All posts by nagaraj11081993

ಗ್ರಹಣ ಸಮಯದಲ್ಲಿ ದೇವರ ದರ್ಶನದಲ್ಲಿ ಬದಲಾವಣೆ: ಧರ್ಮಸ್ಥಳ, ಮಲೆ ಮಹದೇಶ್ವರ ಬೆಟ್ಟ, ಮಂತ್ರಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ – Kannada News | March 3 Lunar Eclipse: Temple Timings and Darshan Updates in Karnataka

ಬೆಂಗಳೂರು, ಮಾ.2: ಮಾರ್ಚ್ 3ರಂದು ಚಂದ್ರ ಗ್ರಹಣದ ( Lunar Eclipse) ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ. 2026ರ ಮೊದಲು ಗ್ರಹಣ ಆಗಿರುವ ಕಾರಣ ಕೆಲವೊಂದು ದೇವಾಲಯಗಳಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಈ ಗ್ರಹಣದ ನಂತರ ಹಲವು ರಾಶಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಆಗಲಿದೆ ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ. ಇದೀಗ ಯಾವೆಲ್ಲ ದೇವಾಲಯದಲ್ಲಿ ಗ್ರಹಣ ಸಮಯದಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

ಬೇಲೂರು ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ನಾಳೆ ಬಂದ್:

ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿಯ ಬಾಗಿಲನ್ನು ನಾಳೆ (ಮಾರ್ಚ್ 3) ಗ್ರಹಣದ ಪ್ರಯುಕ್ತ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಗ್ರಹಣ ಕಾಲದ ಶುದ್ಧೀಕರಣ ಮತ್ತು ಸಂಪ್ರೋಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್​​ ಹೇಳಿದ್ದಾರೆ. ಮಾರ್ಚ್ 3ರ ಬೆಳಿಗ್ಗೆ 9 ಗಂಟೆಯೊಳಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಹಾಕಲಾಗುವುದು. ಗ್ರಹಣ ಮುಗಿದ ನಂತರ ಅಂದರೆ ರಾತ್ರಿ 7 ಗಂಟೆಯ ಬಳಿಕ ದೇವಾಲಯದಲ್ಲಿ ಆಲಯ ಅರ್ಚನೆ, ಅಭಿಷೇಕ ಮತ್ತು ಸಂಪ್ರೋಕ್ಷಣೆ ಕಾರ್ಯಗಳು ನಡೆಯಲಿವೆ. ನಂತರ ಮಹಾನೈವೇದ್ಯ ನೆರವೇರಿಸಲಾಗುವುದು. ನಾಳೆ ಕೇವಲ ಗರ್ಭಗುಡಿ ಮಾತ್ರ ಬಂದ್ ಆಗಿರಲಿದ್ದು, ಪ್ರವಾಸಿಗರು ದೇವಾಲಯದ ಹೊರಭಾಗದ ಶಿಲ್ಪಕಲೆಗಳನ್ನು ವೀಕ್ಷಿಸಲು ಅವಕಾಶವಿರುತ್ತದೆ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುವುದು.

ಬೆಂಗಳೂರಿನ ಪ್ರಮುಖ ದೇಗುಲಗಳು ನಾಳೆ ಬಂದ್!

ಈ ಬಾರಿಯ ಹೋಳಿ ಹಬ್ಬದಂದೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಬೆಂಗಳೂರಿನ ಬಹುತೇಕ ದೇವಾಲಯಗಳ ಬಾಗಿಲನ್ನು ನಾಳೆ (ಮಾರ್ಚ್ 3) ಮುಚ್ಚಲಾಗುತ್ತಿದೆ. ಪ್ರಮುಖವಾಗಿ ಐತಿಹಾಸಿಕ ಹಲಸೂರು ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ ಮಹಾಮಂಗಳಾರತಿಯ ನಂತರ, ಸರಿಯಾಗಿ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು. ಗ್ರಹಣ ಮೋಕ್ಷದ ನಂತರ ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದೆ. ಸೋಮೇಶ್ವರ ದೇವಾಲಯವು ವಿಸ್ತಾರವಾಗಿರುವುದರಿಂದ ಪುಣ್ಯಾಹವಾಚನ ಮತ್ತು ಸ್ವಚ್ಛತೆ ಕಾರ್ಯಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಸ್ವಚ್ಛತೆಯ ನಂತರ ರಾತ್ರಿ 9 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ತೆ ದೇಗುಲವನ್ನು ಕ್ಲೋಸ್ ಮಾಡಲಾಗುತ್ತದೆ. ಮೋಕ್ಷದ ನಂತರ (ನಾಳೆ ರಾತ್ರಿ) ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಾರ್ಚ್ 4ರ ಬುಧವಾರದಂದು ಎಂದಿನಂತೆ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಬಹುದಾಗಿದೆ. ರಾಜಧಾನಿಯ ಗವಿ ಗಂಗಾಧರೇಶ್ವರ, ಬನಶಂಕರಿ ಅಮ್ಮನವರ ದೇವಾಲಯ ಸೇರಿದಂತೆ ಇತರ ದೊಡ್ಡ ದೇಗುಲಗಳಲ್ಲೂ ಇದೇ ರೀತಿಯ ಸಮಯದ ಬದಲಾವಣೆ ಇರಲಿದೆ.

ಧರ್ಮಸ್ಥಳ: ನಾಳೆ ಚಂದ್ರಗ್ರಹಣ ಹಿನ್ನೆಲೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಮತ್ತು ಅನ್ನಪ್ರಸಾದದ ಸಮಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಕುರಿತು ದೇವಸ್ಥಾನದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ ಪೂಜೆಗಳೆಲ್ಲವೂ 1:30ರ ಒಳಗಾಗಿ ಮುಕ್ತಾಯಗೊಳ್ಳಲಿವೆ. ಮಧ್ಯಾಹ್ನ ದೇವಸ್ಥಾನ ಬಂದ್ ಆದ ನಂತರವೂ, ಅತಿಥಿ ಅಭ್ಯಾಗತರಿಗಾಗಿ ಮಧ್ಯಾಹ್ನ 2:00 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಗ್ರಹಣ ಮುಕ್ತಾಯದ ನಂತರ, ಅಂದರೆ ಸಂಜೆ 7:00 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿಯ ಶುದ್ಧೀಕರಣ ಮತ್ತು ಅಭಿಷೇಕದ ನಂತರ, ರಾತ್ರಿ 7:30ರ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ದೇವರ ದರ್ಶನ ಆರಂಭವಾದ ಬಳಿಕ ಎಂದಿನಂತೆ ರಾತ್ರಿಯ ಅನ್ನಪ್ರಸಾದ ವಿತರಣೆಯೂ ಪ್ರಾರಂಭವಾಗಲಿದೆ.

