್ನು ವರದಿ ಮಾಡಲು ಬಂದ ಕೆಲವರು ಅಸಭ್ಯ ರೀತಿಯಲ್ಲಿ ನಟಿಯರ ಫೋಟೋ ಮತ್ತು ವಿಡಿಯೋ ತೆಗೆದಿದ್ದಾರೆ. ಇದರಿಂದಾಗಿ ನಟಿಯರ ಗೌರವಕ್ಕೆ ಧಕ್ಕೆ ಉಂಟಾಗಿದೆ. ಈ ವರ್ತನೆಯ ವಿರುದ್ಧ ಕನ್ನಡ ಚಿತ್ರರಂಗದ ಹಲವು ಕಲಾವಿದರು ಗರಂ ಆಗಿದ್ದಾರೆ. ಸಪ್ತಮಿ ಗೌಡ (Sapthami Gowda), ಯುವ ರಾಜ್ಕುಮಾರ್, ರಮ್ಯಾ…