ಇದನ್ನೂ ಓದಿ: ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸುವ ಮುನ್ನ ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ

ಚಂದ್ರಗ್ರಹಣವಿದ್ದರೂ ರಾಯರ ದರ್ಶನಕ್ಕೆ ಇಲ್ಲ ನಿರ್ಬಂಧ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಗ್ರಹಣದ ಸಮಯದಲ್ಲಿ ರಾಯರ ದರ್ಶನ ಪಡೆಯಲು ಭಕ್ತರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.ಮಾರ್ಚ್ 3ರ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಭಕ್ತರು ಎಂದಿನಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಬಹುದಾಗಿದೆ. ಮಠದ ನಿಗದಿತ ಸಮಯದಂತೆ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಗ್ರಹಣದ ಅವಧಿಯಲ್ಲಿ ಶ್ರೀ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳು, ಹರಕೆ ಸೇವೆಗಳು ಅಥವಾ ಪರ್ವಕಾಲದ ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ.ಹಣದ ಪ್ರಯುಕ್ತ ರಾಯರ ಮೂಲ ಬೃಂದಾವನಕ್ಕೆ ಯಾವುದೇ ವಿಶೇಷ ಅಲಂಕಾರಗಳನ್ನು ಮಾಡಲಾಗುವುದಿಲ್ಲ. ಕೇವಲ ಜಲಾಭಿಷೇಕ ಮಾತ್ರ ನೆರವೇರಿಸಲಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಮಠದಲ್ಲಿ ಅಂದು ಪ್ರಸಾದದ (ಊಟದ) ವ್ಯವಸ್ಥೆ ಇರುವುದಿಲ್ಲ. ಕೇವಲ ತೀರ್ಥ ಪ್ರಸಾದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಗವಿ ಗಂಗಾಧರೇಶ್ವರ ಅರ್ಚಕರ ವಿಶೇಷ ಸೂಚನೆ!

ಹದಿನೈದು ದಿನಗಳ ಹಿಂದಷ್ಟೇ ಸಂಭವಿಸಿದ ಸೂರ್ಯಗ್ರಹಣದ ಬೆನ್ನಲ್ಲೇ ಈಗ ಹೋಳಿ ಮಾಸದ ಪೌರ್ಣಮಿಯಂದು ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಕುರಿತು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಭಕ್ತರಿಗೆ ಪ್ರಮುಖ ಎಚ್ಚರಿಕೆ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಹೋಳಿ ಮಾಸದ ಪೌರ್ಣಮಿಯಂದು ಬರುವ ಈ ಚಂದ್ರಗ್ರಹಣ ಅತ್ಯಂತ ವಿಶೇಷವಾಗಿದ್ದು, ನಭೋಮಂಡಲದಲ್ಲಿ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಬಾರಿ ಗ್ರಹಣವು ಸಿಂಹ ರಾಶಿಯಲ್ಲಿ ಸಂಭವಿಸುತ್ತಿದೆ. ಗ್ರಹಣವು ಅಲ್ಪ ಭಾಗ ಕಂಡರೂ ಸಹ ಅದರ ದೋಷ ಮತ್ತು ತೊಂದರೆಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಲಿವೆ ಎಂದು ಅರ್ಚಕರು ತಿಳಿಸಿದ್ದಾರೆ.ಗ್ರಹಣದಿಂದ ದೋಷವಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಪ್ರಕೃತಿ ಮತ್ತು ಮನುಷ್ಯರ ಮೇಲೆ ಇದು ಸೂಕ್ಷ್ಮ ಪರಿಣಾಮ ಬೀರಲಿದೆ.ಗ್ರಹಣ ಮುಕ್ತಾಯದ ನಂತರ, ಅಂದರೆ ಬುಧವಾರದಂದು ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿವನ ದರ್ಶನ ಪಡೆಯಬೇಕು. ಶಿವನಿಗೆ ಪ್ರಿಯವಾದ ಅಕ್ಕಿ, ಬೇಳೆ ಮತ್ತು ಎಣ್ಣೆಯನ್ನು ದಾನವಾಗಿ ನೀಡುವುದರಿಂದ ಗ್ರಹಣ ದೋಷದಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದ್ದಾರೆ. ಗ್ರಹಣದ ದಿನ ಗವಿ ಗಂಗಾಧರೇಶ್ವರನಿಗೆ ವಿಶೇಷ ಜಲದ ಅಭಿಷೇಕ ಇರಲಿದೆ. ಮಂಗಳವಾರ 9 ಗಂಟೆ ಬಳಿಕ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಬುಧವಾರ ಹೋಮ ಹವನ ಇರಲಿದೆ.

ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲು ಮುಚ್ಚಲ್ಲ;

ಬೆಂಗಳೂರಿನ ಐತಿಹಾಸಿಕ ಬಂಡೆ ಮಹಾಂಕಾಳಿ ದೇವಾಲಯದ ಬಾಗಿಲನ್ನು ಮುಚ್ಚದಿರಲು ನಿರ್ಧರಿಸಲಾಗಿದೆ. ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ, ಗ್ರಹಣದ ವೇಳೆಯೂ ತಾಯಿ ಮಹಾಂಕಾಳಿಯ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಹುಣ್ಣಿಮೆ ಮತ್ತು ಚಂದ್ರಗ್ರಹಣವಿರುವುದರಿಂದ ಬೆಳಿಗ್ಗೆ 6:00 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ರಾತ್ರಿ 9:00 ಗಂಟೆಯವರೆಗೆ ಸತತವಾಗಿ ದರ್ಶನಕ್ಕೆ ಅವಕಾಶವಿರುತ್ತದೆ. ಪೌರ್ಣಮಿಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಧ್ಯಾಹ್ನ 3:00 ರಿಂದ ಸಂಜೆ 6:00 ಗಂಟೆಯವರೆಗೆ ಚಂದ್ರಗ್ರಹಣದ ದೋಷ ನಿವಾರಣೆಗಾಗಿ ಚಂದ್ರಶಾಂತಿ ಮತ್ತು ಕೇತು ಶಾಂತಿ ಹೋಮಗಳು ನಡೆಯಲಿವೆ.ಹೋಮದ ನಂತರ ಕಳಶಾಭಿಷೇಕ ಮಾಡಲಾಗುವುದು. ಚಂದ್ರ ಮತ್ತು ಕೇತು ಶಾಂತಿ ಕಳಸದ ತೀರ್ಥವನ್ನು ಬಂಡೆ ಮಹಾಂಕಾಳಿಗೆ ಅಭಿಷೇಕ ಮಾಡಲಾಗುತ್ತದೆ. ಈ ಅಭಿಷೇಕದಿಂದ ಗ್ರಹಣದ ಅವಧಿಯಲ್ಲಿ ಭೂಮಿಗೆ ಮತ್ತು ಭಕ್ತರಿಗೆ ಎದುರಾಗುವ ಸಕಲ ಅವಘಡಗಳನ್ನು ತಾಯಿ ಪರಿಹರಿಸುತ್ತಾಳೆ ಎಂಬುದು ಭಕ್ತರ ಗಾಢ ನಂಬಿಕೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ದೇಗುಲಗಳ ಪೂಜೆಯಲ್ಲಿ ಬದಲಾವಣೆ:

ನಾಳೆ (ಮಾರ್ಚ್ 3) ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಪೂಜಾ ವಿಧಿವಿಧಾನಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಜಿಲ್ಲೆಯ ಮೂರು ಪ್ರಮುಖ ಬೆಟ್ಟಗಳ ದೇಗುಲಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯ ಅನುಸರಿಸಲಾಗುತ್ತಿದೆ. “ಮಾದಪ್ಪನಿಗೆ ಯಾವುದೇ ಗ್ರಹಣ ತಾಕಲ್ಲ” ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಗ್ರಹಣದ ಅವಧಿಯಲ್ಲೂ ಮಲೆ ಮಹದೇಶ್ವರ ದೇವಾಲಯದ ಬಾಗಿಲು ಬಂದ್ ಆಗುವುದಿಲ್ಲ. ಭಕ್ತರು ಎಂದಿನಂತೆ ಮಾದಪ್ಪನ ದರ್ಶನ ಪಡೆಯಬಹುದು. ಗ್ರಹಣ ಕಾಲದಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ಬಿಳಿಗಿರಿ ರಂಗನಾಥನ ಸನ್ನಿಧಿಯಲ್ಲಿ ಗ್ರಹಣದ ಸೂತಕ ಹಿನ್ನೆಲೆ ನಾಳೆ ಬೆಳಿಗ್ಗೆ 11 ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:34 am, Mon, 2 March 26

Source link

ಒಟಿಟಿಯಲ್ಲಿ ಕನ್ನಡದ ಚಿತ್ರಗಳಿಗೆ ಇದೆಂಥ ಸ್ಥಿತಿ; ಒಂದು ಸಿನಿಮಾಗೆ ಕೇವಲ 10 ರೂಪಾಯಿ – Kannada News | Kannada Small Films: OTT Payment Disparity and ‘Theertharoopa Tandeyavarige’ Struggle Revealed

ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದನ್ನು ಖರೀದಿಸಲು ಒಟಿಟಿ ಸಂಸ್ಥೆಗಳು ರೆಡಿ ಇರುತ್ತವೆ. ಆದರೆ, ಸಣ್ಣ ಬಜೆಟ್ ಚಿತ್ರಗಳು ಎಂದರೆ ಒಟಿಟಿ ಸಂಸ್ಥೆಗಳು ನಿರ್ಲಕ್ಷ್ಯ ತೋರಿಸುತ್ತವೆ. ‘ತೀರ್ಥ ರೂಪ ತಂದೆಯವರಿಗೆ’ (Theertharoopa Tandeyavarige) ಚಿತ್ರ ಥಿಯೇಟರ್​​ನಲ್ಲಿ ರಿಲೀಸ್ ಆಗಿ ವಿಮರ್ಶೆಯಲ್ಲಿ ಗೆದ್ದಿದೆ. ಹಾಗಂತ ದೊಡ್ಡ ಮೊತ್ತ ಕೊಟ್ಟು ಚಿತ್ರವನ್ನು ಒಟಿಟಿಯವರು ಖರೀದಿ ಮಾಡಿದರು ಎಂದುಕೊಳ್ಳಬೇಡಿ. ಈ ಚಿತ್ರಕ್ಕೆ ಸಿಗ್ತಿರೋದು ತುಂಬಾನೇ ಸಣ್ಣ ಮೊತ್ತ. ಈ ವಿಷಯವನ್ನು ಸ್ವತಃ ನಿರ್ದೇಶಕರೇ ರಿವೀಲ್ ಮಾಡಿದ್ದಾರೆ.

‘ತೀರ್ಥ ರೂಪ ತಂದೆಯವರಿಗೆ’ ಚಿತ್ರವನ್ನು ರಾಮೇನಹಳ್ಳಿ ಜಗನ್ನಾಥ ಅವರು ನಿರ್ದೇಶನ ಮಾಡಿದ್ದಾರೆ. ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಇದನ್ನು ನಿರ್ಮಾಣ ಮಾಡಿದೆ. ನಿಹಾರ್ ಮುಕೇಶ್, ರಚನಾ ಇಂದರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಥಿಯೇಟರ್​​ನಲ್ಲಿ ಯಶಸ್ವಿ ಪ್ರದರ್ಶನ ಕಂಡ ಬಳಿಕ ಒಟಿಟಿಗೆ ಕಾಲಿಟ್ಟಿದೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ‘ತೀರ್ಥರೂಪ ತಂದೆಯವರಿಗೆ’ ವಿಮರ್ಶೆ: ಭಾವನೆಗಳ ಪಯಣದಲಿ ‘ಹೊಂದಿಸಿ ಬರೆಯಿರಿ’ ಆಟ

ಈ ಚಿತ್ರವನ್ನು ಒಟಿಟಿಯಲ್ಲೇ ನೋಡುವಂತೆ ರಾಮೇನಹಳ್ಳಿ ಜಗನ್ನಾಥ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಚಿತ್ರವನ್ನು ಪ್ರೈಮ್ ಸಂಸ್ಥೆಯವರು ದುಡ್ಡು ಕೊಟ್ಟು ಖರೀದಿ ಮಾಡಿಲ್ಲ. ಬದಲಿಗೆ ವೀವ್ಸ್ ಆಧಾರದ ಮೇಲೆ ಪೇಮೆಂಟ್ ಮಾಡುವ ಆಯ್ಕೆ ಮೂಲಕ ಖರೀದಿ ಮಾಡಿದ್ದಾರೆ. ಸಿನಿಮಾನ ಒಂದು ಗಂಟೆ ವೀಕ್ಷಿಸಿದರೆ ತಂಡದವರಿಗೆ ಸಿಗೋದು ನಾಲ್ಕು ರೂಪಾಯಿ! ಅಂದರೆ, ‘ತೀರ್ಥ ರೂಪ ತಂದೆಯವರಿಗೆ’ ಸಿನಿಮಾ ಅವಧಿ 2 ಗಂಟೆ 30 ನಿಮಿಷ. ಈ ಸಿನಿಮಾನ ಸಂಪೂರ್ಣವಾಗಿ ಒಮ್ಮೆ ವೀಕ್ಷಿಸಿದರೆ ತಂಡದವರಿಗೆ 10 ರೂಪಾಯಿ ಸಿಗಲಿದೆ!

ಒಂದು ಚಿತ್ರವನ್ನು ಥಿಯೇಟರ್​ನಲ್ಲಿ ವೀಕ್ಷಣೆ ಮಾಡಿದರೆ ಸಿನಿಮಾದ ಟಿಕೆಟ್ ಬೆಲೆ ಕನಿಷ್ಠ 200 ರೂಪಾಯಿ ಇರುತ್ತದೆ. ಓರ್ವ ಸಿನಿಮಾ ನೋಡಿದರೆ ಟ್ಯಾಕ್ಸ್, ಶೇರು ಎಲ್ಲವನ್ನೂ ಕಳೆದರೆ ಅಂದಾಜು 100 ರೂಪಾಯಿ ತಂಡದ ಕೈ ಸೇರುತ್ತದೆ. ಆದರೆ, ಒಟಿಟಿಯಲ್ಲಿ ಇಡೀ ಕುಟುಂಬದವರು ಒಮ್ಮೆಲೇ ಸಿನಿಮಾ ನೋಡಿದರೂ ತಂಡದವರಿಗೆ ಸಿಗೋದು ಕೇವಲ 10 ರೂಪಾಯಿ ಮಾತ್ರ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನದ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ..! – Kannada News | PCB set to take a fine of 50 Lakh from each pakistan player

T20 World Cup 2026: ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ್ ತಂಡದ ಆಟಗಾರರಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB)  50 ಲಕ್ಷ ರೂ. ದಂಡ ವಿಧಿಸಲು ನಿರ್ಧರಿಸಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಹಿನ್ನಲೆ ಆಟಗಾರರಿಗೆ ದಂಡದ ಶಿಕ್ಷೆ ವಿಧಿಸಿ ಬಿಸಿ ಮುಟ್ಟಿಸಲು ಪಿಸಿಬಿ ಮುಂದಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ್ ತಂಡವು ಈ ಬಾರಿಯ ವಿಶ್ವಕಪ್​ನಲ್ಲಿ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಈ ವೇಳೆ ಗೆದ್ದಿರುವುದು ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ. ಅಲ್ಲದೆ ಸೂಪರ್-8 ಸುತ್ತಿನಲ್ಲೇ ತಂಡ ಹೊರಬಿದ್ದಿದೆ. ಈ ಹೀನಾಯ ಪ್ರದರ್ಶನದ ಹಿನ್ನಲೆ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಅಷ್ಟೇ ಅಲ್ಲದೆ ಆಟಗಾರರಿಗೆ ನೀಡಲಾಗುತ್ತಿದ್ದ ಹೆಚ್ಚಿನ ಸವಲತ್ತುಗಳನ್ನು ಕಡಿತಗೊಳಿಸಿ, ಇನ್ನು ಮುಂದೆ ಕೇವಲ ಮೈದಾನದ ಪ್ರದರ್ಶನಕ್ಕೆ ಅನುಗುಣವಾಗಿ ಮಾತ್ರ ಹಣಕಾಸಿನ ಲಾಭಗಳನ್ನು ನೀಡಲಾಗುವುದು ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಚ್ಚರಿಸಿದ್ದಾರೆ.

ಕಳಪೆ ಫಾರ್ಮ್‌ನಿಂದಾಗಿ 2025-26ರ ಕೇಂದ್ರ ಗುತ್ತಿಗೆಯಲ್ಲಿ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಝ್ವಾನ್​ ಅವರಂತಹ ಹಿರಿಯ ಆಟಗಾರರನ್ನು ‘A’ ಕೆಟಗರಿಯಿಂದ ‘B’ ಕೆಟಗರಿಗೆ ಇಳಿಸಲಾಗಿದೆ. ಹಾಗೆಯೇ  ಕೆಲಸದ ಒತ್ತಡ ನಿರ್ವಹಣೆಗಾಗಿ ವಿದೇಶಿ ಲೀಗ್‌ಗಳಲ್ಲಿ ಆಡಲು ನೀಡಲಾಗುವ ಎನ್‌ಒಸಿ (NOC) ಗಳ ಮೇಲೂ ಮಂಡಳಿಯು ನಿರ್ಬಂಧ ಹೇರಿದೆ.

ಇದಾಗ್ಯೂ ಪಾಕ್ ತಂಡ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನಲೆ ಆಟಗಾರರಿಗೆ ದಂಡ ವಿಧಿಸಲು ಪಿಸಿಬಿ ನಿರ್ಧರಿಸಿದೆ.  ಈ ದಂಡದ ನಿರ್ಧಾರವು ಪಾಕಿಸ್ತಾನ್ ತಂಡದ ಮುಂದಿನ ಸರಣಿಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ನಾಕೌಟ್​ನಲ್ಲಿ ನಾಲ್ಕು ತಂಡಗಳು: ಇಲ್ಲಿದೆ ವೇಳಾಪಟ್ಟಿ

ಪಾಕಿಸ್ತಾನ್ ಟಿ20 ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಫಖರ್ ಝಮಾನ್, ಖ್ವಾಜಾ ಮೊಹಮ್ಮದ್ ನಫಾಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ಸಲ್ಮಾನ್ ಮಿರ್ಝ, ನಸೀಮ್ ಶಾ, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಅಯ್ಯೂಬ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಖ್, ಶಾದಾಬ್​ ಖಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್).

Source link

ಭಾರತದ ದಾಳಿಗೆ ಕುಸಿದು ಬಿದ್ದು ಹೇಗ್ಹೇಗೋ ಎದ್ದು ನಿಂತಿದ್ದ ಪಾಕ್​ನ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ದಾಳಿ – Kannada News | Afghanistan Attacks Pakistan’s Nur Khan Airbase, Previously Hit by India

ನೂರ್ ಖಾನ್ ಏರ್​ಬೇಸ್ Image Credit source: Dinkar Singh Rawat-X Account

ಇಸ್ಲಾಮಾಬಾದ್, ಮಾರ್ಚ್​ 02: ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಭಾರತ ನಡೆಸಿದ ದಾಳಿಯಿಂದ ಕುಸಿದುಬಿದ್ದು, ಹೇಗ್ಹೇಗೋ ಎದ್ದು ನಿಂತಿದ್ದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆ ಮೇಲೆ ಅಫ್ಘಾನಿಸ್ತಾನ ಕೂಡ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಅಫ್ಘಾನಿಸ್ತಾನ ವಾಯುದಾಳಿ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಭಾರತವು ಇದೇ ವಾಯುನೆಲೆ ಮೇಲೆ ದಾಳಿ ನಡೆಸಿತ್ತು. ಹಲವು ತಿಂಗಳುಗಳ ಬಳಿಕ ಹೇಗೋ ಸುಧಾರಿಸಿಕೊಂಡು ನಿರ್ಮಾಣಕಾರ್ಯ ಪೂರ್ಣಗೊಳಿಸಿತ್ತು.

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಪಾಕಿಸ್ತಾನದಲ್ಲಿರುವ ಹಲವಾರು ಪ್ರಮುಖ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಪಾಕಿಸ್ತಾನದೊಳಗಿನ ಪ್ರಮುಖ ವಾಯುನೆಲೆಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ತನ್ನ ಪಡೆಗಳು ಡ್ರೋನ್ ದಾಳಿ ನಡೆಸಿವೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ರಾವಲ್ಪಿಂಡಿಯಲ್ಲಿರುವ ಪ್ರಮುಖ ಮಿಲಿಟರಿ ವಾಯುನೆಲೆಯಾದ ನೂರ್ ಖಾನ್ ವಾಯುನೆಲೆಯು ದಾಳಿಗೊಳಗಾದ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ 12 ನೇ ಡಿವಿಷನ್ ಪ್ರಧಾನ ಕಚೇರಿ ಮತ್ತು ಖೈಬರ್ ಪಖ್ತುನ್ಖ್ವಾದ ಮೊಹಮ್ಮದ್ ಏಜೆನ್ಸಿಯಲ್ಲಿರುವ ಖ್ವಾಜೈ ಮಿಲಿಟರಿ ಶಿಬಿರದ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಭಾರತದ ಆಪರೇಷನ್ ಸಿಂಧೂರ್ ವೇಳೆ ನೂರ್ ಖಾನ್ ವಾಯುನೆಲೆಗೆ ಹಾನಿ; ಒಪ್ಪಿಕೊಂಡ ಪಾಕಿಸ್ತಾನ

ಕಾಬೂಲ್, ಬಾಗ್ರಾಮ್ ಮತ್ತು ಇತರ ಸ್ಥಳಗಳ ಮೇಲೆ ಪಾಕಿಸ್ತಾನದ ಮಿಲಿಟರಿ ದಾಳಿಗಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ 415 ಅಫ್ಘಾನ್ ತಾಲಿಬಾನ್ ಸಿಬ್ಬಂದಿಯನ್ನು ಕೊಂದಿದ್ದು 580 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

2,600 ಕಿ.ಮೀ.ಗೂ ಹೆಚ್ಚು ಉದ್ದದ ಗಡಿಯಲ್ಲಿ 53 ಸ್ಥಳಗಳ ಮೇಲೆ ಅಫ್ಘಾನ್ ತಾಲಿಬಾನ್ ದಾಳಿಕೋರರು ದಾಳಿ ನಡೆಸಿದ್ದಾರೆ.ಘಟನೆಗೆ ಪ್ರತಿಯಾಗಿ ಪಾಕಿಸ್ತಾನ ಗುರುವಾರ ರಾತ್ರಿ ‘ಗಜಬ್ ಲಿಲ್ ಹಕ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಕಾರ್ಯಾಚರಣೆಯ ಸಮಯದಲ್ಲಿ 185 ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿ ಬಂದೂಕುಗಳು ನಾಶವಾಗಿವೆ ಎಂದುಹೇಳಲಾಗಿದೆ.

ಇದಕ್ಕೂ ಮೊದಲು, ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಚಿವ ಡಾ. ತಾರಿಕ್ ಫಜಲ್ ಚೌಧರಿ, ಅಫ್ಘಾನ್ ತಾಲಿಬಾನ್ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದರು. ಮಿಲಿಟರಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಸೂಚಿಸುವ ಸಾಮಾಜಿಕ ಮಾಧ್ಯಮ ವರದಿಗಳನ್ನು ಅವರು ನಿರಾಕರಿಸಿದರು.

ಮತ್ತೊಂದೆಡೆ, ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಅಫ್ಘಾನ್ ಕಡೆಯವರು ಹೇಳಿಕೊಂಡರೂ, ಪಾಕಿಸ್ತಾನಿ ಅಧಿಕಾರಿಗಳು ಈ ಹೇಳಿಕೆಯನ್ನು ತಿರಸ್ಕರಿಸಿದರು.
ತಾಲಿಬಾನ್ ಪ್ರಕಾರ, ಪಾಕಿಸ್ತಾನ ಮತ್ತೆ ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದರೆ ಅಥವಾ ಆಕ್ರಮಣಕಾರಿ ಕ್ರಮ ಕೈಗೊಂಡರೆ, ಅದು ಹೆಚ್ಚು ಕಠಿಣ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಮ್ಮಾ ಅವ್ನು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ ಎಂದು ದೂರು ಕೊಟ್ಟಿದ್ದಕ್ಕೆ, ಬಾಲಕಿಯನ್ನೇ ಕತ್ತು ಸೀಳಿ ಕೊಂದ ಅಪ್ರಾಪ್ತ – Kannada News | Bihar Minor Kills 9 Year Old Girl for Complaining About His Drug Fueled Misbehavior

ಪಾಟ್ನಾ, ಮಾರ್ಚ್​ 02: ಮಾದಕದ್ರವ್ಯ ಸೇವಿಸಿ ತನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ ಅಪ್ರಾಪ್ತನ ಬಗ್ಗೆ  ಮನೆಯಲ್ಲಿ ದೂರು ಕೊಟ್ಟಿದ್ದಕ್ಕೆ ಕೋಪಗೊಂಡ ಬಾಲಕ 9 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಕಟಿಹಾರ್​ನಲ್ಲಿ ನಡೆದಿದೆ. ಕರಣದ ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಂಧಿಸಲಾಗಿದೆ.

ಕೊಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂದಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಒಂದು ದಿನ ಹಿಂದೆ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಮರುದಿನ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಆಕೆಯ ಶವ ಹತ್ತಿರದ ಮೆಕ್ಕೆಜೋಳದ ಹೊಲದಿಂದ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಅದೇ ಗ್ರಾಮದ 13 ವರ್ಷದ ಬಾಲಕ ಆರೋಪಿಯಾಗಿದ್ದು, ಬಾಲಕಿ ಹೊಲದ ಕಡೆಗೆ ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕ ಮಾದಕ ವ್ಯಸನಿಯಾಗಿದ್ದ ಮತ್ತು ಆಗಾಗ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಮತ್ತಷ್ಟು ಓದಿ: ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!

ಗ್ರಾಮಸ್ಥರ ಪ್ರಕಾರ, ಬಲಿಪಶು ಇತ್ತೀಚೆಗೆ ತನ್ನ ಪೋಷಕರಲ್ಲಿ ತನ್ನ ಆತನ ವರ್ತನೆಯ ಬಗ್ಗೆ ದೂರು ನೀಡಿದ್ದಳು, ನಂತರ ಕುಟುಂಬ ಸದಸ್ಯರು ಬಾಲಕನ ಬಳಿ ಹೋಗಿ ಗದರಿದ್ದರು ಎಂದು ವರದಿಯಾಗಿದೆ. ಅದಕ್ಕೆ ಕೋಪಗೊಂಡ ಆತ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ.

ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದವು. ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಬಗೆಹರಿಸಲಾಗಿದೆ ಮತ್ತು ಬಾಲಾಪರಾಧಿಗಳಿಗೆ ಅನ್ವಯಿಸುವ ಕಾನೂನಿನಡಿಯಲ್ಲಿ ಅಪರಾಧ ಎಸಗಿದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕಿ ತನ್ನ ಪೋಷಕರಿಗೆ ನೀಡಿದ ದೂರಿನ ಮೇರೆಗೆ ಆರೋಪಿ ಕೋಪದಿಂದ ವರ್ತಿಸಿರಬಹುದು ಎಂದು ಸ್ಥಳೀಯ ನಿವಾಸಿ ಎಂಡಿ ಅಸ್ಲಾಂ ಆರೋಪಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ಹಿರಿಯ ಪೊಲೀಸ್ ಅಧಿಕಾರಿ ರಂಜನ್ ಕುಮಾರ್ ಸಿಂಗ್, ಕಾಣೆಯಾದ ಬಾಲಕಿಯನ್ನು ಹರಿತವಾದ ಆಯುಧದಿಂದ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.

ಕೊಲೆಗೆ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿ ಅಪ್ರಾಪ್ತನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಬಾಲಾಪರಾಧಿ ನ್ಯಾಯ ನಿಬಂಧನೆಗಳ ಪ್ರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಕೀಯದ 2ನೇ ಇನ್ನಿಂಗ್ಸ್ ಆರಂಭಿಸುವ ಮುನ್ನ ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ – Kannada News | Anant Kumar Hegde Visits Sirsi Marikamba Temple Ahead of Political Second Innings, To Address Hindu Convention on March 8

ಕಾರವಾರ, ಮಾರ್ಚ್​ 2: ಲೋಕಸಭೆ ಚುನಾವಣೆಯ ಟಿಕೆಟ್ ಕೈ ತಪ್ಪಿದ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಇದ್ದ ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಇದೀಗ ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಸೂಚನೆ ನೀಡಿದ್ದಾರೆ. ಅದಕ್ಕೂ ಮುನ್ನ ಉತ್ತರ ಕನ್ನಡ ಜಿಲ್ಲೆಯ ಶಕ್ತಿ ದೇವತೆಯಾದ ಶಿರಸಿ ಮಾರಿಕಾಂಬಾ ದೇವಿಯ ಆಶೀರ್ವಾದ ಪಡೆದರು. ಶಿರಸಿಯಲ್ಲಿ ನಡೆಯುತ್ತಿರುವ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸಂದರ್ಭ ಸೋಮವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಹೆಗಡೆ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ.

ಲೋಕಸಭೆ ಟಿಕೆಟ್ ಕೈ ತಪ್ಪಿದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದ ಹೆಗಡೆ, ಇದೀಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮಾರ್ಚ್ 8ರಿಂದ ಅವರು ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲಿರುವುದಾಗಿ ತಿಳಿದುಬಂದಿದ್ದು, ಅದೇ ದಿನ ಭಟ್ಕಳದಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಜನರೇ ಎಚ್ಚರ… ಹೆಸ್ಕಾಂ ಎಂದು ಹೇಳಿಕೊಂಡು ಮನೆಗೆ ಬರ್ತಾರೆ ನಕಲಿ ಬಿಲ್ ಕಲೆಕ್ಟರ್ – Kannada News | Caught! Hubballi’s Fake HESCOM Collector Nabbed by Alert Public

ಹುಬ್ಬಳ್ಳಿ, ಮಾ.2: ಹುಬ್ಬಳ್ಳಿಯ ಆನಂದ ನಗರದಲ್ಲಿ ವಂಚನೆಯ ವಿಭಿನ್ನ ಹಾದಿ ತುಳಿದಿದ್ದ ಖದೀಮನೊಬ್ಬ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಪೊಲೀಸರ ಅತಿಥಿಯಾಗಿದ್ದಾನೆ. ತಾನು ಹೆಸ್ಕಾಂ (HESCOM) ಬಿಲ್ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಕಲೆಕ್ಟರ್‌ನನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಈ ಘಟನೆ ನಡೆದಿದೆ. ಖದೀಮನು ಖಾಕಿ ಸಮವಸ್ತ್ರ ಧರಿಸಿ, ತಾನು ವಿದ್ಯುತ್ ಬಿಲ್ ವಸೂಲಿ ಮಾಡಲು ಬಂದಿರುವುದಾಗಿ ನಂಬಿಸಿದ್ದಾನೆ.

ಮನೆ ಮನೆಗೆ ಹೋಗಿ ಬಿಲ್ ಬಾಕಿ ಇದೆ ಎಂದು ಹೇಳಿ 1,000 ರೂ. ದಿಂದ 2,000 ರೂ. ವರೆಗೆ ಹಣ ವಸೂಲಿ ಮಾಡುತ್ತಿದ್ದ. ಗ್ರಾಹಕರು ರಸೀದಿ ಕೇಳಿದಾಗ “ಈಗ ಸರ್ವರ್ ಡೌನ್ ಇದೆ, ನಾಳೆ ತಂದು ಕೊಡುತ್ತೇನೆ” ಎಂದು ನಂಬಿಸಿ ಹಣದೊಂದಿಗೆ ಪರಾರಿಯಾಗುತ್ತಿದ್ದ. ಹಲವು ಮನೆಗಳಲ್ಲಿ ಹಣ ಪಡೆದ ಬಳಿಕವೂ ರಸೀದಿ ನೀಡದಿದ್ದಾಗ ಅನುಮಾನಗೊಂಡ ಸ್ಥಳೀಯರು ಆತನನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಹೆಸ್ಕಾಂ ಸಿಬ್ಬಂದಿ ಅಲ್ಲ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್​ಗೆ ಚಿರತೆ ಸಾವು!

ವಿಡಿಯೋ ಇಲ್ಲಿದೆ ನೋಡಿ:

ತಕ್ಷಣವೇ ಸಾರ್ವಜನಿಕರು ಹೆಸ್ಕಾಂ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಳೆ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹೆಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿ (ID Card) ಕೇಳಿ. ಹಣ ಪಾವತಿಸಿದ ತಕ್ಷಣ ಡಿಜಿಟಲ್ ಅಥವಾ ಭೌತಿಕ ರಸೀದಿ ಪಡೆಯಿರಿ. ಯಾವುದೇ ಅನುಮಾನವಿದ್ದರೆ ತಕ್ಷಣ ಸ್ಥಳೀಯ ಹೆಸ್ಕಾಂ ಕಚೇರಿ ಸಂಪರ್ಕಿಸಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಚ್​ನಲ್ಲಿ ಕೂತು ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರನ್ನು ನೋಡಿದ್ದೇನೆ..! – Kannada News | IND vs WI: Sanju Samson credits Virat Kohli and Rohit Sharma

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 195 ರನ್​ ಕಲೆಹಾಕಿದ್ದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದರು.

ಸಂಜು ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್​​ನೊಂದಿಗೆ ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 199 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ನಾನು ಆಟವಾಡಲು ಪ್ರಾರಂಭಿಸಿದ ದಿನದಿಂದ, ದೇಶಕ್ಕಾಗಿ ಆಡಲು ಕನಸು ಕಾಣಲು ಪ್ರಾರಂಭಿಸಿದ ದಿನದಿಂದ, ನಾನು ಕಾಯುತ್ತಿದ್ದ ದಿನ ಇದು ಎಂದು ನಾನು ಭಾವಿಸುತ್ತೇನೆ . ಇಂತಹದೊಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ.

ನಾನು ಯಾವಾಗಲೂ ಬಹಳಷ್ಟು ಏರಿಳಿತಗಳನ್ನು ಹೊಂದಿರುವ ವಿಶೇಷ ಪ್ರಯಾಣವನ್ನು ಹೊಂದಿದ್ದೇನೆ. ಆದರೆ ನಾನು ನನ್ನನ್ನು ಅನುಮಾನಿಸುತ್ತಲೇ ಇದ್ದೆ, ಯೋಚಿಸುತ್ತಲೇ ಇದ್ದೆ, ನಾನು ಅಂತಹದೊಂದು ಇನಿಂಗ್ಸ್ ಆಡಬಹುದೇ? ಇದಾಗ್ಯೂ ನಾನು ನನ್ನ ಮೇಲೆ ನಂಬಿಕೆಯಿಟ್ಟಿದ್ದೆ. ಇದೀಗ ಎಲ್ಲವೂ ನಿಜಯವಾಗಿದೆ. ಅಂತಹದೊಂದು ಇನಿಂಗ್ಸ್ ಆಡಲು  ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತ ಭಗವಂತನಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದೇ ವೇಳೆ ಬ್ಯಾಟಿಂಗ್‌ನಲ್ಲಿನ ನಿಮ್ಮ ಪಾತ್ರದ ಸ್ಪಷ್ಟತೆಯ ಬಗ್ಗೆ ಕೇಳಿದಾಗ, ನಾನು ಬಹಳ ಸಮಯದಿಂದ ಈ ಸ್ವರೂಪವನ್ನು ಆಡುತ್ತಿದ್ದೇನೆ. ಸುಮಾರು 10 ರಿಂದ 12 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ ಮತ್ತು ಕಳೆದ 10 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ.

ನಾನು ತಂಡದಲ್ಲಿದ್ದರೂ ಆಡುವ ಅವಕಾಶ ಸಿಗದಿದ್ದಾಗ, ಬೆಂಚ್ ಮೇಲೆ ಕುಳಿತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯವನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆ.

ನಾನು ಸುಮಾರು 50-60 ಪಂದ್ಯಗಳನ್ನು ಆಡಿದ್ದರೂ, ಹೊರಗಿನಿಂದ ಸುಮಾರು 100 ಪಂದ್ಯಗಳನ್ನು ವೀಕ್ಷಿಸಿರುವುದು ನನಗೆ ಹೆಚ್ಚಿನ ಪಕ್ವತೆಯನ್ನು ನೀಡಿದೆ.

ಬೃಹತ್ ಗುರಿ ಬೆನ್ನಟ್ಟುವಾಗ ತಾಳ್ಮೆಯಿಂದ ಇರುವುದು ಮತ್ತು ಪ್ರತಿ ಎಸೆತವನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಂದ ಕಲಿತಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಟಕ್ಕೆ ಅನುಗುಣವಾಗಿ ತಮ್ಮ ಆಟವನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತ ಚೇಸ್ ಮಾಡುವಾಗ ನಾನು ಸಹ ಅದೇ ತಂತ್ರವನ್ನು ಪಾಲಿಸಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಈ ಮೂಲಕ ತನ್ನ ಭರ್ಜರಿ ಬ್ಯಾಟಿಂಗ್​ನ ಶ್ರೇಯಸ್ಸಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಕಾರಣ ಎಂದು ಸಂಜು ಸ್ಯಾಮ್ಸನ್ ಪರೋಕ್ಷವಾಗಿ ಹೇಳಿದ್ದಾರೆ.

Published On – 9:21 am, Mon, 2 March 26

Source link

ಬೆಂಚ್​ನಲ್ಲಿ ಕೂತು ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರನ್ನು ನೋಡಿದ್ದೇನೆ..! – Kannada News | Ind vs wi sanju samson credits virat kohli and rohit sharma

T20 World Cup 2026: ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ ಬರೋಬ್ಬರಿ 195 ರನ್​ ಕಲೆಹಾಕಿದ್ದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿದ್ದರು.

ಸಂಜು ಸ್ಯಾಮ್ಸನ್ ಅವರ ಅಜೇಯ ಇನಿಂಗ್ಸ್​​ನೊಂದಿಗೆ ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 199 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿತು. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ಸನ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ನಾನು ಆಟವಾಡಲು ಪ್ರಾರಂಭಿಸಿದ ದಿನದಿಂದ, ದೇಶಕ್ಕಾಗಿ ಆಡಲು ಕನಸು ಕಾಣಲು ಪ್ರಾರಂಭಿಸಿದ ದಿನದಿಂದ, ನಾನು ಕಾಯುತ್ತಿದ್ದ ದಿನ ಇದು ಎಂದು ನಾನು ಭಾವಿಸುತ್ತೇನೆ . ಇಂತಹದೊಂದು ಇನಿಂಗ್ಸ್ ಆಡುವುದು ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ.

ನಾನು ಯಾವಾಗಲೂ ಬಹಳಷ್ಟು ಏರಿಳಿತಗಳನ್ನು ಹೊಂದಿರುವ ವಿಶೇಷ ಪ್ರಯಾಣವನ್ನು ಹೊಂದಿದ್ದೇನೆ. ಆದರೆ ನಾನು ನನ್ನನ್ನು ಅನುಮಾನಿಸುತ್ತಲೇ ಇದ್ದೆ, ಯೋಚಿಸುತ್ತಲೇ ಇದ್ದೆ, ನಾನು ಅಂತಹದೊಂದು ಇನಿಂಗ್ಸ್ ಆಡಬಹುದೇ? ಇದಾಗ್ಯೂ ನಾನು ನನ್ನ ಮೇಲೆ ನಂಬಿಕೆಯಿಟ್ಟಿದ್ದೆ. ಇದೀಗ ಎಲ್ಲವೂ ನಿಜಯವಾಗಿದೆ. ಅಂತಹದೊಂದು ಇನಿಂಗ್ಸ್ ಆಡಲು  ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತ ಭಗವಂತನಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದೇ ವೇಳೆ ಬ್ಯಾಟಿಂಗ್‌ನಲ್ಲಿನ ನಿಮ್ಮ ಪಾತ್ರದ ಸ್ಪಷ್ಟತೆಯ ಬಗ್ಗೆ ಕೇಳಿದಾಗ, ನಾನು ಬಹಳ ಸಮಯದಿಂದ ಈ ಸ್ವರೂಪವನ್ನು ಆಡುತ್ತಿದ್ದೇನೆ. ಸುಮಾರು 10 ರಿಂದ 12 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ ಮತ್ತು ಕಳೆದ 10 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ.

ನಾನು ತಂಡದಲ್ಲಿದ್ದರೂ ಆಡುವ ಅವಕಾಶ ಸಿಗದಿದ್ದಾಗ, ಬೆಂಚ್ ಮೇಲೆ ಕುಳಿತು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯವನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆ.

ನಾನು ಸುಮಾರು 50-60 ಪಂದ್ಯಗಳನ್ನು ಆಡಿದ್ದರೂ, ಹೊರಗಿನಿಂದ ಸುಮಾರು 100 ಪಂದ್ಯಗಳನ್ನು ವೀಕ್ಷಿಸಿರುವುದು ನನಗೆ ಹೆಚ್ಚಿನ ಪಕ್ವತೆಯನ್ನು ನೀಡಿದೆ.

ಬೃಹತ್ ಗುರಿ ಬೆನ್ನಟ್ಟುವಾಗ ತಾಳ್ಮೆಯಿಂದ ಇರುವುದು ಮತ್ತು ಪ್ರತಿ ಎಸೆತವನ್ನು ಹೇಗೆ ಎದುರಿಸಬೇಕು ಎಂಬುದನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಿಂದ ಕಲಿತಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಟಕ್ಕೆ ಅನುಗುಣವಾಗಿ ತಮ್ಮ ಆಟವನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ನಾನು ನೋಡಿದ್ದೇನೆ. ಹಾಗಾಗಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತ ಚೇಸ್ ಮಾಡುವಾಗ ನಾನು ಸಹ ಅದೇ ತಂತ್ರವನ್ನು ಪಾಲಿಸಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Sanju Samson: ಶತಕ ಮಿಸ್… ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಈ ಮೂಲಕ ತನ್ನ ಭರ್ಜರಿ ಬ್ಯಾಟಿಂಗ್​ನ ಶ್ರೇಯಸ್ಸಿಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಕಾರಣ ಎಂದು ಸಂಜು ಸ್ಯಾಮ್ಸನ್ ಪರೋಕ್ಷವಾಗಿ ಹೇಳಿದ್ದಾರೆ.

Source link

ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ – Kannada News | Davangere Wrestling: Iran’s Mirza, India’s Raviraj Draw at Duggamma Fair

ದಾವಣಗೆರೆ, ಮಾ.2: ಇಲ್ಲಿನ ದೇವತೆ ದುಗ್ಗಮ್ಮನ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಇರಾನ್‌ನ ಮಿರ್ಜಾ ಪೈಲ್ವಾನ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ತಮ್ಮ ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದರೂ, ದಾವಣಗೆರೆಯ ಮಣ್ಣಿನ ಅಖಾಡದಲ್ಲಿ ಬೆವರಳಿಸಿದ ಮಿರ್ಜಾ, ಭಾರತೀಯರ ಪ್ರೀತಿ ಮತ್ತು ಕ್ರೀಡಾಭಿಮಾನವನ್ನು ಹಾಡಿ ಹೊಗಳಿದ್ದಾರೆ. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಫೈನಲ್ ಪಂದ್ಯವು ಭಾರೀ ಕುತೂಹಲ ಮೂಡಿಸಿತ್ತು. ಮಹಾರಾಷ್ಟ್ರದ ಪುಣೆಯ ಖ್ಯಾತ ಕುಸ್ತಿಪಟು ರವಿರಾಜ್ ಹಾಗೂ ಇರಾನ್‌ನ ಮಿರ್ಜಾ ನಡುವೆ ನಡೆದ ಈ ಕಾಳಗದಲ್ಲಿ ಇಬ್ಬರೂ ಸಮಬಲದ ಪೈಪೋಟಿ ನೀಡಿದರು. ರಂಭದಿಂದಲೇ ಇಬ್ಬರೂ ಪಟುಗಳು ದಾಳಿ ಮತ್ತು ಪ್ರತಿದಾಳಿಗಳ ಮೂಲಕ ವಿರಾರು ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿತು. ಸ್ಪಷ್ಟ ಜಯಶಾಲಿ ಯಾರು ಎಂಬುದು ನಿರ್ಧಾರವಾಗದಿದ್ದರೂ, ಇಬ್ಬರ ಹೋರಾಟಕ್ಕೆ ಅಭಿಮಾನಿಗಳು ಮನಸೋತು ಚಪ್ಪಾಳೆ ತಟ್ಟಿದರು. “ನನ್ನ ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದಿದ್ದರೂ, ಇಲ್ಲಿನ ಜನರ ಪ್ರೀತಿ ನನಗೆ ಧೈರ್ಯ ನೀಡಿದೆ. ಹಿಂದುಸ್ತಾನದ ಕ್ರೀಡಾಭಿಮಾನ ಮತ್ತು ಇಲ್ಲಿನ ಮಣ್ಣಿನ ಸಂಸ್ಕೃತಿ ಅದ್ಭುತ” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link